Saturday, January 02, 2010
Wednesday, December 30, 2009
ಮಿರಮಿರ ಮಿನುಗುವ ಮುದ್ದಿನ ತಾರೆ
ಮಿರಮಿರ ಮಿನುಗುವ ಮುದ್ದಿನ ತಾರೆ
ಬಾನಲಿ ಬೆಳಗುವ ನೀನಾರೆ?
ಫಳಫಳ ಹೊಳೆಯುವ ವಜ್ರದ ಹರಳೆ,
ನಭದಲಿ ನಗುವೆಯಾ ನೀ ಹೇಳೆ?
ಧಗಧಗಿಸುವ ನೇಸರ ಮರಳಿದ ಮೇಲೆ,
ಕವಿದಿದೆ ಭುವಿಗೆ ಕತ್ತಲ ಮಾಲೆ,
ಲಕಲಕಲಕಿಸುವ ನಿನ್ನಯ ಲೀಲೆ,
ಭೂಮಿಯ ಬೆಳಗುವ ದೀಪದ ಬಾಲೆ
ನೀಲಾಗಸದಲಿ ತಣ್ಣಗೆ ಬೆಳಗುವೆ
ಕಿಟಕಿ ಕಿಂಡಿಯೆಲೇ ನಗುವೆ.
ಬೆಳಗಿನ ಬೆಳ್ಳಿ ಮೂಡುವವರೆಗೂ,
ಕಣ್ಣನು ಮುಚ್ಚದೆ ಕಾದಿರುವೆ.
ತಣ್ಣನೆ ಬೆಳಕಿನ ಸಣ್ಣವ ನೀನು,
ಕತ್ತಲೆ ಪಯಣದ ಕಣ್ಣೇ ನೀನು,
ನಿನ್ನಾ ಬೆಳಕಿನ ಮರ್ಮವದೇನು?
ಕೆಲಸಕೆ ಸಂಬಳ ದೊರಕುವುದೇನು?
ಅರಿಯದೇ ಹೋದರು ನಿನ್ನನು ನಾನು,
ಮಿರಮಿರ ಮಿನುಗುವ ಮುದ್ದೇ ನೀನು.
(ಸಂಪದದಲ್ಲಿ ೨೦೦೬ ಡಿಸೆಂಬರ್ ೧೨ /ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಕವನದ ಅನುವಾದ/ಸಂಪದದಲ್ಲಿ ಪ್ರಕಟಿಸಿದ್ದು)

Tuesday, December 22, 2009
ನನ್ನೊಲವಿನ ಮತ್ತೊಂದು ಚಿತ್ರ ಗೀತೆ...
ಸೇವಂತಿಯೆ ಸೇವಂತಿಯೆ
ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ
ಸೇವಂತಿಯೆ ಸೇವಂತಿಯೆ
ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕಿಂತ ಸೌಗಂಧ ನೀನು
ಜನ್ಮಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಜನ್ಮಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಸೇವಂತಿಯೆ ಸೇವಂತಿಯೆ
ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ
ಮಲ್ಲಿಗೆ ಮಂಟಪವ ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯ ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ ಈ ಪಾದದಡಿಗೆ ಇರುವೆ
ಮಳೆಯ ಮೋಡದಂತೆ ಆ ಸುಡುವ ಬಿಸಿಲ ತಡೆವೆ.
