Pages

Friday, November 23, 2012

೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ

೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ. (ತಡವಾಗಿದ್ದಕ್ಕೆ ಕ್ಷಮೆ ಇರಲಿ)


ಮನೋವೈದ್ಯಕೀಯ ಶಾಸ್ತ್ರ : ಎಡಬಾಗಕ್ಕೆ ವಾಲುವುದರಿಂದ ಐಫಿಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ ಎನ್ನುವ ಸಂಶೋಧನೆಗೆ
ಅನಿತಾ ಎರ್ಲಾಂಡ್, ಮತ್ತು ರಾಲ್ಫ್ ಸ್ವಾನ್ (ನೆದರ್‌ಲ್ಯಾಂಡ್) ಮತ್ತು ಟುಲಿಯೋ ಗೌಡಲೂಪೆ (ಪೆರು)

ಶಾಂತಿ ಪ್ರಶಸ್ತಿ. ಎಸ್.ಕೆ.ಎನ್. ಕಂಪನಿ.(ರಶಿಯಾ) ಹಳೆಯ ರಷಿಯದ ಸಿಡಿಮದ್ದುಗಳನ್ನು ಹೊಸ ವಜ್ರಗಳನ್ನಾಗಿ ಮಾರ್ಪಡಿಸಿದ್ದಕ್ಕೆ.


ಶಬ್ದಶಾಸ್ತ್ರ ಪ್ರಶಸ್ತಿ : ವ್ಯಕ್ತಿಯ ಮಾತುಗಳನ್ನು, ಕೆಲವೇ ಸೂಕ್ಷ್ಮ ಸೆಕೆಂಡುಗಳ ತಡೆಯ ನಂತರ ಪ್ರತಿಧ್ವನಿಸುವಂತೆ ಮಾಡಿ, ವ್ಯಕ್ತಿ ಮಾತಾಡದಂತೆ ತಡೆಯೊಡ್ಡುವ ಸಂಶೋಧನೆ ಮಾಡಿದ್ದಕ್ಕೆ. ಕಜುತುಕಾ ಕುರಿಹಾರ ಮತ್ತು ಕೋಜಿ ಸುಕಾಡ (ಜಪಾನ್) ಅವರಿಗೆ.


ನರಶಾಸ್ತ್ರ ಪ್ರಶಸ್ತಿ. ಸತ್ತ ಸಾಲ್ಮನ್ ಮೀನೂ ಸೇರಿದಂತೆ ಎಲ್ಲಾದರೂ, ಮಿದುಳಿನ ಚಟುವಟಿಕೆ ಗಮನಿಸುವದುಕ್ಕಾಗಿ, ಸಂಕೀರ್ಣ ಉಪಕರಣಗಳನ್ನು ಮತ್ತು ಸರಳ ಲೆಕ್ಕಗಳನ್ನು ರೂಪಿಸಿದ್ದಕ್ಕೆ, ಕ್ರೇಗ್ ಬೆನೆಟ್ ಅಬಿಗೇಲ್ ಬೇರ್ಡ್, ಮೈಕೇಲ್ ಮಿಲ್ಲರ್ ಮತ್ತು ಜಾರ್ಜ್ ವೋಲ್‌ಫೋರ್ಡ್ (ಅಮೆರಿಕಾ ಸಂಯುಕ್ತ ಸಂಸ್ಥಾನ).


ರಸಾಯನ ಶಾಸ್ತ್ರ : ಸ್ವೀಡನ್ನಿನ ಆಂಡರ್‌ಸ್ಲಾವ್ ನಗರದ ಕೆಲವು ಮನೆಗಳ ಜನರ ಕೂದಲು ಹಸಿರಾಗುವ  ಕಾರಣ ಕಂಡುಹಿಡಿದ್ದಕ್ಕೆ, ಜೊಹಾನ್ ಪೀಟರ್‌ಸನ್ (ಸ್ವೀಡನ್) ಅವರಿಗೆ.


