Pages

Thursday, December 22, 2011

A text modifier script

The task was to
1. get the first letter of the second column and complete third column of a text file
2. convert everything to lower case
3. Combine them to form a single word

So I did the following

cat file1 | awk '{print $2}' | cut -c1 | tr '[A-Z]' '[a-z]' > first
cat file1 | awk '{print $3}' | tr '[A-Z]' '[a-z]' > second
paste first second | awk '{print $1$2} > merged

Monday, December 05, 2011

Adding hours in M$ excel

Some time you need to convert AM to PM in excel.
Then the following formula can come handy

If cell e5 contains time as 4:00 AM  Then

=e5+Time(12,0,0)  will return  16:00 hrs

similary you can do add and subtract operations on the time format in cell

Tuesday, October 18, 2011

Who will lead us to winning in this world and eternal living

A recent discussion with a good friend of mine, turned out to be about the naming of infants.  The names, at times nouns and act as an adjective sometimes.    The names Lakshmi, Lakshiputra, Kubera are synonymous with wealth.  Saraswathi, is synonymous with knowledge, Sahana is having lot of patience, Dheera means a courageous person and so on.

We often see the personality of people differs drastically from their names. Some people believe that names actually effect the future of the kids, though not sure whether it is positive or negative

The discussion sparked off with the names of our respective children. My daughter’s name is Pritha, which means daughter of the mother earth and one having lots of patience. But my little one has absolutely no indication of patience. My friend’s son is named Nakul which means to be fast, but the boy by nature  kinda lazy!

This made me curious about the names of the Pandava brothers. Five of them- Yudhishtira, Bheema, Arjuna, Nakul and Sahadeva ,each one with a special power and skill

Following is a description of their personalities from Wikipedia:

Yudhisthira's true prowess was shown in his unflinching adherence to satya (truth) and dharma (righteousness). Bheema is strong, equal to ten thousand elephants, well-trained and active. Arjuna, whose name means 'bright', has an acute sense of duty. Nakula is well known for horse caring skills, devastating handsomeness and Sahadeva having special abilities to care for cows and has high levels of  intelligence.

This consideration immediately made me think how the five Pandava brothers symbolize an organization

Pandavas are lead by Yudhishtira, adhering to Sathya and dharma. Organisations must stick to policies, made in fairness. 

Bheema’s power and speed is needed for an organization to spread its operations.

Arjuana’s sense of duty keeps the organization united and working towards achieving the same goal. 

Nakula’s ability of horse keeping, is the ability of an organization for logistics and Sahadeva’s ability of cattle rearing, symbolizes feeding the organization, in other words making resources aka employees healthy and happy.

Policies, Power, Sense of duty, careful logistic and happy soldiers are winning combination of any army including the modern army of corporate world

But we still remain with a million dollar question, who  will lead us to winning both in this world and in eternal living, as pandavas are lead by Krshna.

Monday, August 29, 2011

Sample TC config for BW control using HTB

tc qdisc add dev eth0 root handle 1: htb default 12
tc class add dev eth0 parent 1:1 classid 1:10 htb rate 512kbit ceil 1024kbit
tc class add dev eth0 parent 1:1 classid 1:20 htb rate 256kbit ceil 512kbit


tc filter add dev eth0 protocol ip parent 1:0 prio 1 u32 match ip dst 10.20.10.80 flowid 1:10
tc filter add dev eth0 protocol ip parent 1:0 prio 1 u32 match ip dst 10.20.10.85 flowid 1:20

### egress

tc qdisc add dev eth1 root handle 1: htb default 12
tc class add dev eth1 parent 1:1 classid 1:10 htb rate 512kbit ceil 1024kbit
tc class add dev eth1 parent 1:1 classid 1:20 htb rate 256kbit ceil 512kbit

tc filter add dev eth1 protocol ip parent 1:0 prio 1 u32 match ip src 10.20.10.80 flowid 1:10
tc filter add dev eth1 protocol ip parent 1:0 prio 1 u32 match ip src 10.20.10.85 flowid 1:20

Thursday, August 18, 2011

ಕ್ಯಾಥೆಡ್ರಲ್ ಅಂಡ್ ಬಜಾರ್

ಮುಕ್ತ ತಂತ್ರಾಂಶ ಜನಪ್ರಿಯವಾಗುತ್ತಿರುವ ಈ ಸಮಯದಲ್ಲಿ ಮುಕ್ತ ತಂತ್ರಾಂಶವೆಂದರೇನೆಂಬುದನ್ನು ಅರಿತುಕೊಂಡರಷ್ಟೇ ಸಾಲದು. ಮುಕ್ತ ತಂತ್ರಾಂಶದ ಬೆಳವಣಿಗೆ ಅಭಿವೃದ್ಧಿಯ ರೀತಿಗೂ, ಇತರೆ ತಂತ್ರಾಂಶಗಳ ಅಭಿವೃಧ್ಧಿಯ ರೀತಿಗೂ ಇರುವ ವ್ಯತ್ಯಾಸಗಳನ್ನೂ ತಿಲಿದುಕೊಳ್ಳಬೇಕು. ಅದು ಮುಕ್ತ ತಂತ್ರಾಂಶವನ್ನು ನಾವು ಬಳಸಬೇಕೇ ಬೇಡವೇ ಎನ್ನುವ ನಿರ್ಧಾರ ತೆಗೆದುಕೊಳ್ಳುವಲ್ಲಿನ ಮೊದಲ ಹೆಜ್ಜೆ. ಏಕೆಂದರೆ, ಇದು ತಂತ್ರಾಂಶಗಳ ನಿಖರತೆ, ಸಾಧ್ಯತೆ, ಮತ್ತು ಬಳಕೆಯ ಯೋಗ್ಯತೆಗಳ ಬಗೆಗಿನ ಮಾಪನವನ್ನು ಉಪಯೋಗಿಸಲು, ಮೂಲಭೂತ ಅವಶ್ಯಕತೆಯಾಗಿದೆ. ಮುಕ್ತತಂತ್ರಾಂಶವಾದಿಗಳ ಸಾಲಿನಲ್ಲಿ ಅಗ್ರ ಸ್ಥಾನದಲ್ಲಿರುವ ಎರಿಕ್ ಸ್ಟೀವನ್ ರೇಮಾಂಡ್, ಇದರ ಬೆಳವಣಿಗೆಯ ರೀತಿಯನ್ನು ತನ್ನದೇ ಆದ ಫ಼ೆಚ್ ಮೇಲ್ ಪ್ರಾಜೆಕ್ಟಿನಲ್ಲಿ ಉಪಯೋಗಿಸಿಕೊಂಡು, ಆ ಅನುಭವದಿಂದ ಬರೆದ ಮೂವತ್ತೈದು ಪುಟಗಳಷ್ಟಿರುವ ಒಂದು ಸುಂದರ ಪುಸ್ತಕ "ಕ್ಯಾಥೆಡ್ರಲ್ ಅಂಡ್ ಬಜ಼ಾರ್". ನಾನಿಲ್ಲಿ ಈ ಪುಸ್ತಕದಲ್ಲಿ ಅವನು ಹೇಳಿರುವ ಪಾಠಗಳನ್ನು ಕನ್ನಡಕ್ಕೆ ಅನುವಾದ ಮಾಡಲು ಯತ್ನಿಸಿದ್ದೇನೆ. ಮತ್ತು ಪೂರ್ವಭಾವಿಯಾಗಿ ಕ್ಯಾಥೆಡ್ರಲ್ (ದೇಗುಲ ಮಾದರಿ) ಮತ್ತು ಬಜಾರ್ (ಸಂತೆಯ ಮಾದರಿ)ಯ ಬಗ್ಗೆ ಲೇಖಕನ ಅನಿಸಿಕೆಗಳನ್ನು ಕನ್ನಡಿಸಿದ್ದೇನೆ. ದೇಗುಲ ಮಾದರಿಯೆಂದರೆ, ದೇಗುಲ ಕಟ್ಟುವಾಗಿನಿಂದ ಹಿಡಿದು, ಕಟ್ಟಿದ ನಂತರ ಅಲ್ಲಿ ಸೇರುವ ಜನ, ಅವರನ್ನು ನಿರ್ದೇಶಿಸುವ ಜನ, ಕಾರ್ಯಕ್ರಮದ ರೂಪರೇಷೆಗಳು, ಆಚರಣೆಗಳು, ಎಲ್ಲಕ್ಕೂ ಎಲ್ಲರಿಗೂ ನಿಯಮಾವಳಿಗಳಿರುತ್ತವೆ. ಬಹಳಷ್ಟು ರಹಸ್ಯಗಳು ಅಲ್ಲಿ ಜತನದಿಂದ ಕಾಪಾಡಲ್ಪಡುತ್ತವೆ. ಅವನ್ನು ಮೀರುವುದು ಅಸಾಧ್ಯ. ಆದರೆ ಸಂತೆ ನೆರೆಯಲು ಅಲ್ಲಿ ಅವಶ್ಯಕತೆಯೊಂದಿದ್ದರೆ, ಮುಂದೆ ಮಿಕ್ಕೆಲ್ಲವನ್ನು ಪರಿಸರವೇ ಸೃಷ್ಟಿಸುತ್ತದೆ. ಅಷ್ಟೇ ಅಲ್ಲ. ಸಂತೆಯಲ್ಲಿ ಸೇರುವ ಮಾರುವವರು, ಕೊಳ್ಳುವವರು, ಮಧ್ಯಗಾರರು, ಇವರೆಲ್ಲ ತಂತಮ್ಮ ಅಭಿಪ್ರಾಯಗಳಂತೆ ವರ್ತಿಸಿದರೂ, ಅವರನ್ನು ಹಿಡಿದಿಡುವ ನಿಯಮಗಳು ತನ್ನಂತಾನೇ ಮೂಡಿ ಬರುತ್ತವೆ. ಆ ನಿಯಮಗಳ ಮುಖ್ಯ ಉದ್ದೇಶ ಸಂತೆ ಯಶಸ್ವಿಯಾಗುವುದು. ಅಲ್ಲಿ ರಹಸ್ಯಗಳಿಗೆ ಜಾಗವಿಲ್ಲ. ಎಲ್ಲವೂ ಎಲ್ಲರಿಗೂ ಗೊತ್ತು. ಆದರೆ ಸಂತೆಯನ್ನು ನಿರ್ದೇಶಿಸುವ ಕಾರ್ಯಸೂತ್ರವೊಂದು ಎಲ್ಲವನ್ನೂ ನಡೆಸುತ್ತದೆ. ಬನ್ನಿ ಇ.ಎಸ್.ಆರ್ ಏನು ಹೇಳುತ್ತಾರೋ ನೋಡೋಣ.

