ಜಾಪಾಳ ಮಾತ್ರೆ ಮಾಡುವ ವಿಧಾನ:
ಬೇಕಾದ ಪದಾರ್ಥಗಳು: ವಜನಾಭಿ, ಜಾಪಾಳ, ಶುಂಠಿ, ಹಿಪ್ಪಲಿ,ಮೆಣಸು, ಎಲಿಗಾರ ಮತ್ತು ಇಂಗಲೀಕ
ವಜನಾಭಿಯನ್ನು ಹಸುವಿನ ಗಂಜಲದಲ್ಲಿ 21 ದಿವಸ ಬಟ್ಟೆಯಲ್ಲಿ ಸುತ್ತಿಟ್ಟು ನೆನೆಸಿ, ನೆರಳಿನಲ್ಲಿ ಚೆನ್ನಾಗಿ ಒಣಗಿಸಿಕೊಳ್ಳಬೇಕು.
ಜಾಪಾಳದ ಹೊಟ್ಟು ತೆಗೆದು, ಬೀಜವನ್ನು ಎಮ್ಮೆ ಸಗಣಿಯಲ್ಲಿ ಏಳು ಬಾರಿ ಉಕ್ಕಿ ಬರುವಂತೆ ಬೇಯಿಸಬೇಕು. ರಾತ್ರಿಯೆಲ್ಲಾ ಹಾಗೆಯೇ ಬಿಟ್ಟು, ಬೆಳಿಗ್ಗೆ ಬೀಜವನ್ನು ತೆಗೆದು ಎರಡು ಹೋಳು ಮಾಡಬೇಕು. ಮೊಳಕೆ/ಮೊಗ್ಗುಗಳನ್ನು ತೆಗೆದು ಚೆನ್ನಾಗಿ ಒಣಗಿಸಿಕೊಳ್ಳಬೇಕು.
ಮೇಲೆ ತಿಳಿಸಿದ ಎಲ್ಲಾ ವಸ್ತುಗಳನ್ನು ಸಮ ಪ್ರಮಾಣದಲ್ಲಿ ಹಾಕಬೇಕು, ಇದಕ್ಕೆ ಏಳು ತೂಕ ಜಾಪಾಳ ಸೇರಿಸಿ, ನಿಂಬೆಹಣ್ಣಿನ ರಸದಲ್ಲಿ ಮೂರು ದಿವಸ ಅರೆಯಬೇಕು, ಮೂರನೇ ದಿನ ಸಂಜೆ ಮಾತ್ರೆ ಹೆಸರುಕಾಳಿಗಿಂತಲೂ ಸ್ವಲ್ಪವೇ ದಪ್ಪನಾಗಿ ಮಾತ್ರೆ ಕಟ್ಟಿ, ನೆರಳಿನಲ್ಲಿ ಒಣಗಿಸಬೇಕು.
ಕೊಡಬೇಕಾದ ಪ್ರಮಾಣ
3 ವರ್ಷ : ಒಂದು ಮಾತ್ರೆ
5 ವರ್ಷ : ಒಂದೂವರೆ ಮಾತ್ರೆ
7 ವರ್ಷ : ಎರಡು ಮಾತ್ರೆ
10 ವರ್ಷಮೇಲ್ಪಟ್ಟು : ಮೂರು ಮಾತ್ರೆ.
ವಾಯು ಪ್ರಕೃತಿಯವರಿಗೆ ನಾಲ್ಕು ಮಾತ್ರೆ
ಉಷ್ಣ ಪ್ರಕೃತಿಯವರಿಗೆ ಐದು ಮಾತ್ರೆ
ಪಥ್ಯ : ಮೆಣಸಿನ ಸಾರು ಅನ್ನ
ಕಾಫಿ, ಎಣ್ಣೆ, ಈರುಳ್ಳಿ ವರ್ಜ್ಯ
ಪ್ರತ್ಯೌಷಧ :
ಕೆಳಗಿನ ಔಷಧಿಗಳನ್ನು ಒಂದರ ನಂತರ ಒಂದರಂತೆ ಪ್ರಯೋಗಿಸಬೇಕು.
1. ಬಿಸಿಬಿಸಿ ಕಾಫಿ.
2.ಮಜ್ಜಿಗೆ ಅನ್ನ
3.ಬಿಸಿ ಬಿಸಿ ನೀರಿನ ಸ್ನಾನ
4.ಜೇನುತುಪ್ಪ
5.ಕೆಮ್ಮಣ್ಣು ಪುಡಿ ಮಾಡಿ ನೀರಿನಲ್ಲಿ ಕಲಸಿ, ತಿಳಿ ಮಾಡಿ, ತಿಳಿಯನ್ನು ಕುಡಿಯಬೇಕು.
ಈ ವಿಧಾನವನ್ನು ಹೇಳಿಕೊಟ್ಟವರು , ನಮ್ಮ ತಾತನವರಾದ ಶ್ರೀ ಮುನಿಯಪ್ಪನವರು, ಈ ಮಾತ್ರೆಗಳನ್ನು ಅವರು ಪ್ರಯೋಗಿಸಿ, ಯಾರಿಗೂ ಹಾನಿಯಾಗಿದ್ದು ಕಂಡಿಲ್ಲ. ಆದರೂ ಪ್ರಯೋಗಿಸಿ ಏನಾದರೂ ಹೆಚ್ಚು ಕಮ್ಮಿಯಾದರೆ, ನೀವೇ ಜವಾಬ್ದಾರರು.
No comments:
Post a Comment