Thursday, October 29, 2009
Friday, October 23, 2009
Thursday, October 15, 2009
Tuesday, October 13, 2009
ವೀರಗಲ್ಲುಗಳು
ತಮ್ಮೊಡೆಯನಿಗಾಗಿ ರಣರಂಗದಲ್ಲಿ ತನುವರ್ಪಿಸಿದ ವೀರರಿಗಾಗಿ ನೆಟ್ಟ ಕಲ್ಲುಗಳು. ಮೈಸೂರಿನ ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಕಂಡದ್ದು.
Tuesday, October 06, 2009
೨೦೦೯ ರ ಇಗ್ನೊಬಲ್ ಪ್ರಶಸ್ತಿಗಳು
ನೋಬೆಲ್ ಪ್ರಶಸ್ತಿಯಂತೆ ಇಗ್ನೊಬಲ್ ಪ್ರಶಸ್ತಿಯನ್ನೂ ಪ್ರತಿವರ್ಷ ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಕ್ಟೋಬರ್ ಒಂದನೇ ತಾರೀಕಿನಂದು ನೀಡಲಾಗುತ್ತದೆ. ಜನತೆಯನ್ನು ನಗಿಸಿ ನಂತರ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು.
ಈ ವರ್ಷದ ಇಗ್ನೊಬಲ್ ಪ್ರಶಸ್ತಿ ವಿಜೇತರು :
ಭೌತಶಾಸ್ತ್ರದಲ್ಲಿ ಗರ್ಭಿಣಿಯರು ಏಕೆ ಮುಗ್ಗರಿಸುವುದಿಲ್ಲ ಎಂಬ ಸಂಶೋಧನೆಗೆ ಸಂದರೆ, ರಸಾಯನ ಶಾಸ್ತ್ರದಲ್ಲಿ ಟಕೀಲಾ ಮದ್ಯವನ್ನು ವಜ್ರವನ್ನಾಗಿ ಪರಿವರ್ತಿಸುವುದಕ್ಕಾಗಿ ಸಿಕ್ಕಿದೆ.ಪ್ರಾಣಿಶಾಸ್ತ್ರದ ಪ್ರಶಸ್ತಿ ಹೆಸರಿಟ್ಟಿರುವ ಹಸುಗಳು, ಹೆಸರಿಡದ ಹಸುಗಳಿಗಿಂತ ಜಾಸ್ತಿ ಹಾಲು ಕೊಡುತ್ತವೆ ಎಂಬ ಉದ್ದಾಮ ಸಂಶೋಧನೆಗೆ. ಎಲ್ಲಕ್ಕಿಂತ ಮಿಗಿಲಾದ ಸಂಶೋಧನೆ ವೈದ್ಯಕೀಯ ವಿಭಾಗದ್ದು. ನೆಟಿಕೆ ತೆಗೆಯುವುದರಿಂದ ಕೀಲುಸವೆತ (ಅರ್ಥರೈಟಿಸ್) ಬರುವುದಿಲ್ಲ ಎಂದು ಸಾಧಿಸಿದ ವೈದ್ಯರದ್ದು. ಇದಕ್ಕಾಗಿ ಐವತ್ತು ವರ್ಷಗಳ ಕಾಲ ಎಡಗೈಗೆ ನೆಟಿಕೆ ತೆಗೆಯದೆಯೇ ಉಳಿದ ಸಾಧನೆ ಮಹತ್ವದ್ದು. ಶಾಂತಿಗಾಗಿ ನೀಡುವ ಇಗ್ನೋಬಲ್ ಸ್ವಿಸ್ ಸಂಶೋಧನಾರ್ಥಿಗಳ ಪಾಲಾಗಿದೆ. ತುಂಬಿದ ಬೀರಿನ ಬಾಟಲೂ ಅಥವಾ ಖಾಲಿ ಬೀರು ಬಾಟಲು ಯಾವುದಾದರೂ ತಲೆಬುರುಡೆ ಒಡೆಯುತ್ತದೆಂಬ ಸಂಶೋಧನೆ ಅವರದ್ದು. ನೀವು ಬಿಯರ್ ಕುಡಿಯುವಾಗ ಜಗಳ ಮಾಡುವುದಾದರೆ ಈ ಸಂಶೋಧನೆ ನಿಮ್ಮನ್ನು ಚಿಂತೆಗೆ ಹಚ್ಚುತ್ತದೆ.ಆದರಿದು ನಗುವ ವಿಷಯವೇನೂ ಅಲ್ಲವಲ್ಲ...!
source : Scientific American

Subscribe to:
Posts (Atom)