ಈ ಬೆಂಗಳೂರು ಹೀಗೇ ಬೆಳೆಯುತ್ತಾ ಹೋದರೆ ಮುಂದೆ ಏನಾಗಬಹುದು?
ಸುತ್ತಾ ಮುತ್ತಾ ಬಂಗಾರದ ಬೆೆಳೆ ಬೆಳೆಯುವ ಭೂಮಿಯನ್ನೆಲ್ಲಾ ನುಂಗಿ ನೀರು ಕುಡಿಯಬಹುದು.
ಊರ ತುಂಬಾ ತುಂಬಿರುವ, ಅಮೆರಿಕನ್ನರು, ಯೂರೋಪಿಯನ್ನರು, ಚೀನೀಯರು, ಕೊರಿಯನ್ನರು, ಆಸ್ಟ್ರೇಲಿಯನ್ನರ ನಡುವೆ, ಉತ್ತರ ಭಾರತೀಯರು, ತಮಿಿಳರು, ತೆಲುಗರ ಮಧ್ಯೆ ಕನ್ನಡಿಗರು ಕಣ್ಮರೆಯಾಗಬಹುದು.
ಕನ್ನಡತನ ಮರೆಯಾಗಿ ಹೋಗಬಹುದು. ಬರುತ್ತಿರುವ ಹಣದ ಆಸೆಗೆ ಹೀಗೆ ನಮ್ಮತನವನ್ನು ಬಲಿಕೊಟ್ಟವರು ಉಳಿಯುವುದು ಹೇಗೆ? ಸಾವಿರದೈನೂರು ವರುಷಗಳ ಇತಿಹಾಸವನ್ನು ಉಳಿಸುವುದು ಹೇಗೆ?
ನಿಮ್ಮ ಅನಿಸಿಕೆಯೇನಾದರೂ ಇದ್ದರೆ ಇಲ್ಲಿ ಹಂಚಿಕೊಳ್ಳಿ.
No comments:
Post a Comment