ಕಬ್ಬನ್
ಪಾರ್ಕಿನಲ್ಲಿ ಜೋರು ಮಳೆ
ಎಂ.ಜಿ. ರಸ್ತೆಯಲಿ ಬರೀ ಗಾಳಿ.
ಮಾರತಹಳ್ಳಿಯಲಿ
ಹನಿಹನಿ ಜಡಿ
ವೈಟ್ ಫೀಲ್ದಲ್ಲಿ ಬಿಸಿ ಧೂಳು ಗಾಳಿ.
ಗಾಂಧೀ
ಬಜಾರಿನಲ್ಲಿ ಮುಸುಕಿದ ಮೋಡ
ಲಾಲ್ ಬಾಗಿನಲ್ಲಿ
ಲವಲವಿಕೆಯ ತಂಗಾಳಿ
ಕೋರಮಂಗಲದಲ್ಲಿ ಕೊರೆವ
ಚಳಿ,
ಚಂದಾಪುರದಲ್ಲಿ ಮುಗಿಲ ನೆರಳು.
ಬನ್ನೇರುಘಟ್ಟದಲಿ
ತುಂತುರು ಹಾಡು,
ನೆಲಮಂಗಲದಲಿ
ಚುಮುಚುಮು ಚಳಿ
ವಿವಿಧತೆಯಲ್ಲಿ
ಏಕತೆ, ಬೆಂಗಳೂರಿನ ಹವಮಾನದ ಕತೆ,
ಬಿಸಿ ಬ್ಯುಸಿ ಬೆಂಗಳೂರ
ತುಂಬೆಲ್ಲ ಮಳೆಬಿಲ್ಲು ಮೂಡಿದೆ.
ಚಿತ್ತಾರ ಮಾಡಿದೆ.
ನೋಡುವ ಕಣ್ಣಿಗೆ ಕಾದಿದೆ.
ರಸಿಕರ ಹೃದಯಕೆ ತಂಪನು ತಂದಿದೆ.