ಸಾಹಿತ್ಯ ಪ್ರಶಸ್ತಿ : ವರದಿಗಳ ಬಗ್ಗೆ ವರದಿಯ ವರದಿಗಳನ್ನು ತಯಾರು ಮಾಡುವ ಬಗ್ಗೆ ಸಲಹೆ ನೀಡುವ ವರದಿಗಳ ಬಗೆಗಿನ ವರದಿಗಳ ವರದಿಯನ್ನು ನೀಡಿದ್ದಕ್ಕೆ ಅಮೆರಿಕಾ  ಸಂಯುಕ್ತ ಸಂಸ್ಥಾನದ ಅಕೌಂಟಬಿಲಿಟಿ ಕಚೇರಿಗೆ.


 ಭೌತಶಾಸ್ತ್ರ ಪ್ರಶಸ್ತಿ : ವ್ಯಕ್ತಿಯೊಬ್ಬ/ಳು ಕಟ್ಟಿಕೊಳ್ಳುವ ಕುದುರೆಬಾಲದ ಜಡೆಯ ಆಕಾರ ಮತ್ತು ಚಲನೆಯನ್ನು ನಿರ್ಧರಿಸುವ ಬಲಗಳ ತುಲನೆಯನ್ನು ಲೆಕ್ಕಿಸಿದ್ದಕ್ಕಾಗಿ, ಜೋಸೆಫ್ ಕೆಲ್ಲರ್ (ಅಮೆರಿಕಾ) ರೇಮಂಡ್ ಗೋಲ್ಡ್‌ಸ್ಟೀನ್ (ಅಮೆರಿಕಾ ಮತ್ತು ಇಂಗ್ಲೆಂಡ್), ಪ್ಯಾಟ್ರಿಕ್ ವಾರೆನ್ ಮತ್ತು ರಾಬಿನ್ ಬಾಲ್ (ಇಂಗ್ಲೆಂಡ್) ಇವರಿಗೆ.


ದ್ರವಚಲನ ಶಾಸ್ತ್ರ ಪ್ರಶಸ್ತಿ: ವ್ಯಕ್ತಿಯೊಬ್ಬ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ನಡೆದಾಗ ಏನಾಗುತ್ತದೆ ಎಂದು ತಿಳಿಯಲು ದ್ರವದ ಎರಚುವಿಕೆಯ ಚಲನೆಯನ್ನು ಅಭ್ಯಾಸ ಮಾಡಿದ ಸಂಶೋಧನೆಗೆ, ರೌಸ್ಲನ್ ಕ್ರೆಚೆಟ್ನಿಕೋವ್(ಅಮೆರಿಕಾ, ರಷಿಯಾ ಮತ್ತು ಕೆನಡಾ) ಮತ್ತು ಹಾನ್ಸ್ ಮೇಯರ್ (ಅಮೆರಿಕಾ) ಅವರಿಗೆ

ದೇಹ ರಚನಾಶಾಸ್ತ್ರ ಪ್ರಶಸ್ತಿ: ಚಿಂಪಾಂಜಿಗಳು ಬೇರೆ ಚಿಂಪಾಂಜಿಗಳ ಹಿಂಭಾಗದ ಚಿತ್ರ ನೋಡುವುದರಿಂದಲೇ ಅವನ್ನು ಗುರುತು ಹಿಡಿಯಬಲ್ಲುವು ಎನ್ನುವ ಸಂಶೋಧನೆಗೆ ಫ಼್ರಾನ್ಸ್ ಡಿ ವಾಲ್ (ನೆದರ್‌ಲ್ಯಾಂಡ್ ಮತ್ತು ಅಮೆರಿಕಾ) ಜೆನ್ನಿಫರ್ ಪೊಕೊರ್ನಿ (ಅಮೆರಿಕಾ) ಇವರಿಗೆ.

