ವಸಂತ
ವರುಷದ ಮೊ
ದಲ ಕವನ ಬರೆ
ದಭಿಮಾನ
ದಿನಕರನ
ಧೀರ್ಘಪಯಣ ಮರಿ
ನವಿಲ ಯಾನ.
ಹಿಗ್ಗಿದ ಹಗ
ಲು ಕಳೆದ ದಿನಗ
ಳದೇ ನೆನಪು.
ಮುಸ್ಸಂಜೆಯಲಿ
ನರಿಯೊಂದು ನಾಗರಿ
ಕನಾಯಿತಂತೆ
ಮಧ್ಯಾಹ್ನದ ನಿ
ದ್ದೆ ತಿಳಿದೆದ್ದಾಗ ಕ
ತ್ತಲ ಹೊದಿಕೆ.
ಗನ್ನೇರು ಮರ
ಬೆಳ್ಳಿ ಬೆಳದಿಂಗಳು
ಕನ್ನೆಯ ನಗು
ಬೇಸಗೆ
ಅತಿಥಿ ಬರ
ಲಿಲ್ಲ. ಅಂಗಳದಲ್ಲಿ
ಅರಳಿತು ಹೂ.
ಅರಳಿದ ಹೂ
ದಳ ಉದುರಿ ಒಂದ
ರ ಮೇಲಿನ್ನೊಂದು.
ಚಪ್ಪಲಿ ಕೈಯ
ಲ್ಲಿ ಹಿಡಿದು ನದಿ ದಾ
ಟುವುದು ಚಂದ
ಕಲ್ಲುಕುಟಿಗ
ನ ಉಳಿಗೆ ಹೊಳೆನೀ
ರ ತಂಪು ಸ್ನಾನ.
ಕೋಗಿಲೆಯೊಂದು
ರಸಿಕನೂರಿನಲಿ
ಹಾರಾಡಿಹುದು.
ಸಂಜೆಯ ಗಾಳಿ
ಕೊಕ್ಕರೆ ಕಾಲ್ಗಳಲಿ
ನೀರ ಸಿಂಚನ
ಕಾಡಗುಲಾಬಿ
ಅರಳಿದೆ ನಾ ಹಿಡಿ
ದೆ ಊರ ದಾರಿ.
ರಾತ್ರಿ ಮುಗಿದ
ರೂ ಹೊಳೆಯ ನೀರಿನ
ಲಿ ಚಂದ್ರಬಿಂಬ
ವರ್ಷ
ಕಳೆದ ವರು
ಷಕ್ಕಿಂತ ಈ ವರುಷ
ಒಂಟಿಯೇ
ನಾನು?
ಒಂಟಿಯಾಗಿರು
ವುದು ವರ್ಷಕಾಲದ
ಸಂತಸವೇನು?
ಈ ಊರ ಹಾದಿ
ಯ ಮೇಲೆ ಆಗಸದೆ
ಚಂದ್ರನ ಯಾನ
ಚಳಿಗಾಲ
ಇಂದು ಮಲಗು
ಹೊಸ ವರುಷ ನಾಳೆ
ಯ ಮಾತಲ್ಲವೇ?
ಚಳಿಗಾಲದ
ಮಳೆಗಾಳಿಗೆ ಒದ್ದೆ.
ನಿಶ್ಯಬ್ದ ಸದ್ದು.
ಹಳೆಯ ಕೊಳ
ಆಲಿಕಲ್ಲಿನ ಮಳೆ
ಮುಳುಗು ಹಕ್ಕಿ
No comments:
Post a Comment