ಮಯೂರ ಚಿತ್ರದ ಏಕಪಾತ್ರಾಭಿನಯದ ಸಂಭಾಷಣೆ. ವಿಡಿಯೋಗಾಗಿ ಇಲ್ಲಿ ನೋಡಿ.
ಅಮ್ಮ... ಅಮ್ಮ....
ಬುದ್ಧಿ ತಿಳಿಯುವ ಮುನ್ನವೇ ನಿನ್ನನ್ನು ಕಳೆದುಕೊಂಡ ನಿರ್ಭಾಗ್ಯ ನಾನು.
ಕಣ್ಣಿಗೆ ಅರಿವಾಗದ ವಿಷಯ ಕರುಳಿಗೆ ಅರಿವಾಗುತ್ತದೆಂಬ ಮಾತು ಅದೆಷ್ಟು ಸತ್ಯ.
ಹಾಗಾದರೆ.... ಹಾಗಾದರೆ.... ಆಗಾಗ ನನ್ನ ಕನಸಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ದೇವತೆ ನೀನೇ ಅಮ್ಮಾ..?
ಬಾ ಮಗೂ ಈ ಮಣಿ ಕಿರೀಟ ನಿನಗೆ ಬೇಡವೇ, ಈ ರತ್ನ ಸಿಂಹಾಸನ ನಿನಗೆ ಬೇಡವೇ?, ಈ ಸಾಮ್ರಾಜ್ಯ ನಿನಗೆ ಬೇಡವೇ ಎಂದು ಅಕ್ಕರೆಯಿಂದ ಕೇಳುತ್ತಿದ್ದವಳು ನೀನೆಯೇ ಅಮ್ಮಾ..
ಈ ನಿನ್ನ ಮಗನಲ್ಲಿ ನಿನಗದೆಷ್ಟೊಂದು ಭರವಸೆ ತಾಯಿ.
ಭೂಮ್ಯಾಕಾಶಗಳೇ ಸಿಡಿದೆದ್ದು ಹಗೆಯಾಗಲಿ. ನಿನ್ನ ಈ ನಂಬಿಕೆಯನ್ನು ಮಾತ್ರ ಸುಳ್ಳು ಮಾಡುವುದಿಲ್ಲ ತಾಯೀ.. ನಿನ್ನ ಈ ನಂಬಿಕೆಯನ್ನು ಮಾತ್ರ ಸುಳ್ಳು ಮಾಡುವುದಿಲ್ಲ.
ಹೊಂಚು ಹಾಕಿ ಸಂಚು ಮಾಡಿ ವಂಚನೆಯಿಂದ ನಮ್ಮ ರಾಜ್ಯವನ್ನು ಕಬಳಿಸಿ ಮೆರೆಯುತ್ತಿರುವ ಶಿವಸ್ಕಂದವರ್ಮ..
ಯಾವ ಕದಂಬರ ವಂಶವೃಕ್ಷ ನಿನ್ನ ಕ್ರೌರ್ಯಕ್ಕೆ ಸಿಕ್ಕು ಸಂಪೂರ್ಣ ನಿರ್ನಾಮವಾಗಿ ಹೋಯಿತು ಎಂದು ತಿಳಿದಿರುವೆಯೋ, ಆ ಮಹಾ ವಂಶವೃಕ್ಷವಿಂದು ಮತ್ತೆ ಚಿಗುರಿ ತಲೆಯೆತ್ತಿ ನಿಂತಿದೆ.
ಪಲ್ಲವರ ಸೊಲ್ಲಡಗಿಸಿ, ನಮ್ಮ ನೆಲದಿಂದವರನ್ನು ಬಡಿದೋಡಿಸಿ, ವೈಜಯಂತಿಯ ರತ್ನ ಸಿಂಹಾಸನದಲ್ಲಿ ಕನ್ನಡ ರಾಜ್ಯಲಕ್ಷ್ಮಿಯನ್ನು ಪ್ರತಿಷ್ಠಾಪಿಸುವ ಮುಹೂರ್ತ ಹತ್ತಿರವಾಗಿದೆ.
ಕನ್ನಡಿಗರ ಸಾಹಸ, ಕನ್ನಡಿಗರ ಪೌರುಷ, ಕನ್ನಡಿಗರ ಸ್ವಾಭಿಮಾನ, ಆಚಂದ್ರಾರ್ಕವಾಗಿ ಉಳಿಯುವಂತಹದೇ ಹೊರತು, ನಿನ್ನಂತಹ ಕೋಟಿ ಪಲ್ಲವರ ನಿರಂತರ ದಾಳಿಯಿಂದ ಅಳಿಯದು. ಎಂಬ ಮಾತನ್ನು ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸುತ್ತೇನೆ.
