Pages

Tuesday, November 25, 2014

೧. ತಪ್ಪು ಮಾಡದವ್ರ್ ಯಾರವ್ರೇ..?

೧. ತಪ್ಪು ಮಾಡದವ್ರ್ ಯಾರವ್ರೇ..?
೨. ತಪ್ಪಾಗಿದ್ದೆಲ್ಲಾ ತಪ್ಪಾಗ್ಬೇಕಿಲ್ಲ.
೩. ಯಾರಿಗೂ ತೊಂದರೆ ಕೊಡದ ತಪ್ಪು ತಪ್ಪೇ ಅಲ್ಲ.
೪, ತಿಳಿಯದೇ ಮುಟ್ಟಿದ್ರೂ ಕೆಂಡ ಸುಡುತ್ತೆ.  ತಿಳಿಯದೇ ಮಾಡಿದರೂ ತಪ್ಪು ತಪ್ಪೇ..!
೫. ಅತ್ಯಂತ ಕೆಟ್ಟ ಸಮಯದಲ್ಲೇ ತಪ್ಪು ಆಗಿಬಿಡುತ್ತೆ.
೬. ತಪ್ಪು ತಪ್ಪನ್ನೇ ಮರಿ ಹಾಕುತ್ತೆ.
೭. ಕಂಪ್ಯೂಟರ್ನಲ್ಲಿ ಮಾಡಿದ ತಪ್ಪು ಬೇಗ ಹರಡುತ್ತೆ, ಜಾಸ್ತಿ ತೊಂದರೆ ಕೊಡುತ್ತೆ.
೮. ಕೆಲಸ ಮಾಡ್ಬೇಕಿದ್ದಾಗ ಕೈ ಕಟ್ಟಿ ಕೂತರೂ,  ಅದು ತಪ್ಪೇ.....!!
೯. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೇ ಹೋಗುವುದು ಅದಕ್ಕಿಂತಾ ದೊಡ್ಡ ತಪ್ಪು.
೧೦. ತಪ್ಪಿನಿಂದ ಪಾಠ ಕಲಿಯದಿದ್ದರೆ ಅದೇ ನಿಜವಾದ ತಪ್ಪು.
ಅಬ್ಬಾ ಏನು ತಪ್ಪಿನ ಮೇಲೆ ಇಷ್ಟೊಂದು ಕೋಟ್ ಬರೆದಿದ್ದೇನೆ ಎಂದು ಕೊಂಡಿರಾ..? ಇವು ನಾವು ನೀವೆಲ್ಲರೂ ಕೇಳಿ ಕ್ಲೀಷೆಯಾಗಿರಬಹುದಾದ ಸವಕಲು ಕೋಟ್ ಗಳೇ ಇರಬಹುದು.  ಆದರೆ ಇಂದು ಇವನ್ನು "ಟೆಕ್ ಟಾರ್ಗೆಟ್" ಅಂತರ್ಜಾಲ ಪತ್ರಿಕೆಯಲ್ಲಿ ಓದಿದಾಗ, ಹಾಗೇ ಕನ್ನಡಕ್ಕಿಳಿಸಿ ನಿಮ್ಮ ಜೊತೆ ಹಂಚಿಕೊಳ್ಳಬೇಕೆನೆಸಿತು .

ಮೂಲ ಲೇಖನ ಇಲ್ಲಿದೆ.  ಮೇಲಿನ ಕೋಟ್ ಗಳಿಗೆ ನಾನು ವಿವರಣೆ ನೀಡಿಲ್ಲ.. ನಿಮ್ಮದೇ ವಿವರಣೆ ಇದ್ದರೆ ಚೆನ್ನ ಎಂದುಕೊಂಡಿದ್ದೇನೆ. ದಯವಿಟ್ಟು ಪ್ರತಿಕ್ರಿಯಿಸಿ.

Thursday, November 13, 2014

ಕಸ್ತೂರಿ ನಿವಾಸ - ಅಪ್ರಸ್ತುತ ಪ್ರಸಂಗವೊಂದರ ಹರಟೆ

ಕಸ್ತೂರಿ ನಿವಾಸ ನೋಡಿ ಬಂದ ನಮಗೆ ಹೊಸ ಹೊಸ ಹೊಳಹುಗಳು ಹೊಳೆವಂತೆ, ಹೊಸ ಪ್ರಶ್ನೆಗಳೂ ಮೂಡುವುದು ಸಹಜ,

ಇಂದಿನ  ವಾಣಿಜ್ಯೀಕರಣದ ದಿನಗಳಲ್ಲಿ ನನ್ನ ತಲೆಗೆ ಹೊಕ್ಕ ಒಂದು ತಲೆಕೊರುಕ ಹುಳದ ಪ್ರಶ್ನೆ ಹೀಗಿತ್ತು.

೧೯೭೧ರಲ್ಲಿ ನಿರ್ಮಾಣವಾದಾಗ ಚಿತ್ರಕ್ಕೆ ಖರ್ಚಾದದ್ದು  ೩.೭೫ ಲಕ್ಷ ಆದರೆ ಇವತ್ತಿನ ಕಾಲಮಾನಕ್ಕೆ ಅದರ ಮೌಲ್ಯ ರುಪಾಯಿಗಳಲ್ಲಿ ಎಷ್ಟಾಗಬಹುದು.?