ಬಾಳ ತುಂಬಾ ನಾ ಬರುವೆ ಹಸ್ತಕ್ಕೆ ರೇಖೆಯ ಹಾಗಿರುವೆ
ಚಂದ ಚಂದದ ಸೇವಂತಿಯ ಅಂದಕ್ಕೆ ಕಾವಲು ನಾನಿರುವೆ
ಕಾಲ್ಗೆಜ್ಜೆ ನಾದದಲಿ ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲಿ ನನ್ನ ಆಸೆಯ ಬುಟ್ಟಿಯಿದೆ
ಸಿಂಧೂರ ಬಿಂದಿಗೆಯಲ್ಲಿ ನಾ ಜೀವವ ತುಂಬಿದೆಯಲ್ಲಿ
ನೀನಿಟ್ಟ ಕಾಡಿಗೆಯಲ್ಲಿ ನಾನೆಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ ನಿನ್ನ ಚಿತ್ರವ
ಯಾರೂ ಇಲ್ಲದ ಆ ಊರಲಿ ನಾನೇ ನಿನ್ನವನಾಗಿರುವೆ

ಭಾಗ್ಯವಂತರು ಚಿತ್ರದ ಈ ಗೀತೆ ನನ್ನ ಮೆಚ್ಚಿನದು
ನಿನ್ನ ನನ್ನ ಮನವು ಸೇರಿತು
ನನ್ನ ನಿನ್ನ ಹೃದಯ ಹಾಡಿತು
ನಿನ್ನ ನನ್ನ ಮನವು ಸೇರಿತು
ನನ್ನ ನಿನ್ನ ಹೃದಯ ಹಾಡಿತು
ರಾಗವು ಒಂದೇ
ಭಾವವು ಒಂದೇ
ಜೀವ ಒಂದಾಯಿತು
ಬಾಳು ಹಗುರಾಯಿತು
ನಿನ್ನ ನನ್ನ ಮನವು ಸೇರಿತು
ನನ್ನ ನಿನ್ನ ಹೃದಯ ಹಾಡಿತು
ಏಕಾಂಗಿಯಾಗಿರಲು
ಕೈ ಹಿಡಿದೆ, ಜೊತೆಯಾದೆ
ತಾಯಂತೆ ಬಳಿ ಬಂದೆ
ಆದರಿಸಿ, ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ,
ನನ್ನೀ ಬದುಕಿಗೆ ಶೃತಿಯಾದೆ
ನನ್ನೀ ಮನೆಯ ಬೆಳಕಾದೆ
ಎಂದೂ ಜೊತೆಯಲಿ ಬರುವೆ
ನಿನ್ನ ನೆರಳಿನ ಹಾಗೇ ಇರುವೆ
ಕೊರಗದಿರು, ಮರುಗದಿರು
ಹಾಯಾಗಿ ನೀನಿರು
ಎಂದೂ ಜೊತೆಯಲಿ ಬರುವೆ
ನಿನ್ನ ಉಸಿರಲಿ ಉಸಿರಾಗಿರುವೆ
ನೋವುಗಳು ನನಗಿರಲಿ
ಆನಂದ ನಿನಗಾಗಲಿ
ನಗುವಿನ ಹೂಗಳ ಮೇಲೆ
ನಡೆಯುವ ಭಾಗ್ಯ ನಿನಗಿರಲಿ
ನೋಡುವ ಭಾಗ್ಯ ನನಗಿರಲಿ
ನಿನ್ನ ನನ್ನ ಮನವು ಸೇರಿತು
ನನ್ನ ನಿನ್ನ ಹೃದಯ ಹಾಡಿತು
ರಾಗವು ಒಂದೇ ಭಾವವು ಒಂದೇ
ಜೀವ ಒಂದಾಯಿತು, ಬಾಳು ಹಗುರಾಯಿತು
ನಿನ್ನ ಮನವು ಸೇರಿತು
ನನ್ನ ನಿನ್ನ ಹೃದಯ ಹಾಡಿತು.
ನನ್ನ ನಿನ್ನ ಹೃದಯ ಹಾಡಿತು
ನಿನ್ನ ನನ್ನ ಮನವು ಸೇರಿತು
ನನ್ನ ನಿನ್ನ ಹೃದಯ ಹಾಡಿತು
ರಾಗವು ಒಂದೇ
ಭಾವವು ಒಂದೇ
ಜೀವ ಒಂದಾಯಿತು
ಬಾಳು ಹಗುರಾಯಿತು
ನಿನ್ನ ನನ್ನ ಮನವು ಸೇರಿತು
ನನ್ನ ನಿನ್ನ ಹೃದಯ ಹಾಡಿತು
ಏಕಾಂಗಿಯಾಗಿರಲು
ಕೈ ಹಿಡಿದೆ, ಜೊತೆಯಾದೆ
ತಾಯಂತೆ ಬಳಿ ಬಂದೆ
ಆದರಿಸಿ, ಪ್ರೀತಿಸಿದೆ
ಬಾಳಲಿ ಸುಖ ನೀಡಿದೆ,
ನನ್ನೀ ಬದುಕಿಗೆ ಶೃತಿಯಾದೆ
ನನ್ನೀ ಮನೆಯ ಬೆಳಕಾದೆ
ಎಂದೂ ಜೊತೆಯಲಿ ಬರುವೆ
ನಿನ್ನ ನೆರಳಿನ ಹಾಗೇ ಇರುವೆ
ಕೊರಗದಿರು, ಮರುಗದಿರು
ಹಾಯಾಗಿ ನೀನಿರು
ಎಂದೂ ಜೊತೆಯಲಿ ಬರುವೆ
ನಿನ್ನ ಉಸಿರಲಿ ಉಸಿರಾಗಿರುವೆ
ನೋವುಗಳು ನನಗಿರಲಿ
ಆನಂದ ನಿನಗಾಗಲಿ
ನಗುವಿನ ಹೂಗಳ ಮೇಲೆ
ನಡೆಯುವ ಭಾಗ್ಯ ನಿನಗಿರಲಿ
ನೋಡುವ ಭಾಗ್ಯ ನನಗಿರಲಿ
ನಿನ್ನ ನನ್ನ ಮನವು ಸೇರಿತು
ನನ್ನ ನಿನ್ನ ಹೃದಯ ಹಾಡಿತು
ರಾಗವು ಒಂದೇ ಭಾವವು ಒಂದೇ
ಜೀವ ಒಂದಾಯಿತು, ಬಾಳು ಹಗುರಾಯಿತು
ನಿನ್ನ ಮನವು ಸೇರಿತು
ನನ್ನ ನಿನ್ನ ಹೃದಯ ಹಾಡಿತು.
