Pages

Friday, November 23, 2012

೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ

೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ. (ತಡವಾಗಿದ್ದಕ್ಕೆ ಕ್ಷಮೆ ಇರಲಿ)


ಮನೋವೈದ್ಯಕೀಯ ಶಾಸ್ತ್ರ : ಎಡಬಾಗಕ್ಕೆ ವಾಲುವುದರಿಂದ ಐಫಿಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ ಎನ್ನುವ ಸಂಶೋಧನೆಗೆ
ಅನಿತಾ ಎರ್ಲಾಂಡ್, ಮತ್ತು ರಾಲ್ಫ್ ಸ್ವಾನ್ (ನೆದರ್‌ಲ್ಯಾಂಡ್) ಮತ್ತು ಟುಲಿಯೋ ಗೌಡಲೂಪೆ (ಪೆರು)

ಶಾಂತಿ ಪ್ರಶಸ್ತಿ. ಎಸ್.ಕೆ.ಎನ್. ಕಂಪನಿ.(ರಶಿಯಾ) ಹಳೆಯ ರಷಿಯದ ಸಿಡಿಮದ್ದುಗಳನ್ನು ಹೊಸ ವಜ್ರಗಳನ್ನಾಗಿ ಮಾರ್ಪಡಿಸಿದ್ದಕ್ಕೆ.


ಶಬ್ದಶಾಸ್ತ್ರ ಪ್ರಶಸ್ತಿ : ವ್ಯಕ್ತಿಯ ಮಾತುಗಳನ್ನು, ಕೆಲವೇ ಸೂಕ್ಷ್ಮ ಸೆಕೆಂಡುಗಳ ತಡೆಯ ನಂತರ ಪ್ರತಿಧ್ವನಿಸುವಂತೆ ಮಾಡಿ, ವ್ಯಕ್ತಿ ಮಾತಾಡದಂತೆ ತಡೆಯೊಡ್ಡುವ ಸಂಶೋಧನೆ ಮಾಡಿದ್ದಕ್ಕೆ. ಕಜುತುಕಾ ಕುರಿಹಾರ ಮತ್ತು ಕೋಜಿ ಸುಕಾಡ (ಜಪಾನ್) ಅವರಿಗೆ.


ನರಶಾಸ್ತ್ರ ಪ್ರಶಸ್ತಿ. ಸತ್ತ ಸಾಲ್ಮನ್ ಮೀನೂ ಸೇರಿದಂತೆ ಎಲ್ಲಾದರೂ, ಮಿದುಳಿನ ಚಟುವಟಿಕೆ ಗಮನಿಸುವದುಕ್ಕಾಗಿ, ಸಂಕೀರ್ಣ ಉಪಕರಣಗಳನ್ನು ಮತ್ತು ಸರಳ ಲೆಕ್ಕಗಳನ್ನು ರೂಪಿಸಿದ್ದಕ್ಕೆ, ಕ್ರೇಗ್ ಬೆನೆಟ್ ಅಬಿಗೇಲ್ ಬೇರ್ಡ್, ಮೈಕೇಲ್ ಮಿಲ್ಲರ್ ಮತ್ತು ಜಾರ್ಜ್ ವೋಲ್‌ಫೋರ್ಡ್ (ಅಮೆರಿಕಾ ಸಂಯುಕ್ತ ಸಂಸ್ಥಾನ).


ರಸಾಯನ ಶಾಸ್ತ್ರ : ಸ್ವೀಡನ್ನಿನ ಆಂಡರ್‌ಸ್ಲಾವ್ ನಗರದ ಕೆಲವು ಮನೆಗಳ ಜನರ ಕೂದಲು ಹಸಿರಾಗುವ  ಕಾರಣ ಕಂಡುಹಿಡಿದ್ದಕ್ಕೆ, ಜೊಹಾನ್ ಪೀಟರ್‌ಸನ್ (ಸ್ವೀಡನ್) ಅವರಿಗೆ.


ಸಾಹಿತ್ಯ ಪ್ರಶಸ್ತಿ : ವರದಿಗಳ ಬಗ್ಗೆ ವರದಿಯ ವರದಿಗಳನ್ನು ತಯಾರು ಮಾಡುವ ಬಗ್ಗೆ ಸಲಹೆ ನೀಡುವ ವರದಿಗಳ ಬಗೆಗಿನ ವರದಿಗಳ ವರದಿಯನ್ನು ನೀಡಿದ್ದಕ್ಕೆ ಅಮೆರಿಕಾ  ಸಂಯುಕ್ತ ಸಂಸ್ಥಾನದ ಅಕೌಂಟಬಿಲಿಟಿ ಕಚೇರಿಗೆ.