"
ಮುಕ್ತ ತಂತ್ರಾಂಶದ ಬಹು ಮುಖ್ಯ ಅಂಶವೆಂದರೆ, ಅದರ ಬೆಳವಣಿಗೆಯಲ್ಲಿ ಭಾಗಿಯಾಗುವ ಸಮೂಹದ ವ್ಯಾಪಕತೆ. ಭೂಗೋಳದ ಯಾವುದೇ ಭಾಗದಿಂದ ಸ್ವಯಿಚ್ಛೆ ಮಾತ್ರದಿಂದಲೇ ಅಂತರ್ಜಾಲದ ಮೂಲಕ ಸೇರಿಕೊಂಡಿರುವ ಈ ಸಮೂಹ ನಿಜವಾಗಿಯೂ, ಗುಣಮಟ್ಟದ ತಂತ್ರಾಂಶವೊಂದನ್ನು ಅಭಿವೃದ್ಧಿ ಪಡಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರವಾಗಿ ಲಿನಕ್ಸ್ ಇದೆ.


ದೇಗುಲವೊಂದನ್ನು ಕಟ್ಟುವ ಶಿಸ್ತಿನಲ್ಲಿ ದೊಡ್ಡ ತಂತ್ರಾಂಶಗಳನ್ನು ತಯಾರು ಮಾಡಬೇಕೆಂಬ ಅಭಿಪ್ರಾಯ ನನ್ನದಾಗಿತ್ತು. ಪ್ರತಿಯೊಂದಕ್ಕೂ ಒಬ್ಬೊಬ್ಬ ನುರಿತ ತಂತ್ರಙ್ಞ, ಬೇರೆಯವರೊಂದಿಗೆ ಸಂಪರ್ಕವಿಲ್ಲದೆ, ಕಣ್ಣಿಗೆ ಕಟ್ಟಿದ ಕುದುರೆಯಂತೆ ಗುರಿಯೆಡಗಿನ ಪಯಣ, ಎಲ್ಲಾ ಅಂಶಗಳೂ ಪೂರ್ಣಗೊಂಡ ಮೇಲಷ್ಟೇ ಬೀಟಾ ವರ್ಶನ್ ಬಿಡುಗಡೆ. ಇವೆಲ್ಲಾ ಇದ್ದರಷ್ಟೇ ಒಂದು ಆಪರೇಟಿಂಗ್ ಸಿಸ್ಟಮ್ ನಂತಹ ತಂತ್ರಾಂಶ ಅಭಿವೃದ್ದಿ ಪಡಿಸಲು ಸಾಧ್ಯ ಎಂದು ನಾನು ನಂಬಿದ್ದೆ. ಇದು ಬದಲಾದದ್ದು ೧೯೯೩ರಲ್ಲಿ ಲಿನಕ್ಸ್ ನನ್ನ ಗಮನಕ್ಕೆ ಬಂದಾಗ.

ಲಿನಸ್ ಟೋರ್ವಾಲ್ಡ್ಸ್ ಬೇಗ ಬೇಗ ಹೊಸ ವರ್ಷನ್ ಬಿಡುಗಡೆ, ಸಾಧ್ಯವಿರುವಷ್ಟು ಕೆಲಸವನ್ನೂ ಬೇರೆಯವರೊಂದಿಗೂ ಹಂಚಿಕೊಳ್ಳುವುದು. ಎಲ್ಲ ವಿಷಯಗಳಲ್ಲೂ ಮುಕ್ತ ಸಂವಹನ, ಇವು ದೇಗುಲ ಕಟ್ಟುವ, ನಡೆಸುವ ಶಿಸ್ತಿಗಿಂತಲೂ, ನೆರೆಯುವ ಸಂತೆಯಲ್ಲಿ ತನ್ನಂತಾನೇ ಒಡಮೂಡುವ ಶಿಸ್ತನ್ನು ಅನುಸರಿಸುತ್ತವೆ. ಸಂತೆಯಲ್ಲಿ ನೆರೆಯುವ ಪ್ರತಿಯೊಬ್ಬರಿಗೂ ಅವರದೇ ಕಾರಣಗಳಿರುತ್ತವೆ, ಆದರೆ ಒಟ್ಟಾರೆಯಾಗಿ ಎಲ್ಲ ಉದ್ದೇಶವೂ ಸಾಧನೆಯಾಗುತ್ತದೆ.

ಇದನ್ನು ಲಿನಕ್ಸ್ ಬೆಳವಣಿಗೆಯ ಮಾದರಿಯಲ್ಲಿ ಕಾಣಬಹುದು. ಯಾರಾದರೂ ಸರಿ, ಲಿನಕ್ಸ್ ನ ಬೆಳವಣಿಗೆಗೆ ತಮ್ಮ ಕಾಣಿಕೆ ಸಲ್ಲಿಸಬಹುದು, ಅವೆಲ್ಲವನ್ನೂ ಸೋಸಿ, ಬಲಿಷ್ಠ ಮತು ತಾಳಿಕೆಯ ತಂತ್ರಾಂಶವನ್ನು ನೀಡುವ ಜವಾಬುದಾರಿ ನಿರ್ವಹಣೆಯ ಹೊಣೆ ಹೊತ್ತ ನಾಯಕರದಾಗಿರುತ್ತದೆ. ವಸ್ತುಶಃ ಇಂತಹುದೊಂದು ಮಾದರಿ ಹರಿದು ಹಂಚಿ ಹೋಗದೆ, ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಹುದೇ ಎನ್ನುವ ಅನುಮಾನ ಪ್ರತಿಯೊಬ್ಬರಿಗೂ ಮೂಡುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದಾಗ ಈ ಮಾದರಿ, ದೇಗುಲದ ಶಿಸ್ತಿನ ಮಾದರಿಗಿಂತ ಎಷ್ಟೋ ಪಟ್ಟು ವೇಗದಲ್ಲಿ ತಂತ್ರಾಂಶ ಅಭಿವೃದ್ಧಿಗೆ ಸಾಧನವಾಗಿದೆ ಎಂದು ತಿಳಿದು ಬರುತ್ತದೆ.

ನಾನು ಈ ಮಾದರಿಯನ್ನು ಅರ್ಥ ಮಾಡಿಕೊಳ್ಳಲು ಶುರುವಾಗುವ ಹೊತ್ತಿಗೆ ೧೯೯೬ ಕಾಲಿಟ್ಟಿತ್ತು. ನನ್ನದೇ ಆದ ಫ಼ೆಚ್ ಮೇಲ್ ಎನ್ನುವ ತಂತ್ರಾಂಶದಲ್ಲಿ ನಾನಿದ್ದನ್ನು ಅಳವಡಿಸಿಕೊಂಡು ನೋಡಲು ನಿರ್ಧರಿಸಿದೆ. ಅದರಲ್ಲಿ ನಾನು ಕಲಿತ ಪಾಠಗಳ ಸಾರಾಂಶವಿದು.

೧. ಯಾವುದೇ ಉತ್ತಮ ತಂತ್ರಾಂಶಕ್ಕೆ ತಳಹದಿಯಾಗಿ ತಂತ್ರಾಂಶ ತಂತ್ರಙ್ಞನ ವೈಯುಕ್ತಿಕ ಕಾರಣಗಳಿರುತ್ತವೆ.
೨. ಉತ್ತಮ ಪ್ರೋಗ್ರಾಮರುಗಳಿಗೆ (ಕಾರ್ಯಲಿಪಿಕಾರರಿಗೆ) ಯಾವ ಪ್ರೋಗ್ರಾಮ್ (ಕಾರ್ಯಲಿಪಿ) ಬರೆಯಬೇಕೆಂದು ಗೊತ್ತಿರುತ್ತದೆ. ಆದರೆ ಅತ್ಯುತ್ತಮವಾದವರಿಗೆ ಯಾವುದನ್ನು ಮರುಬಳಕೆ ಮಾಡಬೇಕೆಂದು ತಿಳಿದಿರುತ್ತದೆ.
೩. ಯಾವುದನ್ನಾದರೂ ಕಸದ ಬುಟ್ಟಿಗೆ ಹಾಕಬೇಕೆಂದು ನಿಮಗನ್ನಿಸಿದರೆ, ಹೇಗಾದರೂ ಅದನ್ನು ಕಸದ ಬುಟ್ಟಿಗೆ ಹಾಕಿಯೇ ಹಾಕುತ್ತೀರಿ.
೪. ನಿಮ್ಮ ಮನೋಭಾವ ಸರಿಯಿದ್ದರೆ, ನಿಮಗೆ ಸರಿಯಾದ ಆಸಕ್ತಿಯಿರುವ ಸಮಸ್ಯೆಗಳೇ ನಿಮ್ಮ ಮುಂದಿರುತ್ತವೆ. (ಅಥವಾ ನಿಮ್ಮ ಮನೋಭಾವಕ್ಕೆ ತಕ್ಕಂತಹ ಸಮಸ್ಯೆಗಳಿಗೇ ನೀವು ಆದ್ಯತೆ ನೀಡುತ್ತೀರಿ.)
೫. ಪ್ರೋಗ್ರಾಮ್ ಒಂದರಲ್ಲಿ ನಿಮ್ಮ ಆಸಕ್ತಿ ಇಳಿಯಿತೆಂದರೆ, ಅದನ್ನು ನಿಮ್ಮಷ್ಟೇ ಕಾರ್ಯತತ್ಪರ ಉತ್ತರಾಧಿಕಾರಿಗೆ ವಹಿಸಿಕೊಡುವುದು ನಿಮ್ಮ ಕರ್ತವ್ಯ.
೬. ನಿಮ್ಮ ತಂತ್ರಾಂಶದ ಬಳಕೆದಾರರನ್ನು ನಿಮ್ಮ ಜೊತೆಗಾರ ತಂತ್ರಾಂಶ ತಙ್ಞರಂತೆ ನೋಡಿಕೊಂಡರೆ, ನಿಮ್ಮ ತಂತ್ರಾಂಶದ ಕೊರೆಗಳನ್ನು ಅಳೆಯುವ ಮತ್ತು ಅವನ್ನು ಮುಚ್ಚುವ ಅತ್ಯಂತ ಶೀಘ್ರ ವಿಧಾನ ನಿಮ್ಮದಾಗುತ್ತದೆ.
೭. ನಿಮ್ಮ ತಂತ್ರಾಂಶವನ್ನು ಶೀಘ್ರವಾಗಿ ಬಿಡುಗಡೆ ಮಾಡುತ್ತಿರಬೇಕು, ಮತ್ತು ಆದಷ್ಟು ಹೆಚ್ಚು ಬಾರಿ ಬಿಡುಗಡೆ ಮಾಡಬೇಕು. ಜೊತೆಗೆ ನಿಮ್ಮ ತಂತ್ರಾಂಶ ಬಳಕೆದಾರರ ಅಭಿಪ್ರಾಯಗಳನ್ನು ಗಮನಿಸುತ್ತಿರಬೇಕು.
೮. ನಿಮ್ಮ ತಂತ್ರಾಂಶದ ಬೀಟಾ ಅವೃತ್ತಿಯ ಸಾಕಷ್ಟು ಬಳಕೆದಾರರಿದ್ದು, ನಿಮ್ಮೊಂದಿಗೆ ಸಾಕಷ್ಟು ಮಂದಿ ತಂತ್ರಾಂಶ ಅಭಿವೃದ್ಧಿಯಲ್ಲಿ ಪಾಲುದಾರರಾಗಿದ್ದರೆ, ಸಮಸ್ಯೆಗಳನ್ನು ಬೇಗ ಗುರುತಿಸಬಹುದು, ಮತ್ತು ಅದರ ನಿವಾರಣೋಪಾಯವನ್ನು ಯಾರಾದರೊಬ್ಬರು ಶೀಘ್ರವಾಗಿಯೇ ಸೂಚಿಸುತ್ತಾರೆ. (ಇದರ ಇನ್ನೊಂದು ರೂಪ ಸಾಕಷ್ಟು ಸಂಖ್ಯೆಯ ಬಳಕೆದಾರರಿದ್ದರೆ, ಎಲ್ಲಾ ಕೊರೆಗಳೂ ಬೇಗ ಮುಚ್ಚುತ್ತವೆ. ಇದನ್ನು ನಾನು ಲಿನಸ್ ನಿಯಮ ಎನ್ನುತ್ತೇನೆ.)
೯. ಉತ್ತಮ ಡಾಟಾ-ಸ್ಟ್ರಕ್ಚರ್ ಮತ್ತು ಸುಮಾರಾದ ಕೋಡ್, ಉತ್ತಮ ಕೋಡ್ ಮತ್ತು ಸುಮಾರಾದ ಡಾಟಾ ಸ್ಟ್ರಕ್ಚರ್ ಗಿಂತಲೂ ಮೇಲು.
೧೦. ನಿಮ್ಮ ಬೀಟಾ ಬಳಕೆದಾರರು ಮತ್ತು ಪರೀಕ್ಷಕರನ್ನು ನೀವು ನಿಮ್ಮ ಅತಿ ಮುಖ್ಯ ಆಸ್ತಿಯೆಂದು ಪರಿಗಣಿಸಿದರೆ, ಅವರು ನಿಮ್ಮ ಅತಿ ಮುಖ್ಯ ಆಸ್ತಿಯೇ ಆಗುತ್ತಾರೆ.
೧೧. ನಿಮಗೇ ಹೊಳೆಯುವ ಅತ್ಯುತ್ತಮ ಐಡಿಯಾವನ್ನು ಬಿಟ್ಟರೆ, ಮುಂದಿನ ಅತ್ಯುತ್ತಮ ಐಡಿಯಾ ನಿಮ್ಮ ಬಳಕೆದಾರರದ್ದಾಗಿರುತ್ತದೆ. ಕೆಲವೊಮ್ಮೆ ಅವರ ಐಡಿಯಾ ನಿಮ್ಮದಕ್ಕಿಂತ ಉತ್ತಮವಾಗಿರಲೂ ಸಾಕು.
೧೨. ಕೆಲವೊಮ್ಮೆ, ನೀವು ಸಮಸ್ಯೆಯನ್ನು ಅರ್ಥೈಸಿಕೊಂಡಿರುವುದು ತಪ್ಪು ಎಂದು ತಿಳಿದುಬಂದಾಗ ಅತ್ಯಂತ ಸೂಕ್ತ ಪರಿಹಾರಗಳು ಕಾಣುತ್ತವೆ.
೧೩. (ವಿನ್ಯಾಸದಲ್ಲಿ) ಪರಿಪೂರ್ಣತೆ ಸಾಧಿಸುವುದೆಂದರೆ ಹೊಸತೇನನ್ನೂ ಸೇರಿಸಲು ಸಾಧ್ಯವಾಗದೇ ಇರುವುದಲ್ಲ. ಬದಲಾಗಿ ಬೇರೇನನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲದಂತಾಗುವುದು.
೧೪. ಯಾವುದೇ ಪರಿಕರಗಳು, ನಿಶ್ಚಯಿಸಿದಂತೆ ಸಹಕಾರಿಗಳಾಗಬಹುದು. ಆದರೆ ಅತ್ಯುತ್ತಮ ಪರಿಕರವೆಂದರೆ, ನಾವು ಎಣಿಸಿಲ್ಲದ್ದಿದ್ದರೂ ಸಹಕಾರಿಯಾಗಿ ನಿಲ್ಲುವಂತಹುದು.
೧೫. ಗೇಟ್ ವೇ ಗೆ ಸಂಬಂಧಿಸಿದ ಕಾರ್ಯಲಿಪಿ ಬರೆಯಬೇಕಾದರೆ, ಯಾವುದೇ ಕಾರಣಕ್ಕೂ ಏನನ್ನೂ ವ್ಯತಿರಿಕ್ತಗೊಳಿಸಿದಿರಿ. ಮತ್ತು ಸಾಧ್ಯವಾದಷ್ಟೂ ಮಾಹಿತಿಯನ್ನು ಉಳಿಸಿಕೊಳ್ಳಿ.
೧೬. ಟ್ಯೂರಿಂಗ್ ಕ್ಷಮತೆಯ ಕಾರ್ಯಲಿಪಿ ಭಾಷೆಯನ್ನು ನೀವು ಬಳಸಲಾಗದಿದ್ದಲ್ಲಿ, ಸಾಕಷ್ಟು ಸರಳ, ಅರ್ಥವಾಗಬಲ್ಲ ಭಾಷೆಯನ್ನು ಬಳಸಿ (ಸಿಂಟಾಕ್ಟಿಕ್ ಶುಗರ್).
೧೭. ರಕ್ಷಣಾವ್ಯವಸ್ಥೆಯೊಂದು ತನ್ನ ರಹಸ್ಯದಷ್ಟಷ್ಟೇ ಭದ್ರವಾಗಿರುತ್ತದೆ. ನಿಜವಲ್ಲದ ರಹಸ್ಯಗಳ ಬಗ್ಗೆ ಎಚ್ಚರವಿರಲಿ.
೧೮. ಒಂದು ಆಸಕ್ತಿಕರ ಸಮಸ್ಯೆಯನ್ನು ಬಿಡಿಸಬೇಕೆಂದರೆ ನಿಮಗೆ ಆಸಕ್ತಿಯಿರುವ ಸಮಸ್ಯೆಯನ್ನು ಹುಡುಕಿಕೊಳ್ಳಿ.
೧೯. ತಂತ್ರಾಂಶ ಅಭಿವೃದ್ಧಿಯ ಕೊ-ಆರ್ಡಿನೇಟರ್, ಸರಿಯಾದ ರೀತಿಯಲ್ಲಿ ಇಂಟರ್ನೆಟ್ ಮುಖಾಂತರ ತಂಡವನ್ನು ಮುನ್ನಡೆಸಬಲ್ಲವನಾದರೆ, ಒಂದಕ್ಕಿಂತ ಹೆಚ್ಚು ತಲೆಗಳು ಉತ್ತಮ ಕೆಲಸ ಮಾಡಬಲ್ಲುದು.

"

ಮೇಲಿನ ಹತ್ತೊಂಬತ್ತು ಪಾಠಗಳು ಮುಕ್ತ ತಂತ್ರಾಂಶದ ಅಭಿವೃದ್ಧಿಯಲ್ಲಿ ಅಳವಡಿಕೆಯಾದರೆ ಅವು ಮುಕ್ತ ತಂತ್ರಾಂಶದ ಯಶಸ್ಸಿಗೆ ಕಾರಣೀಭೂತವಾಗುತ್ತವೆ.

ಹಾಗೆಯೇ ಸಾಮಾನ್ಯ ಬಳಕೆದಾರರ ದೃಷ್ಟಿಯಿಂದ ನೋಡುವುದಾದರೂ, ಈ ತಂತ್ರಾಂಶಗಳ ಅಭಿವೃದ್ಧಿಯ ಪಥ ಬೇರೆಯೇ ಇರುವುದರಿಂದ, ಈ ಬಳಕೆದಾರರೂ ಅಭಿವೃದ್ಧಿಯಲ್ಲಿ ಭಾಗವಹಿಸಬಹುದಾದ ಅಂಶವಿರುತ್ತದೆ. ಇದು ತಂತ್ರಾಂಶ, ಸರ್ವರ ಬಳಕೆಗೂ ಸೂಕ್ತವಾಗುವಂತೆ, ತಾಳಿಕೆಯಿರುವಂತೆ ಮತ್ತು ಉತ್ತಮ ಗುಣಮಟ್ಟದಲ್ಲಿರುವಂತೆ ಮಾಡಲು ಸಹಕರಿಸುತ್ತವೆ. ಇದನ್ನು ನೆಟ್ಸ್ಕೇಪ್ ಬ್ರೌಸರ್ ತಂತ್ರಾಂಶದ ಉದಾಹರಣೆಯಲ್ಲಿ ನೋಡಬಹುದು.

ನೆಟ್ ಸ್ಕೇಪ್ ನ ಸ್ಥಾಪಕರು, ಇ.ಎಸ್.ಆರ್ ಅವರ ಈ ಕೃತಿಯನ್ನೋದಿ, ನೆಟ್ ಸ್ಕೇಪ್ ತಂತ್ರಾಂಶವನ್ನು ಮುಕ್ತವನಾಗಿಸಿದರು. ಆ ಹೊತ್ತಿಗೆ, ಕಾನೂನು ಸಮರ ಮತ್ತು ತಂತ್ರಙ್ಞಾನಗಳ ಇತಿಮಿತಿಯಿಂದ ಸೊರಗುತ್ತಿದ್ದ, ನೆಟ್ ಸ್ಕೇಪ್ ಮುಕ್ತವಾಗಿದ್ದುದರ ಪರಿಣಾಮವಾಗಿ ಹೊಸ ಹುಟ್ಟು ಪಡೆದುಕೊಂಡು, ಮೊಜಿಲ್ಲಾ ಫ಼ೈರ್ ಫ಼ಾಕ್ಸ್ ಆಗಿ ನಿಮ್ಮ ಮುಂದಿದೆ. ಪ್ರಪಂಚದ ಅಚ್ಚುಮೆಚ್ಚಿನ ಬ್ರೌಸರ್ ಆಗಿದೆ.

Wednesday, August 17, 2011

ಒಂದು ಒಂದು ಎರಡು


ಒಂದು ಒಂದು ಎರಡು
ಮೇಕೆಗೆ ಕಣ್ಣು ಎರಡು
ಎರಡು ಎರಡು ನಾಕು
ದೋಸೆಗೆ ಬೆಣ್ಣೆ ಹಾಕು
ಮೂರು ಮೂರು ಆರು
ರೆಕ್ಕೆ ಕಟ್ಟಿ ಹಾರು
ನಾಕು ನಾಕು ಎಂಟು
ಅಜ್ಜಿಯ ದುಡ್ಡಿನ ಗಂಟು
ಐದು ಐದು ಹತ್ತು
ಊಟಕೆ ಒಬ್ಬಟ್ಟು ಬಿತ್ತು

Friday, June 24, 2011

My Poem Translated by google --II

Manada Speech
Ask you
My manada
Melle stanza
Sound of life life
Expression expands
Like jasmine

Silver Light
Cimmutittu
I kannali
The light in the eye
Home
Snap
My manadali

Tunta laughter
Tulukutittu
I tutiyali
Speech at the lip
Snap standing
My edeyali

Night Malé
Descended
I heralali
The herala pasavu
Bandhisittu
My tannali


Original below

ಮನದ ನುಡಿ
ಕೇಳೆ ನೀನು
ನನ್ನ ಮನದ
ನುಡಿಯ ಮೆಲ್ಲಗೆ
ಬಾಳ ಸೊಲ್ಲಿಗೆ
ಭಾವ ಅರಳಿದ
ರೀತಿ ಮಲ್ಲಿಗೆ

ಬೆಳ್ಳಿ ಬೆಳಕು
ಚಿಮ್ಮುತಿತ್ತು
ನಿನ್ನ ಕಣ್ಣಲಿ
ಆ ಕಣ್ಣ ಬೆಳಕು
ನೆಲೆಯಾಗಿ
ಹೋಯ್ತು
ನನ್ನ ಮನದಲಿ

ತುಂಟ ನಗೆಯು
ತುಳುಕುತಿತ್ತು
ನಿನ್ನ ತುಟಿಯಲಿ
ಆ ತುಟಿಯ ಮಾತು
ನಿಂತು ಹೋಯ್ತು
ನನ್ನ ಎದೆಯಲಿ

ಇರುಳ ಮಾಲೆ
ಇಳಿಯುತ್ತಿತ್ತು
ನಿನ್ನ ಹೆರಳಲಿ
ಆ ಹೆರಳ ಪಾಶವು
ಬಂಧಿಸಿತ್ತು
ನನ್ನ ತನ್ನಲಿ

My poem Translated by google :)

The metal bird to fly,
Irulalu looked?
Kenda urella bright.
Virabhadrana stick

Uridide meredide jagajaga lamp
Indian irulina koralige sin

Kill the dark and light belt
Sivasati citeyuri madilu Nadu

Bhusuteyagni flare test
Jitter of the light honalali mugiligu

Yanna himavantana fuselage kundada
Belakanu life nandisadiralu

Rudra baruvano
Maleyanu blood on fire
Rudra surivano

My poem at "veerabhadrana Konda" Transalated by google as above.

The orginal poem is here


ಲೋಹದ ಹಕ್ಕಿ ಹಾರಲು,
ಕಂಡಿದ್ದೇನು ಇರುಳಲು?
ಊರೆಲ್ಲಾ ಹೊಳೆವ ಕೆಂಡ.
ವೀರಭದ್ರನ ಕೊಂಡ

ಉರಿದಿದೆ ಮೆರೆದಿದೆ ಜಗಜಗ ದೀಪ
ಇರುಳಿನ ಕೊರಳಿಗೇ ಉರುಳು ಪಾಪ

ಕತ್ತಲ ಕೊಲ್ಲಲು, ಬೆಳಕಿನ ಹೊನಲು
ಶಿವಸತಿ ಚಿತೆಯುರಿ ನಾಡಿನ ಮಡಿಲು

ಭೂಸುತೆಯಗ್ನಿ ಪರೀಕ್ಷೆಯ ಭುಗಿಲು
ಬೆಳಕಿನ ಹೊನಲಲಿ ಮುಗಿಲಿಗು ದಿಗಿಲು

ಹಿಮವಂತನ ಯಙ್ಞ ಕುಂಡದ ಒಡಲು
ಬದುಕಿನ ಬೆಳಕನು ನಂದಿಸದಿರಲು

ಬರುವನೋ ರುದ್ರ
ಅಗ್ನಿಯ ಮೇಲೆ ರಕ್ತದ ಮಳೆಯನು
ಸುರಿವನೋ ರುದ್ರ

View my own translation here

Tuesday, April 19, 2011

ನಾನು ಕೋಳೀಕೆ ರಂಗ

ರಚನೆ ಟಿ.ಪಿ. ಕೈಲಾಸಂ

ನಾನು ಕೋಳೀಕೆ ರಂಗ
ಕೋನು ಳೀನು ಕೆನು ರನು ಸೊನ್ನೆ ಗ
ಕ ಕೊತ್ವ ಳಿ ಕ್ ಕೆತ್ವ ರ ಸೊನ್ನೆಯೂನು ಗ
ಇದನ್ನ ಹಾಡಕ್ ಬರ್ದೆ ಬಾಯ್ ಬಿಡೋನು ಬೆಪ್ಪು ನನ್ನ ಮಗ

ನಾನು ಕೋಳೀಕೆ ರಂಗ
ಕೋನು ಳೀನು ಕೆನು ರನು ಸೊನ್ನೆ ಗ
ಕ ಕೊತ್ವ ಳಿ ಕ್ ಕೆತ್ವ ರ ಸೊನ್ನೆಯೂನು ಗ
ನಮ್ಮ್ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡಮಗ


ನಾ ಹುಟ್ಟಿದ್ ವೊಡ್ರಳ್ಳಿ ಬೆಳೆದದ್ದ್ ಬ್ಯಾಡ್ರಳ್ಳಿ
ಮದುವೆ ಮಾರ್ನಳ್ಳಿ ಹೊಲಗೊಳ್ ಹಾರ್ನಳ್ಳಿ ||೨||
ನಮ್ಮ ಶಾನುಭೋಗಯ್ಯ ಅಲ್ದೆ ಶೇಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನ.

ಹೆಂಡ್ರನ್ನು ಮಕ್ಕಳನ್ನು ಬುಟ್ಟು,
ಅಟ್ಟಿ ಅವ್ವೇನು ಬುಟ್ಟು
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಮ್ಮಳ್ಳಿ ಕಿಲಾಡಿ ಉಂಜಾ.. ||ನಾನು||


ಎತ್ತಿಲ್ದ್ ಬಂಡಿಗ್ಳೂ ವೆ ಎಣ್ಣಿಲ್ಲದ್ ದೀಪಗ್ಳೂವೆ
ತುಂಬಿದ್ ಮೈಸೂರಿಗ್ ಬಂದೆ
ದೊಡ್ ಚೌಕದ್ ಮುಂದೆ ದೊಡ್ ಗಡಿಯಾರದ್ ಹಿಂದೆ
ಕಟ್ಟ್ ತಂದಿದ್ ಬುತ್ತೀನ್ ತಿಂತಿದ್ದೆ.

ಅಲ್ ಕುದುರೆ ಮೇಲ್ ಕುಂತಿದ್ದ್ ಒಬ್ಬ್ ಸವಾರಯ್ಯಾ
ಕೆದರಿದ್ ತನ್ ಮೀಸೆ ಮೇಲ್ ಆಕ್ತಾನ್ ತನ್ ಕಯ್ಯಾ
ಕೇಳ್ತಾನ್ ನನ್ನ
ಗದರಿಸ್ತಾನ್ ರೀ
ಬೆದರಿಸ್ತಾನ್ ರೀ
ಲೇ ನೀ ಯಾರೋ , ಯಾಕೋ ಎಲ್ಲಿ ಅಂತ
ಹ ಹ ನಾನ್ ಕೋಳೀಕೆ .........

Friday, April 01, 2011

Rakesh Sharma message from Space

ಇಂದು ಎನಗೆ ಗೋವಿಂದ

ಇಂದು ಎನಗೆ ಗೋವಿಂದ
ನಿನ್ನಯ ಪಾದಾರವಿಂದವ
ತೋರೋ ಮುಕುಂದನೇ ಮುಕುಂದನೇ..


ಸುಂದರ ವದನನೇ
ನಂದ ಗೋಪಿಯ ಕಂದ
ಮಂಥರೋದ್ದಾರ ಆನಂದ
ಇಂದಿರಾ ರಮಣಾ

ನೊಂದೆನಯ್ಯಾ
ಭವ ಬಂದನದೊಳು ಸಿಲುಕಿ
ಮುಂದೆ ದಾರಿ ಕಾಣದೇ
ಕುಂದಿದೆ ಜಗದೊಳು
ಕಂದನಂತೆಂದೆನ್ನಾ
ಕುಂದುಗಳಾ ಎಣಿಸದೇ
ತಂದೆ ಕಾಯೋ ಕೃಷ್ಣ
ಕಂದರ್ಪ ಜನಕನೇ

ಧಾರುಣಿಯೊಳು ಬಲು
ಭಾರ ಜೀವನನಾಗಿ
ದಾರಿ ತಪ್ಪಿ ನಡೆದೆ
ಸೇರಿದೆ ಕುಜನರ
ಆರೂ ಕಾಯುವರಿಲ್ಲ
ಸಾರಿದೇ ನಿನಗಯ್ಯ
ವೀರ ವೇಣುಗೋಪಾಲ
ಪಾರುಗಾಣಿಸೋ ಹರಿಯೇ

ಶರಣು ಶರಣಯ್ಯ ಶರಣು ಬೆನಕ

ಮೂಷಿಕ ವಾಹನ ಮೋದಕ ಹಸ್ತ
ಚಾಮರಕರ್ಣ ವಿಳಂಬಿತ ಸೂತ್ರ
ವಾಮನರೂಪ ಮಹೇಶ್ವರ ಪುತ್ರ
ವಿಘ್ನ ವಿನಾಶಕ ಪಾದ ನಮಸ್ತೇ ನಮಸ್ತೇ ನಮಃ

ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ |೨|
ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ
ತಂದೆ ಕಾಯೋ ನಮ್ಮ ಕರಿಮುಖ
ಶರಣು ಶರಣಯ್ಯ ಶರಣು ಬೆನಕ
ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ |೨|


ಎಲ್ಲಾರು ಒಂದಾಗಿ ನಿನ್ನ
ನಮಿಸಿ ನಲಿಯೋದು
ನೋಡೋಕೆ ಚೆನ್ನ |೨|
ಗರಿಕೆ ತಂದರೆ ನೀನು
ಕೊಡುವೆ ವರವನ್ನ
ಗತಿ ನೀನೆ ಗಣಪನೆ
ಕೈ ಹಿಡಿಯೋ ಮುನ್ನ |೨| ||ಶರಣು||

ಸೂರ್ಯನೆದುರಲಿ ಮಂಜು
ಕರಗುವಾ ರೀತಿ
ನಿನ್ನ ನೆನೆಯಲು
ಒಡನೆ ಓಡುವುದು ಭೀತಿ |೨|
ನೀಡಯ್ಯ ಕಷ್ಟಗಳ
ಗೆಲ್ಲುವಾ ಶಕುತಿ
ತೋರಯ್ಯ ನಮ್ಮಲ್ಲಿ
ನಿನ್ನಯಾ ಪ್ರೀತಿ |೨| ||ಶರಣು||


ಬೆನಕ ಬೆನಕ ಏಕದಂತ
ಪಚ್ಚೆಕಲ್ಲು ಪಾಣಿಮೆಟ್ಲು
ಒಪ್ಪುವ ವಿಘ್ನೇಶ್ವರಾ ನಿನಿಅಗೆ
ಇಪ್ಪತ್ತೊಂದು ನಮಸ್ಕಾರಗಳು.

Wednesday, March 30, 2011

ಆದಿ ಶಂಕರಾಚಾರ್ಯ ಮತ್ತು ಅಪೋಕ್ಯಾಲಿಪ್ಟೋ.

ಮೊನ್ನೆ ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಹೋಗುವಾಗ ಕುವೆಂಪು ವಿರಚಿತ "ಶ್ಮಶಾನ ಕುರುಕ್ಷೇತ್ರಂ" ನಾಟಕ ಓದುತ್ತಿದ್ದೆ. ಕುವೆಂಪುರವರ ಕೃತಿ ಗಳನ್ನೋದುವುದು ಸದಾ ಕಾಲಕ್ಕೂ ರಸಾನುಭವವೇ. ಕಲಿಪುರುಷ ದ್ವಾಪರನಿಗೆ ವಚನವಿತ್ತಂತೆ, ಕಲಿಮಾನವರು ಕುಬ್ಜರಾದರೂ, ಎಲ್ಲರನ್ನೂ ಮೀರಿಸಿದ ಗಟ್ಟಿಗರೇ ಸೈ. ಶ್ಮಶಾನ ರುದ್ರದೇವನು ದ್ವಾಪರನಿಗೆ ತೋರುವ ಕಾಲಜ್ಞಾನದ ತುಣುಕು, ರಸರೋಮಾಂಚನಗೊಳಿಸುವ ಸೆಳಕೇ ಸೈ. ಜಗದೀಶ ಕೃಷ್ಣ ನ ನಾಟಕದಲ್ಲಿ ಎಲ್ಲರೂ ಅಭಿನಯಿಸಿ ನೇಪಥ್ಯಕ್ಕೆ ಸರಿಯುವ ಪಾತ್ರಧಾರಿಗಳೇ. ದುರ್ಯೋಧನನು ಕೌರವ ಕೃಷ್ಣ . ಧರ್ಮಜ ಪಾಂಡವ ಕೃಷ್ಣ . ಸೊಗಸಾದ ಪರಿಕಲ್ಪನೆಯ ಈ ನಾಟಕ, ಕದನದ ಕೇಡನ್ನು ಮೊಗೆಮೊಗೆದು ತೋರುವ, ಅಂತೆಯೇ ಅಧ್ಯಾತ್ಮದ ಅಂತಃದರ್ಶನವನ್ನೂ ನೀಡುವ ಅತಿ ಸುಂದರ ನಾಟಕವನ್ನೋದುವ ಘಳಿಗೆಗಳಲ್ಲಿ ನನ್ನ ಅಂತಃಕರಣ ಕಲಕಿ ಕಣ್ಣೀರಾಗಿ ಹರಿದದ್ದು ಸತ್ಯ.
ಇಂತಹ ದರ್ಶನಗಳು ಕಾಲದೇಶಗಳನ್ನು ಮೀರಿ ಚಿಂತನಾಶೀಲ ಮನುಜರೆಲ್ಲರಿಗೂ ಯಾವುದೋ ಒಂದು ಕಾಲಘಟ್ಟದಲ್ಲಿ, ಅರಿಕೆಗೆ ಬರುತ್ತಲೇ ಇರುತ್ತವೆ. ಆದರೆ ಅವನ್ನು ವ್ಯಕ್ತಪಡಿಸುವ ಭೌತಿಕ ವಿಧಾನಗಳಲ್ಲಿ ಭಿನ್ನತೆ ಇರಬಹುದು.

ಇಂತಹ ಯೋಚನೆ ನನ್ನ ಮನಸ್ಸಿಗೆ ಬಂದಿದ್ದು ನಾನು ಒಂದೇ ದಿನ ನೋಡಿದ ಎರಡು ವಿಭಿನ್ನ ನೆಲೆಯ ಆದರೆ ಎಂತಹುದೂ ಸಾಮ್ಯತೆಯಿಂದ ಹತ್ತಿರವಾದ ಚಿತ್ರಗಳು. ಅವೇ ಮೆಲ್ ಗಿಬ್ಸನ್ ನ ಅಪೋಕ್ಯಾಲಿಪ್ಟೋ ಮತ್ತು ನಮ್ಮವರೇ ಜಿ.ವಿ. ಅಯ್ಯರ್ ಅವರ ಆದಿಶಂಕರಾಚಾರ್ಯ.

ಅಪೋಕ್ಯಾಲಿಪ್ಟೋ ಮೆಲ್ ಗಿಬ್ಸನ್ ನಿರ್ದೇಶನದ ೧೩ನೇ ಶತಮಾನದ 'ಮಾಯಾ' ನಾಗರೀಕತೆಯ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲಿ ನಡೆಯುವ ಘಟನೆಗಳ ಅಧಾರಿತ ಚಿತ್ರ. ಜೀವವುಳಿಸಿಕೊಳ್ಳಲು ಬೇಟೆಗಾರರಿಂದ ತಪ್ಪಿಸಿಕೊಂಡು ಓಡುವ ನೀರುಕುದುರೆಯೊಂದರಿಂದ ಶುರುವಾಗುವ ಈ ಚಿತ್ರ, ನೀರುಕುದುರೆಯ ಬೇಟೆಗಾರರೇ ಕ್ರೂರ ಮಾಯಾ ಜನಾಂಗದ ಜನರಿಂದ ಬೇಟೆಯಾಡಲ್ಪಡುವ, ಮತ್ತು ಅವರಲ್ಲೊಬ್ಬ ಈ ನರಬಲಿಗಾರರಿಂದ ತಪ್ಪಿಸಿಕೊಳ್ಳುವಲ್ಲಿ ಮುಕ್ತಾಯವಾಗುತ್ತದೆ.

ಕಣ್ಣಮುಂದೆಯೇ ಹತ್ಯೆಗೊಳಗಾಗುವ ತಂದೆ, ಆ ತಂದೆಯ ಹಿಂದೆಯೇ ಹೇಳಿದ್ದ ಹಿತವಚನ " ಧೈರ್ಯಗೆಟ್ಟರೆ ಸೋತಂತೆ, ಎಂದಿಗೂ ಧೈರ್ಯಗೆಡಬೇಡ" ಎನ್ನುವ ಮಾತು, ನಾಯಕನಿಗೆ ಅತೀವ ಆತ್ಮವಿಶ್ವಾಸ ನೀಡುತ್ತದೆ. ಆಕ್ರಮಣಕಾರರಿಂದ ರಕ್ಷಿಸಿಕೊಳ್ಳಲು ತನ್ನ ಗರ್ಭಿಣಿ ಹೆಂಡತಿ ಮತ್ತು ಮಗುವನ್ನು ಬಾವಿಯೊಂದರಲ್ಲಿ ಅವಿತಿಟ್ಟು, ಆಕ್ರಮಣಕಾರರೊಂದಿಗೆ ಹೋರಾಡುವ ನಾಯಕ ಅವರಿಂದ ಬಂಧನಕ್ಕೊಳಗಾಗುತ್ತಾನೆ. ನರಬಲಿಗಾಗಿ ಎಳೆದೊಯ್ಯುವ ನಿಮಿಷದಲ್ಲಿ ಸೂರ್ಯಗ್ರಹಣವಾಗಿ ನಾಯಕನ ಜೀವವುಳಿಯುತ್ತದೆ. ಆದರೆ ಗೆದ್ದವರ ಬೇಟೆಯ ಆಟಕ್ಕೆ ಗುರಿಯಾಗುವ ಸೋತವರು, ಅವರಿಂದ ಹೇಗೋ ತಪ್ಪಿಸಿಕೊಂಡು ಓಡುವ ನಾಯಕ. ಅವನ ಓಟಕ್ಕೆ ಶಕ್ತಿ ಬಂದಿರುವುದು ಭಯದಿಂದಲೋ, ಅಥವಾ ಭಯವನ್ನು ಗೆದ್ದು, ಧೈರ್ಯಗೆಡಬಾರದೆಂಬ ತಂದೆಯ ಹಿತವಚನದಿಂದಲೋ..? ಒಟ್ಟಿನಲ್ಲಿ ಓಡುತ್ತಾ, ಓಡುತ್ತಾ, ಬೆನ್ನಟ್ಟಿ ಬರುವ ಕೇಡನ್ನು ತಪ್ಪಿಸಿಕೊಳ್ಳುವ ಅದಮ್ಯ ವಿಶ್ವಾಸಿ ನಾಯಕ, ತನ್ನ ತಾಯ್ನೆಲದಲ್ಲಿ ಹೆಜ್ಜೆಯೂರಿದ ಕ್ಷಣದಲ್ಲಿ ಕೇಡಿನ ಜೊತೆ ಹೋರಾಡುವ ಮನೋಬಲ ತೋರುತ್ತಾನೆ. ಪ್ರಕೃತಿ ಯೂ ಅವನ ಪರ ವಹಿಸಿ ಬೆನ್ನಟ್ಟಿದ ಪಟುಭಟರೊಬ್ಬಬ್ಬರಾಗಿ ಸಾವನ್ನಪ್ಪುತ್ತಾರೆ. ಉಳಿದ ಕೆಲವರು ಹಿಡಿದ ಹಠ ಬಿಡದೆ ಬೆನ್ನಟ್ಟಿರಲು ಸಮುದ್ರ ತಟ ತಲುಪುತ್ತಾರೆ. ಅಲ್ಲಿ ಯೂರೋಪಿನ ಭೂ ಶೋಧದ ಪಡೆಯ ಲಂಗರು ಕಾಣಿಸುತ್ತದೆ. ಚಿಕ್ಕದ್ದನ್ನು ದೊಡ್ಡದು ಅದನ್ನು ಅದಕ್ಕಿಂತಲೂ ದೊಡ್ಡದು ನುಂಗುವ ಪ್ರಕೃತಿ ಸಹಜ ಕ್ರಿಯೆಯ ಸಂಕೇತವಾಗಿ ಇದು ಕಾಣುತ್ತದೆ.

ಈ ಘಳಿಗೆಯಲ್ಲಿ ನಾಯಕ ಅಲ್ಲಿಂದ ತಪ್ಪಿಸಿಕೊಂಡು, ಮಳೆಯಿಂದ ತುಂಬುತ್ತಿರುವ ಬಾವಿಯಲ್ಲಿ ಅಡಗಿಸಿದ್ದ ಹೆಂಡತೀ ಮಕ್ಕಳ ರಕ್ಷಣೆಗೆ ಬರುತ್ತಾನೆ. ಎದೆ ಮಟ್ಟ ತುಂಬಿದ ನೀರಿನಲ್ಲಿಯೇ ಹೊಸ ಜೀವ ಜನನವಾಗುತ್ತದೆ. ಅವರನ್ನು ಕರೆದುಕೊಂಡು ದೂರದ ಕಾಡಿಗೆ ಹೊಸಜೀವನದ ಅನ್ವೇಷಣೆಯಲ್ಲಿ ನಾಯಕ ಸಾಗುತಾನೆ.

