Pages

Friday, June 18, 2010

ವೀರಭದ್ರನ ಕೊಂಡ

ಲೋಹದ ಹಕ್ಕಿ ಹಾರಲು,
ಕಂಡಿದ್ದೇನು ಇರುಳಲು?
ಊರೆಲ್ಲಾ ಹೊಳೆವ ಕೆಂಡ.
ವೀರಭದ್ರನ ಕೊಂಡ

ಉರಿದಿದೆ ಮೆರೆದಿದೆ ಜಗಜಗ ದೀಪ
ಇರುಳಿನ ಕೊರಳಿಗೇ ಉರುಳು ಪಾಪ

ಕತ್ತಲ ಕೊಲ್ಲಲು, ಬೆಳಕಿನ ಹೊನಲು
ಶಿವಸತಿ ಚಿತೆಯುರಿ ನಾಡಿನ ಮಡಿಲು

ಭೂಸುತೆಯಗ್ನಿ ಪರೀಕ್ಷೆಯ ಭುಗಿಲು
ಬೆಳಕಿನ ಹೊನಲಲಿ ಮುಗಿಲಿಗು ದಿಗಿಲು

ಹಿಮವಂತನ ಯಙ್ಞ ಕುಂಡದ ಒಡಲು
ಬದುಕಿನ ಬೆಳಕನು ನಂದಿಸದಿರಲು

ಬರುವನೋ ರುದ್ರ
ಅಗ್ನಿಯ ಮೇಲೆ ರಕ್ತದ ಮಳೆಯನು
ಸುರಿವನೋ ರುದ್ರ

No comments:

Post a Comment