ಪ್ರಪಂಚದಲ್ಲಿ ಜೀವಂತವಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿರುವ ಕನ್ನಡದಲ್ಲಿ ಅವಧಾನ ಕಲೆಯೂ ಅರಳಿದೆ.
ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಮತ್ತು ಸಹಸ್ರಾವಧಾನವೆಂಬ ಮೂರು ಬಗೆಗಳುಂಟು.
೮೦೦
ವರುಷಗಳ ಹಿಂದೆಯೇ ಉದಯಿಸಿದ ಈ ಕಲೆಯೂ ಆಧುನಿಕ ಯುಗದಲ್ಲಿ ಕಣ್ಮರೆಯಾಗುವಂತಾಗಿತ್ತಾದರೂ,
ಬೆಳ್ಳಾವೆ ನರಹರಿ ಶಾಸ್ತ್ರಿಗಳು, ರಾ.ಗಣೇಶ್ ರಂತಹ ವ್ಯಕ್ತಿಗಳಿಂದ ಮರುಹುಟ್ಟು
ಪಡೆದಿದೆ.
ಈ ಹಿಂದೆಯೇ ಸಂಪದದಲ್ಲಿ ನಾನು ನೋಡಿದ ಅಷ್ಟಾವಧಾನದ ಬಗ್ಗೆ ಒಂದು ಲೇಖನ ಬರೆದಿದ್ದೆ. ಈಗ ಕನ್ನಡದ ಮನಸುಗಳಿಗೆ ಶತಾವಧಾನವನ್ನು ನೋಡುವ ಸುಂದರ ಗಳಿಗೆ ಕೂಡಿ ಬಂದಿದೆ,
ನವೆಂಬರ್
೩೦, ಡಿಸೆಂಬರ್೧ ಹಾಗೂ ೨ರಂದು, ತುಂಬುಗನ್ನಡದ ಮೊದಲ ಶತಾವಧಾನ ಕಾರ್ಯಕ್ರಮ ಬೆಂಗಳೂರಿನ
ಜಯನಗರ ಮೂರನೇ ಬ್ಲಾಕಿನ ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಮಂಗಳ ಮಂಟಪದಲ್ಲಿ ನಡೆಯಲಿದೆ.
ಆಸಕ್ತ ಮನಸ್ಸುಗಳಿಗೆ ಆತ್ಮೀಯ ಸ್ವಾಗತ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ.
ಹಾಗೂ ಕಾರ್ಯಕ್ರಮದಲ್ಲಿ ಕೈಜೋಡಿಸುವ ಮನಸ್ಸಿರುವವರು ಅದೇ ಕೊಂಡಿಯ ಈ ಪುಟವನ್ನು ನೋಡಿ ಎಂದು ಕೋರಿಕೊಳ್ಳುತ್ತೇನೆ.
No comments:
Post a Comment