ಕಶ್ಯಪ ಬ್ರಹ್ಮನ ಮಗ,,
ಧಿತಿಗರ್ಭ ಸ೦ಜಾತ,,
ಚತುರ್ಮುಖ ಬ್ರಹ್ಮನ ಮೊಮ್ಮಗ,
ವಿಧಾತನಿ೦ದ ವಿಧಿಬರಹವನ್ನೇ ಬದಲಾಯಿಸಿ, ಮರಣವನ್ನೇ ಮೆಟ್ಟಿ
ನಿ೦ತ ಮಹಾವೀರ.
ಅಧಿತಿಯ ಮಕ್ಕಳ ಅಟ್ಟಹಾಸವನ್ನು ಸುಟ್ಟು, ಆದಿತ್ಯನ
ಅಟ್ಟಹಾಸವನ್ನು ಮಟ್ಟ ಹಾಕಿದ ಸಾಹಸಿ.
ಅತಳ ವಿತಳ ರಸಾತಳ ತಳಾತಳ ಮಹಾತಳ
ಪಾತಾಳಗಳನ್ನು ಪಾದದಡಿಯಲಿ ತುಳಿದಿಟ್ಟ ಪರಾಕ್ರಮಶಾಲಿ.
ಅಡಿಯಿಟ್ಟರೆ ಬಿರಿಯುವುದು ಭೂಮಿ, ತಲೆ
ಎತ್ತಲು ಬೆಚ್ಚುವುದು ಬಾನು, ಕೈ ಎತ್ತಲು ನಡುಗುವುದು ಸೃಷ್ಟಿ,
ಚತುರ್ಮುಖನ ಸೃಷ್ಟಿಯೇ ನನ್ನ
ಆಜ್ಞೆಯನ್ನು ಪಾಲಿಸುತ್ತಿರುವಾಗ... ಎಕ್ಕಶ್ಚಿತ್ ನನ್ನ ಮಗ...
ನಾ ಜನ್ಮ ಕೊಟ್ಟ ಮಗ... ನನ್ನ ವ೦ಶವನ್ನೇ ಬೆಳಗಬೇಕಾದ
ನನ್ನ ಕುಮಾರ.. ನನ್ನ ಆಶಾಜ್ಯೋತಿಯಿ೦ದ ಇ೦ದು ನನ್ನ
ಮನಸ್ಸಿಗೆ ನೆಮ್ಮದಿ ಇಲ್ಲವೆ೦ದರೆ,,, ಛೀ .... ಇದೊ೦ದು ಬದುಕೇ,,
ಇದೊ೦ದು ಜನ್ಮವೇ ,,, ಎ೦ಥಾ ದುರ್ವಿಧಿ ...
ಇದೆ೦ಥಾ ದುರ್ವಿಧಿ !!!
ನಾನೇ ಸರ್ವಶಕ್ತನೆ೦ದುಕೊ೦ಡರೆ, ಅದಾವ ಶಕ್ತಿ ನನಗೆ ಎದುರಾಗಿ
ಕಾಡುತ್ತಿದೆ. ಅದಾವ ಶಕ್ತಿ ಪುತ್ರನನ್ನೇ ಶತ್ರುವನ್ನಾಗಿ
ಮಾಡಿದೆ. ಅದಾವ ಶಕ್ತಿ ನನ್ನನ್ನು ಎದುರಿಸುವ ಹಾಗೆ ಅವನಲ್ಲಿ
ಧೈರ್ಯ ತುಂಬಿದೆ. ಅದಾವ ಶಕ್ತಿ ಅವನಿಗೆ ಸಾವು ಬರದಂತೆ ತಡೆದಿದೆ.
ಅದಾವ ಶಕ್ತಿ ನನ್ನ ಮುಖ ಭಂಗ ಮಾಡಿ ನನ್ನನ್ನು ತಲೆ
ತಗ್ಗಿಸುವಂತೆ ಮಾಡಿದೆ.
ಅವನೇ ,,,, ಆ ದುಷ್ಟನೇ ,,, ಆ ನನ್ನ ಕುಲವೈರಿಯಾದ
ಹರಿಯೇ ಇದಕ್ಕೆಲ್ಲ ಕಾರಣ.
ಎಲಎಲವೋ ಹರಿ ,,, ಕಪಟಿ,, ವಂಚಕಿ ,, ನನ್ನ ಮಗನ
ಹೃದಯಾ೦ತರಾಳವನ್ನು ಹೊಕ್ಕು, ಅವನ ತಲೆಯನ್ನು ಕೆಡಿಸಿ, ನಿನ್ನ
ಮನ ಬಂದಂತೆ ಆಡಿಸುತ್ತಿರುವೆಯಾ .. ನಿನಗೆ ಪೌರುಷವಿದ್ದರೆ, ಪರಮ
ಪುರುಷೋತ್ತಮನೇ ನೀನಾಗಿದ್ದರೆ, ನನ್ನಂತೆ ನಿಜವಾದ
ಗಂಡು ನೀನಾಗಿದ್ದರೆ,,, ಬಾ ,,,,
ಬಂದು ನನ್ನ ಎದುರಿಗೆ ನಿಲ್ಲು. ನಿನ್ನ ಉದರಗಳನ್ನು ಬಗೆದು, ನಿನ್ನ
ಕರುಳುಗಳನ್ನು ಮಾಲೆ ಹಾಕಿಕೊಳ್ಳದಿದ್ದರೆ ... ಹಹ ..
ನಾನು ಹಿರಣ್ಯಕಶ್ಯಪುವೇ ಅಲ್ಲ ...
ನಾನು ಹಿರಣ್ಯಕಶ್ಯಪುವೇ ಅಲ್ಲ ... !!!!!!
( ಕೃಪೆ : ಗಂಚಾಲಿ ಬಿಡಿ ಕನ್ನಡ ಮಾತಾಡಿ ತಂಡ)