ಇಗ್-ನೋಬಲ್ ಪ್ರಶಸ್ತಿಗಳ ೨೦೧೦ರ ಪಟ್ಟಿಯನ್ನು ನಿಮಗೆ ನೀಡುವಲ್ಲಿ ತಡಮಾಡಿದ್ದಕ್ಕೆ ಕ್ಷಮೆ ಇರಲಿ . ಸೆಪ್ಟೆಂಬರ್ ಮೂವತ್ತರಂದು ಈ ಪ್ರಶಸ್ತಿಗಳನ್ನು ನೀಡಲಾಯಿತು.
ನಗು ಮೂಡಿಸಿ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು. ಕಳೆದ ಬಾರಿಯ ಇಗ್ನೋಬಲ್ ಪ್ರಶಸ್ತಿ ವಿಜೇತರಿಗೆ ಈ ಬಾರಿಯ ನೋಬಲ್ ಪ್ರಶಸ್ತಿ ಸಂದಿದೆ ಎನ್ನುವ ಅಂಶ ನಿಮ್ಮ ಗಮನದಲ್ಲಿರಲಿ.
ಇದನ್ನು ಓದಿ, ನಕ್ಕು, ಚಿಂತನೆಗೆ ತೊಡಗಿಕೊಳ್ಳಿ.. ನಿಮಗೆ ಹಾಗೆನ್ನಿಸಿದರೆ
ಇಂಜಿನಿಯರಿಂಗ್ ಪ್ರಶಸ್ತಿ : ಕರೀನಾ ಅಸೆವೆಡೋ ಮತ್ತು ಅಗ್ನೆಸ್ ರೋಕಾ ಲಂಡನ್ ಜೂಯಲಾಜಿಕಲ್ ಸೊಸೈಟಿ. ಮತ್ತು ಡಿಅನೆ ಗೆಂಡ್ರೋನ್ : ನೀಲಿ ತಿಮಿಂಗಲಗಳ ಮೂಗಿನ ಸಿಂಬಳ ಸಂಗ್ರಹಿಸಲು ರಿಮೋಟ್ ಕಂಟ್ರೋಲ್ ಇರುವ ಹೆಲಿಕಾಪ್ಟರ್ ಬಳಸುವ ತಂತ್ರಜ್ನಾನ ರೂಪಿಸಿದ್ದಕ್ಕೆ.
ವೈದ್ಯಕೀಯ ಪ್ರಶಸ್ತಿ : ಸೈಮೊನ್ ರೈಟ್ ವೆಲ್ಡ್ , ಅಮ್ಸ್ ಟರ್ ಡ್ಯಾಮ್ ವಿಶ್ವವಿದ್ಯಾನಿಲಯ. ಮತ್ತು ಇಲಿಯಾ ವ್ಯಾನ್ ಬೀಸ್ಟ್ ಟಿಲ್ಬರ್ಗ್ ವಿಶ್ವವಿದ್ಯಾನಿಲಯ : ರೋಲರ್ ಕೋಸ್ಟರ್ ಮೇಲಿನ ಪಯಣದಿಂದ ಅಸ್ತಮಾವನ್ನು ಗುಣಪಡಿಸಬಹುದೆಂಬ ಸಂಶೋಧನೆಗೆ
ಸಾರಿಗೆ ಯೋಜನೆ ಪ್ರಶಸ್ತಿ : ತೊಷಿಯಾಕು ನಾಕಾಗಾಕಿ, ಅತ್ಸುಶಿ ಟೆರೋ, ಸೀಜಿ ಟಕಾಗಿ, ಟೆತ್ಸು ಸೈಗುಸಾ ,ಕೆಂಟಾರೋ ಇಟೋ, ಕೆಂಜಿ ಯೂಮಿಕಿ , ರಯೋ ಕೊಬಾಯಾಶಿ , ಡಾನ್ ಬೆಬ್ಬರ್, ಮಾರ್ಕ್ ಫ್ರಿಕರ್, ಮರದ ಮೇಲೆ ಬೆಳೆಯುವ ಬೂಸ್ಟಿನ ಮಾದರಿ ಅನುಸರಿಸಿ ಅತ್ಯಂತ ಲಾಭದಾಯಕವಾದ ರೈಲು ಮಾರ್ಗದ ಯೋಜನೆ ಹಾಕಬಹುದೆಂದು ತೋರಿಸಿಕೊಟ್ಟಿದ್ದಕ್ಕೆ
ಭೌತಶಾಸ್ತ್ರ ಪ್ರಶಸ್ತಿ: ಲಿಯಾನ್ ಪಾರ್ಕಿನ್, ಶೀಲಾ ವಿಲಿಯಮ್ಸ್ ಮತ್ತು ಪ್ಯಾಟ್ರಿಷಿಯಾ ಪ್ರೀಸ್ಟ್ , ಒಟಾಗೋ ವಿಶ್ವವಿದ್ಯಾನಿಲಯ ನ್ಯೂಜಿಲ್ಯಾಂಡ್. : ಹಿಮದಾರಿಗಳಲ್ಲಿ ನಡೆದಾಡುವ ಜನ ಚಳಿಗಾಲದಲ್ಲಿ ತಮ್ಮ ಶೂ ಮೇಲುಗಡೆ ಮತ್ತೊಂದು ಸಾಕ್ಸ್ ಧರಿಸಿದರೆ ಜಾರಿ ಬೀಳುವುದು ಕಮ್ಮಿಯಾಗುತ್ತದೆಂದು ತೋರಿಸಿಕೊಟ್ಟಿದ್ದಕ್ಕಾಗಿ .