Wednesday, December 02, 2009
Tuesday, December 01, 2009
ಸ್ವ - ಗತ
ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಬಸ್ಸು ಹತ್ತಿದಾಗ ರಾತ್ರಿ ಎಂಟೂಕಾಲು ಗಂಟೆಯಾಗಿತ್ತು. ಬಸ್ಸು ಕೆಂಪೇಗೌಡ ಬಸ್ ನಿಲುಗಡೆಯಿಂದ ಹೊರಟಾಗ ಹಾಗೇ ಒಂದಷ್ತು ಹಿಂದಿನ ನೆನಪುಗಳು ಬಂದವು .
ಬಹಳ ಹಿಂದೆ ನಾನಾಗ ೪-೫ ವರುಷದವನಿರಬೇಕು. ಆಗ ಮೈಸೂರಿನಲ್ಲಿ ಇನ್ನೂ ಸಬ್ ಅರ್ಬನ್ ಬಸ್ ಸ್ಟ್ಯಾಂಡ್ ಆಗಿರಲಿಲ್ಲ. ಈಗಿನ ಸಿಟಿ ಬಸ್ ಸ್ಟ್ಯಾಂಡ್ ನಿಂದಲೇ ಬೆಂಗಳೂರಿಗೆ ನಾನ್-ಸ್ಟಾಪ್ ಬಸ್ ಸರ್ವೀಸ್ ಇತ್ತು. ಬಹುಶಃ ಟಿಕೆಟ್ ಬೆಲೆ ದೊಡ್ಡವರಿಗೆ ಆರೂವರೆ ರೂಪಾಯಿ, ಮತ್ತು ಮಕ್ಕಳಿಗೆ ಮೂರೂಕಾಲು. ಪ್ರತಿ ಇಪ್ಪತ್ತರಿಂದ ಮೂವತ್ತು ನಿಮಿಷಕ್ಕೊಂದು ಬಸ್ಸು. ಆಗಲೂ ಪ್ರಯಾಣದ ಅವಧಿ ಮೂರುಗಂಟೆಗಳು. ಹೆಚ್ಚಿನ ನೆನಪು ಇಲ್ಲದಿದ್ದರೂ ಆಗ ಮದ್ದೂರಿನ ಸನಿಹದ ಯಾವುದೋ ಹೋಟೆಲ್ ಬಳಿ ಕಾಫಿ/ಟೀ ಗೆಂದು ಬಸ್ಸು ನಿಲ್ಲಿಸುತ್ತಿದ್ದುದಂತೂ ನೆನಪಿದೆ. ಬರುಬರುತ್ತಾ ಆರು - ಏಳನೇ ತರಗತಿಗೆ ಬಂದಾಗ, ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ಊರಿಗೆ ಹೋಗುತ್ತಿದ್ದ ನೆನಪು ಇದೆ. ಆಗ ನನ್ನನ್ನು ಕರೆದುಕೊಂಡು ಹೋಗಲು, ನನ್ನ ಅಜ್ಜಿ ಅಥವಾ ಮಾಮ ಹೀಗೆ ಯಾರಾದರೊಬ್ಬ ಹಿರಿಯರು, ಮದ್ದೂರಿನ ಬಳಿ ಬಸ್ಸು ನಿಂತಾಗ, ಎಳನೀರನ್ನು ಬಿಟ್ಟು ಇನ್ನೇನನ್ನೂ ಕೇಳಬಾರದೆಂಬ ತಾಕೀತು. ನನಗೋ, ಅಷ್ಟು