ಇದೇ ನನ್ನ ಗುರಿ,
ಇದೇ ನನ್ನ ಮಂತ್ರ
ಇದೇ ನನ್ನ ಪ್ರತಿಙ್ಞೆ
Saturday, April 27, 2013
Thursday, April 04, 2013
bash script to extract and join pdf files
Here is a script which will take out the last page from a pdf file and attache it to a template pdf file.
The requirement are ghostscript and xpdf-utils.
#!/bin/bash
for i in `ls *.pdf`
do
pdfinfo -meta $i | grep -i pages
count=$(pdfinfo -meta $i | grep -i pages |cut -d ":" -f2| tr -d " ")
gs -sDEVICE=pdfwrite -dNOPAUSE -dBATCH -dSAFER \
-dFirstPage=$count -dLastPage=$count \
-sOutputFile=lastpage.$i $i
gs -sDEVICE=pdfwrite -dNOPAUSE -dBATCH -dSAFER \
-sOutputFile=finished.$i template.pdf lastpage.$i
done
echo "converted files successfully"
Monday, March 18, 2013
Saturday, February 23, 2013
ಅಳೆಯಲಾಗದ ಒಲವು
ಆ ಸಂಜೆಯಲಿ ನಿನ್ನಿಂದ ದೂರ ನಡೆವಾಗ
ನನ್ನೆದೆಯಲಿದ್ದ ಒಲವನ್ನು ಅಳೆಯಲಾರೆ.
ಕಾಪಿಟ್ಟ ನೀಲಿ ಕಾನನದಲಿ ಕಣ್ಮರೆಯಾದಾಗ
ಪಡುವಣದ ಬಾನಿನಲಿ ತಾರೆಗಳ ಎಣಿಸಲಾರೆ.
ಇನಿತಾದರೂ ನಗೆಯ ಸುಳಿವಿರಲಿಲ್ಲ, ಅಂದು
ಕಾಣದ ವಿಧಿಯಡೆಗೆ ನಾ ನಡೆಯುವಂದು.
ಬೆನ್ನ ಹಿಂದಿನ ಮುಖಗಳು ಮಸುಕಾಗಿ
ನೀಲಿ ಕಾನನದ ಸಂಜೆಯಲ್ಲಿ ಕರಗಿಹೋದಂದು
ಆ ರಾತ್ರಿ ಬಲು ಸೊಬಗು, ಬಹು ಸೊಬಗು
ಹಿಂದೆಂದು ಕಾಣದ್ದು, ಮುಂದೆ ಕಾಣಬರದು.
ನಿಜ ನುಡಿಯಲೇ, ಆ ಸಂಜೆ ನನ್ನ ಬಳಿ ಉಳಿದದ್ದು..
ನೀಲಿ ಕಾಡಿನ ದೊಡ್ಡಹಕ್ಕಿಗಳು ಮತ್ತದರ ಹಸಿವಿನ ಕೂಗು.
ಬರ್ಟೋಲ್ಟ್ ಬ್ರೆಷ್ಟ್ ಕವಿಯ "Ich habe dich nie je so geliebt " ಪದ್ಯದ ಭಾವಾನುವಾದ.
ಮೂಲದ ಕವಿತೆಯ ಇಂಗ್ಲಿಷ್ ಅನುವಾದ ಕೆಳಗಿನಂತೆ.
Ich habe dich nie je so geliebt
I never loved you more, ma soeur
Than as I walked away from you that evening.
The forest swallowed me, the blue forest, ma soeur
The blue forest and above it pale stars in the west.
I did not laugh, not one little bit, ma soeur
As I playfully walked towards a dark fate -
While the faces behind me
Slowly paled in the evening of the blue forest.
Everything was grand that one night, ma soeur
Never thereafter and never before -
I admit it: I was left with nothing but the big birds
And their hungry cries in the dark evening sky.

Bertolt Brecht
Thursday, February 21, 2013
ಹುರುಳಿ ಕಟ್ಟಿನ ಸಾರು.
ಕರ್ನಾಟಕದ ಅಧ್ಬುತ ಅಡಿಗೆಗಳಲ್ಲೊಂದು ಹುರುಳಿ ಕಟ್ಟಿನ ಸಾರು. ಯುಧ್ಧಕ್ಕೆ ಹೊರಟ ಯೋಧರ ಕುದುರೆಗಳಿಗೆ ಬೇಯಿಸಿದ ಹುರುಳಿಯನ್ನು ತಿನ್ನಿಸಿದರೆ, ಹುರುಳಿಕಟ್ಟನ್ನು ಮಸಾಲೆ ಸೇರಿಸಿ, ರುಚಿಕಟ್ಟಾದ ವಾರಗಟ್ಟಲೆ ಕೆಡದ ಹಾಗೆ ಸಾರು ಮಾಡಿ ಚಪ್ಪರಿಸಿ ಹೊಡೆಯುವುದು ಪಟುಭಟರಿಗೆ ಬಿಟ್ಟ ವಿಚಾರ.
