ಪ್ರೇಮಿಸುವುದೇಕೆ ನೀ ಅವಳ
ಎಂದು ಕೇಳುವವರಿದ್ದಾರೆ ಬಹಳ.
ಅವಳ ಸೊಂಟದ ಕುಲುಕು
ತುಂಬು ತೊಡೆಗಳ ಬಿಗಿಪು
ಹವಳ ತುಟಿಗಳ ಥಳುಕು
ದುಂಬಿ ಕಂಗಳ ಬೆಳಕು
ಚರ್ಮದೊಗಲಿನ ನುಣುಪು
ಕೇಶರಾಶಿಯ ಹೊಳಪು
ನಡಿಗೆಯಲ್ಲಿನ ಬಳುಕು
ಮಾತಿನೊಳಗಿನ ಮಿದುಪು
ಪ್ರೇಮಧಾರೆಯ ಹುರುಪು
ನನ್ನೆದೆಯಲಿ ಅನುರಾಗ ಮಿಡಿಸುವುದು
ಅನುದಿನವು ಪ್ರೀತಿಯನು ಸುರಿಸುವುದು
ಎಂದಷ್ಟೇ ಹೇಳುವೆನು ನಾನು.
ಜಸ್ಟಿನ್ ಹಚಿನ್ಸ್ ರ ಕವನದ ಭಾವಾನುವಾದ. ಮೂಲ ಕೆಳಗಿನಂತಿದೆ
If asked why I love her I would say,
It’s the sway in her hips,
the thickness in her thighs.
It’s the lust in her lips,
the love in her eyes.
It’s the softness of her skin,
the silk in her hair.
It’s the twist in her walk;
it’s the sweetness in her talk.
It’s the way she loves me,
that makes me love her each day.
That is what I would say.
Friday, September 28, 2012
Tuesday, September 25, 2012
ತಲ್ಲಣಿಸದಿರು ಕಂಡ್ಯ ತಾಳು ಮನವೇ
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕೇ ಸಂಶಯವಿಲ್ಲ ||ಪ||
ಬೆಟ್ಟದ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ ||೧||
ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ ||೨||
ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ
ಅಲ್ಲಲ್ಲೆ ಆಹಾರವನು ಇತ್ತವರು ಯಾರೊ
ಪುಲ್ಲಲೋಚನ ಕಾಗಿನೆಲೆಯಾದಿ ಕೇಶವನು
ಎಲ್ಲರನು ಸಲಹುವನು ಇದಕೇ ಸಂಶಯಬೇಡ ||೩||
ಎಲ್ಲರನು ಸಲಹುವನು ಇದಕೇ ಸಂಶಯವಿಲ್ಲ ||ಪ||
ಬೆಟ್ಟದ ತುದಿಯಲ್ಲಿ ಹುಟ್ಟಿದಾ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರು
ಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲು
ಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ ||೧||
ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲ
ಅಡಿಗಡಿಗೆ ಆಹಾರವಿತ್ತವರು ಯಾರೊ
ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ
ಬಿಡದೆ ರಕ್ಷಿಪನಿದಕೆ ಸಂದೇಹ ಬೇಡ ||೨||
ಕಲ್ಲೊಳಗೆ ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ
ಅಲ್ಲಲ್ಲೆ ಆಹಾರವನು ಇತ್ತವರು ಯಾರೊ
ಪುಲ್ಲಲೋಚನ ಕಾಗಿನೆಲೆಯಾದಿ ಕೇಶವನು
ಎಲ್ಲರನು ಸಲಹುವನು ಇದಕೇ ಸಂಶಯಬೇಡ ||೩||
Friday, September 21, 2012
Friday, September 14, 2012
ಚೆಂಗುಲಾಬಿ ಚೆಲುವು ನನ್ನೊಲವು
ವರುಷ ಋತುವಿನಲರಳಿ ನಿಂತ
ಹೊಸ ಚೆಂಗುಲಾಬಿ ಚೆಲುವು ನನ್ನೊಲವು.
ಹರುಷ ನೀಡುವ ಗೀತದೊಡಲಿನ
ಮಧುರ ಇನಿದನಿಯ ಇಂಚರವು ನನ್ನೊಲವು
ಶ್ವೇತ ಸುಂದರಿಯಿವಳು, ಸಣ್ಣಮೈಯವಳು,
ತನ್ನೊಲವಬಲೆಯಲ್ಲಿ ನನ್ನ ಹಿಡಿದಿಹಳು.
ಬತ್ತಿಹೋದರು ಸಪ್ತಸಾಗರ,
ಬತ್ತದಂತಿಹುದು ನನ್ನೆದೆಯ ಒಲವು
ಬತ್ತಿಹೋಗಲಿ ಸಪ್ತ ಸಾಗರ
ಕರಗಿಹೋಗಲಿ ಮೇರು ಗಿರಿಗಳೆಲ್ಲ
ಜೀವಕಣಗಳು ಹರಿಯುತಿರಲು
ನಿನ್ನೊಲವಿನದೆ ಬಲವು ಬದುಕಿಗೆಲ್ಲ.
