Pages

Tuesday, November 25, 2014

೧. ತಪ್ಪು ಮಾಡದವ್ರ್ ಯಾರವ್ರೇ..?

೧. ತಪ್ಪು ಮಾಡದವ್ರ್ ಯಾರವ್ರೇ..?
೨. ತಪ್ಪಾಗಿದ್ದೆಲ್ಲಾ ತಪ್ಪಾಗ್ಬೇಕಿಲ್ಲ.
೩. ಯಾರಿಗೂ ತೊಂದರೆ ಕೊಡದ ತಪ್ಪು ತಪ್ಪೇ ಅಲ್ಲ.
೪, ತಿಳಿಯದೇ ಮುಟ್ಟಿದ್ರೂ ಕೆಂಡ ಸುಡುತ್ತೆ.  ತಿಳಿಯದೇ ಮಾಡಿದರೂ ತಪ್ಪು ತಪ್ಪೇ..!
೫. ಅತ್ಯಂತ ಕೆಟ್ಟ ಸಮಯದಲ್ಲೇ ತಪ್ಪು ಆಗಿಬಿಡುತ್ತೆ.
೬. ತಪ್ಪು ತಪ್ಪನ್ನೇ ಮರಿ ಹಾಕುತ್ತೆ.
೭. ಕಂಪ್ಯೂಟರ್ನಲ್ಲಿ ಮಾಡಿದ ತಪ್ಪು ಬೇಗ ಹರಡುತ್ತೆ, ಜಾಸ್ತಿ ತೊಂದರೆ ಕೊಡುತ್ತೆ.
೮. ಕೆಲಸ ಮಾಡ್ಬೇಕಿದ್ದಾಗ ಕೈ ಕಟ್ಟಿ ಕೂತರೂ,  ಅದು ತಪ್ಪೇ.....!!
೯. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ಹೋಗುವುದು ಅದಕ್ಕಿಂತಾ ದೊಡ್ಡ ತಪ್ಪು.
೧೦. ತಪ್ಪಿನಿಂದ ಪಾಠ ಕಲಿಯದಿದ್ದರೆ ಅದೇ ನಿಜವಾದ ತಪ್ಪು.
ಅಬ್ಬಾ ಏನು ತಪ್ಪಿನ ಮೇಲೆ ಇಷ್ಟೊಂದು ಕೋಟ್ ಬರೆದಿದ್ದೇನೆ ಎಂದು ಕೊಂಡಿರಾ..? ಇವು ನಾವು ನೀವೆಲ್ಲರೂ ಕೇಳಿ ಕ್ಲೀಷೆಯಾಗಿರಬಹುದಾದ ಸವಕಲು ಕೋಟ್ ಗಳೇ ಇರಬಹುದು.  ಆದರೆ ಇಂದು ಇವನ್ನು "ಟೆಕ್ ಟಾರ್ಗೆಟ್" ಅಂತರ್ಜಾಲ ಪತ್ರಿಕೆಯಲ್ಲಿ ಓದಿದಾಗ, ಹಾಗೇ ಕನ್ನಡಕ್ಕಿಳಿಸಿ ನಿಮ್ಮ ಜೊತೆ ಹಂಚಿಕೊಳ್ಳಬೇಕೆನೆಸಿತು .

ಮೂಲ ಲೇಖನ ಇಲ್ಲಿದೆ.  ಮೇಲಿನ ಕೋಟ್ ಗಳಿಗೆ ನಾನು ವಿವರಣೆ ನೀಡಿಲ್ಲ.. ನಿಮ್ಮದೇ ವಿವರಣೆ ಇದ್ದರೆ ಚೆನ್ನ ಎಂದುಕೊಂಡಿದ್ದೇನೆ. ದಯವಿಟ್ಟು ಪ್ರತಿಕ್ರಿಯಿಸಿ.

Thursday, November 13, 2014

ಕಸ್ತೂರಿ ನಿವಾಸ - ಅಪ್ರಸ್ತುತ ಪ್ರಸಂಗವೊಂದರ ಹರಟೆ

ಕಸ್ತೂರಿ ನಿವಾಸ ನೋಡಿ ಬಂದ ನಮಗೆ ಹೊಸ ಹೊಸ ಹೊಳಹುಗಳು ಹೊಳೆವಂತೆ, ಹೊಸ ಪ್ರಶ್ನೆಗಳೂ ಮೂಡುವುದು ಸಹಜ,

ಇಂದಿನ  ವಾಣಿಜ್ಯೀಕರಣದ ದಿನಗಳಲ್ಲಿ ನನ್ನ ತಲೆಗೆ ಹೊಕ್ಕ ಒಂದು ತಲೆಕೊರುಕ ಹುಳದ ಪ್ರಶ್ನೆ ಹೀಗಿತ್ತು.