ಇಲ್ಲಿ ಈ ಸಾರನ್ನು ಹೇಗೆ ಮಾಡಬೇಕೆಂದು ನಮ್ಮಕ್ಕ ಹೇಳಿಕೊಟ್ಟಿದ್ದನ್ನು ಬರೆದಿದ್ದೇನೆ.
ಎರಡು ಪಾವು ಹುರುಳಿ ಕಾಳಿಗೆ ಏಳೆಂಟು ಪಾವುಗಳಷ್ಟು ನೀರು ಸೇರಿಸಿ, ಬೇಯಿಸಿಕೊಳ್ಳಬೇಕು. ಸೌದೆ ಒಲೆಯಲ್ಲಿ ಮಾಡುವುದಾದರೆ ಒಳ್ಳೆಯದು. ಆ ಅವಕಾಶ ಇಲ್ಲವಾದರೆ, ಪ್ರೆಶರ್ ಕುಕರ್‌ನಲ್ಲಿ ಮೂರು ಸಿಳ್ಳೆ ಹೊಡೆಸಬೇಕು. ಬೇಯಿಸಲು ಉಪ್ಪು ಸೇರಿಸಬಾರದು. ಇದಾದ ಮೇಲೆ ಮತ್ತೆ ರುಚಿಗೆ ಬೇಕಷ್ಟು ಉಪ್ಪು ಸೇರಿಸಿ ಮತ್ತೆ ಮೂರು ಸಿಳ್ಳೆ ಹೊಡೆಸಬೇಕು.
ಒಂದು ಚಮಚೆ ಉದ್ದಿನಬೇಳೆ, ಒಂದು ಚಮಚೆ ಕಡ್ಲೇಬೇಳೆ, ಧನಿಯಾ ಮೂವತ್ತು ಗ್ರಾಂಗಳಷ್ಟು, ಒಣಮೆಣಸಿನಕಾಯಿ ೬-೫, ಒಣಕೊಬ್ಬರಿ, ಕರಿಬೇವಿನ ಸೊಪ್ಪು ಚಕ್ಕೆ, ಲವಂಗ, ಜೀರಿಗೆ, ಮೆಣಸು ಇವನ್ನು ಹುರಿದುಕೊಳ್ಳಬೇಕು. ೪೦೦ ಗ್ರಾಂಗಳಷ್ಟು ಈರುಳ್ಳಿಯ ಜೊತೆಗೆ ಹುರಿದ ಮಸಾಲೆ ಸಾಮಗ್ರಿಗಳನ್ನು ಸೇರಿಸ್, ಜೊತೆಗೆ ಹುಣಸೇಹಣ್ಣಿನ ರಸ ಸೇರಿಸಿ ರುಬ್ಬಿಕೊಳ್ಳಬೇಕು.
ಬೇಯಿಸಿದ ಕಟ್ಟಿನಿಂದ ಕಾಳನ್ನು ಬೇರೆ ಮಾಡಿಕೊಳ್ಳಬೇಕು. ಇನ್ನೊಂದು ಪಾತ್ರೆಯಲ್ಲಿ ಜೀರಿಗೆ, ಸಾಸುವೆ, ಕರಿಬೇವು ಮತ್ತು ಒಣಮೆಣಸಿನಕಾಯಿ ಒಗ್ಗರಣೆ ಮಾದಿಕೊಂಡು, ಅದಕ್ಕೆ ಕಟ್ಟನ್ನು ಸೇರಿಸಿ, ಆಡಿಸಿದ ಮಸಾಲೆಯನ್ನು ಸೇರಿಸಿ, ಚೆನ್ನಾಗಿ ಕುದಿಸಬೇಕು. ಮೊದಲ ದಿನ ಸಾರು ತೆಳುವಾಗಿದ್ದರೆ ಅಡ್ಡಿಯಿಲ್ಲ. ಎರಡು ದಿನಗಳ ಕಾಲ ದಿನಕ್ಕೆ ಎರದು ಹೊತ್ತು ಕುದಿಸಿ ಇಳಿಸಬೇಕು. ಮೂರನೇ ದಿನಕ್ಕೆ, ಬಿಸಿ ಅನ್ನದ ಜೊತೆಗೆ, ತುಪ್ಪ ಹಾಕಿಕೊಂಡು ಕಟ್ಟಿನ ಸಾರಿನ ರುಚಿ ನೋಡಿ.. ಆಮೇಲೆ ಮಾತನಾಡಿ.
