ಜಯಂತ್ ಕಾಯ್ಕಿಣಿ ಬರೆದ ಮೊದಲ ಗೀತೆ ಇದು. ರಾಗ ಸಂಯೋಜನೆ ಸಿ. ಅಶ್ವಥ್, ಗಾಯನ ರಾಜಕುಮಾರ್. "ಅನುರಾಗ" ಸಂಪುಟ. ಮನವನ್ನು ಆರ್ದ್ರಗೊಳಿಸುವ ಗೀತೆ.
ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ
ಮಾತಿಗೆ ಬಂದವಳು ಮನಸಿಗೆ ಬಾರದಿರುವೆಯಾ
ಗಾಯವೆಲ್ಲ ಮಾಯುವಂಥ ರಾತ್ರಿಯೊಂದು ಕನಸೇ
ದಳದಳಗಳ ನೋವಿನಲ್ಲಿ ಅರಳಿನಿಂತ ಮನಸೇ
ತಂಗಾಳಿಯ ಕರೆಯೇ, ಹೊಸಲೋಕವ ತೆರೆಯೇ
ಕೊನೆಗೂ ಬಂದವಳು ಬೆಳಗು ತಾರದಿರುವೆಯಾ
ಬಾಯಾರಿದ ಬಿಸಿಲಿನಲ್ಲಿ ಹೊಸ ಹಗಲ ತೇರು
ಎಳೆಯದೇ ದಾರಿಯಲ್ಲಿ ಬಿಟ್ಟು ಹೋದವರಾರು?
ಹುಚ್ಚು ನೂರು ಸಂತೆ ನೆಚ್ಚಿ ಕಾದು ನಿಂತೆ
ಸಖ ಎಂದವಳು ಮುಖ ತೋರದಿರುವೆಯಾ?
No comments:
Post a Comment