Thursday, December 21, 2017
Thursday, March 30, 2017
ಆಕಾಶ ಭೂಮಿಗಳ ಒಂದು ಮಾಡಿ ನಿಂತ....
ಜಗದ
ಶಕ್ತಿಗಳೆಲ್ಲ ಒಂದಾಗಿ ನಿಂತಿತೋ
ಜಗವೆಲ್ಲಾ
ಆಕ್ರಮಿಸಿ ಈ ಆಕಾರ ಬಂದಿತೋ
ಕರಿಮುಗಿಲೆ
ಕೇಶವೊ
ಸೂರ್ಯ-ಚಂದ್ರರೇ
ನಯನಗಳೊ
ಸುಳಿವ
ಮಿಂಚುಗಳೆ ನಗೆಯೊ
ಸಿಡಿಲುಗುಡುಗಳೆಲ್ಲ
ನೀನಾಡುವ ನುಡಿಯೊ
ಮೇರುಪರ್ವತವೇ
ನೀ ಹಿಡಿದ ಗದೆಯೊ
ಪಾದಕಮಲಗಳೆರಡು
ಪಾತಾಳದಲ್ಲಿದೆಯೊ
ಅಂಜನಾತನಯ
ವೀರಾಂಜನೇಯ ಮಾರುತಿರಾಯ
ಆಕಾಶ
ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳ
ಕೋರೈಸುವ ಕಾಂತಿ ಚೆಲ್ಲುವ,
ಈ ಭವ್ಯ ರೂಪವೇನು
ನೋಡುವ
ಬಗೆ ಹೇಗೆ ನಿನ್ನ ಬೇಡುವ ಬಗೆ ನಿನ್ನ
ಪಾದ
ಹುಡುಕಲಾರೆ ಹನುಮ ಮೊಗವ ಕಾಣಲಾರೆ;
ಕೋಟಿ
ಕಣ್ಣು ಸಾಲದಯ್ಯ ನಿನ್ನ ರೂಪ ತುಂಬಿಕೊಳಲು
ಹೇಗೆ
ನಿನ್ನ ಕಾಣಲಯ್ಯ ಹೀಗೆ ನಿಲ್ಲಲು;
ನಿಂತ
ರೀತಿಯೋ ತನುವ ಕಾಂತಿಯೋ
ಉರಿವ
ಸೂರ್ಯ ಹಣತೆ ದೀಪದಂತೆ ಕಾಣುತಿರಲು ಹೀಗೆ
ಆಕಾಶ
ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ನಿನ್ನ
ಉಸಿರ ಬಿಸಿಗೆ ಹೆದರಿ ನದಿಗಳಾವಿಯಾಗುತಿರಲು
ದಿವ್ಯ
ರೂಪ ಕಂಡ ಗಿರಿಗಳೆಲ್ಲ ನಡುಗುತಿರಲು;
ನಿನ್ನ
ಭಾರ ತಾಳೆನೆಂದು ಭೂಮಿ ಕುಸಿದು ಹೋಗುತಿರಲು
ಎಲ್ಲಿ
ನಾನು ನಿಲ್ಲಲಯ್ಯ ನಿನ್ನ ನೋಡಲು;
ರೋಮ
ರೋಮದಿ ರಾಮನಾಮವು
ರೋಮ
ರೋಮದಿ ರಾಮನಾಮವು;
ಶಂಖನಾದ
ತಾಳವಾದ್ಯ
ಶಂಖನಾದ
ತಾಳವಾದ್ಯ ದಶದಿಕ್ಕಲು ಮೊಳಗುತಿರಲು
ಆಕಾಶ
ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳೆಲ್ಲ
ಕೋರೈಸುವ ಕಾಂತಿ ಚೆಲ್ಲುವ ಈ ಭವ್ಯ ರೂಪವೇನು
ಆಕಾಶ
ಭೂಮಿಗಳ ಒಂದು ಮಾಡಿ ನಿಂತ ನಿನ್ನ ಈ ಆಕಾರವೇನು
ಕಣ್ಣುಗಳ
ಕೋರೈಸುವ ಕಾಂತಿ ಚೆಲ್ಲುವ,
ಈ ಭವ್ಯ ರೂಪವೇನು
ಸಾಹಿತ್ಯ: ಚಿ. ಉದಯಶಂಕರ
Wednesday, February 15, 2017
ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್
ನಾಸ್ಟ್ರಡಮಸ್ ನುಡಿದ ಭವಿಷ್ಯವೋ, ಮೈಲಾರ ಲಿಂಗದ ಗೊರವಪ್ಪ ನುಡಿದ ಕಾರ್ಣಿಕವೋ, ಅಥವಾ ಕೊಡೀ ಮಠದ ನಾಡೀ
ಗ್ರಂಥದ ನುಡಿಗಳೋ, ಒಟ್ಟಿನಲ್ಲಿ ಎಲ್ಲವೂ ಒಗಟು ಒಗಟು.