ಅಂದಹಾಗೆ, ಬೇಯಿಸಿದ ಹುರಳಿ ತಿನ್ನಿಸಲು ನಮ್ಮಬಳಿ ಕುದುರೆಯಿಲ್ಲವಲ್ಲಾ..? ತೊಂದರೆಯಿಲ್ಲ. ಅದಕ್ಕೆ ಒಗ್ಗರಣೆ ಹಾಕಿ ಪಲ್ಯ ಮಾಡಿದರೆ, ಊಟದ ಜೊತೆಗೆ ನಂಜಿಕೊಳ್ಳಬಹುದು, ಸ್ವಲ್ಪ ಬೆಲ್ಲ, ಎಸೆನ್ಸ್ ಸೇರಿಸಿ, ನುಣ್ಣಗೆ ರುಬ್ಬಿಕೊಂಡರೆ, ಹುರುಳಿ ಸೀಕರಣೆ ಸಿದ್ದ. ಹಾಗೇ ಸಾರು ತುಂಬಾ ತೆಳುವೆನಿಸಿದರೆ, ಸ್ವಲ್ಪ ಹುರುಳಿಯನ್ನು ರುಬ್ಬಿ, ಸಾರಿನೊಂದಿಗೆ ಸೇರಿಸಬಹುದು.
ಮತ್ತೂ ಮುಂದಿನ ವಿಷಯವೆಂದರೆ, ಮಾಂಸಾಹಾರಿ ಪ್ರಿಯ ಸ್ನೇಹಿತರಿಗೆ, ಮೊದಲನೇ ದಿನದ ಹುರುಳಿಕಟ್ಟಿನ ಸಾರಿಗೆ, ಕೈಮ-ಉಂಡೆಗಳನ್ನು ಸೇರಿಸಿ ಬೇಯಿಸಬಹುದು, ಅದು ಖಾಲಿಯಾಗಿ ಸಾರು ಹಾಗೇ ಇದ್ದರೆ, ಮೊಟ್ಟೆಯನ್ನು ಬೇಯಿಸಿ ಸೇರಿಸಬಹುದು, ಇನ್ನೂ ತಿಳಿಯಾದ ಸಾರು ಉಳಿದಿದ್ದರೆ, ಆಲೂಗೆಡ್ಡೆಯನ್ನು ಸೇರಿಸಬಹುದು, ಸಾರಿನ ಜೊತೆಗೆ ನಂಜಿಕೊಳ್ಳಲು ಇದು ತರಕಾರಿಯಾಗುತ್ತದೆ.
ನಿಜವಾದ ಹುರುಳಿ ಕಟ್ಟಿನ ರುಚಿ ನೋಡಬೇಕೆಂದರೆ, ತಪ್ಪಲೆ ತುಂಬಾ ಮಾಡಿದ ಸಾರು ಚೆನ್ನಾಗಿ ಕುದ್ದು, ದೊಡ್ಡ ಚಂಬಿನಷ್ಟಾದಾಗ, ಪೇಸ್ಟಿನಷ್ಟು ಗಟ್ಟಿಯಾದಾಗ ಅದನ್ನು ಬಾಟಲಿನಲ್ಲಿ ತುಂಬಿಸಿಟ್ಟುಕೊಳ್ಳಬಹುದು. ಇದು ತಿಂಗಳಾದರೂ ಕೆಡದೆ ಉಳಿಯುತ್ತದೆ. ಒಂದು ಬಟ್ಟಲು ಅನ್ನಕ್ಕೆ ಒಂದೇ ಚಮಚ ಸಾರು ಈ ಸ್ಥಿತಿಯಲ್ಲಿ ಸಾಕಾಗುತ್ತದೆ. ಅದರ ರುಚಿಯನ್ನು ಅನುಭವಿಸಿಯೇ ತಿಳಿಯಬೇಕು.
Monday, January 28, 2013
Tuesday, January 22, 2013
ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ತಂತ್ರಙ್ಞಾನ
ತಂತ್ರಙ್ಞಾನದ ಸಹಯೋಗವಿಲ್ಲದೆ ಭಾಷೆ ಬೆಳೆಯುವುದಿಲ್ಲ ಎನ್ನುವ ಸತ್ಯ ಬ್ರಿಟಿಷರ ಮೋಹದಲ್ಲಿ ಕಣ್ಣಿಂದ ಮರೆಯಾಯಿತು. ಆಂಗ್ಲ ಮೋಹದ ಪೊರೆ ಬೆಳೆದು ತಂತಙ್ಞಾನ ವಿಙ್ಞಾನಗಳಲ್ಲಿ ಕನ್ನಡದಲ್ಲಿ ಚಿಂತಿಸುವುದೇ ಮರೆತು ಹೋಯಿತು.
ಅಂದು ಕಣ್ಣಿಗೆ ಮೊಳೆದ ಪೊರೆಯನ್ನು ಈಗಲಾದರೂ ಕತ್ತರಿಸಿ ತೆಗೆಯದಿದ್ದರೆ, ಮೆದುಳಿಗೆ ಹಾಕಿದ ಬೇಲಿಯನ್ನು ಕಿತ್ತೊಗೆಯದಿದ್ದರೆ, ಭಾಷೆ ಉಳಿಯುವುದು ದುಸ್ತರವಾದೀತು... ಎಚ್ಚರ...!