ಭಲೇ, ಭಲೇ ಸಾಹಿತ್ಯ ಸಂಸ್ಕೃತಿಗಳಿಗೆ ಮೌಲ್ಯ ಕಟ್ಟುವ ಬದಲು ಇದೇನಪ್ಪಾ ತರಲೆ ಲೆಕ್ಕಾಚಾರ ಎಂದಿರೋ..? ಅದು ನಿಮಗೆ ಬಿಟ್ಟ ವಿಷಯ.  ನಾನಂತೂ ಒಂದು ಲೆಕ್ಕ ಹಾಕಿಬಿಟ್ಟೆ.  ಅದನ್ನು ಓದುವ ವ್ಯವಧಾನವಿದ್ದರೆ ಮುಂದೆ ಓದಿ. ಇಲ್ಲವೆಂದಿರೋ ಇನ್ನಷ್ಟು ದಿವಸ ಸ್ವಲ್ಪ ಕಾಯಿರಿ.

ಇಂದಿನಂತೆಯೇ ಅಂದೂ ಹಣ ಹೂಡಿಕೆಗೆ ಇದ್ದ ಮಾರ್ಗಗಳು ನಾಲ್ಕು.

೧. ರಿಯಲ್ ಎಸ್ಟೇಟ್ ಅಂದರೆ ಭೂಮಿಯ ಮೇಲೆ ಹಣ ಹೂಡುವುದು.
೨. ಚಿನ್ನದ  ಮೇಲೆ ಹಣ ಹೂಡುವುದು
೩. ಯಾವುದಾದರೂ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಡುವುದು.
೪. ಉದ್ಯಮದಲ್ಲಿ  ತೊಡಗಿಸಿಕೊಳ್ಳುವುದು.

ಇಂದಿನ ಇನ್ನೊಂದು ಮಾರ್ಗವಾದ ಶೇರು ಅಥವಾ ಮ್ಯೂಚುಯಲ್ ಫಂಡ್ ಗಳು ಅಂದಿನ ದಿನದಲ್ಲಿ ಹೆಚ್ಚಾಗಿರಲಿಲ್ಲ. ಉದ್ಯಮದಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ನಿಷಿತ ಆದಾಯದ ಮಾರ್ಗವಲ್ಲವಾದ್ದರಿಂದ.,  ನಮ್ಮ ಲೆಕ್ಕಾಚಾರಕ್ಕೆ ಉದ್ಯಮದಲ್ಲಿ ತೊಡಗಿಕೊಳ್ಳುವುದನ್ನು ಮ್ಯೂಚುಯಲ್ ಫಂಡ್ ನ ಹೂಡಿಕೆ ಎಂದೇ ಪರಿಗಣಿಸೋಣ. 

ಈಗ ಲೆಕ್ಕಾಚಾರದ ವಿಷಯಕ್ಕೆ ಬರೋಣ.
ಮ್ಯುಚುಯಲ್ ಫಂಡುಗಳು ನೀಡುವ ಅತಿ ಹೆಚ್ಚಿನ ಆದಾಯವೆಂದರೆ, ವರ್ಷಕ್ಕೆ ಶೇಕಡಾ ೧೫ರ ಬಡ್ಡಿದರದ ಬೆಳವಣಿಗೆ.
ಈ ರೀತಿಯಲ್ಲಿ ಲೆಕ್ಕ ಹಾಕಿದರೆ ೧೯೭೧ ನೇ ಇಸವಿಯಲ್ಲಿ ತೊಡಗಿಸಿದ ೩.೭೫ ಲಕ್ಷ ಬಂಡವಾಳವು ಇಂದಿಗೆ ಸುಮಾರು ೧೫೨೭.೭೦  ಲಕ್ಷಗಳು ಅಂದರೆ ಸುಮಾರು ಹದಿನೈದೂಕಾಲು ಕೋಟಿಯಾಗುವುದು.

ಬ್ಯಾಂಕಿನ ನಿಶ್ಚಿತ ಠೇವಣಿಯ ಆದಾಯ ಸುಮಾರು ಶೇಖಡಾ ೮.  ಈ ರೀತಿಯ ಲೆಕ್ಕದಲ್ಲಿ ಅಂದಿನ ೩.೭೫ ಲಕ್ಷ ರೂಪಾಯಿಗಳ ಬೆಲೆ ಇಂದಿಗೆ ೧೦೨.೬೨ ಲಕ್ಷ ಅರ್ಥಾತ್ ಒಂದು ಕೋಟಿ ಎರಡೂವರೆ ಲಕ್ಷ.