ಔಷಧಿ ಶಾಸ್ತ್ರ ಪ್ರಶಸ್ತಿ: ಕೊಲೋನೊಸ್ಕೋಪಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗಳ ಹೊಟ್ಟೆ ಒಡೆದುಹೋಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾದ ಸಲಹೆಗಳನ್ನು ವೈದ್ಯರಿಗೆ ನೀಡಿದ್ದಕ್ಕೆ, ಇಮಾನ್ಯುಯೆಲ್ ಬೆನ್-ಸೌಸನ್ ಮತ್ತು ಮೈಕೇಲ್ ಅಂಟಾನಿಯೆಟ್ಟಿ (ಫ಼್ರಾನ್ಸ್) ಅವರಿಗೆ.


ವಿಶೇಷ ಪ್ರಶಸ್ತಿ : ೧೯೯೧ರ ತಪ್ಪೊಂದನ್ನು ತಿದ್ದಿಕೊಳ್ಳುವ ಸಲುವಾಗಿ, ಈಗ ಜೋಸೆಫ್ ಕೆಲ್ಲರ್ ಅವರಿಗೆ ಮತ್ತೆ ಪ್ರಶಸ್ತಿ ನೀಡಲಾಗುತ್ತಿದೆ.  ಟೀ ಹರಿಯದಂತಿರುವ ಟೀ ಪಾಟ್ ಕೊಳವೆಯನ್ನು ಮಾಡಿದ್ದಕ್ಕಾಗಿ..  ಈ ಮೂಲಕ ಅವರು ೧೯೯೯ ಮತ್ತು ೨೦೧೨  ಎರಡು ಬಾರಿ ಇಗ್ನೊಬಲ್ ಪ್ರಶಸ್ತಿ ಗಳಿಸುತ್ತಿದ್ದಾರೆ.

Thursday, November 22, 2012

ತುಂಬುಗನ್ನಡದ ಶತಾವಧಾನ

ಪ್ರಪಂಚದಲ್ಲಿ ಜೀವಂತವಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿರುವ ಕನ್ನಡದಲ್ಲಿ ಅವಧಾನ ಕಲೆಯೂ ಅರಳಿದೆ.

ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಮತ್ತು ಸಹಸ್ರಾವಧಾನವೆಂಬ ಮೂರು ಬಗೆಗಳುಂಟು.

೮೦೦ ವರುಷಗಳ ಹಿಂದೆಯೇ ಉದಯಿಸಿದ ಈ ಕಲೆಯೂ ಆಧುನಿಕ ಯುಗದಲ್ಲಿ ಕಣ್ಮರೆಯಾಗುವಂತಾಗಿತ್ತಾದರೂ, ಬೆಳ್ಳಾವೆ ನರಹರಿ ಶಾಸ್ತ್ರಿಗಳು, ರಾ.ಗಣೇಶ್ ರಂತಹ ವ್ಯಕ್ತಿಗಳಿಂದ ಮರುಹುಟ್ಟು ಪಡೆದಿದೆ.

ಈ ಹಿಂದೆಯೇ ಸಂಪದದಲ್ಲಿ ನಾನು ನೋಡಿದ ಅಷ್ಟಾವಧಾನದ ಬಗ್ಗೆ ಒಂದು ಲೇಖನ ಬರೆದಿದ್ದೆ.  ಈಗ ಕನ್ನಡದ ಮನಸುಗಳಿಗೆ ಶತಾವಧಾನವನ್ನು ನೋಡುವ ಸುಂದರ ಗಳಿಗೆ ಕೂಡಿ ಬಂದಿದೆ,

ನವೆಂಬರ್ ೩೦, ಡಿಸೆಂಬರ್೧ ಹಾಗೂ ೨ರಂದು, ತುಂಬುಗನ್ನಡದ ಮೊದಲ ಶತಾವಧಾನ ಕಾರ್ಯಕ್ರಮ ಬೆಂಗಳೂರಿನ ಜಯನಗರ ಮೂರನೇ ಬ್ಲಾಕಿನ ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಮಂಗಳ ಮಂಟಪದಲ್ಲಿ ನಡೆಯಲಿದೆ.