ವಿದಾಯಗಳು ಚೆಲುವೆ,
ನೀನೊಬ್ಬಳೇ ಗೆಳತಿ ನನಗೆ
ಕಾಲದ ಪಯಣದಲಿ ಕ್ಷಣಿಕವೀ ವಿರಹ
ಬೇಗ ಬರುವೆ ನಾ ನಿನ್ನೆಡೆಗೆ
ಹತ್ತು ಸಾಸಿರ ಮೈಲು
ಮತ್ತೆ ಸಾವಿರ ತಡೆಯು
ದಾಟಿ ಬರುವೆನು ನಿನ್ನ ನೆನಪಿನೊಳಗೆ
ನಿನ್ನೊಲವ ತಂಪು ನೆರಳಿನಡಿಗೆ.
ರಾಬರ್ಟ್ ಬರ್ನ್ಸ್ ಕವಿಯ " My love is like red, red rose" ಕವನದ ಭಾವಾನುವಾದ

Thursday, September 13, 2012
ನೀನ್ ನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು
ಜಿ.ಪಿ. ರಾಜರತ್ನಂ ಅವರ ರತ್ನನ ಪದಗಳ ಒಂದು ಸುಂದರ ಪದ್ಯ.
ನೀನ್ ನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು
ಮಾಗೀಲ್ ಹುಲ್ಲ್ ಮೇಲ್ ಮಲಗಿದ್ದಂಗೆ ಮಂಜು
ಮಾಗೀ ಕುಗ್ತು, ಬೇಸಿಗೆ ನುಗ್ತು,
ಇದ್ಕಿದ್ದಂಗೆ ಮಾಯವಾಗೊಯ್ತು ಮಂಜು
ನಂಗೂ ನಿಂಗೂ ಎಂಗ್ ಅಗಲೋಯ್ತ್ ನಂಜು
ಶ್ರೀರಂಗಪಟ್ಟಣ್ ದ್ ತಾವ್ ಕಾವೇರಿ ಒಡ್ದಿ
ಎರಡ್ ಹೋಳಾಗಿ ಪಟ್ಣದ ಸುತ್ತಾ ನಡ್ದಿ
ಸಂಗಂದಲ್ಲಿ ಸೇರ್ಕೊಂದು ಮಳ್ಳಿ
ಮುಂದಕ್ಕೋದ್ದು ನಮ್ಗೆ ಙ್ನಾನದ್ ಪಂಜು
ಈಗಗಲಿದ್ರೇನ್ ಮುಂದ್ ನಾವ್ ಸೇರ್ತೀವ್ ನಂಜು.
ಹಗಲೋಡ್ಗ್ತೆ ರಾತ್ರೀ ಬಂತಂತಂಜಿ
ರಾತ್ರಿ ಮುಗ್ದೋದ್ರೆ ಹಗಲೇ ಅಲ್ವ ನಂಜಿ
ರಾತ್ರಿ ಬಿತ್ತು ಹಗಲೇ ಬತ್ತು
ಹೋಗೋದ್ ಮಳ್ಳಿ ಬರೋಕಲ್ವಾ ನಂಜಿ
ಆ ನೆಂಬ್ಕೆ ನನ್ ಜೀವ ಉಳ್ಸೋ ಗಂಜಿ
ನೀನ್ ನನ್ ಹಟ್ಟೀಗ್ ಬೆಳಕಂಗಿದ್ದೆ ನಂಜು
ಮಾಗೀಲ್ ಹುಲ್ಲ್ ಮೇಲ್ ಮಲಗಿದ್ದಂಗೆ ಮಂಜು
ಮಾಗೀ ಕುಗ್ತು, ಬೇಸಿಗೆ ನುಗ್ತು,
ಇದ್ಕಿದ್ದಂಗೆ ಮಾಯವಾಗೊಯ್ತು ಮಂಜು
ನಂಗೂ ನಿಂಗೂ ಎಂಗ್ ಅಗಲೋಯ್ತ್ ನಂಜು
ಶ್ರೀರಂಗಪಟ್ಟಣ್ ದ್ ತಾವ್ ಕಾವೇರಿ ಒಡ್ದಿ
ಎರಡ್ ಹೋಳಾಗಿ ಪಟ್ಣದ ಸುತ್ತಾ ನಡ್ದಿ
ಸಂಗಂದಲ್ಲಿ ಸೇರ್ಕೊಂದು ಮಳ್ಳಿ
ಮುಂದಕ್ಕೋದ್ದು ನಮ್ಗೆ ಙ್ನಾನದ್ ಪಂಜು
ಈಗಗಲಿದ್ರೇನ್ ಮುಂದ್ ನಾವ್ ಸೇರ್ತೀವ್ ನಂಜು.