ಇನ್ನು ೧೯೭೧ರಲ್ಲಿ  ಒಂದು ಗ್ರಾಂ ಚಿನ್ನದ ಬೆಲೆ ೨೦ ರೂಪಾಯಿಗಳು.  ೩.೭೫ ಲಕ್ಷದಲ್ಲಿ ಸುಮಾರು ೧೮,೭೫೦ ಗ್ರಾಂ. ಚಿನ್ನ ಕೊಂಡುಕೊಳ್ಳಬಹುದಾಗಿತ್ತು. ಇವತ್ತಿನ ಚಿನ್ನದ ಬೆಲೆಯನ್ನು ಸುಮಾರು ೨೫೦೦ ರೂ ಪ್ರತಿ ಗ್ರಾಮಿಗೆ ಎಂದುಕೊಂಡರೆ,   ೧೮,೭೫೦ ಗ್ರಾಂ. ಚಿನ್ನದ ಬೆಲೆ ೪೬೮.೭೫ ಲಕ್ಷ. ಅರ್ಥಾತ್ ನಾಲ್ಕು ಕೋಟಿ ಅರವತ್ತೆಂಟು ಲಕ್ಷದ ಎಪ್ಪತ್ತೈದು ಸಾವಿರ ರೂಪಾಯಿಗಳು.

ಇನ್ನು ಭೂಮಿಯಲ್ಲಿ ತೊಡಗಿಸಿದ ಹಣ ಹೇಗೆ ಹೆಚ್ಚಿಗೆಯಾಗುತ್ತದೆನ್ನುವುದನ್ನು ಊಹಿಸಿಕೊಳ್ಳುವುದಕ್ಕೆ ನಿಮಗೇ ಬಿಡುತ್ತೇನೆ.

ನನ್ನ ಈ ಲೆಕ್ಕಾಚಾರದಿಂದ ನನಗೆ ಮನವರಿಕೆಯಾದ ಅಂಶ ಎಂದರೆ, ಅಂದಿನ ದಿನದ ಚಿತ್ರಗಳ ತಯಾರಿಕಾ ವೆಚ್ಚವನ್ನು ಇಂದಿನ ಕಾಲದೊಂದಿಗೆ ಹೋಲಿಸಿದರೆ, ಅವೂ ಕೋಟಿ ಕೋಟಿ ಕರ್ಚು ಮಾಡಿ ತೆಗೆದಿರುವ ಚಿತ್ರಗಳೇ ಎನ್ನುವ ಅಂಶ ವಿದಿತವಾಗುತ್ತದೆ. ಇದು ಕನ್ನಡಿಗರನ್ನು ಹೆಮ್ಮೆ ಪಡುವಂತೆ ಮಾಡುವ ವಿಷಯವೆಂದೇ ಭಾವಿಸಿ ಇಲ್ಲಿ ಹಂಚಿಕೊಂಡಿದ್ದೇನೆ.

Wednesday, November 12, 2014

ನೀ ಬಂದು ನಿಂತಾಗ - ಎಂದೂ ಮರೆಯದ ಹಾಡು ಕಸ್ತೂರಿ ನಿವಾಸ ಚಿತ್ರದಿಂದ

ನೀ ಬಂದು ನಿಂತಾಗ ನಿಂತು ನೀ ನಕ್ಕಾಗ 
ನಕ್ಕು ನೀ ಸೆಲೆದಾಗ ಸೋತೇ ನಾನಾಗ
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ 
ನಕ್ಕು ನೀ ಸೆಲೆದಾಗ ಸೋತೇ ನಾನಾಗ

ವಾಸಂತಿ ನಲಿದಾಗ
ವಾಸಂತಿ ನಲಿದಾಗ  ಹಸಿರುಟ್ಟು ನಗುವಾಗ
ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
ಮುಗಿಲೊಂದು ಕರೆದಾಗ  ನವಿಲೊಂದು ಮೆರೆದಾಗ
ಒಡಲಲ್ಲಿ ಹೊಸದೊಂದು ನವಜೀವ ಬಂದಾಗ
ಕೈ ಕೈ ಸೋತಾಗ ಮನವೆರೆಡು ಬೆರೆತಾಗ
ಮಿಡಿದಂತ ಹೊಸರಾಗ ಅದುವೇ ಅನುರಾಗ .... ಬಾರಾ 
ನೀ ಬಂದು ನಿಂತಾಗ ನಿಂತು ನೀ ನಕ್ಕಾಗ 
ನಕ್ಕು ನೀ ಸೆಲೆದಾಗ ಸೋತೇ ನಾನಾಗ

ಜೇನಂಥ ಮಾತಲ್ಲಿ 
ಜೇನಂಥ ಮಾತಲ್ಲಿ  ಕುಡಿಗಣ್ಣ ಸಂಚಲ್ಲಿ 
ನಗುವೆಂಬ ಹೂಚೆಲ್ಲಿ ನಿಂತೆ ನೀ ಮನದಲ್ಲಿ
ಎದುರಾದೆ ಹಗಲಲ್ಲಿ ಮರೆಯದೆ ಇರುಳಲ್ಲಿ 
ನೀ ತಂದ ನೋವಿಗೆ ಕೊನೆಯೆಲ್ಲಿ ಮೊದಲೆಲ್ಲಿ
ಬಲುದೂರ ನೀ ಹೊಗೆ ನಾ ತಾಳೆ ಈ ಬೆಗೆ
ಬಾ ಬಾರೆ ಚೆಲುವೆ ಬಾರೆ ಒಲವೆ............... ಬಾರಾ

