Pages

Monday, September 29, 2008

BCube -- BisiBeleBath

ಬಿಸಿಬೇಳೆ ಬಾತ್
ಒಂದು ಅಳತೆ ಅಕ್ಕಿಗೆ ಒಂದು ಅಳತೆ ಬೇಳೆ , ಒಂದು ಅಳತೆ ತರಕಾರಿ ಐದು ಅಳತೆ ನೀರು. ( ಈರುಳ್ಳಿ ಮತ್ತು ಟೊಮೇಟೊ ಇರಬೇಕು)
ಮೊದಲಿಗೆ ಬೇಳೆ , ತರಕಾರಿಗಳನ್ನು ನೀರಿನೊಡನೆ ಒಂದು ಚಮಚ ಎಣ್ಣೆ ಮತ್ತು ಒಂದು ಚಿಟಿಕೆ ಅರಿಷಿನ ಪುಡಿಯೊಂದಿಗೆ ಬೇಯಿಸಿಕೊಳ್ಳಬೇಕು. (ಸುಮಾರು ಒಂದು ಬಾರಿ ಕುಕರ್ ಕೂಗುವವರೆಗೆ)
ಅಕ್ಕಿ ತೊಳೆದು, ಒಣಕೊಬ್ಬರಿ ತುರಿ ಮತ್ತು ಬಿಸಿಬೇಳೆಬಾತ್ ಪುಡಿಯೊಂದಿಗೆ ಬೆರೆಸಿ ಮೇಲಿನ ಮಿಶ್ರಣದೊಂದಿಗೆ ಸೇರಿಸಿ ಮತ್ತೆ ಬೇಯಿಸಬೇಕು. ಜೊತೆಗೆ ರುಚಿಗೆ ತಕ್ಕಕ್ಷ್ಹ್ಟು ಉಪ್ಪು ಸೇರಿಸಬೇಕು. (ಇನ್ನೊಂದು ಬಾರಿ ಕುಕ್ಕರ್ ಕೂಗುವವರೆಗೆ)

ಪ್ರೆಷರ್ ಇಳಿದನಂತರ ಒಂದು ಬಾಂಡಲೆಯಲ್ಲಿ, ಒಣಮೆಣಸಿನಕಾಯಿ, ಕರಿಬೇವು, ಗೋಡಂಬಿ, ಬೇಕಿದ್ದರೆ ಕಡಲೇಬೀಜ ಸೇರಿಸಿ ಒಗ್ಗರಣೆ ಹಾಕಿಕೊಳ್ಳುವುದು. ಎಲ್ಲವನ್ನೂ ಒಟ್ಟಾಗಿ ಸೇರಿಸಿದರೆ ಬಿಸಿಬೇಳೆಬಾತ್ ರೆಡಿ.

ನಮ್ಮಾಕೆ ವೀಣಾ ಹೇಳಿದ ಹಾಗೆ

Bisibelebaath

for one measure of rice, equal measure of toordal and equal measure of mix of vegetables and five measures of water. (onions and tomato are part of vegetables)

first boil toor daal and mix of chopped vegetables in a cooker adding a spoon of oil and a spoon of turmeric powder till it gives single whistle.
then add the rice cocunut scrapes, and bisibelebaath powder along with salt. continue boiling for another whistle.


Fry dry chillies, coriander leaves, cashewnuts, groundnuts in oil add it to the above cooked dish. and surve hot Bcube.

As told by my wife veena,