ಹಗಲೋಡ್ಗ್ತೆ ರಾತ್ರೀ ಬಂತಂತಂಜಿ
ರಾತ್ರಿ ಮುಗ್ದೋದ್ರೆ ಹಗಲೇ ಅಲ್ವ ನಂಜಿ
ರಾತ್ರಿ ಬಿತ್ತು ಹಗಲೇ ಬತ್ತು
ಹೋಗೋದ್ ಮಳ್ಳಿ ಬರೋಕಲ್ವಾ ನಂಜಿ
ಆ ನೆಂಬ್ಕೆ ನನ್ ಜೀವ ಉಳ್ಸೋ ಗಂಜಿ
Wednesday, September 12, 2012
cert7 file generation
cert7 file generation
It is tricky sometime as the latest nss tools will generate cert8.db
If you need cert7 only because of some reason like ldap auth, or solaris lesser than 10 auth then you might be in need of generating cert7.db files only.
Here is a how you can do it with windows.
Download NSS with version 3.2.2 from ftp://ftp.mozilla.org/pub/mozilla.org/security/nss/releases
you can go to command prompt and set path as
set path=%PATH%;C:\path\to\nssfolder\lib
also you might need nspr 4.6 for missing dll and library files.
You can download it from http://ftp.mozilla.org/pub/mozilla.org/nspr/releases/
also from the same command prompt set the path to the lib directory of nspr
set path=%PATH%;c:\path\to\nsprfolder\lib
Now you can execute
certutil -A -n "certificateName" -t "C,C,C" -a -i certFile -d path
Where certificate Name is optional
certfile is the .pem certificate file and
path is the path where you want your cert7.db files to be stored.
Read more to understand what each of these functions do here.

Tuesday, September 04, 2012
ಈ ಕಾಲದ ಸರ್ಕಾರಿ ಜನ
ಒಂದೂರಿನಲ್ಲೊಬ್ಬ ರಾಜ.
ಬಹುಜನ ಭೋಜ.
ಅವನಿಗೊಬ್ಬ ಮಂತ್ರಿ.
ಬುದ್ದಿಯವಲನು ತಂತ್ರಿ.
ಅವರಿಗೊಂದು ಸಮಸ್ಯೆ.
ರಾಣಿಯ ಪ್ರೀತಿಯ ತಮ್ಮ
ಆ ರಾಜ್ಯದ ಅಧಿಕಾರಿ.
ಅವನೋ ಬಲು ಭ್ರಷ್ಟ.
ಜನಗಳ ದೂರು ಸಾವಿರಾರು.
ರಾಜನ ಕಷ್ಟ ಕೇಳುವರಾರು?
ಏಕೆಂದರೆ ಅವನು ರಾಣಿಯ ಪ್ರೀತಿಯ ತಮ್ಮ. ಅವನಿಗೆ ಏನೂ ಮಾಡಲಾಗದ ಸ್ಥಿತಿ ರಾಜನದು.
ಮಂತ್ರಿ ಹೇಳಿದ,
"ಪ್ರಯೋಜನವಿಲ್ಲ ಮಹಾರಾಜ,
ಬ್ರಷ್ಟತೆ ಅವನ ಹುಟ್ಟುಗುಣ.
ಲಂಚವೇ ಅವನ ಆಭರಣ.
ಎಲ್ಲಿ ಕಳಿಸಿದರು ಅವನನ್ನು,
ಹುಡುಕುತ್ತಾನೆ ಸಂಪಾದನೆಯ ದಾರಿಯನ್ನು."
ಮಹಾರಾಜನದೊಂದು ಪಟ್ಟು.
ಹುಡುಕಿದನೊಂದು ಉಪಾಯ.
ನಾನವನಿಗೆ ಏನೂ ಮಾಡಲಾರೆ.
ಆದರೆ ಅವನಿಂದ ನನ್ನ ಪ್ರಜೆಗಳಿಗಿರದಿರಲಿ ತೊಂದರೆ.
ಅವನಿಗಿರಲಿ ಸಮುದ್ರದ ಅಲೆಗಳ ಎಣಿಸುವ ಕೆಲಸ.
ಅದರಲ್ಲಿ ಅವನೇನು ಮಾಡುವ ಮೋಸ.
ಹುಸಿನಗೆ ನಕ್ಕ ಮಂತ್ರಿ.
ಕಾದು ನೋಡೋಣ ತಿಳಿಯುವುದು ಬೇಗ ಎಂದ.
ಮೊದಲ ವಾರದಲಿ ಬರಲಿಲ್ಲ ದೂರು.