ಬಾಳೆಂಬ ಪತದಲಿ 
ಬಾಳೆಂಬ ಪತದಲಿ   ಒಲವೆಂಬ ರಥದಲ್ಲಿ
ಕನಸೆಲ್ಲ ನನಸಾಗಿ ನನಸೆಲ್ಲಾ ಸೊಗಸಾಗಿ
ಯುಗವೊಂದು ದಿನವಾಗಿ ದಿನನವೊಂದು ಚಾಣವಗಿ 
ನಮ್ಮಾಸೆ ಹೂವಗಿ ಇಂಪದ ಹಾಡಾಗಿ
ಕಹಿಯಲ್ಲಿ ಸಿಹಿಯಲ್ಲಿ ಮಳೆಯಲ್ಲಿ ಬಿಸಿಲಲ್ಲಿ
ಯಂದೆಂದೂ ಜೊತೆಯಾಗಿ ನಡೆವಾ ಒಂದಾಗಿ.............. ಬಾರಾ

Monday, October 27, 2014

Enabling selinux to accept different data directory for mysql.


 
mkdir  /opt/mysql

        cp –R –p /var/lib/mysql   /opt/mysql

        vi  /etc/my.cnf

                        (here changed the mysql default data_dir to /opt/mysql

 #datadir=/var/lib/mysql

datadir=/opt/mysql

/etc/init.d/mysql stop

semanage fcontext -a -t mysqld_db_t "/opt/mysql(/.*)?"

restorecon -R -v /opt/mysql/

/etc/init.d/mysql start

Tuesday, October 07, 2014

೨೦೧೪ ರ ಇಗ್ನೊಬಲ್ ಪ್ರಶಸ್ತಿಗಳ ವಿವರ

ನೋಬೆಲ್ ಪ್ರಶಸ್ತಿಯಂತೆ ಇಗ್ನೊಬಲ್ ಪ್ರಶಸ್ತಿಯನ್ನೂ ಪ್ರತಿವರ್ಷ ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಕ್ಟೋಬರ್ ಒಂದನೇ ತಾರೀಕಿನಂದು ನೀಡಲಾಗುತ್ತದೆ. ಜನತೆಯನ್ನು ನಗಿಸಿ ನಂತರ ಚಿಂತನೆಗೆ ಹಚ್ಚುವ ಸಂಶೋಧನೆಗಳಿಗೆ ಈ ಪ್ರಶಸ್ತಿ ಮೀಸಲು
ವರ್ಷದ ಸಾಧಕರು ಮತ್ತು ಅವರ ಸಂಶೋಧನೆಯ ಪಟ್ಟಿ ಇಲ್ಲಿದೆ.
 