Tuesday, January 15, 2013
Wednesday, December 12, 2012
ನಾ ಮೆಚ್ಚಿದ ಕನ್ನಡ ಚಿತ್ರಗಳು
ಕೃಷ್ಣದೇವರಾಯ : ಕನ್ನಡನಾಡಿನ ಚರಿತೆಯಲ್ಲಿ ಹೊನ್ನಕ್ಕರಗಳಿಂದ ಬರೆದಿಡಬೇಕಾದ ಧೀರ ನಾಯಕನ ಜೀವನ ಚರಿತೆಯನ್ನು ಆಕರವಾಗಿಸಿಕೊಂಡು ಬಂದ ರಂಜನೀಯ ಚಿತ್ರ. ಇಂತಹ ಆಗಾಧ ವಸ್ತುವನ್ನು ಮೂರುಗಂಟೆಗಳಲ್ಲಿ ತೆರೆಯ ಮೇಲೆ ಹಿಡಿದಿಟ್ಟವರು ಬಿ.ಆರ್. ಪಂತುಲು ಮತ್ತು ಕೃಷ್ಣದೇವರಾಯನನ್ನು ಕಣ್ಣ ಮುಂದೆ ತಂದಿರಿಸುವಂತೆ ಅಭಿನಯಿಸಿದವರು ರಾಜಕುಮಾರ್.
ಮಯೂರ : ಕನ್ನಡಿಗರ ಆತ್ಮಶಕ್ತಿಯನ್ನು ಬಡಿದೆಚ್ಚರಿಸಿ, ಸ್ವಾಭಿಮಾನವನ್ನು ಒಗ್ಗೂಡಿಸಿದ ದೇವುಡು ಅವರ ಕಾದಂಬರಿ ಆಧಾರಿತ ಚಿತ್ರ. ರಾಜಕುಮಾರ್ ಅವರಿಗೆ ಸರಿಸಾಟಿಯಾಗಿ ನಿಂತು ಚಿತ್ರಕ್ಕೆ ರೋಚಕತೆ ಕೊಟ್ಟವರು ವಜ್ರಮುನಿ. ಎಂ.ಪಿ.ಶಂಕರ್ ಅಭಿನಯ ಮರೆಯುವಂತಹುದಲ್ಲ.
ಮೈಸೂರು ಮಲ್ಲಿಗೆ : ಕವಿಯೊಬ್ಬನ ಕವನಗಳನ್ನು ಎಲೆಗಳನ್ನಾಗಿಸಿ, , ಸುಧಾರಾಣಿಯಂತಹ ಸ್ನಿಗ್ಧ ಸುಂದರಿಯನ್ನು ನಾಯಕಿಯನ್ನಾಗಿಸಿ, ಸುಂದರ ಕತೆಯ ತೋರಣ ನೇಯ್ದ ನಾಗಾಭರಣ ಮನ ಮುಟ್ಟುವಂತೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡಿಗರೆಲ್ಲರೂ ನೋಡಬೇಕಾದದ್ದು ಈ ಚಿತ್ರ.
ಬಿಡುಗಡೆ : ಮರಣದಂಡನೆಯ ಔಚಿತ್ಯವನ್ನು ಪ್ರಶ್ನಿಸಿ ನಿರ್ಮಿಸಿದ ಈ ಚಿತ್ರ ಮತ್ತು ಚಿತ್ರದ ವಸ್ತು ಕ್ರಾಂತಿಕಾರಕವಾದದ್ದು. ವೈ. ಆರ್. ಸ್ವಾಮಿ ನಿರ್ದೇಶನದ ರಾಜಕುಮಾರ್ ರಾಜೇಶ್ ಅಭಿನಯದ ರೋಮಾಂಚಕ ಚಿತ್ರ.
ಸಿಪಾಯಿರಾಮು : ಸೈನ್ಯದಿಂದ ಮರಳಿದ ಸಿಪಾಯಿ, ಊರ ಸಾಹುಕಾರನ ದುರಾಕ್ರಮಣಕ್ಕೆ ಸಿಕ್ಕು, ಚಂಬಲ್ ಕಣಿವೆಗೆ ಸೇರಿ ಡಕಾಯಿತನಾಗಿ ಊರಿಗೆ ಮರಳಿ, ತನ್ನ ಸಂಸಾರಕ್ಕಾಗಿ ಮತ್ತೆ ಬಂಧಿಯಾಗುವ ಕತೆಯುಳ್ಳ, "ಯಮುನೆ ನಾನಿನ್ನು ಬರಲೆ" ಕಾದಂಬರಿ ಆಧಾರಿತ ಚಿತ್ರ.
