Pages

Thursday, May 06, 2010

ಸಹವಾಸ ದೋಷ

Submitted by hamsanandi on May 5, 2010 - 5:40am ಸಂಪದದಲ್ಲಿ

ಕಾದ ಕಬ್ಬಿಣದ ಮೇಲೆ ಬೀಳಲು ನೀರಹನಿ ಹೆಸರಿಲ್ಲದಂತಳಿವುದು
ಕಮಲದೆಲೆಯ ಮೇಲೆ ಬೀಳಲದುವೇ ಮುತ್ತಿನ ಹೊಳಪು ತೋರುವುದು
ಸ್ವಾತಿಯಲಿ ಕಡಲ ಚಿಪ್ಪಿನಲಿ ಬಿದ್ದರೆ ಹನಿ ತಾನೆ ಮುತ್ತಾಗಿಬಿಡುವುದು
ಮೇಲು-ನಡು-ಕೀಳೆಂಬ ಹಲವು ದೆಸೆಗಳನು ಒಡನಾಟವೇ ತರುವುದು!

ಸಂಸ್ಕೃತ ಮೂಲ:


ಸಂತಪ್ತಾಯಸಿ ಸಂಸ್ಥಿತಸ್ಯ ಪಯಸೋ ನಾಮಾಪಿ ನ ಜ್ಞಾಯತೇ
ಮುಕ್ತಾಕಾರತಯಾ ತದೇವ ನಲಿನೀಪತ್ರಸ್ಥಿತಂ ರಾಜತೇ |
ಸ್ವಾತ್ಯಾಂ ಸಾಗರ ಶುಕ್ತಿಮಧ್ಯಪತಿತಂ ಸಮ್ಮೌಕ್ತಿಕಂ ಜ್ಞಾಯತೇ
ಪ್ರಾಯೇಣೋತ್ತಮಮಧ್ಯಮಾಧಮದಶಾ ಸಂಸರ್ಗತೋ ಜಾಯತೇ ||

ಸವಿತೃ ಅವರ ಅನುವಾದ

ಕಾದ ಕಾವಲಿಯಲಿ ಹೇಳ ಹೆಸರಿಲ್ಲದಂತಳಿಪುದು
ಕಮಲದೆಲೆಯಲದುವೆ ಸ್ವಯಂ ರಾಜಿಪುದು
ಚಿಪ್ಪೋಳಗಿಳಿದ ಸ್ವಾತಿಹನಿ ಮುತ್ತಪ್ಪುದು

ಅತಿ ಮಿತಿಗಳೆಂಬ ಗತಿಗಳನು ಗೆಳೆತನವೆ ತರುವುದು

ನನ್ನದು

ಕಾದ ಕಬ್ಬಿಣದ ಮೇಲೆ
ಹೆಸರಿಲ್ಲದೆ ಮರೆಯಾಗುವ ಲೀಲೆ.
ಬಿದ್ದರದು ಕಮಲೆದೆಲೆ ಮೇಲೆ
ಹೊಳೆಯುವುದಲ್ಲಿ ಮುತ್ತಿನ ಮಾಲೆ.
ಸ್ವಾತಿ ಮಳೆಯ ನೀರಹನಿಯು
ತಾನೇ ಮುತ್ತಾಗುವುದು ಕಪ್ಪೆಚಿಪ್ಪಿನಲೆ
ಅಧಮ,ಮಧ್ಯಮನೋ ಮೇಣ್
ಉತ್ತಮನೋ , ಸಖರೊಡನಾಟವದೇ
ನಮ್ಮ ಸ್ಥಿತಿಗತಿಗೆ ಕಾರಣವು ತಾನೆ.

No comments:

Post a Comment