Pages

Thursday, November 12, 2009

ನಾಗರಹಾವಿನ ಓಬವ್ವನ ಹಾಡು

ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿ ತ್ರ ದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿದ ಸಿರಿನಾಡು

ವೀರಮದಕರಿ ಆಳುತಲಿರಲು ಹೈದರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ದಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಗೂಡಚಾರರು ಅಲೆದು ಬಂದರು ಹೈದರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದ ಕಂಡಳು.


ಕೈಗೆ ಸಿಕ್ಕಿದ ಒನಕೆ ಹಿಡಿದಳು ವೀರಗಚ್ಚೆಯ ಹಾಕಿ ನಿಂದಳು
ದುರ್ಗಿಯನ್ನು ಮನದಲ್ಲೆ ನೆನೆದಳು, ಕಾಳಿಯಂತೆ ಬಲಿಗಾಗಿ ಕಾಯ್ದಳು
ಯಾರವಳೂ..? ಯಾರವಳೂ..? ವೀರವನಿತೆ ಆ ಓಬವ್ವ..
ದುರ್ಗವು ಮರೆಯದ ಓಬವ್ವ ..
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ

ತೆವಳುತ ಒಳಗೆ ಬರುತಿರೆ ವೈರಿ ,  ಒನಕೆಯ ಬೀಸಿ ಕೊಂದಳು ನಾರಿ,
ಸತ್ತವನನ್ನು ಎಳೆದು ಹಾಕುತ,  ಮತ್ತೆ ನಿಂತಳು ಹಲ್ಲು ಮಸೆಯುತ
ವೈರಿ ರುಂಡ ಚೆಂಡಾಡಿದಳು ರಕುತದ ಕೋಡಿ ಹರಿಸಿದಳು .
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ.

ಸತಿಯ ಹುಡುಕುತ ಕಾವಲಿನವನು ಗುಪ್ತದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು, ಹೆಣದ ರಾಶಿಯ ಬಳಿಯೆ ಕಂಡನು
ರಣಚಂಡಿ ಅವತಾರವನು, ಕೋಟೆ ಸಲಹಿದ ತಾಯಿಯನು.

ಸಂಭಾಷಣೆ:   "ಹೈದರಾಲಿಯ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ. ಹೋಗಿ..  ರಣಕಹಳೆಯನ್ನು ಊದಿ"

ರಣಕಹಳೆಯನು ಊದುತಲಿರಲು, ಸಾಗರದಂತೆ ಸೈನ್ಯ ನುಗ್ಗಲು,
ವೈರಿಪಡೆಯು ನಿಶ್ಯೇಷವಾಗಲು.. ಕಾಳಗದಲ್ಲಿ ಜಯವನು ತರಲು.
ಅಮರಳಾದಳು   ಓಬವ್ವ... ಚಿತ್ರದುರ್ಗದ ಓಬವ್ವ .

1 comment:

  1. ಚಿತ್ರದುರ್ಗ ಮತ್ತೆ ನಾನು...ಒಂದು ರೀತಿಯ...ಬಿಡಿಸಲಾರದ ಅನುಬಂಧ...
    ಚಿತ್ರದುರ್ಗ ಎನ್ನುವ ಆ ಹೆಸರೇ ನನ್ನಲ್ಲಿ ಏನೋ ಒಂದು ರೀತಿಯ ರೋಮಾಂಚನಗೊಳಿಸುವುದು
    ಹಾಗಿರುವಾಗ ಈ ಹಾಡನ್ನು ನೆನಪಿಸಿ...
    ನನ್ನ ಕಣ್ಣೆದುರೇ ಆ ಘಟನೆಗಳು ನಡೆಯುತ್ತಿದೆಯೇನೋ ಎಂದೆನಿಸುವಂತೆ ಮಾಡಿದ ನಿನಗೆ... :)

    ReplyDelete