ನೋಡಿ ಸ್ವಾಮಿ ನಾವಿರೋದೆ ಹೀಗೆ : ಶಂಕರ್‌ನಾಗ್ ನಿರ್ದೇಶನದ ಜೀವನದ ಕಹಿಗಳನ್ನು ನಗುವಿನಲ್ಲೇ ತೋರಿಸಿ, ಬದುಕಿನ ಮೌಲ್ಯವನ್ನು ಕಲಿಸುವ ಚಿತ್ರ.
ಒಂದಾನೊಂದು ಕಾಲದಲ್ಲಿ : ಗಿರೀಶ್ ಕಾರ್ನಾರ್ಡ್ ನಿರ್ದೇಶನದ ಶಂಕರ್‌ನಾಗ್ ರ ರಂಗಪ್ರವೇಶದ ಚಿತ್ರ. ಅಕಿರಾ ಕುರಸಾವೋ ನ ಸಂಜುರೋ ಚಿತ್ರದ ಅವತರಣಿಕೆಯಾದರೂ, ಕನ್ನಡದ್ದೇ ಸೊಗಡನ್ನು ಕಸುವನ್ನು ಮೈತುಂಬಿಕೊಂಡಂತೆ ಮಾಡಿದ್ದು, ಗಿರೀಶರ ಹೆಚ್ಚುಗಾರಿಕೆ. ಯೋಧನೊಬ್ಬನ, ಸ್ವತಂತ್ರ ನಿಲುವನ್ನೂ, ಮನಸ್ಸಿನ ಬೇಗುದಿಗಳನ್ನು ಬಿಡಿಸಿಡಿವ ಈ ಚಿತ್ರದಲ್ಲಿನ, ಸುಂದರಕೃಷ್ಣ ಅರಸು ಮತ್ತು ಸುಂದರರಾಜ್ ಅಭಿನಯವೂ ಅಮೋಘ.
ಬಂಧನ : ಕನ್ನಡದಲ್ಲಿ ಪ್ರೇಮಕತೆಗಳಿಗೆ ಬರವಿಲ್ಲ. ಆದರೆ ತುಂಬು ಹೃದಯಯ ಪಕ್ವ ಪ್ರೇಮದ ಕತೆಯನ್ನು ತೆರೆಯಮೇಲೆ ರಾಜೇಂದ್ರ ಸಿಂಗ್ ಬಾಬು ತಂದ ರೀತಿ ಅನನ್ಯ, ವಿಷ್ಣುವರ್ಧನ್ ಮತ್ತು ಸುಹಾಸಿನಿಯರ ಅಭಿನಯ ಅತಿ ರೋಚಕ.
ಮುತ್ತಿನಹಾರ : ಅದೇ ರಾಜೇಂದ್ರ ಸಿಂಗ್, ವಿಷ್ಣುವರ್ಧನ್, ಸುಹಾಸಿನಿ ತ್ರೀಡಿಯ (ಇಬ್ಬರಿಗೆ ಜೋಡಿ ಎಂದರೆ ಮೂವರಿಗೆ ತ್ರೀಡಿ ಎನ್ನಬಹುದೇ..?) ಈ ಚಿತ್ರದಲ್ಲಿ, ಮಗು ಕಳೆದುಕೊಂಡ ತಾಯಿಯ ವಾತ್ಸಲ್ಯ, ಯುದ್ದಕ್ಕೆ ನಡೆದುಹೋದ ವೀರಯೋಧನ ಧೈರ್ಯ ಮತ್ತವನ ಕುಟುಂಬದ ಸ್ಥೈರ್ಯ ಎಲ್ಲವೂ ಮಿಳಿತವಾಗಿ ರೋಮಾಂಚಕ ಅನುಭವ ನೀಡುವಲ್ಲಿ ಸಫಲವಾದ ಚಿತ್ರ.
ಹಂಸಗೀತೆ : ತರಾಸು ಕಾದಂಬರಿ ಆಧರಿಸಿ ರಚಿಸಿದ ಈ ಚಿತ್ರ, ಸಂಗೀತಗಾರನೊಬ್ಬ ಪಕ್ವಗೊಳ್ಳುವುದನ್ನು ತೋರಿಸುತ್ತಲೇ ಆತ್ಮಾಭಿಮಾನವನ್ನು ಉಳಿಸಿಕೊಳ್ಳುವ ಛಲವನ್ನೂ ತೋರಿಸಿ, ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಜಿ.ವಿ.ಅಯ್ಯರ್ ನಿರ್ದೇಶನದ, ಟಿ.ಜಿ. ಲಿಂಗಪ್ಪ ಮತ್ತು ಬಿ.ವಿ. ಕಾರಂತರ ಸಂಗೀತ ಇರುವ ಅನಂತನಾಗ್ ಅಭಿನಯದ ಚಿತ್ರ.