ದೊಡ್ಡ ಬಸ್ಸನ್ನು, ಸಣ್ಣ ಚಕ್ರ ಹಿಡಿದು ಓಡಿಸುವ ಡ್ರೈವರಣ್ಣನ ಪಕ್ಕ ಕೂರುವ ಆಸೆ. ಆದರೆ ಬಸ್ಸಿನ ಮಧ್ಯದಲ್ಲಿ ಕೂರಬೇಕೆಂಬುದು, ಜೊತೆಯಲ್ಲಿರುವ ಹಿರಿಯರ ಕಟ್ಟಪ್ಪಣೆ. ಅಕಸ್ಮಾತ್ ಮುಂದಿನಿಂದ ಗುದ್ದಿದರೂ, ಹಿಂದಿನಿಂದ ಗುದ್ದಿದರೂ, ಮಧ್ಯೆ ಇರುವ ನಾವು ಸುರಕ್ಷಿತ ಎಂಬ ತರ್ಕ. (ಈಗಲೂ ನಮ್ಮ ಮಾಮ ಬಸ್ಸಿನ ಮಧ್ಯದ ಸೀಟಿನಲ್ಲೇ ಕೂರುವುದು.. ಅಷ್ಟೇ ಏಕೆ, ರೈಲಿನಲ್ಲೂ ಮಧ್ಯದ ಬೋಗಿ .) ಮೈಸೂರಿನಿಂದ ಶ್ರೀರಂಗಪಟ್ಟಣ ತಲುಪಿದರೆ , ಶ್ರೀರಂಗನಿಗೊಂದು ನಮಸ್ಕಾರ, ಕಾವೇರಿಗೆ ಕಾಣಿಕೆ. ಐದೋ, ಹತ್ತೋ ಪೈಸೆ ಇರಬೇಕು. ಆಗ ನನಗೆ ಗೊತ್ತಿದ್ದಂತೆ ಐದು ಪೈಸೆಗೆ ಹತ್ತು ಶುಂಠಿ ಪೆಪ್ಪರ್ಮೆಂಟ್ ಬರುತ್ತಿತ್ತೆನ್ನಿ. ಮುಂದೆ ಮಂಡ್ಯ ಸಕ್ಕರೆ ಕಾರ್ಖಾನೆ , ವಿಶ್ವೇಶ್ವರಯ್ಯನವರ ಸಾಧನೆಯ ನೆನಹು, ಮುಂದೆ ಮದ್ದೂರಿನ ಬಳಿ ಸ್ವಲ್ಪ ನಡೆದಾಡಿ , ಹಗುರಾಗುವ ಹುನ್ನಾರ ರಾಮನಗರ ತಲುಪುವಷ್ಟರಲ್ಲೇ ಅಯಾಸ. ಇನ್ನೇನು ಬೆಂಗಳೂರು ಬರುತ್ತೆ ಎಂದು ಕಾಯುತ್ತಾ ಕೂಡುವ ತವಕ. ಬಿಡದಿ ಬಳಿ ಲೋಹಿತ್ ಫಾರಂ ಮೇಲೆ ಅದು ನಮ್ಮದೇ ಏನೋ ಎನ್ನುವಂತ ಅಭಿಮಾನದ ನೋಟ. ಈಗಿನ ಕವಿಕಾ ಬಂದರೆ ಆಗ ಬೆಂಗಳೂರು ತಲುಪಿದಂತೆ, ಮೈಸೂರು ರಸ್ತೆಯ ಫ್ಲೈ -ಓವರ್ ಇಲ್ಲ. ಪೋಲೀಸ್ ಕ್ವಾರ್ಟರ್ಸ್ನ ಬಹುಮಹಡಿ ಕಟ್ಟಡಗಳನ್ನು ಕಂಡು ಒಂಥರಾ ಪುಳಕ. ಇಲ್ಲಿ ಜನ ವಾಸ ಮಾಡುವವರಿಗೆ ಭಯವಾಗುವುದಿಲ್ಲವಾ ಎನ್ನುವ ಭಯ. ಅಷ್ಟರಲ್ಲೇ ಬೆಂಗಳೂರು ಬಸ್ ಸ್ಟಾಂಡ್.