ವಿಲ್ ಡ್ಯೂರಾಂಟರ " ಯಾವುದೇ ನಾಗರೀಕತೆ ಪರಕೀಯರಿಂದ ದಮನಗೊಳ್ಳುವುದಕ್ಕೆ ಮೊದಲು, ಒಳಗಿನಿಂದಲೇ ಕೊಳೆಯುತ್ತಾ ಬಂದಿರುತ್ತದೆ" ಎಂಬ ಘೋಷವಾಕ್ಯದೊಂದಿಗೆ ಶುರುವಾಗುವ ಈ ಚಿತ್ರ, ತಾತನೊಬ್ಬ ಹೇಳುವ ನೀತಿಕತೆಯಿಂದ, ಬಾಲಕಿಯ ಕಾಲಜ್ಞಾನದ ನುಡಿಗಳಿಂದಲೂ, ದಾರ್ಶನಿಕ ರೂಪ ಪಡೆದುಕೊಳ್ಳುತ್ತದೆ.

ತಾಂತ್ರಿಕವಾಗಿಯೂ ಮೈ ನವಿರೇಳಿಸುವ ದೃಶ್ಯ ಗಳನ್ನು ನೀರುಕುದುರೆಯ ಬೇಟೆಯಲ್ಲಿ, ಜಲಪಾತದ ಮೇಲಿನಿಂದ ಜಿಗಿಯುವಲ್ಲಿ ಅಥವಾ ನರಬಲಿಯ ದೃಶ್ಯ ದಲ್ಲಿ ಕಾಣಬಹುದು.

ಈ ಗುಂಗಿನಿಂದ ನಾನು ಬಿಡಿಸಿಕೊಳ್ಳುವ ಮೊದಲೇ ನಮ್ಮ ಜಿ.ವಿ. ಅಯ್ಯರ್ಅವರ ಆದಿಶಂಕರಾಚಾರ್ಯ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು.

ಆಕ್ಷನ್ ಚಿತ್ರ ಮಾಡುವ ಮೆಲ್ ಗಿಬ್ಸನ್ ರಿಗೆ ಅಧ್ಯಾತ್ಮಿಕ ಹೊಳಹುಗಳು ಸಿಕ್ಕಂತೆ, ತೀವ್ರ ಆಧ್ಯಾತ್ಮಿಕ ತುಡಿತದ ಆದಿಶಂಕರಾಚಾರ್ಯದ ಕೆಲವು ಕ್ಷಣಗಳು ನಿಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ದರೂ ಅಚ್ಚರಿಯಿಲ್ಲ. ಬಾಲ್ಯದಲ್ಲೇ ತಂದೆಯ ಸಾವನ್ನು ಕಂಡ ಶಂಕರನಿಗೆ ಮೃತ್ಯು ಮತ್ತು ವಿವೇಕಗಳು ಜೊತೆಯಾಗುತ್ತವೆ. ಶಂಕರನ ಕಡೆ ಘಳಿಗೆಯವರೆಗೂ ಜೊತೆಗಿರುವ ಇವರಲ್ಲಿ, ಶಂಕರರು ಕಾಯಿಲೆ ಬಿದ್ದಾಗ ಮೃತ್ಯು ವೇ ಶುಶ್ರೂಷೆಗೆ ನಿಲ್ಲುವುದು ಶಂಕರನಿಗೇ ನಗು ತರಿಸುತ್ತದೆ. ದೂರ ಸರಿ ಎನಿಸಿಕೊಂಡ ಚಂಡಾಲನಿಂದ ದೂರ ಸರಿಯಬೇಕಾದದ್ದು ಶರೀರವೋ , ಆತ್ಮವೋ ಎನ್ನುವ ಪ್ರಶ್ನೆ ಎದುರಾಗುತ್ತದೆ. ಶಂಕರನಿಗೆ ಇದರಿಂದ, ಆತ್ಮದ ಶಾಶ್ವತತೆಯ ಅನುಭವದ ಜೊತೆಗೆ ಅದೇ ಬ್ರಹ್ಮವಾಗುವಂತಹುದು ಎನ್ನುವ ಅರಿವಾಗುತ್ತದೆ. ಮಂಡನ ಮಿಶ್ರರೊಂದಿಗಿನ ಸಂವಾದ, ಛಾಂದೋಗ್ಯಪನಿಷತ್ತಿನ ಪರೀಕ್ಷೆಗಳಲ್ಲಿ ಅಧ್ಯಾತ್ಮಿಕ ಸೂಕ್ಷ್ಮಗಳೂ, ಆಚರಣೆಗಿಂತಲೂ ಅವಿನಾಭಾವವೇ ಮುಖ್ಯವೆಂಬ ದಾರಿಯೂ ಕಾಣುತ್ತದೆ.

ಈ ಎರಡೂ ಚಿತ್ರಗಳನ್ನು ನಾನು ಒಟ್ಟಾರೆಯಾಗಿ ತೂಗಿ ನೋಡಲು ಕಾರಣಗಳಿವೆ.

ಮೇಲಿನವರೆಗೂ ಬರೆದು ನಿಂತ ಲೇಖನವನ್ನು ಸುಮಾರು ಎರಡು ವರ್ಷಗಳ ನಂತರ ಮುಂದುವರೆಸಲು ಕುಳಿತಾಗ ನಾನು ಬರೆಯಬೇಕಿದ್ದುದೇನೆಂಬುದೇ ಮರೆತಿದೆ. ಆದರೆ ಈ ವಿಚಾರಕ್ಕೆ ನೆನಪಿನಲ್ಲಿರುವಂತೆ ಕೆಳಗಿನ ಮಾತುಗಳನ್ನು ಹೇಳಬಲ್ಲೆ.
ಎರಡೂ ಚಿತ್ರಗಳೂ ಜನರಾಡದ ಭಾಷೆಯಲ್ಲಿ ಚಿತ್ರಿತವಾಗಿವೆ, ಒಂದರಲ್ಲಿ ಅದ್ಧೂರಿತನವಿದ್ದರೆ, ಮತ್ತೊಂದು ಸರಳತೆಯಿದೆ. ಎರಡರಲ್ಲೂ ಜೀವ ಹುಟ್ಟುವ ಚಿತ್ರಣವಿದೆ. ಬೆನ್ನಟ್ಟುವ ಮೃತ್ಯು ವಿದೆ. ಮತ್ತು ಎರಡೂ ಚಿತ್ರಗಳು ಕತೆಯಾಗಿ ನಮ್ಮೊಡನೆ ಸಂವಾದ ಮಾಡುತ್ತವೆ.

Monday, March 21, 2011

Multigateway routing in debian

Multigateway routing in debian

Enable forwarding by echoing to ip_forward

echo "1" >> /proc/sys/net/ipv4/ip_forward

create the table entries in rt_table by typing following

echo "10 chitti" >> /etc/iproute2/rt_table
echo "20 bhitti" >> /etc/iproute2/rt_table


You can add the routing table by following snippet


ip r show | grep -Ev ^default | while read ROUTE; \
do; \
ip r a $ROUTE table chitti;\
ip r a $ROUTE table bhitti;\
done;

Now set the default gateways for each table

ip r a default via chittigw table chitti
ip r a default via bhittigw table bhitti


Need to mark the packets coming from the proper source networks

iptables -t mangle -A PREROUTING -s ip.of.chitti.network/netmask -d 0.0.0.0/0 -j MARK --set-MARK 10
iptables -t mangle -A PREROUTING -s ip.of.bhitti.network/netmask -d 0.0.0.0/0 -j MARK --set-MARK 20

NAT them with whatever interface

iptables -t nat -A POSTROUTING -s ip.of.chitti.network/netmask -d 0.0.0.0/0 -j SNAT --to ip.of.chittii.interface
iptables -t nat -A POSTROUTING -s ip.of.bhitti.network/netmask -d 0.0.0.0/0 -j SNAT --to ip.of.bhittii.interface

Add the fwmark from the table in route

ip rule add from fwmark 10 table chitti
ip rule add from fwmark 20 table bhitti

Bingo..

Multiple gateways should be working now.

PS : If you have setup the WANs on a single interface with aliases the case is much easier..

Reference : http://linux-ip.net/html/adv-multi-internet.html

Tuesday, March 08, 2011

openvpn how to

1. apt-get install openvpn

The default directory for easy-rsa certificates is "/usr/share/doc/openvpn/examples/easy-rsa/2.0/". So we change theworking directory:

#cd /usr/share/doc/openvpn/examples/easy-rsa/2.0/

2. Now we will create the certificate for CA

#. ./vars

#./clean-all

#./build-ca

3. Then we will create the certificate for server

#./build-key-server server

4. Then we will create the certificate for client

#./build-key client

5. We will build diffie hellman

#./build-dh

6. Now if you wonder about the place of keys which you already created just change your directory to /keys

#cd /usr/share/doc/openvpn/examples/easy-rsa/2.0/keys/

#ls -al

ca.key ca.crt server.key server.csr server.crt client.key client.crt client.csr

7. Now we have the keys and certificates. So we will send them to our clients who want to connect OPENVPN Server. Just be sure that:

ca.key-> only,must be in CA Server

client.crt-> only,must be in Client

client.key-> only,must be in Client

server.crt-> only,must be in OPENVPN Server

server.key-> only,must be in OPENVPN Server

ca.crt-> must be in CA Server and all of the clients.

8. After you transfered the files above safely, you must modify your main configuration file on OPENVPN Server, which is "server.conf".