ರಾಜನ ಮುಖದಲಿ ನಗೆ ಬಹು ಜೋರು.
ಕಳೆದಿಹವು ವಾರವಿನ್ನೆರಡು.
ಅದರೊಳಗೇ ದೂರು ಹನ್ನೆರಡು.
ಸಾಗರದಲಿ ಸ್ನಾನ ಮಾಡುವ ಜನ ತಪ್ಪಿಸುತ್ತಾರೆ ಲೆಕ್ಕ,
ಅದಕೇ ಕೊಡಬೇಕು ಲಂಚ ಎನ್ನುವುದೊಂದು.
ಸಾಗರದಲಿ ಸಂಚರಿಸುವ ನಾವೆಗಳೆಲ್ಲಾ
ಅಲೆಗಳ ಹರಿವಿಗೆ ತಡೆಯಾಗುವುದಲ್ಲಾ
ಹೋಗಬಾರದೆ ದೊರೆಗೆ ದೂರು?
ಹಾಗಿದ್ದರೆ ಬರಲಿ ನನ್ನಯ ಪಾಲು.
ತಲೆ ತಿರುಗಿತು ದೊರೆಗೆ,
ಕೆರಳಿಸಿ ನಕ್ಕಿತು ಮಂತ್ರಿಯ ನಗೆ.
ಉಕ್ಕಿದ ಸಿಟ್ಟಿಗೆ ಅಬ್ಬರಿಸಿ,
ಆದೇಶವ ನೀಡಿದ ಪರಿಜನಕೆ.
"ಅಧಿಕಾರಿಯ ತಲೆ ಕತ್ತರಿಸಿ,
ಮುಂಡವ ಚೂರು ಚೂರಾಗಿಸಿ.
ಸಮುದ್ರದ ಮೀನುಗಳೆಲ್ಲ
ತಿನ್ನಲಿ ಅವನ ದೇಹವನು."
ಆ ಮೀನನು ತಿಂದವರ ವಂಶಜರೆಲ್ಲಾ
ಈ ಕಾಲದ ಸರ್ಕಾರಿ ಜನರಂತೆ,
ಏನೇ ನಿಯಮವ ಮಾಡಿದರೂ
ಲಂಚವನಿವರು ಬಿಡರಂತೆ.

Wednesday, August 15, 2012
ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು
ನಿಮ್ಮ ಮನೆಗೊಂದು ಹೊಸ ನಲ್ಲಿ ಹಾಕಿಸಿಕೊಂಡಿರೆಂದುಕೊಳ್ಳಿ.
ನಿಮಗೆ ನಲ್ಲಿಯನ್ನು ಕೊಡುವ ಕಂಪನಿ, ಅದಕ್ಕೆ ಕೆಳಗಿನಂತೆ ಕೆಲವು ಕರಾರನ್ನು ಹಾಕುತ್ತದೆ ಎಂದುಕೊಳ್ಳೋಣ.
೧. ಈ ನಲ್ಲಿಯನ್ನು ನೀವು ಮಾತ್ರ ಬಳಸಬೇಕು, ಮನೆಗೆ ಬಂದ ಬೇರೆಯವರು ಬಳಸುವಂತಿಲ್ಲ.
೨. ಈ ನಲ್ಲಿ ಬಚ್ಚಲಮನೆಯಲ್ಲಿ ಹಾಕಿದ್ದರೆ ಅಲ್ಲಿ ಮಾತ್ರ ಉಪಯೋಗಿಸತಕ್ಕದ್ದು. ಪೈಪ್ ಹಾಕಿ ಬೇರೆ ಕಡೆಗೂ ಎಳೆಯುವಂತಿಲ್ಲ
೩. ಈ ನಲ್ಲಿಯನ್ನು ನೀವು ಬಾಯಿ ಮುಕ್ಕಳಿಸಲು ಮಾತ್ರ ಬಳಸಬೇಕು, ಬೇರೆ ಏನೂ ಮಾಡುವಂತಿಲ್ಲ.
೪. ಈ ನಲ್ಲಿಯನ್ನು ಸಾರ್ವಜನಿಕ ಬಳಕೆಗೆ ಬಿಡುವಂತಿಲ್ಲ.
೫. ಈ ನಲ್ಲಿಯನ್ನು ನೀವು ಬಿಚ್ಚಿ ರಿಪೇರಿ ಮಾಡುವಂತಿಲ್ಲ.
೬, ಈ ನಲ್ಲಿಗೆ ನೀವು ಬೇರೆ ಯಾವುದೇ ಸಲಕರಣೆ ಸೇರಿಸುವಂತಿಲ್ಲ.
೭. ಈ ನಲ್ಲಿಯನ್ನು ನೀವು ಬೇರೆಯವರಿಗೆ ಮಾರುವುದಕ್ಕಾಗಲೀ/ಕೊಡುವುದಕ್ಕಾಗಲೀ ಅನುಮತಿ ಇಲ್ಲ.