ಇತ್ತಲಿಂದ ಕ್ಯೂ ನಲ್ಲಿ ನಿಂತು ಟಿಕೆಟ್ ಪಡೆದು ಹತ್ತಿದೆವೆಂದರೆ, ಮಂಡ್ಯ ಸಿಗುವ ತನಕ ಏನೋ ಬೆದರಿಕೆ. ಆಮೇಲೆ ಮನೆ ತಲುಪಿದ ಸಂಭ್ರಮ.
ಬರುಬರುತ್ತಾ.. ಕಾಲೇಜು ಮೆಟ್ಟಿಲು ಹತ್ತಿದ ಮೇಲೆ, ಒಬ್ಬನದೇ ಓಡಾಟ . ಹಿರಿಯರ ಮಾತನ್ನು ಮೀರಿ, ಡ್ರೈವರ್ ಪಕ್ಕದ ಕಿಟಕಿಯ ಸೀಟಿನಲ್ಲಿ ಕೂತು , ರಸ್ತೆ ನೋಡುವ ಹವ್ಯಾಸ. ಆಗಿನ ರಸ್ತೆ ಈಗಿನಷ್ಟು ಅಗಲವಿರಲಿಲ್ಲ. ಅಲ್ಲದೇ ಈಗಿನಂತೆ ನುಣುಪೂ ಇರಲಿಲ್ಲ. ಹಳ್ಳಗಳ ನಡುವೆ ಹೊಡೆದಾಡಿ, ಗಾಡಿ ಓಡಿಸುವ ಸಾರಥಿಗೆ, ಎತ್ತಿನ ಬಂಡಿಗಳ ಚಕ್ರವ್ಯೂಹ ಭೇದಿಸುವ ಅಭಿಮನ್ಯು ಅವನು . ಆಗಿನ ಬಸ್ಸುಗಳಿಗೂ ಈಗಿನಂತೆ ಪವರ್ ಸ್ಟೇರಿಂಗ್ ಇಲ್ಲವಲ್ಲಾ.. ಆ ಚಕ್ರ ತಿರುಗಿಸುವ ಸೊಬಗನ್ನು ನೋಡುವುದೇ ಒಂದು ಆನಂದ. ಮಧ್ಯೆ ಮಧ್ಯೆ ನೀರು ಹಾಕಿಕೊಳ್ಳುವುದು ಬೇರೆ. ಕೂದಲೆಳೆ ಯಷ್ಟರಲ್ಲಿ ತಪ್ಪಿಸಿಕೊಂಡ ಅವಘಡಗಳೆಷ್ಟೋ..?
ಇವನ್ನೆಲ್ಲಾ ನೆನಸಿಕೊಳ್ಳುವಷ್ಟರಲ್ಲಿ ಮೈಸೂರು ಬಂದಿತ್ತು. ರಾತ್ರಿ ಹನ್ನೊಂದೂ ಮುಕ್ಕಾಲಾಗಿತ್ತು. volvo ಬಸ್ಸು ಎರಡು ಘಂಟೆ ಇರಬಹುದು, ಆದರೆ ಎಂಬತ್ತೆಂಟು ರೂಪಾಯಿ ತೆಗೆದುಕೊಳ್ಳುವ ಕೆಂಪು ಬಸ್ಸಿಗೆ ಈಗಲೂ ಮೂರೂವರೆ ಘಂಟೆ ಬೇಕೆಂದರೆ, ಅಭಿವೃದ್ದಿಯಾಗುತ್ತಿರುವುದೇನು? ಎಂದು ಚಿಂತಿಸುತ್ತಾ ಹತ್ತು ನಿಮಿಷಗಳಲ್ಲಿ ನಡೆದೇ ಮನೆ ಸೇರಿದೆ. ಬರುವಾಗ ರೈಲಿನಲ್ಲಿ ಹಿಂತಿರುಗೋಣ ಎಂದು ಚಿಂತಿಸುತ್ತಾ! ರಾಮನಗರ ಮೈಸೂರು ಮಧ್ಯೆ ನಡೆದ ಒಂದು ರೋಚಕ ಘಟನೆಯನ್ನು ನೆನೆಸಿಕೊಳ್ಳುತ್ತಾ..!! ಮತ್ತು ಅದು ನನಗೆ ಕಲಿಸಿದ ಪಾಠವನ್ನು ಮಥಿಸುತ್ತಾ..!!!
