೧. ತಪ್ಪು ಮಾಡದವ್ರ್ ಯಾರವ್ರೇ..?
೨. ತಪ್ಪಾಗಿದ್ದೆಲ್ಲಾ ತಪ್ಪಾಗ್ಬೇಕಿಲ್ಲ.
೩. ಯಾರಿಗೂ ತೊಂದರೆ ಕೊಡದ ತಪ್ಪು ತಪ್ಪೇ ಅಲ್ಲ.
೪, ತಿಳಿಯದೇ ಮುಟ್ಟಿದ್ರೂ ಕೆಂಡ ಸುಡುತ್ತೆ. ತಿಳಿಯದೇ ಮಾಡಿದರೂ ತಪ್ಪು ತಪ್ಪೇ..!
೫. ಅತ್ಯಂತ ಕೆಟ್ಟ ಸಮಯದಲ್ಲೇ ತಪ್ಪು ಆಗಿಬಿಡುತ್ತೆ.
೬. ತಪ್ಪು ತಪ್ಪನ್ನೇ ಮರಿ ಹಾಕುತ್ತೆ.
೭. ಕಂಪ್ಯೂಟರ್ನಲ್ಲಿ ಮಾಡಿದ ತಪ್ಪು ಬೇಗ ಹರಡುತ್ತೆ, ಜಾಸ್ತಿ ತೊಂದರೆ ಕೊಡುತ್ತೆ.
೮. ಕೆಲಸ ಮಾಡ್ಬೇಕಿದ್ದಾಗ ಕೈ ಕಟ್ಟಿ ಕೂತರೂ, ಅದು ತಪ್ಪೇ.....!!
೯. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ಹೋಗುವುದು ಅದಕ್ಕಿಂತಾ ದೊಡ್ಡ ತಪ್ಪು.
೧೦. ತಪ್ಪಿನಿಂದ ಪಾಠ ಕಲಿಯದಿದ್ದರೆ ಅದೇ ನಿಜವಾದ ತಪ್ಪು.
ಅಬ್ಬಾ ಏನು ತಪ್ಪಿನ ಮೇಲೆ ಇಷ್ಟೊಂದು ಕೋಟ್ ಬರೆದಿದ್ದೇನೆ ಎಂದು ಕೊಂಡಿರಾ..? ಇವು ನಾವು ನೀವೆಲ್ಲರೂ ಕೇಳಿ ಕ್ಲೀಷೆಯಾಗಿರಬಹುದಾದ ಸವಕಲು ಕೋಟ್ ಗಳೇ ಇರಬಹುದು. ಆದರೆ ಇಂದು ಇವನ್ನು "ಟೆಕ್ ಟಾರ್ಗೆಟ್" ಅಂತರ್ಜಾಲ ಪತ್ರಿಕೆಯಲ್ಲಿ ಓದಿದಾಗ, ಹಾಗೇ ಕನ್ನಡಕ್ಕಿಳಿಸಿ ನಿಮ್ಮ ಜೊತೆ ಹಂಚಿಕೊಳ್ಳಬೇಕೆನೆಸಿತು .
ಮೂಲ ಲೇಖನ ಇಲ್ಲಿದೆ. ಮೇಲಿನ ಕೋಟ್ ಗಳಿಗೆ ನಾನು ವಿವರಣೆ ನೀಡಿಲ್ಲ.. ನಿಮ್ಮದೇ ವಿವರಣೆ ಇದ್ದರೆ ಚೆನ್ನ ಎಂದುಕೊಂಡಿದ್ದೇನೆ. ದಯವಿಟ್ಟು ಪ್ರತಿಕ್ರಿಯಿಸಿ.
No comments:
Post a Comment