೮ . ನಲ್ಲಿಗೆ ಹಾಕುವ ನಟ್ಟು ಬೋಲ್ಟು ಮತ್ತು ಮುಂತಾದವುಗಳನ್ನ ಈ ನಲ್ಲಿಯ ವರ್ತಕನಲ್ಲಿಯೇ ಕೊಳ್ಳಬೇಕು. ಬೇರೆಯಲ್ಲಿ ಕೊಂಡರೆ ಅದು ಈ ನಲ್ಲಿಗೆ ಸರಿ ಹೊಂದುವುದಿಲ. ಸರಿ ಹೊಂದುವ ಹಾಗೆ ಮಾಡಿದರೆ ಅದು ಅಪರಾಧವಾಗುತ್ತದೆ.
ಈಗ ನೀವು ಈ ನಲ್ಲಿಯನ್ನು ಕೇವಲ ನೀವೊಬ್ಬರು ಮಾತ್ರ ಬಳಸಬೇಕು. ಅದರಲ್ಲೂ ಕೇವಲ ಬಾಯಿ ಮುಕ್ಕಳಿಸಲು ಬಳಸಬೇಕು. ಅದು ಬಿಟ್ಟು ನಿಮಗೆ ಬೇರೆ ಸ್ವಾತಂತ್ರವಿಲ್ಲ.
ಬಹುಶಃ ಇಂತಹುದೇ ಒಂದು ಸ್ಥಿತಿ ೧೯೮೦ರ ಸುಮಾರಿಗೆ ರಿಚರ್ಡ್ ಸ್ಟಾಲ್‍ಮನ್ ( ಜನ ಅವರನ್ನು ಆರೆಮ್ಮೆಸ್ ಎಂದೂ ಕರೆಯುತ್ತಾರೆ) ಅನುಭವಿಸಿದ್ದು. ಅವರ ಕಚೇರಿಯ ಪ್ರಿಂಟರ್ ಉಪಯೋಗಕ್ಕೆಂದು ಅವರು ಬರೆದ ಕೋಡ್ ಒಂದು, ಇನ್ನೊಂದು ಪ್ರಿಂಟರ್ ನಲ್ಲಿ ಕೆಲಸ ಮಾಡದಂತಾಯಿತು. ಆಗ ಈ ತಂತ್ರಾಂಶಗಳ ಮೇಲಿರುವ ನಿರ್ಬಂಧಗಳು ಅದರಲ್ಲೂ ತಂತ್ರಾಂಶದ ಕೋಡ್ ಅನ್ನು ಓದಲು ಇರುವ ನಿರ್ಬಂಧಗಳನ್ನು ತೆಗೆಯಬೇಕೆನ್ನುವ ಯೋಚನೆ ಅವರಿಗೆ ಬಂದಿತು.
ಇದಾದ ನಂತರ ೧೯೮೩ರಲ್ಲಿ ಗ್ನು ಎನ್ನುವ ಪ್ರಾಜೆಕ್ಟ್ ಅನ್ನು ಪ್ರಾರಂಭಿಸಿದ್ದು ಸ್ಟಾಲ್‍ಮನ್. (gnu). ಆಗಲೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಯೋಜನೆಯ ನಾಂದಿಯಾಯಿತು.
ಇಂಗ್ಲಿಷ್ ಭಾಷೆಯ (free) ಎನ್ನುವ ಪದಕ್ಕೆ ಉಚಿತ ಮತ್ತು ಸ್ವತಂತ್ರ ಎನ್ನುವ ಎರಡು ಅರ್ಥವಿದೆ. ಇಂಗ್ಲಿಷ್ ಭಾಷೆಯ ಫ಼್ರೀ ಸಾಫ಼್ಟ್‍ವೇರ್ (free software) ಅನ್ನು ಕನ್ನಡದಲ್ಲಿ ಉಚಿತ ತಂತ್ರಾಂಶ ಎನ್ನುವುದಕ್ಕಿಂತ ಅನಿರ್ಬಂಧಿತ ಅಥವಾ ಸ್ವತಂತ್ರ ತಂತ್ರಾಂಶ ಎನ್ನಬಹುದು.
ಈ ಹಿನ್ನೆಲೆಯಲ್ಲಿ ಆರೆಮ್ಮೆಸ್ ”free ಎನ್ನುವ ಪದದ ಅರ್ಥ, free-speech (ವಾಕ್-ಸ್ವಾತಂತ್ರ್ಯ) ನಲ್ಲಿ ರುವಂತೆ, free beer (ಉಚಿತ ಬೀರ್) ನಂತಲ್ಲ ಎನ್ನುತ್ತಾರೆ. ಇದರ ಒಟ್ಟಾರೆ ಅರ್ಥ, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳು, ಉಚಿತವಾಗಿ ದೊರೆಯಬೇಕೆಂದೇನಿಲ್ಲ. ಆದರೆ ಅವುಗಳ ಕೋಡ್ ಮುಕ್ತವಾಗಿ ಓದಲು, ಮತ್ತು ಅರ್ಥಮಾಡಿಕೊಳ್ಳಲು ಸಿಗಬೇಕೆಂದು.