ಆಸಕ್ತ ಮನಸ್ಸುಗಳಿಗೆ ಆತ್ಮೀಯ ಸ್ವಾಗತ.  ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ.
ಹಾಗೂ ಕಾರ್ಯಕ್ರಮದಲ್ಲಿ ಕೈಜೋಡಿಸುವ ಮನಸ್ಸಿರುವವರು ಅದೇ ಕೊಂಡಿಯ ಈ ಪುಟವನ್ನು ನೋಡಿ ಎಂದು ಕೋರಿಕೊಳ್ಳುತ್ತೇನೆ.

Sunday, November 04, 2012

ನಾ ನಿನ್ನವಳಲ್ಲ

ನಾ ನಿನ್ನವಳಲ್ಲ... ನಿನ್ನ
ನೆನಪಲೆ ಕಳೆದುಹೋದವಳಲ್ಲ.
ಹಂಬಲಿಸಿ ಕಾದಿರುವೆ  ಕಳೆದುಹೋಗಲು
ನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆ
ಇಡಿಸಾಗರದ ಮಧ್ಯೆ  ಹಿಮಚಕ್ಕೆಯಂತೆ.

ನೀ ನನ್ನ ಪ್ರೀತಿಸುವುದ ನಾ ಬಲ್ಲೆ.
ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ 
ಆದರೂ  ಕಳೆದುಹೋಗಲು ನನ್ನ ಹಂಬಲಿಕೆ
ಇರುಳಲ್ಲಿ ಇಣುಕಿಯೂ ನೋಡದ ಬೆಳಕಿನಂತೆ

ಪ್ರೀತಿ ಸಾಗರದಲಿ ನನ್ನ ಮುಳುಗಿಸು
ಮತಿಯ ಮತ್ತಿನಲೆ  ಮಲಗಿಸು
ಮೂಕವಾದರು, ಕೇಳದಾದರು
ಹಂಬಲಿಸಿ ಕಾದಿರುವೆ ಕಳೆದುಹೋಗಲು
ನಿನ್ನ ಪ್ರೀತಿಯ ಬಿರುಗಾಳಿಯಲೆ ತರಗೆಲೆಯಾಗಲು.

ಸಾರಾ ಟೀಸ್ ಡೇಲ್ ಅವರ " I am not yours " ಪದ್ಯದ ಭಾವಾನುವಾದ .. ಮೂಲ ಕೆಳಗಿನಂತಿದೆ.

I am not yours, not lost in you,
   Not lost, altho' I long to be
Lost as a candle lit at noon,
   Lost as a snow-flake in the sea.

You love me, and I find you still
   A spirit beautiful and bright,
Yet I am I, who long to be
   Lost as a light is lost in light.

Oh plunge me deep in love—put out
   My senses, leave me deaf and blind,
Swept by the tempest of your love,
   A taper in a rushing wind.

"I Am Not Yours "
by Sara Teasedale

Saturday, November 03, 2012

ಯುದ್ದಕಲೆ ೧. ರಣನೀತಿ ರೂಪಣೆ




. ಸುನ್ ತ್ಸು ಹೇಳಿದ್ದು. : ಯುದ್ದಕಲೆ ರಾಷ್ತ್ರವೊಂದಕ್ಕೆ ಅತ್ಯಂತ ಮಹತ್ವದ್ದು.

. ಅದು ಜೀವನ್ಮರಣಗಳ ಪ್ರಶ್ನೆಯೂ, ಸುಸ್ಥಿತಿ ಅಥವಾ ಅಧೋಗತಿಗಳಿಗೆ ಹೆದ್ದಾರಿಯೂ ಆಗಿದೆ. ಆದ್ದರಿಂದ ಈ ವಿಷಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲಾಗದು.

. ಯುದ್ದಕಲೆಯನ್ನು ನಿರ್ಣಾಯಿಕಗೊಳಿಸುವ ಐದು ಪ್ರಮುಖ ಅಂಶಗಳೆಂದರೆ
() ನೈತಿಕತೆ
() ಅಲೌಕಿಕತೆ
()ಲೌಕಿಕತೆ
()ದಳ ಪತಿ
() ನಿಯಮ ಮತ್ತು ಶಿಸ್ತು.

