ನೇಗಿಲ ಹಿಡಿದ ಯೋಗಿಯ ಮೇಲೆ
ನೈಸ್-ಖೇಣಿ-ಗೌಡರ ಕರಿಚಾಯೆ
ಬಿಟ್ಟೇನೆಂದರೂ ಬಿಡದ ಮಾಯೆ
ರಸ್ತೆಯ ಮಾಡಲು ಹೊಲ ಬರಡಾಯಿತು
ಹಣವನು ಮಾಡಲು ನಾಲಗೆ ಹೊಲಸಾಯಿತು
ಅಯ್ಯಾ ಎಂದರೆ ಲಾಠಿ - ಕೋಳ
ಅದಕೇ ಗೊಣಗಿದೆ ಮುದಿತೋಳ
ಗೌಡರ ಸೊಂಟ, ಯಡ್ಡಿಯ ಚಡ್ಡಿ
ಶೋಭಾ-ರಾಧೆಯ ಚಿಂತೆಯ ಮುಂದೆ
ಭೂತಾಯಿಯ ಮಡಿಲಿಗೆ ಬೆಂಕಿಯನಿಟ್ಟರು
ಬಿತ್ತುಳುವುದ ಬಿಟ್ಟವನೆದೆಗೂಡಿನ ಹಿಂದೆ
ಮೊದ್ಮಣಿ
No comments:
Post a Comment