ತಂತ್ರಾಂಶವೊಂದು ಮುಕ್ತ ಮತ್ತು ಸ್ವತಂತ್ರವಾಗಿರಲು ಬೇಕಾದ ಉಳಿದ ಸ್ವಾಂತಂತ್ರ್ಯಗಳೆಂದರೆ,
* ಸ್ವತಂತ್ರ ೦ : ತಂತ್ರಾಂಶವನ್ನು ಯಾವುದೇ ಉದ್ದೇಶಕ್ಕಾಗಿ ಬಳಸುವ ಸ್ವತಂತ್ರ.
* ಸ್ವತಂತ್ರ ೧ : ತಂತ್ರಾಂಶ ಹೇಗೆ ಕೆಲಸ ಮಾಡುತ್ತದೆಂದು ಅಭ್ಯಸಿಸುವ ಮತ್ತು ಅದನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಸ್ವತಂತ್ರ.
* ಸ್ವತಂತ್ರ ೨ : ಈ ತಂತ್ರಾಂಶದ ಪ್ರತಿಗಳನ್ನು ನೆರೆಹೊರೆಯವರೊಂದಿಗೆ ಹಂಚಿಕೊಳ್ಳುವ ಸ್ವತಂತ್ರ.
* ಸ್ವತಂತ್ರ ೩ : ತಂತ್ರಾಂಶಗಳನ್ನು ಉತ್ತಮ ಪಡಿಸುವ ಮತ್ತು ನಿಮ್ಮಿಂದ ಉತ್ತಮಗೊಂಡ ತಂತ್ರಾಂಶವನ್ನು ಪ್ರಕಟಿಸುವ (ಮತ್ತು ಸಮಾಜಕ್ಕೆ ಕೊಡುಗೆಯಾಗಿ ನೀಡುವ) ಸ್ವಾತಂತ್ರ್ಯ.
ಈ ಮೂಲ ಉದ್ದೇಶಗಳನ್ನೊಳಗೊಂಡ ತನ್ನದೇ ಒಂದು ಪರವಾನಗಿಯನ್ನು ಆರೆಮ್ಮೆಸ್ ರಚಿಸಿದರು. ಮತ್ತು ಇದನ್ನು ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್(ಜಿಪಿಎಲ್) ಎಂದು ಹೆಸರಿಸಿದರು. ಇದರ ಉತ್ತಮಗೊಂಡ ಭಾಗಗಳಾಗಿ ಜಿಪಿಎಲ್-೨ ಮತ್ತು ಜಿಪಿಎಲ್-೩ ಅನ್ನೂ ಅವರೇ ಅಭಿವೃದ್ದಿ ಪಡಿಸಿದರು.
ಈ ಲೈಸೆನ್ಸ್‍ಗಳು, ಮೂಲ ತಂತ್ರಾಂಶ ಮುಕ್ತವಾಗಿರುವುದಷ್ಟೇ ಅಲ್ಲದೆ, ಅದರ ಉತ್ತಮಪಡಿಸುವಿಕೆಗಳೂ, ಅಳವಡಿಕೆಗಳೂ ಕೂಡಾ ಮುಕ್ತವಾಗಿರುವಂತೆ ನೋಡಿಕೊಳ್ಳುವ, ವಿಶೇಷ ಕಾಪಿಲೆಫ಼್ಟ್ ವ್ಯವಸ್ಥೆಯನ್ನು ಹೊಂದಿವೆ.
ಇಂದು ೬೬ಕ್ಕೂ ಹೆಚ್ಚಿನ ಬಗೆಯ ಮುಕ್ತ ಲೈಸೆನ್ಸ್ ಗಳು ಲಭ್ಯವಿದೆ. ಗ್ನು ಜನರಲ್ ಪಬ್ಲಿಕ್ ಲೈಸೆನ್ಸ್ ಅಲ್ಲದೆ, ಗ್ನು ಲೆಸ್ಸರ್ ಪಬ್ಲಿಕ್ ಲೈಸೆನ್ಸ್. ಅಪಾಚೆ ಲೈಸೆನ್ಸ್. ಬಿ ಎಸ್ ಡಿ ಲೈಸೆನ್ಸ್, ಕಾಮನ್ ಪಬ್ಲಿಕ್ ಲೈಸೆನ್ಸ್, ಮೊಜಿಲ್ಲಾ ಪಬ್ಲಿಕ್ ಲೈಸೆನ್ಸ್,ಯುರೋಪಿಯನ್ ಪಬ್ಲಿಕ್ ಲೈಸೆನ್ಸ್. ಇವುಗಳಲ್ಲಿ ಪ್ರಮುಖವಾದುವು. ಪ್ರೊಪ್ರೈಟರಿ ಲೈಸೆನ್ಸ್ ಕಾರಣಗಳಿಂದಾಗಿ ದೈತ್ಯ ಶಕ್ತಿಯಾಗಿ ಬೆಳೆದಿರುವ ಮೈಕ್ರೋಸಾಫ್ಟ್ ಕಂಪನಿ ಕೂಡಾ, ಎಮ್.ಎಸ್ – ಪಿ ಎಲ್ ಎನ್ನುವ ಮುಕ್ತ ತಂತ್ರಾಂಶ ಲೈಸೆನ್ಸ್ ಅನ್ನು ಹೊಂದಿದೆ.
ಈ ಮುಕ್ತ ತಂತ್ರಾಂಶಗಳ ಒಂದು ಪ್ರಮುಖ ಲಕ್ಷಣ ಕಾಪಿ ಲೆಫ್ಟ್. ಕಾಪಿರೈಟ್ ಪದದೊಂದಿಗೆ ಆಟವಾಡಿ ಸೃಷ್ಟಿಯಾದ ಪದ. ಇದರ ಮೊದಲ ಬಳಕೆ ೧೯೭೬ರ ಟೈನಿ ಬೇಸಿಕ್ ಎನ್ನುವ ತಂತ್ರಾಂಶದಲ್ಲಿ ಬಳಕೆಯಾಗಿದ್ದನ್ನು ಕಾಣಬಹುದು. ಕಾಪಿರೈಟ್ ನ ಜೊತೆ ಬಳಕೆಯಾಗುವ ಸಾಮಾನ್ಯ ವಾಕ್ಯವಾದ all rights are reserved ಅನ್ನು all wrongs are reserved ಎಂದು ಅಲ್ಲಿ ಬಳಸಲಾಗಿದೆ. ಆದರೆ ಕಾಪಿಲೆಫ್ಟ್, ಕಾಪಿರೈಟ್ ಕಾಯಿದೆಯ ಅಂಶಗಳನ್ನೇ ಬಳಸಿಕೊಂಡು ತಂತ್ರಾಂಶವೊಂದು ತನ್ನೆಲ್ಲಾ ಮುಕ್ತತೆಯನ್ನು ಉಳಿಸಿಕೊಳ್ಳುವಂತಹ ವ್ಯವಸ್ಥೆಯನ್ನು ಹೊಂದಿದೆ. ಅಂದರೆ, ತಂತ್ರಾಂಶವೊಂದು ಬೇರೆಯವರಿಂದ ಉತ್ತಮಗೊಂಡಾಗ, ಅವರು ಅದನ್ನು ಮುಕ್ತತಂತ್ರಾಂಶವಾಗಿಯೇ ಉಳಿಸುವಂತಹ ರಕ್ಷಣೆ ಕಾಪಿರೈಟ್ ಕಾಯಿದೆಯಿಂದ ಇಲ್ಲಿ ದೊರೆಯುತ್ತದೆ. ಆದುದರಿಂದ ಮುಕ್ತ ಲೈಸೆನ್ಸ್ ಗಳನ್ನು, ಬಲಶಾಲಿ ಲೈಸೆನ್ಸ್ ಗಳು ಮತ್ತು ದುರ್ಬಲ ಲೈಸೆನ್ಸ್ ಗಳು ಎಂದು ಎರಡು ಬಗೆಯಾಗಿ ವಿಂಗಡಿಸಲಾಗಿದೆ. ಜಿಪಿಎಲ್-೩ ಬಲಶಾಲಿ ಲೈಸೆನ್ಸ್ ಆದರೆ, ಜಿಪಿಎಲ್-೨ ಮತ್ತು ಜಿಪಿಎಲ್ ದುರ್ಬಲ ಲೈಸೆನ್ಸ್ ಗಳು. ಜಿಪಿಎಲ್-೩ ತಂತ್ರಾಂಶ ತನ್ನೆಲ್ಲಾ ಬೆಳವಣಿಗೆಯೊಂದಿಗೆ ಕೂಡಾ ಮುಕ್ತವಾಗಿ ಉಳಿಯುವಂತೆ ರೂಪಿಸಲಾಗಿರುವ ವಿಶೇಷ ಪರವಾನಗಿ. ಇದನ್ನು ಜಿಪಿಎಲ್ ಮತ್ತು ಜಿಪಿಎಲ್-೨ ರಲ್ಲಿರುವ ನ್ಯೂನತೆಗಳಿಂದ ಹೊರಬರಲಿಕ್ಕಾಗಿಯೇ ರೂಪಿಸಲಾಯಿತು.
ಜಿಪಿಎಲ್-೩ ಲೈಸೆನ್ಸ್ ನ ಕೆಲವು ಮುಖ್ಯ ಆಂಶಗಳು
೧. ಜನರಲ್ ಪಬ್ಲಿಕ್ ಲೈಸೆನ್ಸ್ ನ ಅಡಿಪಾಯದ ಮೇಲೆ ನಿಂತಿದೆ
೨. ಮುಕ್ತ ತಂತ್ರಾಂಶಗಳನ್ನು ಪ್ರತಿಬಂಧಿಸುವ ಕಾನೂನುಗಳಿಂದ ರಕ್ಷಣೆ.
೩. ತಂತ್ರಾಂಶವನ್ನು ನಿಮ್ಮನುಕೂಲಕ್ಕೆ ತಕ್ಕಂತೆ ಮಾರ್ಪಡಿಸಿಕೊಳ್ಳುವ ಹಕ್ಕಿನ ರಕ್ಷಣೆ.
೪. ಪೇಟೆಂಟ್ ಗಳ ಮೂಲಕ ಎದುರಾಗುವ ಸಮಸ್ಯೆಗಳ ವಿರುದ್ದ ಸೂಕ್ತ ರಕ್ಷಣೆ.
೫. ವಿವಿಧ ಲೈಸೆನ್ಸ್ ಗಳು ಜಿಪಿಎಲ್-೩ ನ ಜೊತೆಗೆ ಹೊಂದಿರುವ ಸ್ವಾಮ್ಯತೆಯ ವಿವರಣೆ.
೬. ಹಲವಾರು ವಿಧಗಳ ಮುಕ್ತ ಸ್ವತಂತ್ರ ಲೈಸೆನ್ಸ್ ಗಳೊಂದಿಗೆ ಹೊಂದಾಣಿಕೆ.
೭. ತಂತ್ರಾಂಶದ ಕೋಡ್ ಹಂಚಲು ಹೆಚ್ಚಿನ ವಿಧಾನಗಳು
೮. ಕಡಿಮೆ ತಂತ್ರಾಂಶವನ್ನು ಹಂಚುವ ಅವಕಾಶ.
೯. ಜಾಗತಿಕವಾಗಿ ಅನ್ವಯವಾಗುವಂತಹ ಪರವಾನಗಿ.
೧೦. ತಪ್ಪುಗಳಾದಾಗ ತಿದ್ದಿಕೊಳ್ಳುವ ಅವಕಾಶ.
ಮುಕ್ತ ತಂತ್ರಾಂಶಗಳ ಬಗ್ಗೆ ಇರುವ ಇನ್ನೊಂದು ಬಹುದೊಡ್ಡ ತಪ್ಪು ಅಭಿಪ್ರಾಯವೆಂದರೆ ಅವು ಉಚಿತವಾಗಿ ಇರಬೇಕೆಂಬುದು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಉಚಿತವಾಗಿ ಇರಬೇಕೆನ್ನುವ ನಿಯಮವಿಲ್ಲ. ಇವುಗಳಲ್ಲಿ ತಂತ್ರಾಂಶದ ಕೋಡ್ ಅನ್ನು ಮುಕ್ತವಾಗಿ ಹಂಚಬೇಕೆಂಬ ನಿಯಮವಿದೆ ಅಷ್ಟೇ. ಉಚಿತವಾಗಿ ತಂತ್ರಾಂಶ ನೀಡುವುದು ಅದನ್ನು ಅಭಿವೃದ್ದಿ ಪಡಿಸಿದವರಿಗೆ ಬಿಟ್ಟ ವಿಚಾರ. ೨೦೧೨ರ ಈ ಸ್ವಾತಂತ್ರ್ಯ ತಿಂಗಳಲ್ಲಿ, ಈ ಲೇಖನದ ಓದಿ, ಸ್ವತಂತ್ರ ತಂತ್ರಾಂಶಗಳನ್ನು ಪ್ರೋತ್ಸಾಹಿಸಿ.

Tuesday, August 14, 2012
Disable Oracle's password expiry
ALTER PROFILE DEFAULT LIMIT
FAILED_LOGIN_ATTEMPTS UNLIMITED
PASSWORD_LIFE_TIME UNLIMITED;
To turn off the auditing.
NOAUDIT ALL; DELETE FROM SYS.AUD$;
Wednesday, August 08, 2012
Increasing the swap size of the machine
Increasing the swap size of the machine
dd if=/dev/zero of=/.swapfile bs=1M count=1024
mkswap -v1 /.swapfile
swapon /.swapfile

Subscribe to:
Posts (Atom)