 ಭೌತಶಾಸ್ತ್ರ ಪ್ರಶಸ್ತಿ : ವ್ಯಕ್ತಿಯೊಬ್ಬ/ಳು ಕಟ್ಟಿಕೊಳ್ಳುವ ಕುದುರೆಬಾಲದ ಜಡೆಯ ಆಕಾರ ಮತ್ತು ಚಲನೆಯನ್ನು ನಿರ್ಧರಿಸುವ ಬಲಗಳ ತುಲನೆಯನ್ನು ಲೆಕ್ಕಿಸಿದ್ದಕ್ಕಾಗಿ, ಜೋಸೆಫ್ ಕೆಲ್ಲರ್ (ಅಮೆರಿಕಾ) ರೇಮಂಡ್ ಗೋಲ್ಡ್‌ಸ್ಟೀನ್ (ಅಮೆರಿಕಾ ಮತ್ತು ಇಂಗ್ಲೆಂಡ್), ಪ್ಯಾಟ್ರಿಕ್ ವಾರೆನ್ ಮತ್ತು ರಾಬಿನ್ ಬಾಲ್ (ಇಂಗ್ಲೆಂಡ್) ಇವರಿಗೆ.


ದ್ರವಚಲನ ಶಾಸ್ತ್ರ ಪ್ರಶಸ್ತಿ: ವ್ಯಕ್ತಿಯೊಬ್ಬ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ನಡೆದಾಗ ಏನಾಗುತ್ತದೆ ಎಂದು ತಿಳಿಯಲು ದ್ರವದ ಎರಚುವಿಕೆಯ ಚಲನೆಯನ್ನು ಅಭ್ಯಾಸ ಮಾಡಿದ ಸಂಶೋಧನೆಗೆ, ರೌಸ್ಲನ್ ಕ್ರೆಚೆಟ್ನಿಕೋವ್(ಅಮೆರಿಕಾ, ರಷಿಯಾ ಮತ್ತು ಕೆನಡಾ) ಮತ್ತು ಹಾನ್ಸ್ ಮೇಯರ್ (ಅಮೆರಿಕಾ) ಅವರಿಗೆ

ದೇಹ ರಚನಾಶಾಸ್ತ್ರ ಪ್ರಶಸ್ತಿ: ಚಿಂಪಾಂಜಿಗಳು ಬೇರೆ ಚಿಂಪಾಂಜಿಗಳ ಹಿಂಭಾಗದ ಚಿತ್ರ ನೋಡುವುದರಿಂದಲೇ ಅವನ್ನು ಗುರುತು ಹಿಡಿಯಬಲ್ಲುವು ಎನ್ನುವ ಸಂಶೋಧನೆಗೆ ಫ಼್ರಾನ್ಸ್ ಡಿ ವಾಲ್ (ನೆದರ್‌ಲ್ಯಾಂಡ್ ಮತ್ತು ಅಮೆರಿಕಾ) ಜೆನ್ನಿಫರ್ ಪೊಕೊರ್ನಿ (ಅಮೆರಿಕಾ) ಇವರಿಗೆ.

ಔಷಧಿ ಶಾಸ್ತ್ರ ಪ್ರಶಸ್ತಿ: ಕೊಲೋನೊಸ್ಕೋಪಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗಳ ಹೊಟ್ಟೆ ಒಡೆದುಹೋಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾದ ಸಲಹೆಗಳನ್ನು ವೈದ್ಯರಿಗೆ ನೀಡಿದ್ದಕ್ಕೆ, ಇಮಾನ್ಯುಯೆಲ್ ಬೆನ್-ಸೌಸನ್ ಮತ್ತು ಮೈಕೇಲ್ ಅಂಟಾನಿಯೆಟ್ಟಿ (ಫ಼್ರಾನ್ಸ್) ಅವರಿಗೆ.


ವಿಶೇಷ ಪ್ರಶಸ್ತಿ : ೧೯೯೧ರ ತಪ್ಪೊಂದನ್ನು ತಿದ್ದಿಕೊಳ್ಳುವ ಸಲುವಾಗಿ, ಈಗ ಜೋಸೆಫ್ ಕೆಲ್ಲರ್ ಅವರಿಗೆ ಮತ್ತೆ ಪ್ರಶಸ್ತಿ ನೀಡಲಾಗುತ್ತಿದೆ.  ಟೀ ಹರಿಯದಂತಿರುವ ಟೀ ಪಾಟ್ ಕೊಳವೆಯನ್ನು ಮಾಡಿದ್ದಕ್ಕಾಗಿ..  ಈ ಮೂಲಕ ಅವರು ೧೯೯೯ ಮತ್ತು ೨೦೧೨  ಎರಡು ಬಾರಿ ಇಗ್ನೊಬಲ್ ಪ್ರಶಸ್ತಿ ಗಳಿಸುತ್ತಿದ್ದಾರೆ.

1 comment: