ಬಿದಿರಮೆಳೆ
ಮೇಲೆ ತಿಂಗಳ ಹಾಳೆ
ಕೋಗಿಲೆ ಗಾನ
ರಣರಂಗದೆ
ಮೆರೆದ ವೀರರಿಗೆ
ಹುಲ್ಲಿನಗೋರಿ
ಶರದೃತು ರಾ
ತ್ರಿಯ ನೀರವ ರಸ್ತೆ
ಒಂಟಿ ಪ್ರಯಾಣ
ಚಂದಿರನ ತೋ
ರೆ ಮುಗಿಲುಗೊಂಚಲ
ಕಣ್ಣಾ ಮುಚ್ಚಾಲೆ
ಮೆತ್ತಿಕೊಂಡಾಳೋ
ಸೀತಾಳೆ ಸುಗಂಧವ
ಪಾತರಗಿತ್ತಿ
ಬಂದ ವಸಂತ
ಬೆಟ್ಟದ ಮೇಲೆಲ್ಲ ಮಂ
ಜಿನಲಂಕಾರ
ಕೊರೆವ ಚಳಿ
ನೆರೆಯವನು ತಾಳಿ
ಕೊಳ್ಳುವನೇನು?
ಹಳೆಯ ಕೊಳ
ಬುಳು ಬುಳುಕ್ ಸದ್ದು
ಕಪ್ಪೆ ಜಿಗಿತ
No comments:
Post a Comment