ನಾ ನಿನ್ನವಳಲ್ಲ... ನಿನ್ನ
ನೆನಪಲೆ ಕಳೆದುಹೋದವಳಲ್ಲ.
ಹಂಬಲಿಸಿ ಕಾದಿರುವೆ ಕಳೆದುಹೋಗಲು
ನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆ
ಇಡಿಸಾಗರದ ಮಧ್ಯೆ ಹಿಮಚಕ್ಕೆಯಂತೆ.
ನೀ ನನ್ನ ಪ್ರೀತಿಸುವುದ ನಾ ಬಲ್ಲೆ.
ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ
ಆದರೂ ಕಳೆದುಹೋಗಲು ನನ್ನ ಹಂಬಲಿಕೆ
ಇರುಳಲ್ಲಿ ಇಣುಕಿಯೂ ನೋಡದ ಬೆಳಕಿನಂತೆ
ಪ್ರೀತಿ ಸಾಗರದಲಿ ನನ್ನ ಮುಳುಗಿಸು
ಮತಿಯ ಮತ್ತಿನಲೆ ಮಲಗಿಸು
ಮೂಕವಾದರು, ಕೇಳದಾದರು
ಹಂಬಲಿಸಿ ಕಾದಿರುವೆ ಕಳೆದುಹೋಗಲು
ನಿನ್ನ ಪ್ರೀತಿಯ ಬಿರುಗಾಳಿಯಲೆ ತರಗೆಲೆಯಾಗಲು.
ಸಾರಾ ಟೀಸ್ ಡೇಲ್ ಅವರ " I am not yours " ಪದ್ಯದ ಭಾವಾನುವಾದ .. ಮೂಲ ಕೆಳಗಿನಂತಿದೆ.
I am not yours, not lost in you,
Not lost, altho' I long to be
Lost as a candle lit at noon,
Lost as a snow-flake in the sea.
You love me, and I find you still
A spirit beautiful and bright,
Yet I am I, who long to be
Lost as a light is lost in light.
Oh plunge me deep in love—put out
My senses, leave me deaf and blind,
Swept by the tempest of your love,
A taper in a rushing wind.
"I Am Not Yours "
by Sara Teasedale
No comments:
Post a Comment