ಸಮಯ ಸಿಕ್ಕರೆ ಅದನ್ನು ಯಾವಾಗಲಾದರೂ ಹೇಳುತ್ತೇನೆ..ಅಲ್ಲಿಯವರೆಗೂ .. ಬೈ ಬೈ.

Monday, November 30, 2009
ತಗೋಬೇಕು ಟಿಕೇಟು
ಉದ್ಯಾನ ನಗರಿ ಬೆಂಗಳೂರು,
ಇಲ್ಲಿ ಹೈದರಾಲಿ ಕಟ್ಸಿದ್ ಲಾಲ್ಬಾಗು
ಕಬ್ಬನ್ ಸಾಹೇಬ್ರ ಹೆಸ್ರಲ್ಲೊಂದು ಪಾರ್ಕು.
ತಣ್ಣಗಿರಲಿ ಅಂತ ಬೆಂಗ್ಳೂರು
ಮಾಡಿಟ್ಟು ಹೋದ್ರು ದೊಡ್ಡೋರು
ಕೆಲ್ಸ ಸಿಕ್ಕದ್ ಕೆಲ್ಸದೋರು,
ಪ್ರೇಮಿ ಕಳ್ಕೊಂಡ್ ವಿರಹಿಗಳು,
ಬೈಸಿಕೊಂಡ್ ಮನೆ ಬಿಟ್ ಓಡ್ ಬಂದೋರು,
ಕಾಸಿಲ್ಲದೆ ಬಿದ್ರೂ ಬೆಂಗಳೂರು,
ತಂಪಾಗ್ ಮಲ್ಗಕ್ಕೆ ಇತ್ತು ಪಾರ್ಕುಗಳು.
ಕೋಳೀಕೆ ರಂಗ ಬಂದಿದ್ದ
ಲಾಲ್ಬಾಗ್ ತೋಟದಲ್ ನಡ್ದಿದ್ದ
ಹುಲಿ ಕಂಡ್ ಬೆಕ್ಕಂತ ತಿಳಿದಿದ್ದ.
ಐಟಿ, ಬಿಟಿ ಬಂತಂತೆ
ಬೆಂಗಳೂರು ಬೆಳೀತಂತೆ
ಜನ ಓಡಾಡಕ್ ರೈಲಂತೆ
ಲಾಲ್ಬಾಗ್ ತೋಟ ದ ಮರ
ಮೆಟ್ರೋ ರೈಲಿಗ್ ತಲೆ ಕೊಡ್ತಂತೆ,
ಶಾಸಕರಿಗೆ ಉಳ್ಕೋಳೋಕಂತೆ,
ಕಬ್ಬನ್ ಪಾರ್ಕ್ ನಲ್ಲಿ ಮನೆ ಕಟ್ತಾರಂತೆ,
ಮರ ಕಡೀದಿದ್ರೆ ಆಗೊಲ್ಲವಂತೆ.
ಯಾರೋ ಹೇಳಿದ್ರಂತೆ,
ಪಾರ್ಕ ನಲ್ಲಿ ನಡೆಯೋದು
ಅನಾಗರಿಕ ಕೆಲಸ ಅಂತ,
ಅದಕ್ಕೆ ಇನ್ಯಾರೋ ಹೇಳಿದ್ರಂತೆ
ನಾಗರಿಕರನ್ನು ಮಾತ್ರ ಒಳಕ್ಕೆ ಬಿಟ್ರೆ
ಇರೋದಿಲ್ಲ ತಕರಾರು ತಂಟೆ.
ನಾಗರಿಕರಂದ್ರೆ ಯಾರನ್ಕೊಂಡ್ರಿ..?
ಜೋಬಲ್ಲಿರ್ಬೇಕು ಕಾಂಚಾಣ.
ಇಲ್ಲಾಂದ್ರೆ ಬದುಕಿರೋ ಹೆಣ.
ದುಡ್ಡು ಕೊಟ್ ಮಾಡಿಸ್ಕೋಬೇಕ್ ಐಡಿ,
ಇಲ್ಲಾಂದ್ರೆ ಒಳಕ್ಕೆ ಬಿಡ್ ಬೇಡಿ.
ಇನ್ನು ಮುಂದೆ ಇಲ್ಲಿ
ಉದ್ಯಾನನಗರಿ ಬೆಂಗಳೂರಲ್ಲಿ
ಉದ್ಯಾನಕ್ಕೆ ಹೋಗೋಕು
ತಗೋಬೇಕು ಟಿಕೇಟು.
ಇಲ್ಲಿ ಹೈದರಾಲಿ ಕಟ್ಸಿದ್ ಲಾಲ್ಬಾಗು
ಕಬ್ಬನ್ ಸಾಹೇಬ್ರ ಹೆಸ್ರಲ್ಲೊಂದು ಪಾರ್ಕು.
ತಣ್ಣಗಿರಲಿ ಅಂತ ಬೆಂಗ್ಳೂರು
ಮಾಡಿಟ್ಟು ಹೋದ್ರು ದೊಡ್ಡೋರು
ಕೆಲ್ಸ ಸಿಕ್ಕದ್ ಕೆಲ್ಸದೋರು,
ಪ್ರೇಮಿ ಕಳ್ಕೊಂಡ್ ವಿರಹಿಗಳು,
ಬೈಸಿಕೊಂಡ್ ಮನೆ ಬಿಟ್ ಓಡ್ ಬಂದೋರು,
ಕಾಸಿಲ್ಲದೆ ಬಿದ್ರೂ ಬೆಂಗಳೂರು,
ತಂಪಾಗ್ ಮಲ್ಗಕ್ಕೆ ಇತ್ತು ಪಾರ್ಕುಗಳು.
ಕೋಳೀಕೆ ರಂಗ ಬಂದಿದ್ದ
ಲಾಲ್ಬಾಗ್ ತೋಟದಲ್ ನಡ್ದಿದ್ದ
ಹುಲಿ ಕಂಡ್ ಬೆಕ್ಕಂತ ತಿಳಿದಿದ್ದ.
ಐಟಿ, ಬಿಟಿ ಬಂತಂತೆ
ಬೆಂಗಳೂರು ಬೆಳೀತಂತೆ
ಜನ ಓಡಾಡಕ್ ರೈಲಂತೆ
ಲಾಲ್ಬಾಗ್ ತೋಟ ದ ಮರ
ಮೆಟ್ರೋ ರೈಲಿಗ್ ತಲೆ ಕೊಡ್ತಂತೆ,
ಶಾಸಕರಿಗೆ ಉಳ್ಕೋಳೋಕಂತೆ,
ಕಬ್ಬನ್ ಪಾರ್ಕ್ ನಲ್ಲಿ ಮನೆ ಕಟ್ತಾರಂತೆ,
ಮರ ಕಡೀದಿದ್ರೆ ಆಗೊಲ್ಲವಂತೆ.
ಯಾರೋ ಹೇಳಿದ್ರಂತೆ,
ಪಾರ್ಕ ನಲ್ಲಿ ನಡೆಯೋದು
ಅನಾಗರಿಕ ಕೆಲಸ ಅಂತ,
ಅದಕ್ಕೆ ಇನ್ಯಾರೋ ಹೇಳಿದ್ರಂತೆ
ನಾಗರಿಕರನ್ನು ಮಾತ್ರ ಒಳಕ್ಕೆ ಬಿಟ್ರೆ
ಇರೋದಿಲ್ಲ ತಕರಾರು ತಂಟೆ.
ನಾಗರಿಕರಂದ್ರೆ ಯಾರನ್ಕೊಂಡ್ರಿ..?
ಜೋಬಲ್ಲಿರ್ಬೇಕು ಕಾಂಚಾಣ.
ಇಲ್ಲಾಂದ್ರೆ ಬದುಕಿರೋ ಹೆಣ.
ದುಡ್ಡು ಕೊಟ್ ಮಾಡಿಸ್ಕೋಬೇಕ್ ಐಡಿ,
ಇಲ್ಲಾಂದ್ರೆ ಒಳಕ್ಕೆ ಬಿಡ್ ಬೇಡಿ.
ಇನ್ನು ಮುಂದೆ ಇಲ್ಲಿ
ಉದ್ಯಾನನಗರಿ ಬೆಂಗಳೂರಲ್ಲಿ
ಉದ್ಯಾನಕ್ಕೆ ಹೋಗೋಕು
ತಗೋಬೇಕು ಟಿಕೇಟು.
