ರಚನೆ ಟಿ.ಪಿ. ಕೈಲಾಸಂ
ನಾನು ಕೋಳೀಕೆ ರಂಗ
ಕೋನು ಳೀನು ಕೆನು ರನು ಸೊನ್ನೆ ಗ
ಕ ಕೊತ್ವ ಳಿ ಕ್ ಕೆತ್ವ ರ ಸೊನ್ನೆಯೂನು ಗ
ಇದನ್ನ ಹಾಡಕ್ ಬರ್ದೆ ಬಾಯ್ ಬಿಡೋನು ಬೆಪ್ಪು ನನ್ನ ಮಗ
ನಾನು ಕೋಳೀಕೆ ರಂಗ
ಕೋನು ಳೀನು ಕೆನು ರನು ಸೊನ್ನೆ ಗ
ಕ ಕೊತ್ವ ಳಿ ಕ್ ಕೆತ್ವ ರ ಸೊನ್ನೆಯೂನು ಗ
ನಮ್ಮ್ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡಮಗ
ನಾ ಹುಟ್ಟಿದ್ ವೊಡ್ರಳ್ಳಿ ಬೆಳೆದದ್ದ್ ಬ್ಯಾಡ್ರಳ್ಳಿ
ಮದುವೆ ಮಾರ್ನಳ್ಳಿ ಹೊಲಗೊಳ್ ಹಾರ್ನಳ್ಳಿ ||೨||
ನಮ್ಮ ಶಾನುಭೋಗಯ್ಯ ಅಲ್ದೆ ಶೇಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನ.
ಹೆಂಡ್ರನ್ನು ಮಕ್ಕಳನ್ನು ಬುಟ್ಟು,
ಅಟ್ಟಿ ಅವ್ವೇನು ಬುಟ್ಟು
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಮ್ಮಳ್ಳಿ ಕಿಲಾಡಿ ಉಂಜಾ.. ||ನಾನು||
ಎತ್ತಿಲ್ದ್ ಬಂಡಿಗ್ಳೂ ವೆ ಎಣ್ಣಿಲ್ಲದ್ ದೀಪಗ್ಳೂವೆ
ತುಂಬಿದ್ ಮೈಸೂರಿಗ್ ಬಂದೆ
ದೊಡ್ ಚೌಕದ್ ಮುಂದೆ ದೊಡ್ ಗಡಿಯಾರದ್ ಹಿಂದೆ
ಕಟ್ಟ್ ತಂದಿದ್ ಬುತ್ತೀನ್ ತಿಂತಿದ್ದೆ.
ಅಲ್ ಕುದುರೆ ಮೇಲ್ ಕುಂತಿದ್ದ್ ಒಬ್ಬ್ ಸವಾರಯ್ಯಾ
ಕೆದರಿದ್ ತನ್ ಮೀಸೆ ಮೇಲ್ ಆಕ್ತಾನ್ ತನ್ ಕಯ್ಯಾ
ಕೇಳ್ತಾನ್ ನನ್ನ
ಗದರಿಸ್ತಾನ್ ರೀ
ಬೆದರಿಸ್ತಾನ್ ರೀ
ಲೇ ನೀ ಯಾರೋ , ಯಾಕೋ ಎಲ್ಲಿ ಅಂತ
ಹ ಹ ನಾನ್ ಕೋಳೀಕೆ .........
Tuesday, April 19, 2011
Friday, April 01, 2011
ಇಂದು ಎನಗೆ ಗೋವಿಂದ
ಇಂದು ಎನಗೆ ಗೋವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ ಮುಕುಂದನೇ..
ಸುಂದರ ವದನನೇ
ನಂದ ಗೋಪಿಯ ಕಂದ
ಮಂಥರೋದ್ದಾರ ಆನಂದ
ಇಂದಿರಾ ರಮಣಾ
ನೊಂದೆನಯ್ಯಾ
ಭವ ಬಂದನದೊಳು ಸಿಲುಕಿ
ಮುಂದೆ ದಾರಿ ಕಾಣದೇ
ಕುಂದಿದೆ ಜಗದೊಳು
ಕಂದನಂತೆಂದೆನ್ನಾ
ಕುಂದುಗಳಾ ಎಣಿಸದೇ
ತಂದೆ ಕಾಯೋ ಕೃಷ್ಣ
ಕಂದರ್ಪ ಜನಕನೇ
ಧಾರುಣಿಯೊಳು ಬಲು
ಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ
ಸೇರಿದೆ ಕುಜನರ
ಆರೂ ಕಾಯುವರಿಲ್ಲ
ಸಾರಿದೇ ನಿನಗಯ್ಯ
ವೀರ ವೇಣುಗೋಪಾಲ
ಪಾರುಗಾಣಿಸೋ ಹರಿಯೇ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ ಮುಕುಂದನೇ..