ವಿಭಾಗ: ಧ್ರುವ ಪ್ರದೇಶ ವಿಜ್ಞಾನ
ಸಾಧಕರು:   ಐಗಿಲ್ ರೀಮರ್ಸ್ ಮತ್ತರು ಸಿಂದ್ರೆ ಎಫ್ತೆಸ್ಟಾಲ್
ಹಿಮಸಾರಂಗವು ಧ್ರುವ ಕರಡಿಯಂತೆ ವೇಷ ಧರಿಸಿದ ಮನುಜರನ್ನು ನೋಡಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂದು ಅಭ್ಯಾಸ ಮಾಡಿದ್ದಕ್ಕೆ.
ವಿಭಾಗ: ಕಲೆ
ಸಾಧಕರು:   ಮರಿಯಾನ ಡೆ ಟೊಮೊಸೊ, ಮೈಕೇಲ್ ಸರ್ದಾರೋ ಮತ್ತು ಪಾಲೋ ಲಿರಿಯಾ
ಉತ್ತಮವಾದ ಚಿತ್ರ ನೋಡುತ್ತಿರುವಾಗ ಲೇಸರ್ ಗನ್ ಹೊಡೆತಕ್ಕೆ ತುತ್ತಾದವರಿಗೂ, ಕೆಟ್ಟ (ಕುರೂಪಿ) ಚಿತ್ರ ನೋಡುತ್ತಿರುವಾಗ ಲೇಸರ್ ಗನ್ ಹೊಡೆತಕ್ಕೆ ತುತ್ತಾದವರಿಗೂ ಆಗುವ ನೋವಿನ ಪ್ರಮಾಣವನ್ನು ಸಾಪೇಕ್ಷವಾಗಿ ಅಳತೆ ಮಾಡಿದ್ದಕ್ಕಾಗಿ
ವಿಭಾಗ: ಜೀವ ವಿಜ್ಞಾನ
ಸಾಧಕರು:   ವ್ಲಸ್ತಿಮಿಲ್ ಹಾರ್ಟ್, ಪೆಟ್ರ ನೋವಕೋವ, ಎರಿಕ್ ಪಾಸ್ಕಲ್ ಮಾಲ್ಕೆಂಪರ್, ಸಬಿನ್ ಬೇಗಲ್, ವ್ಲಾಡಿಮಿರ್ ಹಂಜಲ್, ಮಿಲೋಸ್ ಜೆಸೆಕ್, ತೋಮಸ್ ಕುಸ್ತ, ವೆರೊನಿಕ ನೆಮ್ಕೋವ, ಜಾನ ಆದಂಕೊವ,  ಕಾತೆರಿನಾ ಬೆನೆದಿಕ್ಟೋವ, ಜರಸ್ಲಾವ್ ಸೆರ್ವೆನಿ ಮತ್ತು  ಹೈನೆಕ್ ಬುರ್ಡಾ
ನಾಯಿಗಳು ಮಲ-ಮೂತ್ರ ವಿಸರ್ಜನೆಯ ಸಮಯದಲ್ಲಿ ತಮ್ಮ ದೇಹವನ್ನು ಕಾಂತೀಯ ಉತ್ತರ-ದಕ್ಷಿಣ ದಿಕ್ಕಿನತ್ತ  ತಿರುಗಿಸಿಕೊಂಡಿರುತ್ತವೆ ಎನ್ನುವುದನ್ನು ಆಧಾರ ಸಮೇತ ದಾಖಲಿಸಿಕೊಂಡಿರುವುದಕ್ಕಾಗಿ 
ವಿಭಾಗ: ಅರ್ಥಶಾಸ್ತ್ರ
ಸಾಧಕರು:   ಇಟಲಿ ಸರ್ಕಾರದ ರಾಷ್ಟ್ರೀಯ ಅಂಕಿಶಾಸ್ತ್ರ ಸಂಸ್ಥೆ.
ರಾಷ್ಟ್ರೀಯ  ಆದಾಯದ ಲೆಕ್ಕಕ್ಕೆ ವೇಶ್ಯಾವಾಟಿಕೆ, ಮಾದಕ ದ್ರವ್ಯ ಮಾರಾಟ, ಕಳ್ಳಸಾಗಣೆ ಮುಂತಾದ ಕಾನೂನು ಬಾಹಿರ ಕೃತ್ಯಗಳಿಂದ ಬರುವ ಆದಾಯವನ್ನು ಗಣನೆಗೆ ತೆಗೆದುಕೊಂಡು,  ಯೂರೋಪಿನ ಇತರ  ದೇಶಗಳಿಗೆ ಮಾದರಿಯಾಗುವಂತಹ  ನಡೆಯನ್ನು ರೂಪಿಸಿದ್ದಕ್ಕೆ
ವಿಭಾಗ: ವೈದ್ಯಕೀಯ
ಸಾಧಕರು:   ಇಯಾನ್ ಹಂಪ್ರಿ, ಸೋನಾಲ್ ಸರಯ್ಯಾ, ವಾಲ್ಟರ್ ಬೆಲೆಂಕಿ ಮತ್ತು ಜೇಮ್ಸ್ ಡ್ವಾರ್ಕಿನ್
ಮೂಗಿನಿಂದ ಸುರಿಯುವ ರಕ್ತವನ್ನು ನಿಲ್ಲಿಸಲು, ಸಂಸ್ಕರಿಸಿದ ಹಂದಿ ಮಾಂಸದ ತುಣುಕನ್ನು ಮೂಗಿನಲ್ಲಿ ಅಡ್ಡಲಾಗಿ ಹಿಡಿದು ಚಿಕಿತ್ಸೆ ಮಾಡಬಹುದೆಂದು ತೋರಿಸಿದ್ದಕ್ಕೆ .
ವಿಭಾಗ: ನರವಿಜ್ಞಾನ
ಸಾಧಕರು:   ಜಿಯಂಗಾಂಗ್ ಲಿ, ಜುನ್ ಲಿ, ಲು ಫೆಂಗ್, ಲಿಂಗ್ ಲಿ, ಜೀ ತಿಯಾನ್ ಮತ್ತು ಕಾಂಗ್ ಲಿ
ಬ್ರೆಡ್ ಟೋಸ್ಟಿನ ತುಣುಕಿನಲ್ಲಿ ಜೀಸಸ್ ಮುಖ ನೋಡಿದವರ ಮಿದುಳಿನಲ್ಲಿ ನಡೆಯುವ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ
ವಿಭಾಗ: ಪೌಷ್ಟಿಕ ವಿಭಾಗ
ಸಾಧಕರು:   ರಾಕ್ವೆಲ್ ರುಬಿಯೋ, ಅನ್ನಾ ಜೋಫ್ರೆ, ಬೆಲೆನ್ ಮಾರ್ಟಿನ್, ತೆರೇಸಾ ಐಮೆರಿಕ್ ಮತ್ತು ಮಾರ್ಗರಿಟಾ ಗರಿಗಾ,
ಎಳೆಯ ಮಕ್ಕಳ ವಿಸರ್ಜನೆಯಿಂದ ಬೇರ್ಪಡಿಸಿದ ಲಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯವನ್ನು  ಸಂಸ್ಕರಿಸಿದ ಸಾಸೇಜ್ ತಯಾರಿಸಲು ಪ್ರೇರಕವಾಗಿ ಬಳಸಬಹುದಾದ ಗುಣ ಲಕ್ಷಣ ಗಳನ್ನು ಅಭ್ಯಾಸ ಮಾಡಿದ್ದಕ್ಕೆ.
ವಿಭಾಗ: ಭೌತ ಶಾಸ್ತ್ರ ವಿಭಾಗ
ಸಾಧಕರು:   ಕಿಯೋಶಿ ಮಬೂಚಿ, ಕೆನ್ಸಿ ತನಾಕ, ಡೈಕಿ ಉಜ್ಜಿಮಾ ಮತ್ತು ರಿನಾ ಸಕಾಯಿ.
ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟಾಗ ಬಾಳೆಹಣ್ಣಿನ ಸಿಪ್ಪೆಗೂ ಪಾದರಕ್ಷೆಗೂ ನಡುವಿನ ಘರ್ಷಣೆಯನ್ನು ಹಾಗೂ ಬಾಳೆಯಣ್ಣಿನ ಸಿಪ್ಪೆಗೂ  ನೆಲದ ನಡುವಿನ ಘರ್ಷಣೆಯನ್ನು ಅಳತೆ ಮಾಡಿದ್ದಕ್ಕೆ
ವಿಭಾಗ: ಮನಶಾಸ್ತ್ರ
ಸಾಧಕರು:   ಪೀಟರ್ ಕೆ ಜೋನಾಸನ್, ಆಮಿ ಜೋನ್ಸ್ ಮತ್ತು ಮಿನ್ನಾ ಲಯನ್ಸ್
ರಾತ್ರಿ ಹೊತ್ತಾಗಿ ಮಲಗುವ ವ್ಯಕ್ತಿಗಳು ಬೆಳಿಗ್ಗೆ ಬೇಗ ಏಳುವ ವ್ಯಕ್ತಿಗಳಿಗಿಂತ, ಹೆಚ್ಚು ಆತ್ಮರತಿಯವರೂ, ಹೆಚ್ಚು  ಚಾಲಾಕಿನವರೂ ಮತ್ತು ಮಾನಸಿಕವಾಗಿ ಹೆಚ್ಚು ವಿಕಲ್ಪವಾದವರೂ ಆಗಿರುತ್ತಾರೆ ಎನ್ನುವುದನ್ನು ಪ್ರಮಾಣೀಕರಿಸಲು ಸಾಕ್ಷಿಗಳನ್ನು ಸಂಗ್ರಹಿಸಿದ್ದಕ್ಕಾಗಿ
ವಿಭಾಗ: ಸಾರ್ವಜನಿಕ ಆರೋಗ್ಯ
ಸಾಧಕರು:   ಜರೋಸ್ಲಾವ್ ಫ್ಲೀಗರ್, ಜಾನ್ ಹ್ಯಾವ್ಲಿಸೆಕ್, ಜಿತ್ಕ ಹನುಸೋವಾ-ಲಿಂಡೋವಾ ಮತ್ತು ಡೇವಿಡ್ ಹನ್ಯೂರ್, ನರೇನ್ ರಾಮಕೃಷ್ಣನ್, ಲಿಸಾ ಸೇಫ಼್ರೇಡ್
ಬೆಕ್ಕನ್ನು ಸಾಕುವುದು ಮಾನಸಿಕ ಆರೋಗ್ಯಕ್ಕೆ ಹಾನಿಕರವೇ ಎಂದು ಸಂಶೋಧನೆಯನ್ನು ಮಾಡಿದ್ದಕ್ಕಾಗಿ
ಆಧಾರ :
 
