Pages

Thursday, February 23, 2012

ಕಂತಿ ಹಂಪರ ಸಮಸ್ಯೆಗಳು


ಕಂತಿ ಹಂಪರ ಸಮಸ್ಯೆಗಳ ಬಗ್ಗೆ ಚಿಕ್ಕಂದಿನಲ್ಲಿ ಕೇಳಿದ್ದೆ.  ನನ್ನ ಮನಸ್ಸಿನಲ್ಲಿ ಈ ಸಾಹಿತ್ಯ ಪ್ರಾಕಾರದ ಅರಿವು ಮೂಡಿಸಿದ ಬೆರಗು ಅಪಾರ.
ಸಮಸ್ಯಾಪೂರಣದ ವಿಧಾನದ ಸಮಸ್ಯೆಗಳೂ, ಅವುಗಳ ಸಮಾಧಾನಗಳೂ, ಮತ್ತು ಅದರ ಹಿಂದಿರುವ ಕವಿತಾ ಪ್ರತಿಭೆಯೂ ಅತ್ಯಮೋಘವಾದುದು. ಈ ಬಗ್ಗೆ ಹಂಸಾನಂದಿಯವರಬ್ಲಾಗಿನ ಈ ಬರಹ ತುಂಬ ಸೊಗಸಾಗಿದೆ. ಆ ಬ್ಲಾಗಿನಿಂದ ಸಮಸ್ಯೆ-ಸಮಾಧಾನಗಳನ್ನು ಕೆಳಗೆ ಪಟ್ಟಿಸಿದ್ದೇನೆ.
ಓದಿದ ಸಹೃದಯರಿಗೆ ರಸಾನುಭೂತಿಯಾದರೆ ನಾನು ಧನ್ಯ.

ಪದಗಳಿರುವಂತೆ ಪದ್ಯ ರಚನೆ.

ಮಸೆಕಲ್ಲು , ಕುದುರೆ, ಬಾಚಿ, ಕೊಡಲಿ, ಉಳಿ, ಪೊಸ 
ಮಸೆಗಲ್ಗಳಿ ಮಾಂಬಳಮಂ
ವಸುಧಾತಳಕುದುರೆ ಬಾಚಿಯೆತ್ತಿದಳೊರ್ವಳ್
ಶಶಿಮುಖಿಗೆ ಕೊಡಲಿಕೆ ಆಕೆ
ಪೊಸವಣ್ಣಂ ಸವಿದು ನೋಡಿ ನಸುವುಳಿಯೆಂದಳ್


ಕೊಟ್ಟ ಪದ್ಯವನ್ನು ಅರ್ಥವತ್ತಾಗಿ ಪೂರೈಸುವುದು.

ಸತ್ತವಳೆದ್ದು ತವರಿಗೆ ಪೋದಳೇನಿದು ವಿಚಿತ್ರಂ
ಅತ್ತೆಯ ಕಾಟವು ಅಧಿಕಂ ಮತ್ತಿನ ಸವತಿಯರ ಕಾಟ ನಾದಿನಿ ಬೈವಳು
ಪೆತ್ತಮಕ್ಕಳಳಲ್ಕೆ ಸಲೆಗಂಡ ದೂಸರಿಗಾರದೆ ಬೇಸತ್ತವಳೆದ್ದು ತವರಿಗೆ ಪೋದಳೇನಿದು ವಿಚಿತ್ರಂ?


 ಇಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್
ಸರಸಿಜಾಕ್ಷಿಯರ ಹಸ್ತದೊಳ್ ತಿಲತೈಲದಿ ಮಾಳ್ಪ ಚೆಕ್ಕಿಲಿಯಂ ತಿಂಬುದ ಕಂಡೆ ಜೈನರ ಮನೆಯೊಳ್

ದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್
ಸಚ್ಚಂದನಮಂ ಕಡಿಕಡಿದು ಬಸದಿಗೆಳೆಯುತಿರ್ದರ್ 

ಇಸಮಂ ಸೇವಿಸಿ ಬಾಳ್ದರೇನಚ್ಚರಿಯೋ 
ಪಾಯಿಸಮಂ ಸೇವಿಸಿ ಬಾಳ್ದರೇನಚ್ಚರಿಯೋ!

 ಗಜಮಂ ಕಟ್ಟಿ ಪೊತ್ತರು ಪೆಗಲೊಳ್
 ಕಾಗಜಮಂ ಕಟ್ಟಿ ಪೊತ್ತರು ಪೆಗಲೊಳ್”.

ಸಿರಿಗನ್ನಡಂ ಗೆಲ್ಗೆ
 

No comments:

Post a Comment