. ಇವುಗಳನ್ನು ಚೆನ್ನಾಗಿ ಮತ್ತು ಸಮಗ್ರವಾಗಿ ಪರಿಶೀಲಿಸಿಯೇ ರಣರಂಗದಲ್ಲಿನ ಸ್ಥಿತಿಗತಿಗಳನ್ನು ವಿಮರ್ಶಿಸಬೇಕು.

., ., ನೈತಿಕತೆಯು ಪ್ರಜಾಸಮೂಹವು ತನ್ನ ನಾಯಕನಿಗೆ ಜೊತೆಯಾಗಿರುವಂತೆ ಮಾಡುತ್ತದೆ.. ತನ್ನ ಪ್ರಾಣವನ್ನೂ ಲೆಕ್ಕಿಸದೆ, ಅಪಾಯಗಳನ್ನು ಎದುರಿಸುವಂತಹ ಹಿಂಬಾಲಕರಿರಬೇಕೆಂದರೆ, ಇದು ಅತಿ ಮುಖ್ಯ.

. ಅಲೌಕಿಕವೆಂದರೆ ಹಗಲು ರಾತ್ರಿಗಳು, ಕಾಲ ದೇಶಗಳು , ತಂಪು ಉಷ್ಣ ಮೊದಲಾದ ಹವಾಮಾನ ವೈಪರೀತ್ಯಗಳು.

. ಲೌಕಿಕವೆಂದರೆ ದೂರ ಹತ್ತಿರಗಳು, ಸುರಕ್ಶೆ ಅಪಾಯಗಳು, ಬಯಲು ಕಣಿವೆಗಳು, ಸಾವು ಬದುಕಿನ ಸಾಧ್ಯತೆಗಳು.

. ದಳಪತಿಯು ತನ್ನ ಬುದ್ದಿಮತ್ತೆ, ಪ್ರಾಮಾಣಿಕತೆ, ಕರುಣೆ, ಸಾಹಸ, ಶಿಸ್ತು ಮತ್ತು ಕಾರ್ಯಕ್ಷಮತೆಯ ಕಾರಣದಿಂದಿರುತ್ತಾನೆ.

೧೦. ನಿಯಮ ಮತ್ತು ಶಿಸ್ತು, ಸೈನ್ಯದ ವರ್ಗೀಕರಣ , ಅಧಿಕಾರಿಗಳ ಪದೋನ್ನತಿ, ಸೈನ್ಯದ ಪೂರೈಕೆಯ ಹಾದಿಯ ಸುಗಮಗೊಳಿಸುವಿಕೆ ಮತ್ತು ಮೇಲ್ವಿಚಾರಣೆ ಹಾಗೂ ಸೈನ್ಯದ ಖರ್ಚಿನ ಮೇಲೆ ನಿಗಾ ವಹಿಸುವಿಕೆಗೆ ಸಂಬಂಧಪಟ್ಟಿದೆ.

೧೧. ಈ ಐದು ಅಂಶಗಳೂ ಪ್ರತಿ ಸೇನಾಧಿಪತಿಗೆ ಅರಿವಿರಬೇಕು, ಇದನ್ನು ಅರಿತವನೇ ಜಯಶೀಲನಾಗುತ್ತಾನೆ, ಸೋಲು ಅವನ ಬಳಿ ಸುಳಿಯದು.

೧೨. ಆದ್ದರಿಂದ ಸೇನಾ ಸ್ಥಿತಿಗತಿಗಳನ್ನು ನಿರ್ಧರಿಸುವ ಮುಂಚೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು


೧೩.