 
o೧೨ ನೇ ಸಾಲಿನ ಪ್ರಶಸ್ತಿಗಳಿಗೆ ಇಲ್ಲಿ ನೋಡಿ: 
೨೦೧೦ ನೇ ಸಾಲಿನ ಪ್ರಶಸ್ತಿಗಳಿಗೆ ಇಲ್ಲಿ ನೋಡಿ    
೨೦೦೯ ನೇ ಸಾಲಿನ ಪ್ರಶಸ್ತಿಗಳಿಗೆ ಇಲ್ಲಿ ನೋಡಿ  

Friday, September 05, 2014

ಒಲವಿನ ತತ್ವ

ನದಿಯ ಸೇರಿ ಹರಿಯುವಲ್ಲಿ,
ಚಿಲುಮೆ ನೀರ ಮನಸು.
ಕಡಲ ಸೇರಿ ಬೆರೆಯುವಲ್ಲಿ,
ಹರಿವ ನದಿಯ ಕನಸು.

ಮೊಗ್ಗಿನ ಮಧುಗಂಧದಲೆಗೆ,
ಹಿಗ್ಗಿನ ತಂಗಾಳಿಯೊಸಗೆ.
ಒಗ್ಗಿ ನಾವು ಬಾಳುವುದೇ,
ಜಗದ ನಿಯಮವಲ್ಲವೇ?

ಶೃಂಗಗಿರಿಗಳೇರಿ ನಿಂತು,
ಸ್ವರ್ಗ ಸಂಗ ಪಡೆದಿವೆ.
ಶರಧಿಯಲೆಗಳೆಲ್ಲ  ನಲಿದು,
ಭರತ ನಾಟ್ಯವಾಡಿವೆ.

ಧರೆಯ ಮುದ್ದು ಮುಖದ ಮೇಲೆ
ಸೂರ್ಯ ರಶ್ಮಿ ಚುಂಬನ
ಸಾಗರದ ನೀರಿನಲೆಗೆ
ಚಂದ್ರನಾಲಿಂಗನ

ಪುರುಷನೊಡನೆ ಪೃಕೃತಿ,
ಬೆರೆಯುವುದೇ ನಿರ್ಮಿತಿ !!
ಒಲ್ಲೆಯೆನುವೆಯಾದರೆ 
ಜಗದ ನಿಯಮವೇತಕೆ..!!?

