ಮೂಷಿಕ ವಾಹನ ಮೋದಕ ಹಸ್ತ
ಚಾಮರಕರ್ಣ ವಿಳಂಬಿತ ಸೂತ್ರ
ವಾಮನರೂಪ ಮಹೇಶ್ವರ ಪುತ್ರ
ವಿಘ್ನ ವಿನಾಶಕ ಪಾದ ನಮಸ್ತೇ ನಮಸ್ತೇ ನಮಃ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ |೨|
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ |೨|
ಎಲ್ಲಾರು ಒಂದಾಗಿ ನಿನ್ನ
ನಮಿಸಿ ನಲಿಯೋದು
ನೋಡೋಕೆ ಚೆನ್ನ |೨|
ಗರಿಕೆ ತಂದರೆ ನೀನು
ಕೊಡುವೆ ವರವನ್ನ
ಗತಿ ನೀನೆ ಗಣಪನೆ
ಕೈ ಹಿಡಿಯೋ ಮುನ್ನ |೨| ||ಶರಣು||
ಸೂರ್ಯನೆದುರಲಿ ಮಂಜು
ಕರಗುವಾ ರೀತಿ
ನಿನ್ನ ನೆನೆಯಲು
ಒಡನೆ ಓಡುವುದು ಭೀತಿ |೨|
ನೀಡಯ್ಯ ಕಷ್ಟಗಳ
ಗೆಲ್ಲುವಾ ಶಕುತಿ
ತೋರಯ್ಯ ನಮ್ಮಲ್ಲಿ
ನಿನ್ನಯಾ ಪ್ರೀತಿ |೨| ||ಶರಣು||
ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು
ಒಪ್ಪುವ ವಿಘ್ನೇಶ್ವರಾ ನಿನಿಅಗೆ
ಇಪ್ಪತ್ತೊಂದು ನಮಸ್ಕಾರಗಳು.
No comments:
Post a Comment