ಜೀವನ ಚೈತ್ರ : ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಬಣ್ಣಹಚ್ಚಿದ ಕನ್ನಡದ ಹಿರಿಯಣ್ಣನ ಚಿತ್ರ. ಕುಡಿತ ಮತ್ತು ಜಾಗತೀಕರಣವನ್ನೂ ಸಹ ಮೂರ್ತರೂಪವಾಗಿ ತೋರುವ ಈ ಚಿತ್ರ ನನ್ನ ಮೇಲೆ ಬೀರಿದ ಪ್ರಭಾವ ಅಪಾರವಾದದ್ದು.
ಸಮಯದ ಗೊಂಬೆ : ಸಮಯದ ಕೈಯಲ್ಲಿ ನಾವೆಲ್ಲರೂ ಬೊಂಬೆಗಳೆಂದು ಸಾರುವ ಈ ಚಿತ್ರ, ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಬಲ್ಲ ಶಕ್ತಿಯಿದೆ. ಅದರಲ್ಲೂ ಶಕ್ತಿಪ್ರಸಾದರ ಅಭಿನಯ ಅತ್ಯಮೋಘವಾಗಿದೆ.
ಸಾವಿರ ಸುಳ್ಳು : ಮದುವೆ ಮಾಡಿಸುವ ನಂತರ ಆ ಸಂಸಾರದ ವಿರಸವನ್ನೂ ತೊಡೆಯುವ ಕೆಲಸ ಮಾಡುವ ಲೊಕೇಶ್, ಕಡೆಯಲ್ಲಿ ಎಲ್ಲರಿಂದ ನಿಂದಿತನಾಗಬೇಕಾಗುತ್ತದೆ. ನಗಿಸುತ್ತಲೇ ಸಂಸಾರದ ಒಳಗುಟ್ಟುಗಳ ಪಟ್ಟು ತಿಳಿಸುವ ಈ ಚಿತ್ರದ ರವಿಚಂದ್ರನ್ ಆಪ್ತರಾಗುತ್ತಾರೆ.
ನಾಗಮಂಡಲ: ಟಿ.ಎಸ್. ನಾಗಾಭರಣ ನಿರ್ದೇಶನದ ಈ ಚಿತ್ರ, ಎ.ಕೆ. ರಾಮಾನುಜಂ ಅವರ ನಾಟಕ ಆಧರಿಸಿದ್ದು. ಕತೆ ಜಾನಪದದ್ದು. ಹಾದರದ ಬಗ್ಗೆ ಜಾನಪದರ ಕಲ್ಪನೆಯೇ ಬೇರೆ ಎನ್ನುವುದನ್ನು ನಾಗದಿವ್ಯದ ಮೂಲಕ ತೋರಿಸುವ ಈ ಚಿತ್ರ, ಕಾವ್ಯಾತ್ಮಕ ಗುಣಗಳಿಂದ ಕೂಡಿ, ನೆಳಲು ಬೆಳಕುಗಳ ವಿನ್ಯಾಸದಿಂದ ಮನ ಸೆಳೆಯುತ್ತದೆ.
ಅರಸು : ಲಕ್ಷ್ಮೀ ಪುತ್ರನೊಬ್ಬ ಕಾಸಿನ ಬೆಲೆ ಅರಿಯಲು ಮಾರುವೇಷದಲ್ಲಿ ದುಡಿಯುವ ಮಾಮೂಲಿ ಕತೆಯಾದರೂ, ಅದು ಮನಸ್ಸಿಗೆ ತಟ್ಟುವ ರೀತಿ ಹಿತಕರ. ಪುನೀತ್ ಅತ್ಯಂತ ಆಪ್ತವಾಗಿ ನಟಿಸಿರುವ ಈ ಚಿತ್ರದಲ್ಲಿ, ಪ್ರೇಮಕತೆ ಹಳ್ಳ ಹಿಡಿಯುತ್ತದೆ.
ಉಪೇಂದ್ರ: ವಿಭಿನ್ನ ಆಯಾಮಗಳನ್ನೊಳಗೊಂಡ ಈ ಚಿತ್ರ ಒಂದು ಮಾಸ್ಟರ್ ಪೀಸ್. ಆದರೆ ಆಯಾಮಗಳ ಅಂತಸತ್ವವನ್ನು ಎತ್ತರಿಸುವಲ್ಲಿ ವಿಫಲರಾಗಿದ್ದು, ಉಪೇಂದ್ರರ ಎಡವಟ್ಟು.