 -- ಪಿ ಬಿ ಶೆಲ್ಲಿ ಯ ಲವ್ಸ್ ಫಿಲಾಸಫಿ ಕವನದ ಭಾವಾನುವಾದ. ಮೂಲ ಪದ್ಯ ಇಲ್ಲಿದೆ

Thursday, July 31, 2014

ವಸಂತ ಬಂದ -- ರಚನೆ ಬಿ.ಎಂ.ಶ್ರೀ.

ವಸಂತ ಬಂದ, ಋತುಗಳ ರಾಜ ತಾ ಬಂದ,
ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ,
ಚಳಿಯನು ಕೊಂದ, ಹಕ್ಕಿಗಳುಲಿಗಲೆ ಚಂದ,
ಕೂವು, ಜಗ್ ಜಗ್ ಪೂವ್ವೀ ಟೂವಿಟ್ಟವೂ  ||ಪ||

ಕುರಿ ನೆಗೆದಾಟ, ಕುರುಬರ ಕೊಳಲಿನೂದಾಟ,
ಇನಿಯರ ಬೇಟ; ಬನದಲಿ ಬೆಳದಿಂಗಳೂಟ,
ಹೊಸಹೊಸ ನೋಟ, ಹಕ್ಕಿಗೆ ನಲಿವಿನ ಪಾಠ,
ಕೂವು, ಜಗ್ ಜಗ್ ಪೂವ್ವೀ ಟೂವಿಟ್ಟವೂ ||೧||

ಮಾವಿನ ಸೊಮ್ಪು, ಮಲ್ಲಿಗೆ ಬಯಲೆಲ್ಲ ಕಂಪು,
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು, ಹಕ್ಕಿಗಳುಲುಹಿನ ಪೆಂಪು,
ಕೂವು, ಜಗ್ ಜಗ್ ಪೂವ್ವೀ ಟೂವಿಟ್ಟವೂ

ಬಂದಾ ವಸಂತ, ನಮ್ಮ ರಾಜಾ ವಸಂತ.

Tuesday, July 22, 2014

Romeo's Last words -- Act 5, Scene 3, Page 5



How oft when men are at the point of death
Have they been merry, which their keepers call
A lightning before death! Oh, how may I
Call this a lightning?—

O my love, my wife!
Death, that hath sucked the honey of thy breath,
Hath had no power yet upon thy beauty.
Thou art not conquered. Beauty’s ensign yet
Is crimson in thy lips and in thy cheeks,

And death’s pale flag is not advancèd there.—
Tybalt, liest thou there in thy bloody sheet?
O, what more favor can I do to thee,
Than with that hand that cut thy youth in twain
To sunder his that was thine enemy?
Forgive me, cousin.—Ah, dear Juliet,
Why art thou yet so fair? Shall I believe
That unsubstantial death is amorous,
And that the lean abhorrèd monster keeps
Thee here in dark to be his paramour?
For fear of that, I still will stay with thee,
And never from this palace of dim night
Depart again. Here, here will I remain
With worms that are thy chamber maids. Oh, here
Will I set up my everlasting rest,
And shake the yoke of inauspicious stars
From this world-wearied flesh

Eyes, look your last.
Arms, take your last embrace. And, lips, O you
The doors of breath, seal with a righteous kiss
A dateless bargain to engrossing death.
(kisses JULIET, takes out the poison)
Come, bitter conduct, come, unsavoury guide.
Thou desperate pilot, now at once run on
The dashing rocks thy seasick, weary bark.
Here’s to my love! (drinks the poison) O true apothecary,
Thy drugs are quick. Thus with a kiss I die.

Dr. Raj and Bharati enacting the scene can be seen  here .

Monday, July 21, 2014

ಮರಿಮಲ್ಲಪ್ಪ ಶಾಲಾ ಪ್ರಾರ್ಥನೆ

ಓಂ ಶ್ರೀ ಗುರುಭ್ಯೋ ನಮಃ
ಹರಿ ಓಂ।।
ಶಂ ನೋ ಮಿತ್ರಃ। ಶಂ ವರುಣಃ।।
ಶಂನೋ ಭವತ್ಪರ್ಯಮಾ।।
ಶಂ ನ ಇಂದ್ರ ಬೃಹಸ್ಪತಿ ।।
ಶಂ ನೋ ವಿಷ್ಣು ರುರು ಕ್ರಮಃ।।
ಓಂ ನಮೋ ಬ್ರಹ್ಮಣೇ।। ನಮಸ್ತೇ ವಾಯು।।
ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ।।
ತ್ವಮೇವ ಪ್ರತ್ಯಕ್ಷಂ ಬ್ರಹ್ಮ ವದಿಷ್ಯಾಮಿ॥
ಸತ್ಯಂ ವದಿಷ್ಯಾಮಿ।। ಋತಂ ವದಿಷ್ಯಾಮಿ।।
ತನ್ಮಾವವತು।। ತದ್ವಕ್ತಾರವವತು।।
ಅವತು ಮಾಂ।। ಅವತು ವಕ್ತಾರಮ್
ಓಂ ಶಾಂತಿ: ಶಾಂತಿ: ಶಾಂತಿ: ।।

Wednesday, April 09, 2014

ಬಾಗಿ ನಿಂತ ಲತೆಗೆ.

