Pages

Tuesday, February 14, 2012

ದಿನೇಶ್ ಅಮಿನಮಟ್ಟು ಲೇಖನ ಮತ್ತು ವಿವೇಕಾನಂದರ ವ್ಯಕ್ತಿತ್ವ

ದಿನೇಶ್ ಅಮಿನಮಟ್ಟು ಅವರ ಲೇಖನದಲ್ಲಿ.. ಅವರು ವಿವೇಕಾನಂದರನ್ನು ಸುಳ್ಳಾಗಿ ವೈಭವೀಕರಿಸುವವರ ಬಗ್ಗೆ ಬರೆದಿದ್ದಾರೆ ಎಂದುಕೊಂಡಿದ್ದೇನೆ. ಮಾಂಸಾಹಾರ ಅಗತ್ಯವೆಂದ, ನಮ್ಮ ಸಂಸ್ಕೃತಿಯ ಸೊಗಡನ್ನೇ ಹೀರಿ ಬೆಳೆದ ಸನ್ಯಾಸಿಯನ್ನು ಅವಮಾನ ಮಾಡುವ ಯಾವ ಉದ್ದೇಶವೂ ನನಗೆ ದಿನೇಶ್ ಅಮಿನಮಟ್ಟು ಲೇಖನದಲ್ಲಿ ಕಾಣಲಿಲ್ಲ. ನನಗೆ ಕಂಡದ್ದು, ವಿವೇಕಾನಂದರನ್ನು ದೈವತ್ವಕ್ಕೇರಿಸುವ ಹಠ ಹಿಡಿದ ಮಹನೀಯರ ಅರ್ಥಹೀನ ಮನೋಭಾವದ ಬಗೆಗಿನ ಜಿಗುಪ್ಸೆಯಷ್ಟೆ, ಅದಕ್ಕುತ್ತರವಾಗಿರುವ ಈ ಲೇಖನ ಈ ಅಂಶವನ್ನೇ ಬಿಟ್ಟು ವಿವೇಕಾನಂದರ ವ್ಯಕ್ತಿತ್ವಕ್ಕೇ ಧಕ್ಕೆ ಬಂದಂತೆ ಮಾತನಾಡುತ್ತದೆ. ಅಷ್ಟಕ್ಕೂ ನಾವು ಚಾರ್ವಾಕರನ್ನೂ ದ್ರಷ್ಟಾರರೆಂದು ಒಪ್ಪಿಕೊಳ್ಳುವವರು. ಭಗವದ್ಗೀತೆಯನ್ನು ಭೋದಿಸಿದ ಕೃಷ್ಣನೂ “ಯಥೇಚ್ಚಸಿ ತಥಾ ಕುರು” ಎಂದೇ ಹೇಳಿದ್ದು.
ಜಾತೀಯತೆಯನ್ನು ತೊಲಗಿಸಿದೆ, ಹಿಂದೂ ಧರ್ಮೋದ್ಧಾರಕ್ಕಾಗಿ ಮಾಡುವ ಯಾವ ಕೆಲಸವೂ ಸಫಲವಾಗದು, ಎನ್ನುವ ವಾದ ದಿನೇಶ್ ಅಮಿನಮಟ್ಟು ಲೇಖನದ ಸಾರಾಂಶ ಎನ್ನುವುದು ನನ್ನ ಅಭಿಮತ. ಜಾತಿ ಪದ್ದತಿಯ ಆಚರಣೆಯಷ್ಟೇ ಕೆಟ್ಟದ್ದು, ಮಾಂಸ ಭಕ್ಷಣೆ ಅನೈತಿಕವೆಂಬ ನಂಬಿಕೆ. ಇವನ್ನು ಬಿಡಬೇಕೆಂಬುದು ವಿವೇಕಾನಂದರ ಅಭಿಮತ. ಅದು ಇಂದು ನಡೆಯುತ್ತಿದೆಯೇ..?

1 comment:

  1. ಜಾತಿ , ಆಚರಣೆಗಳಿಗಿಂತ ಮನುಶತ್ವ ಮತ್ತು ಮಾನವೀಯತೆಗೆ ಹೆಚ್ಚು ಬೆಲೆ ತೆತ್ತರೆ ಸಮಾಜ ಉಳಿದು ಬೆಳೆಯುವುದು ಎಂಬುದು ನನ್ನ ವಾದ

    ReplyDelete