೧೯೭೧ರಲ್ಲಿ ನಿರ್ಮಾಣವಾದಾಗ ಚಿತ್ರಕ್ಕೆ ಖರ್ಚಾದದ್ದು  ೩.೭೫ ಲಕ್ಷ ಆದರೆ ಇವತ್ತಿನ ಕಾಲಮಾನಕ್ಕೆ ಅದರ ಮೌಲ್ಯ ರುಪಾಯಿಗಳಲ್ಲಿ ಎಷ್ಟಾಗಬಹುದು.?

ಭಲೇ, ಭಲೇ ಸಾಹಿತ್ಯ ಸಂಸ್ಕೃತಿಗಳಿಗೆ ಮೌಲ್ಯ ಕಟ್ಟುವ ಬದಲು ಇದೇನಪ್ಪಾ ತರಲೆ ಲೆಕ್ಕಾಚಾರ ಎಂದಿರೋ..? ಅದು ನಿಮಗೆ ಬಿಟ್ಟ ವಿಷಯ.  ನಾನಂತೂ ಒಂದು ಲೆಕ್ಕ ಹಾಕಿಬಿಟ್ಟೆ.  ಅದನ್ನು ಓದುವ ವ್ಯವಧಾನವಿದ್ದರೆ ಮುಂದೆ ಓದಿ. ಇಲ್ಲವೆಂದಿರೋ ಇನ್ನಷ್ಟು ದಿವಸ ಸ್ವಲ್ಪ ಕಾಯಿರಿ.

ಇಂದಿನಂತೆಯೇ ಅಂದೂ ಹಣ ಹೂಡಿಕೆಗೆ ಇದ್ದ ಮಾರ್ಗಗಳು ನಾಲ್ಕು.

೧. ರಿಯಲ್ ಎಸ್ಟೇಟ್ ಅಂದರೆ ಭೂಮಿಯ ಮೇಲೆ ಹಣ ಹೂಡುವುದು.
೨. ಚಿನ್ನದ  ಮೇಲೆ ಹಣ ಹೂಡುವುದು
೩. ಯಾವುದಾದರೂ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಡುವುದು.
೪. ಉದ್ಯಮದಲ್ಲಿ  ತೊಡಗಿಸಿಕೊಳ್ಳುವುದು.

ಇಂದಿನ ಇನ್ನೊಂದು ಮಾರ್ಗವಾದ ಶೇರು ಅಥವಾ ಮ್ಯೂಚುಯಲ್ ಫಂಡ್ ಗಳು ಅಂದಿನ ದಿನದಲ್ಲಿ ಹೆಚ್ಚಾಗಿರಲಿಲ್ಲ. ಉದ್ಯಮದಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ನಿಷಿತ ಆದಾಯದ ಮಾರ್ಗವಲ್ಲವಾದ್ದರಿಂದ.,  ನಮ್ಮ ಲೆಕ್ಕಾಚಾರಕ್ಕೆ ಉದ್ಯಮದಲ್ಲಿ ತೊಡಗಿಕೊಳ್ಳುವುದನ್ನು ಮ್ಯೂಚುಯಲ್ ಫಂಡ್ ನ ಹೂಡಿಕೆ ಎಂದೇ ಪರಿಗಣಿಸೋಣ. 

ಈಗ ಲೆಕ್ಕಾಚಾರದ ವಿಷಯಕ್ಕೆ ಬರೋಣ.
ಮ್ಯುಚುಯಲ್ ಫಂಡುಗಳು ನೀಡುವ ಅತಿ ಹೆಚ್ಚಿನ ಆದಾಯವೆಂದರೆ, ವರ್ಷಕ್ಕೆ ಶೇಕಡಾ ೧೫ರ ಬಡ್ಡಿದರದ ಬೆಳವಣಿಗೆ.
ಈ ರೀತಿಯಲ್ಲಿ ಲೆಕ್ಕ ಹಾಕಿದರೆ ೧೯೭೧ ನೇ ಇಸವಿಯಲ್ಲಿ ತೊಡಗಿಸಿದ ೩.೭೫ ಲಕ್ಷ ಬಂಡವಾಳವು ಇಂದಿಗೆ ಸುಮಾರು ೧೫೨೭.೭೦  ಲಕ್ಷಗಳು ಅಂದರೆ ಸುಮಾರು ಹದಿನೈದೂಕಾಲು ಕೋಟಿಯಾಗುವುದು.

ಬ್ಯಾಂಕಿನ ನಿಶ್ಚಿತ ಠೇವಣಿಯ ಆದಾಯ ಸುಮಾರು ಶೇಖಡಾ ೮.  ಈ ರೀತಿಯ ಲೆಕ್ಕದಲ್ಲಿ ಅಂದಿನ ೩.೭೫ ಲಕ್ಷ ರೂಪಾಯಿಗಳ ಬೆಲೆ ಇಂದಿಗೆ ೧೦೨.೬೨ ಲಕ್ಷ ಅರ್ಥಾತ್ ಒಂದು ಕೋಟಿ ಎರಡೂವರೆ ಲಕ್ಷ.