ತರುವನರಸಿ ಬಳಲಿತೇನು
ಬಾಗಿನಿಂತ ಲತೆಯು
ಮನವತುಂಬಿ ನಿಂತಿತೇನು
ಮರೆಯಲಾಗದ ವ್ಯಥೆಯು

ಏಕೆ ಚಿಂತೆ ?  ಇರುವುದಂತೆ
ನಮ್ಮ ಪ್ರೇಮ ಕಾವಲು
ಬೇಕು-ಬೇಡ, ಬಿಸಿಲು-ಮೋಡ
ಎಲ್ಲ ಅದರ ಮೀಸಲು

ಪ್ರೇಮಗಂಗೆ ಹರಿಯುವಲ್ಲಿ
ಬರುವುದೆಲ್ಲ ಬೆತ್ತಲು
ಪ್ರೇಮದಿವ್ಯ ಬೆಳಗುವಲ್ಲಿ
ಇರುವುದೇನು ಕತ್ತಲು

ಹೇಮಗಂಗೆ ಬೆರೆಯುವಲ್ಲಿ
ನಗೆಯ ತುಂಬು ರಂಗವಲ್ಲಿ
ನನ್ನ ಮನದ ಭಿತ್ತಿಯಲ್ಲಿ
ಎಂದೆಂದಿಗೂ ಅರಳುತಿರಲಿ.


ಮೊದ್ಮಣಿ

Saturday, March 08, 2014

Women - do you need another name ?

Women - do you need another name

You swing light in cradle of stars and moon
Is it OK if we call you women?
Or do you need another name..?

You lactate down green hills to feed the plain.
Is it OK if we call you women?
Or do you need another name..?

You flip forelocks of vines with breeze, while rattling birdsong
Is it OK if we call you women?
Or do you need another name..?

You embrace the kid and its father, kindle lamps, nurse along.
Is it OK if we call you women?
Or do you need another name..?

Translation of "Sthree" by Rashtrakavi Sri G S Shivarudrappa.


ಆಕಾಶದ ನೀಲಿಯಲಿ ಚಂದ್ರ ತಾರೆ ತೊಟ್ಟಿಲಲಿ
ಬೆಳಕನಿಟ್ಟು ತೂಗಿದಾಕೆ. ನಿನಗೆ ಬೇರೆ ಹೆಸರು ಬೇಕೇ?
ಸ್ತ್ರೀ ಎಂದರೆ ಅಷ್ಟೇ ಸಾಕೆ

ಹಸುರನುಟ್ಟ ಬೆಟ್ಟಗಳಲಿ, ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸಿರ ನಗಿಸಿದಾಕೆ. ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಎಂದರೆ ಅಷ್ಟೇ ಸಾಕೆ.

ಮರಗಿಡ ಹೂ ಮುಂಗುರಳನು ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ. ನಿನಗೆ ಬೇರೆ ಹೆಸರು ಬೇಕೇ?
ಸ್ತ್ರೀ ಎಂದರೆ ಅಷ್ಟೇ ಸಾಕೆ.

ಮನೆಮನೆಯಲಿ ದೀಪವುರಿಸಿ, ಹೊತ್ತುಹೊತ್ತಿಗನ್ನವುಣಿಸಿ
ತಂದೆ ಮಗುವ ತಬ್ಬಿದಾಕೆ. ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ

ಜಿ. ಎಸ್. ಶಿವರುದ್ರಪ್ಪ

Wednesday, January 29, 2014

ಆಚೆ ಮನೆ ಸುಬ್ಬಮ್ಮನ ಏಕಾದಸಿ ಉಪವಾಸ

ಆಚೇ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ
ಎಲ್ಲೋ ಸ್ವಲ್ಪ ತಿಂತಾರಂತೆ
ಉಪ್ಪಿಟ್ಟು ಅವಲಕ್ಕಿ ಪಾಯ್ಸ
ಮೂರೋ ನಾಲ್ಕೋ ಬಾಳೆಹಣ್ಣು
ಸ್ವಲ್ಪ ಚಕ್ಕುಲಿ ಕೋಡುಬಳೆ
ಗಂಟೆಗೆರಡು ಸೀಬೆಹಣ್ಣು
ಆಗಾಗ ಒಂದೊಂದು ಕಿತ್ತಳೆ
ಮಧ್ಯಾಹ್ನಕೆಲ್ಲಾ ರವೆ ಉಂಡೆ
ಹುರಳಿಕಾಳಿನ ಉಸಲಿ
ಒಂದೊಂದ್ಸಲ ಬಿಸಿ ಸಂಡಿಗೆ
ಐದೋ ಆರೋ ಇಡ್ಲಿ
ರಾತ್ರಿ ಪಾಪ ಉಪ್ಪಿಟ್ಟೇ ಗತಿ
ಒಂದ್ಲೋಟ ತುಂಬ ಹಾಲು
ಪಕ್ಕದ ಮನೆಯ ರಾಮೇಗೌಡರ
ಸೀಮೆಹಸುವಿನ ಹಾಲು
ಸಿ.ಆರ್. ಸತ್ಯ ಬರೆದಿರುವ ಆಚೆ ಮನೆ ಸುಬ್ಬಮ್ಮನ ಏಕಾದಸಿ ಉಪವಾಸ