ಶಾಂತಿ ಪ್ರಶಸ್ತಿ. ರಿಚರ್ಡ್ ಸ್ಟೀಫನ್, ಜಾನ್ ಅಟ್ಕಿನ್ಸ್ ಮತ್ತು ಆಂಡ್ರ್ಯೂ ಕಿಂಗ್ ಸ್ಟನ್, ಕೀಲೆ ವಿಶ್ವವಿದ್ಯಾನಿಲಯ , ಹರಕೆ ಹೊರುವುದು ನೋವನ್ನು ಕಡಿಮೆ ಮಾಡುತ್ತದೆ ಎಂಬ ಜನಪ್ರಿಯ ನಂಬಿಕೆ ನಿಜ ಎಂದು ಪ್ರಮಾಣೀಕರಿಸಿದ್ದಕ್ಕಾಗಿ.
ಸಾರ್ವಜನಿಕ ಆರೋಗ್ಯ ಪ್ರಶಸ್ತಿ: ಮಾನ್ಯುಯೆಲ್ ಬಾರ್ಬಿಟೋ, ಚಾರ್ಲ್ಸ್ ಮಾಥ್ಯೂ, ಲಾರಿ ಟೈಲರ್ , ಮೇರಿಲ್ಯಾಂಡ್ ಅಮೆರಿಕಾ ಸಂಯುಕ್ತ ಸಂಸ್ಥಾನ . ಪ್ರಯೋಗದ ಮೂಲಕ ಬ್ಯಾಕ್ಟೀರಿಯಾಗಳು ಗಡ್ಡ ಬಿಟ್ಟ ವಿಜ್ಯಾನಿಗಳ ಗಡ್ಡದಲ್ಲಿರುತ್ತವೆ ಎಂದು ತೋರಿಸಿಕೊಟ್ಟಿದ್ದಕ್ಕಾಗಿ
ಅರ್ಥಶಾಸ್ತ್ರ ಪ್ರಶಸ್ತಿ: ಗೋಲ್ಡ್ ಮ್ಯಾನ್ ಸಾಶ್, ಎ ಐ ಜಿ, ಲೆಹ್ಮಾನ್ ಬ್ರದರ್ಸ್, ಬೀರ್ ಸ್ಟೀರ್ನ್ಸ್, ಮೆರಿಲ್ ಲಿಂಚ್, ಮತ್ತು ಮಾಗ್ನೇಟರ್ ನ ಉನ್ನತ ಅಧಿಕಾರಿಗಳು ಮತ್ತು ನಿರ್ದೇಶಕರುಗಳಿಗೆ, ಲಾಭ ಹೆಚ್ಚು ಮಾಡಿ, ರಿಸ್ಕ್ ಕಡಿಮೆ ಮಾಡುವ ರೀತಿಯಲ್ಲಿ ಹಣ ಹೂಡಿಕೆಯ ಹೊಸಬಗೆಗಳನ್ನು ಸಂಶೋಧಿಸಿದ್ದಕ್ಕೆ
ರಸಾಯನ ಶಾಸ್ತ್ರ ಪ್ರಶಸ್ತಿ : ಎರಿಕ್ ಅಡಮ್ಸ್ , ಸ್ಕಾಟ್ ಸೊಕೊಲೊಫ್ ಸ್ಕಿ , ಸ್ಟೀಫನ್ ಮಸುಟಾನಿ ಮತ್ತು ಬ್ರಿಟಿಷ್ ಪೆಟ್ರೋಲಿಯಮ್ : ನೀರು ಮತ್ತು ಪೆಟ್ರೋಲ್ ಬೆರೆಯುವುದಿಲ್ಲವೆನ್ನುವ ಹಳೆಯ ನಂಬಿಕೆ ಸುಳ್ಳೆಂದು ತೋರಿಸಿದ್ದಕ್ಕೆ .
ಮ್ಯಾನೇಜ್ ಮೆಂಟ್ ಪ್ರಶಸ್ತಿ. ಅಲೆಸಾಂಡ್ರೋ ಪ್ಲುಚಿನೋ, ಆಂಡ್ರಿಯಾ ರಾಪಿಸಾರ್ಡಾ ಮತ್ತು ಸೆಸಾರೇ ಗಾರೋಫಾಲೋ , ಇಟಲಿ , ಸಂಸ್ಥೆಯೊಂದರಲ್ಲಿ ಪ್ರಮೋಷನ್ ನೀಡಲು ಯಾವುದೇ ನೀತಿ ಅನುಸರಿಸದೆ , ಸುಮ್ಮನೆ ಪದೋನ್ನತಿ ನೀಡುವುದರಿಂದ ಸಂಸ್ಥೆಗಳ ಚಾಕಚಕ್ಯತೆ ಹೆಚ್ಚುತ್ತದೆ ಎಂದು ಗಣಿತೀಯವಾಗಿ ನಿರೂಪಿಸಿದ್ದಕ್ಕಾಗಿ
ಜೀವಶಾಸ್ತ್ರ ವಿಭಾಗ : ಲಿಬಿಯವೋ ಝಾಂಗ್, ಮಿನ್ ಟಾನ್, ಝು, ಜಿಯಾನ್ ಪಿಂಗ್ ಯೆ, ತಿಯು ಹೋಂಗ್, ಶಾನ್ಯಿ ಝೂ, ಶುಯಿ ಝಾಂಗ್, ಚೀನಾ ಮತ್ತು ಗರೆತ್ ಜೋನ್ಸ್, ಬಾವಲಿಗಳ ಒಂದು ಬಗೆಯಲ್ಲಿ ಮುಖಮೈಥುನದಿಂದ ಮಿಥುನದ ಸಮಯ ಹೆಚ್ಚಾಗುತ್ತದೆಂಬ ಸಂಶೋಧನೆಗೆ