ಇನ್ನು ೧೯೭೧ರಲ್ಲಿ  ಒಂದು ಗ್ರಾಂ ಚಿನ್ನದ ಬೆಲೆ ೨೦ ರೂಪಾಯಿಗಳು.  ೩.೭೫ ಲಕ್ಷದಲ್ಲಿ ಸುಮಾರು ೧೮,೭೫೦ ಗ್ರಾಂ. ಚಿನ್ನ ಕೊಂಡುಕೊಳ್ಳಬಹುದಾಗಿತ್ತು. ಇವತ್ತಿನ ಚಿನ್ನದ ಬೆಲೆಯನ್ನು ಸುಮಾರು ೨೫೦೦ ರೂ ಪ್ರತಿ ಗ್ರಾಮಿಗೆ ಎಂದುಕೊಂಡರೆ,   ೧೮,೭೫೦ ಗ್ರಾಂ. ಚಿನ್ನದ ಬೆಲೆ ೪೬೮.೭೫ ಲಕ್ಷ. ಅರ್ಥಾತ್ ನಾಲ್ಕು ಕೋಟಿ ಅರವತ್ತೆಂಟು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿಗಳು.

ಇನ್ನು ಭೂಮಿಯಲ್ಲಿ ತೊಡಗಿಸಿದ ಹಣ ಹೇಗೆ ಹೆಚ್ಚಿಗೆಯಾಗುತ್ತದೆನ್ನುವುದನ್ನು ಊಹಿಸಿಕೊಳ್ಳುವುದಕ್ಕೆ ನಿಮಗೇ ಬಿಡುತ್ತೇನೆ.

ನನ್ನ ಈ ಲೆಕ್ಕಾಚಾರದಿಂದ ನನಗೆ ಮನವರಿಕೆಯಾದ ಅಂಶ ಎಂದರೆ, ಅಂದಿನ ದಿನದ ಚಿತ್ರಗಳ ತಯಾರಿಕಾ ವೆಚ್ಚವನ್ನು ಇಂದಿನ ಕಾಲದೊಂದಿಗೆ ಹೋಲಿಸಿದರೆ, ಅವೂ ಕೋಟಿ ಕೋಟಿ ಕರ್ಚು ಮಾಡಿ ತೆಗೆದಿರುವ ಚಿತ್ರಗಳೇ ಎನ್ನುವ ಅಂಶ ವಿದಿತವಾಗುತ್ತದೆ. ಇದು ಕನ್ನಡಿಗರನ್ನು ಹೆಮ್ಮೆ ಪಡುವಂತೆ ಮಾಡುವ ವಿಷಯವೆಂದೇ ಭಾವಿಸಿ ಇಲ್ಲಿ ಹಂಚಿಕೊಂಡಿದ್ದೇನೆ.

Wednesday, November 12, 2014

ನೀ ಬಂದು ನಿಂತಾಗ - ಎಂದೂ ಮರೆಯದ ಹಾಡು ಕಸ್ತೂರಿ ನಿವಾಸ ಚಿತ್ರದಿಂದ

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ 
ನಕ್ಕು ನೀ ಸೆಲೆದಾಗ ಸೋತೇ ನಾನಾಗ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ 
ನಕ್ಕು ನೀ ಸೆಲೆದಾಗ ಸೋತೇ ನಾನಾಗ

ವಾಸಂತಿ ನಲಿದಾಗ
ವಾಸಂತಿ ನಲಿದಾಗ  ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ  ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರೆಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೇ ಅನುರಾಗ .... ಬಾರಾ 
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ 
ನಕ್ಕು ನೀ ಸೆಲೆದಾಗ ಸೋತೇ ನಾನಾಗ

ಜೇನಂಥ ಮಾತಲ್ಲಿ 
ಜೇನಂಥ ಮಾತಲ್ಲಿ  ಕುಡಿಗಣ್ಣ ಸಂಚಲ್ಲಿ 
ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ
ಎದುರಾದೆ ಹಗಲಲ್ಲಿ ಮರೆಯದೆ ಇರುಳಲ್ಲಿ 
ನೀ ತಂದ ನೋವಿಗೆ ಕೊನೆಯೆಲ್ಲಿ ಮೊದಲೆಲ್ಲಿ
ಬಲುದೂರ ನೀ ಹೊಗೆ ನಾ ತಾಳೆ ಈ ಬೆಗೆ
ಬಾ ಬಾರೆ ಚೆಲುವೆ ಬಾರೆ ಒಲವೆ............... ಬಾರಾ

ಬಾಳೆಂಬ ಪತದಲಿ 
ಬಾಳೆಂಬ ಪತದಲಿ   ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ ನನಸೆಲ್ಲಾ ಸೊಗಸಾಗಿ
ಯುಗವೊಂದು ದಿನವಾಗಿ ದಿನನವೊಂದು ಚಾಣವಗಿ 
ನಮ್ಮಾಸೆ ಹೂವಗಿ ಇಂಪದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಯಂದೆಂದೂ ಜೊತೆಯಾಗಿ ನಡೆವಾ ಒಂದಾಗಿ.............. ಬಾರಾ