#cd /usr/share/doc/openvpn/examples/sample-config-files/

#vim server.conf

port 1194
proto udp
dev tun
ca /usr/share/doc/openvpn/examples/easy-rsa/2.0/keys/ca.crt
cert /usr/share/doc/openvpn/examples/easy-rsa/2.0/keys/server.crt
key /usr/share/doc/openvpn/examples/easy-rsa/2.0/keys/server.key
dh /usr/share/doc/openvpn/examples/easy-rsa/2.0/keys/dh1024.pem
server 10.8.0.0 255.255.255.0
ifconfig-pool-persist ipp.txt
push "route 192.168.1.0 255.255.255.0"
push "redirect-gateway def1"
push "dhcp-option DNS 192.168.1.1"
client-to-client
keepalive 10 120
comp-lzo
persist-key
persist-tun
status openvpn-status.log
log /var/log/openvpn.log
log-append /var/log/openvpn.log
verb 3

9. After you typed the configuration above inside your "server.conf" file, copy it to "/etc/openvpn" directory

#cp server.conf /etc/openvpn/

10. Restart your server.

http://cihan.me/how-to-setup-openvpn-server-on-debian-lenny/

Tuesday, February 22, 2011

ಚಿನ್ನದ ಮಲ್ಲಿಗೆ ಹೂವೆ

ಚಿನ್ನದ ಮಲ್ಲಿಗೆ ಹೂವೆ
ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಚಲವು ನನ್ನಲ್ಲಿ ಏಕೆ

ಮಾತಲ್ಲಿ ಜೇನು ತುಂಬಿ
ನೂರೆಂಟು ಹೇಳುವೆ
ನನಗಿಂತ ಚೆಲುವೇ ಬರಲು
ನೀ ಹಿಂದೆ ಓಡುವೆ

ನಿನ್ನನ್ನು ಕಂಡ ಕಣ್ಣು
ಬೇರೇನೂ ನೋಡದಿನ್ನು
ನಿನಗಾಗಿಯೇ ಬಾಳುವೆ ಇನ್ನು ನಾನು

ಹೊನ್ನಿನ ದುಂಬಿಯೆ ಇನ್ನು
ನಿನ್ನ ನಂಬೆನು ನಾನು
ನನ್ನ ಮೊಗವ ಕಂಡಾಗ
ನೆನಪು ಬಂದಾಗ
ಒಲವು ಬೇಕೆಂದು ಬರುವೆ

ಆ ಸೂರ್ಯಚಂದ್ರ ಸಾಕ್ಷಿ
ತಂಗಾಳಿ ಸಾಕ್ಷಿಯು
ಎಂದೆಂದು ಬಿಡದಾ ಬೆಸುಗೆ ಈ ನಮ್ಮ ಫ್ರೀತಿಯು
ಬಂಗಾರದಂಥಾ ನುದಿಯ
ಸಂಗಾತಿಯಲ್ಲಿ ನುಡಿದು
ಆನಂದದ ಕಂಬನಿ ತಂದೆ ನೀನು

Monday, February 07, 2011

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ

ಮೊನ್ನೆ ಶನಿವಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಅಲ್ಲಿ ನಾನು ಮಾಡಿದ್ದು ಏನೂ ಇಲ್ಲ. ಯಾವ ಗೋಷ್ಟಿಯಲ್ಲೂ ಭಾಗವಹಿಸಲಿಲ್ಲ. ಯಾವ ಪ್ರಶ್ನೆ ಯನ್ನೂ ಯಾರಿಗೂ ಕೇಳಲಿಲ್ಲ. ಅಷ್ಟೇ ಏಕೆ ಯಾವ ಕವಿಯನ್ನೂ/ ಸಾಹಿತಿಯನ್ನೂ ನೋಡಲಿಲ್ಲ.

ಮನೆಮಂದಿಯೊಂದಿಗೆ ಅಲ್ಲಿಗೆ ಹೋದ ನನ್ನ ಮೊದಲ ಗಮನ ಇದ್ದದ್ದು ಪುಸ್ತಕ ಪ್ರದರ್ಶನದತ್ತ. ಆದರೆ ಪಾರ್ಕಿಂಗ್ ಸಿಗುವುದರೊಳಗೆ ಸುಮಾರು ಅರ್ಧ ಗಂಟೆ ಸಮಯ ಕಳೆದು ಹೋಯಿತು. ವಾಹನ ನಿಲ್ಲಿಸಿ, ನಡೆದು ಹೊರಟರೆ, ಊರ ಜಾತ್ರೆಯಲ್ಲಿ ಹರಡಿದಂತೆ ವ್ಯಾಪಾರಿಗಳ ಸುಗ್ಗಿ, ಏನುಂಟು ಏನಿಲ್ಲ ಇಲ್ಲಿ? ಹಾಲು ಬಿಳುಪಿನ ಅಂಗಿಗಳು ಬೇಕೆ..? ಬೆಂಗಳೂರು ಚಳಿ ತಡೆಯುವ ಸ್ವೆಟರುಗಳೇ..? ಬಣ್ಣದ ಬಲೂನುಗಳೇ?, ನೀರಿನಲ್ಲಿ ಹಾಕಿದರೆ ಊದಿಕೊಳ್ಳುವ ಬಣ್ಣಾದ ಮಣಿಗಳೇ? ನವಿಲುಗರಿಗಳೇ? ರಾಜಣ್ಣ , ವಿಷ್ಣುವರ್ಧನರ ಚೆಂದದ ಕಟ್ಟು ಹಾಕಿಸಿಕೊಂಡ ಚೆಂದದ ಚಿತ್ರಗಳೇ? ಬಾಯಾರಿಕೆ ತಣಿಸಲು ಎಳನೀರು, ಕಬ್ಬಿನಹಾಲು, ಹಣ್ಣಿನರಸಗಳೇ? ರಂಗವಲ್ಲಿ ಹಾಕುವ ಹೊಸ ಸಲಕರಣೆಗಳೇ? ಹೊಸಮಾದರಿಯ ಒಂದೊಂದು ಕೋನದಿಂದ ಒಂದೊಂದು ರೀತಿಯಾಗಿ ಕಾಣುವ ಚಿತ್ರಪಟಗಳೇ ಜೋಕು, ದೊಡ್ಡವರ ಜೋಕು, ಪೋಲಿ ಜೋಕು, ಜ್ಯೋತಿಷ್ಯದ ಪುಸ್ತಕಗಳೇ? ಅಂದದ ಹೆಂಗಸಿನ ಚೆಂದಗಾಣಿಸುವ ಶೃಂಗಾರ ಸಾಮಗ್ರಿಗಳೇ? ಎಲ್ಲವೂ ಇದ್ದ ಈ ಬೀದಿಯನ್ನು ಹಾದು ಮುಖ್ಯದ್ವಾರಕ್ಕೆ ಬರುವುದರಲ್ಲಿ ಸಾಕು ಬೇಕಾಯಿತು.

ಹೌದು ಇದೆಲ್ಲದಕ್ಕೂ ಖಳಸಪ್ರಾಯವಾಗಿ ಸುತ್ತೆಲ್ಲಾ ಫ್ಲೆಕ್ಸ್ ಬೋರ್ಡುಗಳು. ಕನ್ನಡ ಓರಾಟಗಾರರ ಚಿತ್ರಗಳು, ಪಾಪ ಅವರ ಮಧ್ಯೆ ಸಮ್ಮೇಳನಾಧ್ಯಕ್ಷ ಹಿರಿಯ 'ಜೀವಿ'ಯವರ ಚಿತ್ರ!. ಬೆಂಗಳೂರು 'ಮೆಜೆಸ್ಟಿಕ್' ನಿಂದ ಸಮ್ಮೇಳನಕ್ಕೆ ಉಚಿತವಾಗಿ ಕರೆತರುವ ಆಟೋಗಳು. ಕೈಕೊಟ್ಟ ಈಟಿ ( ಐ.ಟಿ) ಗಳು.

ಕನ್ನಡಿಗರು ತುಂಬಾ ಮೃದು ಸ್ವಭಾವದವರೆನ್ನುವುದಕ್ಕೆ ಸಾಕ್ಷಿಯಾಗಿ ಇಲ್ಲಿ ಎಂತಹುದೇ ಭದ್ರತಾ ತಪಾಸಣೆ ಇರಲೇ ಇಲ್ಲ! ಅಷ್ಟು ಜನ ಸೇರಿದ ಸಭೆ ಸಂಪೂರ್ಣ ಸುರಕ್ಷಿತವೆಂದು ಯಾರೂ ಖಾತರಿ ಮಾಡಿಕೊಳ್ಳಬೇಕಾಗಿಲ್ಲ. ನೀವೇ ನೋಡಿದಿರಲ್ಲ, ಎಂತಹ ಸುರಕ್ಷತೆಯೂ ಇಲ್ಲದಿದ್ದರೂ ಯಾವುದೇ ತೊಂದರೆ ಇಲ್ಲದೆ ಈ ಕಾರ್ಯಕ್ರಮ ಯಶಸ್ವಿಯಾಗಿ ಮುಗಿದದ್ದು..! ಬೆಂಗಳೂರಿನಲ್ಲಿ ಹಲವು ಸಭೆ ಸಮಾರಂಭಗಳು ಜರುಗುತ್ತಲೇ ಇರುತ್ತವೆ, ಹಾಗಾಗಿ ಕೋಟಿ ಜನಸಂಖ್ಯೆಯ ಬೆಂಗಳೂರಲ್ಲಿ ನಾಲ್ಕೈದು ಲಕ್ಷ ಕನ್ನಡ ಜನ ಸೇರುವ ಈ ಸಮಾರಂಭಕ್ಕೆ ಏನೂ ಸಮಸ್ಯೆಯಿಲ್ಲ.

ಇನ್ನು ಪುಸ್ತಕ ಪ್ರದರ್ಶನದ ಒಳ ಹೋಗಲು, ನೂಕು ನುಗ್ಗಲು, ಒಳಗೆ ನಿಮ್ಮ ಕುತೂಹಲ ತಣಿಸಲು ನೂರಾರು ಪ್ರಕಾಶಕರ ಲಕ್ಷಾಂತರ ಪುಸ್ತಕಗಳು. ತಮಿಳಿನ ರಂಗವಲ್ಲಿ, ಇಂಗ್ಲಿಷಿನ ರೈಮ್ , ಜ್ಯೋತಿಷ್ಯದ ಪುಸ್ತಕಗಳ ಜೊತೆಯಲ್ಲಿ, ವಿವಿಧ ಜ್ಯೋತಿಷ್ಯಮಣಿಗಳು, ಇವುಗಳ ಜೊತೆಗೇ, ಸಮಗ್ರ ಕುವೆಂಪು ಕಾವ್ಯ, ಶೂನ್ಯಸಂಪಾದನೆಯ ವಿಮರ್ಶೆ, ಕೌಟಲೀಯ ಅರ್ಥಶಾಸ್ತ್ರ, ಲಂಕೇಶ್ ಪ್ರತಿಪಾದಿತ ಐಲ್ ಪುಲ್ಲಿಂಗ್ ಚಿಕಿತ್ಸೆ. ಇಗೋ ಕನ್ನಡ, ಭಾಷೆ, ಗಾಂಧೀಜಿಯ ಆತ್ಮ ಚರಿತ್ರೆ. ಅಲ್ಲಿರುವ ಪುಸ್ತಕಗಳನ್ನು ಕಣ್ತುಂಬಿಕೊಳ್ಳಲೂ ಸಾಧ್ಯವಿಲ್ಲದಷ್ಟು ಜನಜಂಗುಳಿ. ಮಳಿಗೆ ನೋಡಿಕೊಳ್ಳಲ್ಲು ಇರುವ ಇಬ್ಬರಿಗೆ ಕಣ್ಣು ತಿರುಗಿಸಲೂ ಪುರುಸೊತ್ತಿಲ್ಲದಷ್ಟು ಕೆಲಸ, ಬಿಲ್ಲು ಹರಿಯುವುದರೊಳಗೆ ಇಲ್ಲೊಂದು ಪುಸ್ತಕ ಹಾರಿಹೋದರೆ? ದೇವನೇ ಬಲ್ಲ. ಕಾಸು ಕೊಟ್ಟು ಪುಸ್ತಕ ಕೊಂಡವರೆಷ್ಟೋ? ಮೆಲ್ಲಗೆ ಜೋಳಿಗೆಯೊಳಗೆ ನುಸುಳಿದವೆಷ್ಟೋ? ಇರಲಿ ಬಿಡಿ ಕನ್ನಡ ಕೃತಿಗಳಿಗೆ ಓದುಗರು ಸಿಕ್ಕರಲ್ಲಾ ಅದು ಮುಖ್ಯ. ತಪ್ಪು ನಾವು ಹೀಗೆಲ್ಲಾ ಅನ್ನಬಾರದು. "ಏಳು" ಕೋಟಿಯ ವಹಿವಾಟು ನಡೆದಿದೆ ಅಲ್ಲಿ ಗೊತ್ತಾ? ಜೊತೆಗೆ ಪುಸ್ತಕ ಪ್ರದರ್ಶನ ಇನ್ನೂ ಮುಂದುವರೆದಿದೆಯಂತೆ. ಸದ್ಯ ನಮ್ಮ ರೈತರು ಈರುಳ್ಳಿಯನ್ನು ರಸ್ತೆಯಲ್ಲಿ ಸುರಿದ ಹಾಗಾಗಲಿಲ್ಲವಲ್ಲ.!