ಅದರೊಳಗಣ ಒಗಟು ಸರಳವಾದದ್ದು. ಕಾರ್ಣಿಕದ ಕಾಣ್ಕೆ ಅವರವರ ಮನಸಿಗೆ ಅವರ ಭಾವಕ್ಕೆ, ಅಳತೆ –ವ್ಯಾಪ್ತಿ –ಪ್ರಾಪ್ತಿಗಳಿಗೆ ಬಿಟ್ಟದ್ದು.
ಈ ವರ್ಷದ ಮೈಲಾರ ಲಿಂಗನ ಕಾರ್ಣಿಕ ನುಡಿದ “ಅಂಬಲಿ ಹಳಸೀತು ಕಂಬಳಿ ಬೀಸಿತಲೇ ಪರಾಕ್”
ಎನ್ನುವ ಕಾರಣಿಕದ ಅರ್ಥ ಹುಡುಕುತ್ತಾ ಎರಡು
ರಾತ್ರಿಗಳೇ ಕಳೆದು ಹೋದವು. ಈ ಘಳಿಗೆಯಲ್ಲಿ ನನಗೆ
ಹೊಳೆದಿದ್ದನ್ನು ಇಲ್ಲಿ ಬರೆಯುತ್ತಿದ್ದೇನೆ.
ಮಾಡಿಟ್ಟ ಅಡಿಗೆ ಹಾಗೇ ಕಾಯುತ್ತಾ ಉಳಿದು ಹಲಸಿ ಹೋಗುವುದು ಯಾವಾಗ..? ಊಟಕ್ಕೆ
ಹಕ್ಕುದಾರನಾದ ಯಜಮಾನ ಬರದೇ ಹೋದಾಗ ತಾನೇ? ಅವನು
ಮನೆಗೆ ಬರದಿದ್ದರೆ, ಅಡಿಗೆ ಮಾಡಿದ ಗೃಹಿಣಿಯೂ ಹಸಿದೇ ಕಾಯುವಳು. ಮಾಡಿಟ್ಟ ಅಡಿಗೆ ತನ್ನ ಸಮಯ
ಮುಗಿಯುತ್ತಿದ್ದಂತೆ ಹಳಸಿ ಹೋಗುವುದು. ಈ ಯಜಮಾನ ತನ್ನ ಕಾಯುತ್ತಿರುವ ಮಡದಿ ಮಕ್ಕಳನ್ನೂ ಬಿಟ್ಟು
ಹೊರಗಿರುವನೆಂದರೆ, ಅವನೇನು ದಂಡಿನಲ್ಲಿರುವವನೇ? ಶತ್ರುಗಳ ಸೈನ್ಯ ಏರಿ ಬಂದಿದೆಯೇ? ದೇಶ
ಕಾಯುತ್ತಾ.. ತನ್ನ ಕಾಯುತ್ತಿರುವ ಮಡದಿ ಮಕ್ಕಳು ಮತ್ತು ಅಂಬಲಿಯನ್ನು ಮರೆತು ಬಿಟ್ಟನೇ? ಅವನಿಗೆ ಕಾದು
ಮಡದಿ ಮಕ್ಕಳು ಸುಸ್ತಾದರೇ?
ಜವರಾಯ ಕಂಬಳಿ ಬೀಸಿ ಕಾಯುತ್ತಿರುವನೇ? ಕಾಯುತ್ತಿರುವ ಮಡದಿ ಮಕ್ಕಳನ್ನು ಕಾಯಿಸಿ,
ಮಾಡಿಟ್ಟ ಅಂಬಲಿ ಹಳಸಿ, ಮನೆಯೊಡೆಯ ಜವರಾಯನ ಕಂಬಳಿ ಹೊದ್ದು ಹೊರಟುಬಿಟ್ಟನೇ ?
ಅಂದರೆ ನಮ್ಮ ಮುಂದೆ ಯುದ್ದವೊಂದು ಬರಲಿದೆಯೇ..?
Subscribe to:
Posts (Atom)