Pages

Wednesday, January 29, 2014

ಆಚೆ ಮನೆ ಸುಬ್ಬಮ್ಮನ ಏಕಾದಸಿ ಉಪವಾಸ

ಆಚೇ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ
ಎಲ್ಲೋ ಸ್ವಲ್ಪ ತಿಂತಾರಂತೆ
ಉಪ್ಪಿಟ್ಟು ಅವಲಕ್ಕಿ ಪಾಯ್ಸ
ಮೂರೋ ನಾಲ್ಕೋ ಬಾಳೆಹಣ್ಣು
ಸ್ವಲ್ಪ ಚಕ್ಕುಲಿ ಕೋಡುಬಳೆ
ಗಂಟೆಗೆರಡು ಸೀಬೆಹಣ್ಣು
ಆಗಾಗ ಒಂದೊಂದು ಕಿತ್ತಳೆ
ಮಧ್ಯಾಹ್ನಕೆಲ್ಲಾ ರವೆ ಉಂಡೆ
ಹುರಳಿಕಾಳಿನ ಉಸಲಿ
ಒಂದೊಂದ್ಸಲ ಬಿಸಿ ಸಂಡಿಗೆ
ಐದೋ ಆರೋ ಇಡ್ಲಿ
ರಾತ್ರಿ ಪಾಪ ಉಪ್ಪಿಟ್ಟೇ ಗತಿ
ಒಂದ್ಲೋಟ ತುಂಬ ಹಾಲು
ಪಕ್ಕದ ಮನೆಯ ರಾಮೇಗೌಡರ
ಸೀಮೆಹಸುವಿನ ಹಾಲು
ಸಿ.ಆರ್. ಸತ್ಯ ಬರೆದಿರುವ ಆಚೆ ಮನೆ ಸುಬ್ಬಮ್ಮನ ಏಕಾದಸಿ ಉಪವಾಸ

 


No comments:

Post a Comment