ಸಾರಸ್ವತ ಲೋಕ ಒಗ್ಗಟ್ಟಾಗಿ, ಚಿಮೂಗೆ ಗೌರವ ಡಾಕ್ಟರೇಟ್ ನಿರಾಕರಿಸಿದ ರಾಜ್ಯಪಾಲರನ್ನು ತರಾಟೆಗೆ ತೆಗೆದುಕೊಂಡಿದೆಯಂತೆ, ಆದರೆ ಬಡಸಾಹಿತಿಯ ಮಾತಿಗೇನು ಬೆಲೆ. ಕನ್ನಡದ ಕೊಲೆಗಡುಕ ಇಂಗ್ಲಿಷ್ ಎಂದರೆ ಯಾರಿಗೇನು ನಷ್ಟ. ನಮ್ಮ ಅಡಿಗೆಯವರು ನೈಫ್ ಅನ್ನೇ ಹಿಡಿಯುತ್ತಾರೆ, ಡಿನ್ನರಿಗೇ ಕರೆಯುತ್ತಾರೆ.

Monday, January 31, 2011

ಅಜಮಿಳ ಮತ್ತು ಹುಲಿಮಂದೆ

ಹುಲಿರಾಜನ ಮುಂದೆ,
ಬಂತು ಹುಲಿ ಮಂದೆ
ತಂದಿತೊಂದು ದೂರು
"ಹದಿನೈದು ದಿನ ಕಳೆದು
ಹದಿನಾರನೇ ರಾತ್ರಿ ಇದು.
ತಿಂದಿಲ್ಲ ತುಂಡನೊಂದೂ
ಅಜಮಿಳನ ಕುರಿಗಳನು
ಕಾಯುತಿದೆ ಹೊಸನಾಯಿ
ಹತ್ತಿರಕೂ ಹೋಗಬಿಡದು
ಅದು. ಕಟ್ಟಿಬಿಟ್ಟಿದೆ ಬಾಯಿ"

"ಏನೆಂದಿರೇನೆಂದಿರಿ.. "
ಆರ್ಭಟಿಸಿದನು ಹುಲಿರಾಜ
"ಮುಂದಾಗಿ ಬರಲಿಲ್ಲವೇಕೆ..
ಇಂದೇ ಹೊರಟಿಹನು ಕಾಳಗಕೆ
ಹಬ್ಬದೂಟಕೆ ಸಿದ್ದರಾಗಿ,
ಆ ಕುನ್ನಿ ಕಲಿಯಲಿದೆ ಪಾಠ ಹೊಸದಾಗಿ."

"ಚಿರಾಯುವಾಗಲಿ ನಮ್ಮ ವೀರ,
ನಾಯಿ ಸದೆಬಡಿವ ಶೂರ"
ಹಾರೈಕೆಯ ಸಮರ ಘೋಷಣೆಗಳು
ಹುಲಿಮಂದೆಯಿಂದ.
"ಇರಲಿ ತುಸು ಎಚ್ಚರ,
ಹಿಂತಿರುಗಿ ಕ್ಷೇಮದಿಂದ"
ಎಂದಾಕೆ ಹುಲಿರಾಣಿ
ಪ್ರೀತಿಯೊಳಡಗಿದ ದುಗುಡದಿಂದ.
ನಡೆದಾಯ್ತು ಕಾಳಗಕೆ ಹುಲಿರಾಯ
ಅರುಣ ಮೂಡುವ ಮುನ್ನ

ಕಳೆಯುವದರೊಳಗೊಂದು ಗಂಟೆ
ಹುಲಿರಾಯ ಬಂದ ಹಿಂದೆ.
ಬಲಗಣ್ಣ ಮೇಲೊಂದು ಗುರುತು,
ಕಾಲೊಂದು ಕುಂಟುತಿಹುದು.
ಬಾಲ ಮುದುರಿದ್ದನು ಸೆಟೆಸಿ ನುಡಿದ

"ಸಿದ್ಧರಾಗಿ ವೀರರೇ..
ಸಿದ್ಧ ವಿದೆ ಯೋಜನೆಯು..
ಯುದ್ಧಭೂಮಿಯ ನಕ್ಷೆ ಯೂ
ಆ ಜಾಗವನೆಲ್ಲ ನಾ ಬಲ್ಲೆ
ಆ ಕುನ್ನಿಗಿನ್ನಿಲ್ಲವಲ್ಲಿ ನೆಲೆ

ನುಗ್ಗಿ ಹೋರಾಡಿ ಬಡಿಯಿರಿ ಬಗ್ಗು
ಕುಗ್ಗಿ ಸಾಯಲುಬೇಕು ಕುನ್ನಿ ಕೊಬ್ಬು
ಬಗ್ಗದೆಯೇ ಹೊಕ್ಕು ಕುಗ್ಗದೆಯೇ ಕಾದಿರೈ.
ಮಗ್ಗುಲಲೇ ನಾನಿರುವೆ ಬೇಡ ಭಯವು "

ಐವತ್ತು ಹುಲಿಗಳ ಮಂದೆ,
ರಾಜನಿರುವುದೂ ಸೇರಿ ಹಿಂದೆ,
ಒಟ್ಟಾರೆ ಐವತ್ತೊಂದೇ..
ಅಜಮಿಳನ ನಾಯಿ
ಬಿಡಲಿಲ್ಲ ಯಾರನ್ನೂ ಮುಂದೆ.
ಮಿಂಚಿನಂತಹ ವೇಗ
ಶೌರ್ಯದಲಿ ಪರಿಘ
ಬಂದಿಯಾದುವು ಹುಲಿಗಳೆಲ್ಲ
ಯೋಜನೆಯು ಕೈಗೂಡಿ ನಡೆಯಲಿಲ್ಲ

ಅಜಮಿಳನ ಮುಂದು
ಬಂಧಿ ಹುಲಿಗಳ ಹಿಂಡು.
" ಬಪ್ಪರೆ ಭಲಾ ಅಜಮಿಳಾ..
ಮೆಚ್ಚಿ ಅಹುದೆನ್ನಬೇಕು
ನಿನ್ನೊಲವಿನ ಕುನ್ನಿಯ ಶೌರ್ಯ
ಆದರೂ ನಿನಗೊಂದು ಮಾತು.
ನಾವಿಲ್ಲಿ ಬರಲಿಲ್ಲ ಬೇಟೆಗೆ
ಬಂದದ್ದು ನಿನ್ನ ಭೇಟಿಗೆ.
ನಾವಾಡಿದ್ದರೆ ಬೇಟೆ,
ನಿನ್ನ ಕುನ್ನಿಗುಳಿಗಾಲವುಂಟೇ?
ಗೆಲುವಿಂದೇನು? ಸೋಲಾದರೇನು?
ಮುಖ್ಯ ಕಾರ್ಯ ಸಾಧಿಸುವ ರೀತಿ
ನಮಗುಂಟೆ ಕಾಡಿನಲಿ ಸೋಲಿನಾ ಭೀತಿ


ಸರಳ ಬದುಕಿನ ಬುನಾದಿಯಲಿ
ಬೆಳೆದು ಸುಳ್ಳಾಡದೆ ನಡೆವ ನಾಯಿ
ಈ ಮಾತು ಕೇಳಿ ನೊಂದು ಹೃದಯದಲಿ
ತನ್ನೊಡೆಯನಿಗೆ ನಿಜ ತಿಳಿಸಲೆತ್ನಿಸಿತು ಸನ್ನೆಯಲಿ
ಅಜಮಿಳ ಪಳಗಿದವ ರಾಜನೀತಿಯಲಿ
ನೋಡಿಯೂ ನೋಡದಂತಿಹನಲ್ಲಿ
ಹುಲಿರಾಯನ ನುಡಿಗಳೆಲ್ಲವ ನಿಜವೆಂದು ನಂಬಿದಂತೆ

ಬಿಡುಗಡೆಯ ನೀಡಿ ಹುಲಿಗಳಿಗೆಲ್ಲ
ಔತಣಕೆ ನಿಂತಿರಲು ಬಿನ್ನಹವಿತ್ತ.
ರಾತ್ರಿಯೂಟಕೆ ಕಡಿದು ಎಳೆ ಮರಿಯ
ಸಂಧಿಪತ್ರವನಿಟ್ಟ ಸಹಿ ಹಾಕಲು
ಜೀವನವೆಲ್ಲ ಗೆಳೆಯರಾಗಿರಲು
ಭೋಜನ ಮುಗಿಯುವ ಮೊದಲು

ಉಡುಗೊರೆಗಳಾಗಿ ನೀಡಿದನು
ಉಣ್ಣೆ -ಚರ್ಮಗಳ ಕೊಡುಗೆಗಳ
ಮುಟ್ಟಾಳನಲ್ಲ ಅಜಮಿಳನು
ಹುಲಿಗಳಿಗೂ ಬೇಕು ಊಟ ಎಂದರಿತಿಹನು

ಕುರಿಮಂದೆಯೊಡನೆ ಹೊಟ್ಟೆ ತುಂಬಿದ
ಹುಲಿ ಮಂದೆ ಕುಡಿವಾಗ ನೀರನೊಂದೇ ಕೊಳದಲಿ
ಅಜಮಿಳನು ನಸುನಗುತಾ ನುಡಿಸುತಿಹನು ಮುರಲಿ

ಅರುಣ್ ಕೋತಲ್ಕರರ "Ajamil and Tigers" ಪದ್ಯದ ಭಾವಾನುವಾದ