ಬೂತಯ್ಯನ ಮಗ ಅಯ್ಯು : ಜಿಪುಣ, ಕ್ರೂರಿ ಜಮೀನ್ದಾರನ ಮಗ ಮತ್ತು ಊರ ಹೈದರ ಜಗಳದಲ್ಲಿ ತನಗರಿವಿಲ್ಲದೆಯೇ ಪರಿವರ್ತಿತನಾಗುವ ಜಮೀನ್ದಾರನ ಮಗನ ಕತೆ ಇದು. ಬೂತಯ್ಯ ಸರ್ಕಲ್ ಎನ್ನುವ ಹೆಸರು ಎಂ.ಪಿ. ಶಂಕರ್ ಮನೆಯ ಬಳಿ ಇರುವ ವೃತ್ತಕ್ಕೆ ಜನಪ್ರಿಯ ಹೆಸರಾಯಿತೆಂದರೆ, ಆ ಬೂತಯ್ಯನ ಪ್ರಭಾವ ಎಂತಹುದಿರಬೇಕಿನ್ನು..? ಅಯ್ಯುವಾಗಿ ಲೋಕೇಶ್, ಗುಳ್ಳನಾಗಿ ವಿಷ್ಣುವರ್ಧನ್ ಅಭಿನಯ ಮರೆಯಲಾಗದಂತಹುದು. ಸಿದ್ದಲಿಂಗಯ್ಯ ನಿರ್ದೇಶನದ ಈ ಚಿತ್ರದ ಕತೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ಅದೇ ಹೆಸರಿನ ಕಾದಂಬರಿಯದು.
ಬಂಗಾರದ ಮನುಷ್ಯ : ಇದೇ ಸಿದ್ದಲಿಂಗಯ್ಯನವರ ಮರೆಯಲಾಗದ ಮಾಸ್ಟರ್ ಪೀಸ್ ಬಂಗಾರದ ಮನುಷ್ಯ. ವಿದ್ಯಾವಂತ ಯುವಕ, ಪರಿಸ್ಥಿತಿಯ ಒತ್ತಡವೇ ಇದ್ದರೂ ಸ್ವಪ್ರೇರಣೆಯಿಂದ ಮಣ್ಣಿನ ಮಗನಾಗಿ, ತನ್ನ ಗುಣಗಳಿಂದಾಗಿ ಬಂಗಾರದ ಮನುಷ್ಯನಾಗುವ ಈ ಚಿತ್ರ ಜನಸಮೂಹಕ್ಕೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಇದೂ ಟಿ.ಕೆ. ರಾಮರಾಯರ ಕಾದಂಬರಿ ಆಧಾರಿತ ಕೃತಿ. ಸಾಧನೆಯ ಜೊತೆಜೊತೆಗೇ ಮನುಷ್ಯ ಪ್ರವೃತ್ತಿಗಳ ಚಿತ್ರಣವೂ ಇಲ್ಲಿ ಸೊಗಸಾಗಿ ಮೂಡಿ ಬಂದಿದೆ.
ಬೆಟ್ಟದ ಹೂವು : ಚಿಕ್ಕವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿಯನ್ನು ಪುನೀತ್ ಗೆ ತಂದುಕೊಟ್ಟ ಚಿತ್ರವಿದು. ಪುಸ್ತಕ ಓದಬೇಕೆನ್ನುವ ಹುಡುಗನ ಅದಮ್ಯ ಆಸೆ ಮತ್ತು ಜೀವನದ ಬಂಡಿ ಸಾಗಲು ಬೇಕಾಗುವ ಚೈತನ್ಯದ ಸಂಘರ್ಷವನ್ನು ಸೆರೆಹಿಡಿಯುವಲ್ಲಿ ನಿರ್ದೇಶಕ ಎನ್. ಲಕ್ಷ್ಮೀನಾರಯಣರು ಯಶಸ್ವಿಯಾಗಿದ್ದಾರೆ.
ಇಲ್ಲಿರುವುದು ನಾನು ನೋಡಿರುವ ಚಿತ್ರಗಳಲ್ಲಿ ನಾನು ಮೆಚ್ಚಿದ ಚಿತ್ರಗಳ ಪಟ್ಟಿಯಷ್ಟೇ, ಈ ಪಟ್ಟಿಯೂ ನನ್ನ ನೆನಪಿನ ಶಕ್ತಿಯ ಗುಣದೋಷಗಳಿಂದ ಮುಕ್ತವಾಗಿಲ್ಲ. ಅಲ್ಲದೇ ನನಗರಿವಿಲ್ಲದ ಉತ್ತಮಚಿತ್ರಗಳು ಇಲ್ಲಿ ಚರ್ಚೆಗೆ ಬಂದೇ ಇಲ್ಲ. ಹಾಗಾಗಿ ಇದು ನನ್ನ ಈ ಕ್ಷಣದ ಅಭಿಪ್ರಾಯವೆಂದಷ್ಟೇ ಭಾವಿಸಬೇಕೆನ್ನುವುದು ನನ್ನ ಮನವಿ.

Subscribe to:
Posts (Atom)