ಒಂದು ಸುಂದರ ಸಂಜೆ
ಬಾನು ಕೆಂಪಾಗುತ್ತಿತ್ತು
ಮಲ್ಲಿಗೆ ಕಂಪಡರಿತ್ತು
ಸೋನೆ ಮಳೆ ತಂಪೆರೆದಿತ್ತು
ಕಾಲ ಹೀಗೆ ನಿಂತುಬಿಡಲಿ ಎನಿಸಿತ್ತು
ಆದರೆ ಸೂರ್ಯ ಮುಳುಗಿಯೇ ಹೋದ
ಆಗ.....
ಸುತ್ತ ಕತ್ತಲು
ಬಿಚ್ಚಿದ ಕಣ್ಣೆವೆಯೂ ಮುಚ್ಚಿದ ಹಾಗೆ
ಭೋರ್ಗರೆದು ಇಳೆಗಿಳಿವ
ಬಿರುಮಳೆಧಾರೆ
ಆತಂಕ, ಭಯದಿಂದ ಕಂಪಿಸುವವನೆದೆಗೆ
ತಂಪನೆರೆಯುತಿದೆ ಕಂಪ ಬೀರಿ
ಅಚ್ಚಬಿಳಿಯ ಮಲ್ಲಿಗೆ
No comments:
Post a Comment