ಸುಂದರ ವದನನೇ
ನಂದ ಗೋಪಿಯ ಕಂದ
ಮಂಥರೋದ್ದಾರ ಆನಂದ
ಇಂದಿರಾ ರಮಣಾ
ನೊಂದೆನಯ್ಯಾ
ಭವ ಬಂದನದೊಳು ಸಿಲುಕಿ
ಮುಂದೆ ದಾರಿ ಕಾಣದೇ
ಕುಂದಿದೆ ಜಗದೊಳು
ಕಂದನಂತೆಂದೆನ್ನಾ
ಕುಂದುಗಳಾ ಎಣಿಸದೇ
ತಂದೆ ಕಾಯೋ ಕೃಷ್ಣ
ಕಂದರ್ಪ ಜನಕನೇ
ಧಾರುಣಿಯೊಳು ಬಲು
ಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ
ಸೇರಿದೆ ಕುಜನರ
ಆರೂ ಕಾಯುವರಿಲ್ಲ
ಸಾರಿದೇ ನಿನಗಯ್ಯ
ವೀರ ವೇಣುಗೋಪಾಲ
ಪಾರುಗಾಣಿಸೋ ಹರಿಯೇ
ಶರಣು ಶರಣಯ್ಯ ಶರಣು ಬೆನಕ
ಮೂಷಿಕ ವಾಹನ ಮೋದಕ ಹಸ್ತ
ಚಾಮರಕರ್ಣ ವಿಳಂಬಿತ ಸೂತ್ರ
ವಾಮನರೂಪ ಮಹೇಶ್ವರ ಪುತ್ರ
ವಿಘ್ನ ವಿನಾಶಕ ಪಾದ ನಮಸ್ತೇ ನಮಸ್ತೇ ನಮಃ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ |೨|
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ |೨|
ಎಲ್ಲಾರು ಒಂದಾಗಿ ನಿನ್ನ
ನಮಿಸಿ ನಲಿಯೋದು
ನೋಡೋಕೆ ಚೆನ್ನ |೨|
ಗರಿಕೆ ತಂದರೆ ನೀನು
ಕೊಡುವೆ ವರವನ್ನ
ಗತಿ ನೀನೆ ಗಣಪನೆ
ಕೈ ಹಿಡಿಯೋ ಮುನ್ನ |೨| ||ಶರಣು||
ಸೂರ್ಯನೆದುರಲಿ ಮಂಜು
ಕರಗುವಾ ರೀತಿ
ನಿನ್ನ ನೆನೆಯಲು
ಒಡನೆ ಓಡುವುದು ಭೀತಿ |೨|
ನೀಡಯ್ಯ ಕಷ್ಟಗಳ
ಗೆಲ್ಲುವಾ ಶಕುತಿ
ತೋರಯ್ಯ ನಮ್ಮಲ್ಲಿ
ನಿನ್ನಯಾ ಪ್ರೀತಿ |೨| ||ಶರಣು||
ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು
ಒಪ್ಪುವ ವಿಘ್ನೇಶ್ವರಾ ನಿನಿಅಗೆ
ಇಪ್ಪತ್ತೊಂದು ನಮಸ್ಕಾರಗಳು.
ಚಾಮರಕರ್ಣ ವಿಳಂಬಿತ ಸೂತ್ರ
ವಾಮನರೂಪ ಮಹೇಶ್ವರ ಪುತ್ರ
ವಿಘ್ನ ವಿನಾಶಕ ಪಾದ ನಮಸ್ತೇ ನಮಸ್ತೇ ನಮಃ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ |೨|
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ |೨|
ಎಲ್ಲಾರು ಒಂದಾಗಿ ನಿನ್ನ
ನಮಿಸಿ ನಲಿಯೋದು
ನೋಡೋಕೆ ಚೆನ್ನ |೨|
ಗರಿಕೆ ತಂದರೆ ನೀನು
ಕೊಡುವೆ ವರವನ್ನ
ಗತಿ ನೀನೆ ಗಣಪನೆ
ಕೈ ಹಿಡಿಯೋ ಮುನ್ನ |೨| ||ಶರಣು||
ಸೂರ್ಯನೆದುರಲಿ ಮಂಜು
ಕರಗುವಾ ರೀತಿ
ನಿನ್ನ ನೆನೆಯಲು
ಒಡನೆ ಓಡುವುದು ಭೀತಿ |೨|
ನೀಡಯ್ಯ ಕಷ್ಟಗಳ
ಗೆಲ್ಲುವಾ ಶಕುತಿ
ತೋರಯ್ಯ ನಮ್ಮಲ್ಲಿ
ನಿನ್ನಯಾ ಪ್ರೀತಿ |೨| ||ಶರಣು||
ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು
ಒಪ್ಪುವ ವಿಘ್ನೇಶ್ವರಾ ನಿನಿಅಗೆ
ಇಪ್ಪತ್ತೊಂದು ನಮಸ್ಕಾರಗಳು.
Subscribe to:
Posts (Atom)