. ನೈತಿಕತೆಗೆ ಯಾವ ರಾಷ್ಟ್ರ ಹೆಚ್ಚಿನ ಒತ್ತು ಕೊಡುತ್ತದೆ. ?
. ಇಬ್ಬರೂ ಸೇನಾಧಿಪತಿಗಳಲ್ಲಿ ಯಾರು ಹೆಚ್ಚು ಕಾರ್ಯಸಾಧನ ಶೂರರು?
. ಲೌಕಿಕ ಮತ್ತು ಅಲೌಕಿಕಗಳ ಸಹಾಯಕ ಅಂಶಗಳು ಯಾರ ಕಡೆಗಿವೆ ?
. ಶಿಸ್ತು ಯಾವ ಕಡೆ ಕಟ್ಟುನಿಟ್ಟಾಗಿ ಪಾಲಿಸಲ್ಪಟ್ಟಿದೆ?
. ಯಾವ ಸೈನ್ಯ ಬಲಶಾಲಿಯಾಗಿದೆ?
. ಯಾವ ಕಡೆಯ ಸೈನಿಕರು ಮತ್ತು ಅಧಿಕಾರಿಗಳು ಚೆನ್ನಾಗಿ ತರಬೇತಾಗಿದ್ದಾರೆ?
. ಯಾವ ಸೈನ್ಯದಲ್ಲಿ (ಸಾಧನೆಗೆ) ಬಹುಮಾನವೂ (ತಪ್ಪಿಗೆ) ಶಿಕ್ಷೆಯೂ ನಿಯಮಿತವಾಗಿ ಜಾರಿಗೆ ಬಂದಿದೆ?


೧೪. ಈ ಏಳು ಪ್ರಶೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರಿಂದ ಜಯವೇ ಅಥವಾ ಅಪಜಯವೇ ಎಂದು ಹೇಳಬಹುದು.

೧೫. ನನ್ನೀ ಸಲಹೆಗಳನ್ನು ಪಾಲಿಸುವ ಸೇನಾಧಿಪತಿಗೆ ಗೆಲವು ಶತಸಿದ್ಧ. ಅವನ ಪದವಿ ಮುಂದುವರೆಯಲಿ. ನನ್ನ ಮಾತನ್ನು ಕೇಳದ ಸೇನಾಧಿಪತಿಗೆ ಸೋಲಿಲ್ಲದೆ ಬೇರೆ ದಾರಿಯಿಲ್ಲ. ಅಂತಹವರು ಇರುವುದಕ್ಕಿಂತಲೂ ಹೋಗುವುದು ಮೇಲು.

೧೬. ಈ ಸಲಹೆಗಳ ಲಾಭವಲ್ಲದೆ, ಸಾಮಾನ್ಯ ನಿಯಮಗಳಿಗೆ ಹೊರತುಪಡಿಸಿದ ಅನುಕೂಲಕರ ಸನ್ನಿವೇಶಗಳುಂಟಾದರೆ ಎಚ್ಚರಿಕೆಯಿಂದ ಗಮನಿಸುತ್ತಿರಬೇಕು.

೧೭. ನನ್ನೀ ಸಲಹೆಗಳಲ್ಲದೆ, ಸನ್ನಿವೇಶಗಳು ಅನುಕೂಲಕರವಾಗಿದ್ದರೆ ರಣನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.

೧೮. ಎಲ್ಲಾ ಯುದ್ದಗಳೂ ತಂತ್ರಗಾರಿಕೆಯನ್ನೇ ಅವಲಂಬಿಸಿವೆ.

೧೯. ಆದ್ದರಿಂದ ದಾಳಿ ನಡೆಸುವ ಶಕ್ತಿಯಿದ್ದರೂ ಇಲ್ಲದವರಂತೆ, ನಮ್ಮ ಬಲ ಪ್ರಯೋಗಿಸುತ್ತಿದ್ದಾಗಲೂ ಏನೂ ಮಾಡದವರಂತೆ, ಹತ್ತಿರವಿದ್ದಾಗಲೂ ಶತ್ರು ನಾವು ದೂರವಿರುವಂತೆ ನಂಬುವಂತೆ ಮಾಡಬೇಕು. ನಾವು ದೂರವಿದ್ದಾಗ ಹತ್ತಿರದಲ್ಲೇ ಇರುವಂತೆ ಶತ್ರುವಿಗೆ ಕಾಣಿಸಿಕೊಳ್ಳಬೇಕು.

