ಅಲ್ಪಾಯುಧಸ್ತರೇ ಅವನಿಗೆ ದೊರೆಯಾಗಿ
ಭೂದೇವಿಗೆನಿತೋ ಹೊರೆಯಾಗಿ
ಮೊರೆಯಿಡುತಿಹಳಿಲ್ಲಿ ಹೊರಲಾರೆ ನಾನೆಂದು
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ವಸುಧೆಯಾಳ್ವ ವಾನರರು ಇರಲಾರರುಇನ್ನು
ಓಡಿಹೋದಾರು, ಬಾಡಿಹೋದಾರು
ಅಂತ್ಯ ಕಂಡೀತು ವಾನರ ಸಾಮ್ರಾಜ್ಯ
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ತಮತಮ್ಮಲೇ ಕಲಹ ಸಾವು
ಪರಂಗಿ ಪಾಪಿಗಳಿಗೆ, ಹಾಳಾದವೇ ನಗರ
ಒಳಿತಲ್ಲವೇ ಸರ್ವಜನಸಾಗರಕ್ಕೆ
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಅರಣ್ಯಪುರದೊಡಲ ಮೇಲಾಸೆ
ವೀರತೆಗೆ ಬರದ ಬೊಗಸೆ
ದೈವಬಲವು ತೊಲಗೆ,ಧರೆ ಪರರ ಪಾಲಾಗೆ,
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಜಯ ನಾಮಾಂತ್ಯ ಜನರಿಗೆ ಬಹು ತ್ರಾಸು
ವರ್ತಕರಿಗೂ ಸಿಗದು ಕಿಲುಬು ಕಾಸು
ದವಸ ಧಾನ್ಯವೇನೂ ಅಗ್ಗದಲಿ ದೊರಕೊಲ್ಲ
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಸಿಡಿಲು ಬಡಿದಂತೆ ನುಡಿದ ವಿಷಮಾಕ್ಷರವಿದು
ಸರ್ವೇಶ್ವರನೆ ಬಂದರೂ ಹುಸಿಹೋಗದು
ಜನ್ಮದೇಶಕೆ ತಿರುಗಿ ಹೋಗಲೇಬೇಕು
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಕಂಡೀತೋ ಅಂತ್ಯ ಕಾಡು ಕಪಿ ಕುಲ
ಲವಲೇಶ ಕಾಣಿಸದೋ ದೈವಬಲ
ಯಾರಾದರೇನ್ ಕಾಯುವುದೇ? ತನ್ನ ಬಲ
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಚೋರನಿಗೆ ದೊರೆತನವಂತೆ
ರಾಜಯೋಗ್ಯನೆ ಇಲ್ಲವಂತೆ
ಕೆಟ್ಟಿತೋ ನಾಡು, ಗಂಟು ಕಳ್ಳರ ಸಂತೆ,
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಪಾಪ ಹೆಚ್ಚಾಯ್ತು, ಪಟ್ಟಭದ್ರನೆ ದ್ರೋಹಿ
ಹಾಳಾಯ್ತು ರಾಜ್ಯ, ಕೆಟ್ಟಿತು ಪ್ರಜಾಸಮೂಹ
ದಿನವೊಂದು ವರ್ಷದಂತೆ, ದೀನಬಂಧುವೆ ದಿಕ್ಕು
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಅಲ್ಪ ಬುದ್ದಿಯ ಅರಸ ಅನಿತರನು
ಕುಟಿಲತನದಲಿ ಕುಲಭ್ರಷ್ಟ ಮಾಡುತಿಹನು
ಸುಮ್ಮನೇ ಬಿಡುವನೇ ಅವನ ಸರ್ವೇಶ್ವರನು
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಇರಸಾಲು ನಾಣ್ಯ ವಿಪ್ರರ ಪಾಲು
ರಾಜಾದಾಯದಲಿ ಉಳಿದದ್ದು ಒಂದೇ ಪಾಲು
ಮೂರ್ಖ ದೊರೆ - ಬುದ್ದಿ ಮಣ್ಣು ಪಾಲು
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಕೆಡಕು ಮಾಡುವ ದುರ್ಬುದ್ದಿ ಹುಟ್ಟಿದೆ ದೊರೆಗಳಿಗೆ
ಮರಣಕ್ಕೆ ಮದ್ದು ಉಂಟೇನು?
ವಿನಾಶಕಾಲದಲೆ ವಿಪರೀತ ಬುದ್ದ
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ವಕ್ರಿಸಿವೆ ನವಗ್ರಹಗಳು
ವಕ್ರಿಸಿವೆ ಶಕ್ತಿದೇವತೆಗಳು ರಕ್ತಾಹುತಿಗಾಗಿ
ವಾನರ ವಂಶ ನಿರ್ವಂಶ
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಪರಮಾತ್ಮ ನಾ ನುಡಿದ ಈ ಮಾತು
ಅಪದ್ದವಾದರೆ ಅಪಕೀರ್ತಿ ನಿನ್ನದೇ
ಕಾಲಜ್ನಾನಕ್ಕೆ ಕರ್ತುವು ನೀನೆೇ
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಹದಿನ್ಯದು ಪದ್ಯಗಳು ಹಾಡಬಹುದೋ ನೋಡಿ,
ಪ್ರಖ್ಯಾತಿಯಾಗುವುವು ಭುವಿಯ ತುಂಬಾ
ಸುಳಿಯೊಡೆದ ಗಿಡದ ಬುಡ ಗೆದ್ದಲು ಗೂಡೇ?
ನಿಂಡಾ ಪರತತ್ವ ಪ್ರಚಂಡ ನಾರೇಯಣ ಕವಿ
ಇದು ಶ್ೃೀ ನಾರೇಯಣ ತಾತನವರ ಕಾಲಜ್ನಾನದ ಕನ್ನಡಾನುವಾದ ನನ್ನ ಅಳತೆಗೆ ಸಿಕ್ಕಷ್ಟು..
ಮಂಜುನಾಥ್
padyagaLu tuMbaa chennagide Manju.
ReplyDelete