Pages

Tuesday, June 16, 2015

ಚೆಂಗುಲಾಬಿ


ಮುತ್ತನುದುರಿಸಿದ ಮುಂಜಾವಿನಲಿ
ಮಧು ಹೀರಿ ಮುಗುಳುನಗೆ ಚೆಲ್ಲಿ
ತಂಗಾಳಿಯಲೆಯಲ್ಲಿ  ತೊನೆದಿಹಳು ಚೆಂಗುಲಾಬಿ 

ಕತ್ತಲಾವರಿಸಿರಲು ಬಾಡಿಹಳು,  
ಕೊರೆವ ಚಳಿಯಿರುಳಿನಲಿ, ತಿಂಗಳಿನ ಬೆಳಕಿನಲಿ
ಮಂಕಾಗಿ ಮುದುರಿಹಳು ಚೆಂಗುಲಾಬಿ

ಚೆಂಗುಲಾಬಿಯ ಹಾಗೆ
ನನ್ನ ಎದೆಯಲೂ ಬೇಗೆ,
ಬಾಡಿದರೂ ಬತ್ತದು  ಪ್ರೀತಿ ಸೋನೆ 

ಒಲವಿನಾ ಬಲದಲ್ಲಿ
ನಲಿವಿರಲಿ ಮನದಲ್ಲಿ
ಏನಾದರೇನು ಭಯವ ಕಾಣೆ

ಪ್ರೇರಣೆ:- ಪಿ ಬಿ ಷೆಲ್ಲಿಯ ಮೂಲ ಪದ್ಯ ಕೆಳಗಿನಂತೆ.



To Constantia 

The rose that drinks the fountain dew
In the pleasant air of noon,
Grows pale and blue with altered hue—
In the gaze of the nightly moon;
For the planet of frost, so cold and bright,
Makes it wan with her borrowed light.

2.
Such is my heart—roses are fair,
And that at best a withered blossom;
But thy false care did idly wear
Its withered leaves in a faithless bosom;
And fed with love, like air and dew,
Its growth—