Thursday, November 12, 2009
ನಾಗರಹಾವಿನ ಓಬವ್ವನ ಹಾಡು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಚಿ ತ್ರ ದುರ್ಗದ ಕಲ್ಲಿನ ಕೋಟೆ ಸಿಡಿಲಿಗು ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಈ ಬೀಡು ಸಿದ್ದರು ಹರಸಿದ ಸಿರಿನಾಡು
ವೀರಮದಕರಿ ಆಳುತಲಿರಲು ಹೈದರಾಲಿಯು ಯುದ್ದಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು ಸತತ ದಾಳಿಯು ವ್ಯರ್ಥವಾಗಲು
ವ್ಯೆರಿ ಚಿಂತೆಯಲಿ ಬಸವಳಿದ ದಾರಿಗಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಗೂಡಚಾರರು ಅಲೆದು ಬಂದರು ಹೈದರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ಸುತ್ತ ಮುತ್ತಲು ಕಪ್ಪು ಕತ್ತಲೆಯು ಮುತ್ತಿರಲು
ವೀರ ಕಾವಲುಗಾರ ಭೋಜನಕ್ಕೆ ನೆಡೆದಿರಲು
ಸಿಹಿನೀರ ತರಲೆಂದು ಅವನ ಸತಿ ಬಂದಿರಲು ಕಳ್ಳಗಂಡಿಯ ಹಿಂದೆ ಪಿಸುಮಾತ ಕೇಳಿದಳು
ಆಲಿಸಿದಳು ಇಣುಕಿದಳು ವೈರಿ ಪಡೆ ಕೋಟೆಯತ್ತ ಬರುವುದ ಕಂಡಳು.
ಕೈಗೆ ಸಿಕ್ಕಿದ ಒನಕೆ ಹಿಡಿದಳು ವೀರಗಚ್ಚೆಯ ಹಾಕಿ ನಿಂದಳು
ದುರ್ಗಿಯನ್ನು ಮನದಲ್ಲೆ ನೆನೆದಳು, ಕಾಳಿಯಂತೆ ಬಲಿಗಾಗಿ ಕಾಯ್ದಳು
ಯಾರವಳೂ..? ಯಾರವಳೂ..? ವೀರವನಿತೆ ಆ ಓಬವ್ವ..
ದುರ್ಗವು ಮರೆಯದ ಓಬವ್ವ ..
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ
ತೆವಳುತ ಒಳಗೆ ಬರುತಿರೆ ವೈರಿ , ಒನಕೆಯ ಬೀಸಿ ಕೊಂದಳು ನಾರಿ,
ಸತ್ತವನನ್ನು ಎಳೆದು ಹಾಕುತ, ಮತ್ತೆ ನಿಂತಳು ಹಲ್ಲು ಮಸೆಯುತ
ವೈರಿ ರುಂಡ ಚೆಂಡಾಡಿದಳು ರಕುತದ ಕೋಡಿ ಹರಿಸಿದಳು .
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ ಚರಿತೆಯ ನಾನು ಹಾಡುವೆ.
ಸತಿಯ ಹುಡುಕುತ ಕಾವಲಿನವನು ಗುಪ್ತದ್ವಾರದ ಬಳಿಗೆ ಬಂದನು
ಮಾತು ಹೊರಡದೆ ಬೆಚ್ಚಿ ನಿಂತನು, ಹೆಣದ ರಾಶಿಯ ಬಳಿಯೆ ಕಂಡನು
ರಣಚಂಡಿ ಅವತಾರವನು, ಕೋಟೆ ಸಲಹಿದ ತಾಯಿಯನು.
ಸಂಭಾಷಣೆ: "ಹೈದರಾಲಿಯ ಸೈನ್ಯ ನಮ್ಮ ಕೋಟೆಯನ್ನು ಮುತ್ತಿದೆ. ಹೋಗಿ.. ರಣಕಹಳೆಯನ್ನು ಊದಿ"
ರಣಕಹಳೆಯನು ಊದುತಲಿರಲು, ಸಾಗರದಂತೆ ಸೈನ್ಯ ನುಗ್ಗಲು,
ವೈರಿಪಡೆಯು ನಿಶ್ಯೇಷವಾಗಲು.. ಕಾಳಗದಲ್ಲಿ ಜಯವನು ತರಲು.
ಅಮರಳಾದಳು ಓಬವ್ವ... ಚಿತ್ರದುರ್ಗದ ಓಬವ್ವ .

Subscribe to:
Posts (Atom)