೨೦. ಶತ್ರುವನ್ನು ಅಜಾಗರೂಕತೆಯ ಬಲೆಯಲ್ಲಿ ಬೀಳುವಂತೆ ಗಾಳ ಹಾಕಬೇಕು. ಅರಾಜಕತೆ ಸೃಷ್ಟಿಯಾದೊಡನೆ ಮೇಲೆಬಿದ್ದು ಅವನನ್ನು ಮಣಿಸಬೇಕು.

೨೧. ಶತ್ರುವು ಎಲ್ಲಾರೀತಿಯಲ್ಲೂ ಸುರಕ್ಷಿತನಾಗಿದ್ದರೆ, ಅವನ ದಾಳಿಗೆ ಸಿದ್ದರಾಗಿ ಕಾಯಬೇಕು. ನಮಗಿಂತಲೂ ಬಲಶಾಲಿಯಾಗಿದ್ದರೆ ಅವನಿಂದ ತಪ್ಪಿಸಿಕೊಳ್ಳಬೇಕು.

೨೨. ಶತ್ರುವಿನ ಕೋಪ ಮೂಗಿನ ತುದಿಯಲ್ಲಿದ್ದರೆ ಅವನನ್ನು ರೊಚ್ಚಿಗೇಳಿಸಬೇಕು, ನೀವು ಬಲಹೀನರಂತೆ ತೋರಿಸಿಕೊಂಡು ಅವನು ದಾಳಿ ಮಾಡುವಂತೆ ಪ್ರಚೋದಿಸಬೇಕು.

೨೩. ಶತ್ರು ವಿಶ್ರಾಂತಿ ಪಡೆಯುತ್ತಿದ್ದರೆ ಅದಕ್ಕೆ ಅವಕಾಶವನ್ನೇ ಕೊಡಬಾರದು.

೨೪. ಶತ್ರು ಸಿದ್ಧನಾಗಿಲ್ಲದಿರುವಾಗ ದಾಳಿ ಮಾಡಬೇಕು. ನಮ್ಮನ್ನು ನಿರೀಕ್ಷಿಸಿಯೇ ಇರದ ಜಾಗದಲ್ಲಿ ಕಾಣಿಸಿಕೊಳ್ಳಬೇಕು.

೨೫. ಜಯದೆಡೆಗೆ ನಮ್ಮನ್ನು ಕೊಂಡೊಯ್ಯಬಲ್ಲ ಅಸ್ತ್ರಗಳ ಸುಳಿವೂ ನಮ್ಮ ಶತ್ರುವಿಗೆ ಸಿಗದಂತಿರಬೇಕು.

೨೬. ಗೆಲ್ಲುವ ಸೇನಾಧಿಪತಿ ಯುದ್ಧಕ್ಕೆ ಮೊದಲೇ ಹಲವಾರು ಬಾರಿ ಲೆಕ್ಕಾಚಾರ ಹಾಕಬೇಕು.

ಕೆಲವೇ ಲೆಕ್ಕಾಚಾರಗಳ ಸೇನಾಧಿಪತಿ ಸೋಲುತ್ತಾನೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟೂ ಕರಾರುವಕ್ಕಾಗಿ ಮತ್ತು ಹೆಚ್ಚಾಗಿ ಲೆಕ್ಕಾಚಾರ ಮಾಡಬೇಕು. ಈ ಲೆಕ್ಕಾಚಾರಗಳ ಆಧಾರದ ಮೇಲೆಯೇ ಸೋಲು ಗೆಲವುಗಳನ್ನು ನಾವು ಮುಂಗಾಣಬಹುದು.

Thursday, November 01, 2012

ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ

ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||

ತೆಂಕಣದ ಗಾಳಿ ಸೋಕಿದೊಡೆ
ಒಳ್ನುಡಿಗಳನು ಕೇಳಿದೊಡೆ
ಇಂಪಾದ ಸಂಗೀತ ಕಿವಿಯೊಕ್ಕೊಡೆ
ಬಿರಿದ ಮಲ್ಲಿಗೆ ಕಂಡರೆ
ಮಧುಮಹೋತ್ಸವವಾದರೆ
ಆರಂಕುಶವಿಟ್ಟರೂ
ನೆನೆವುದೆನ್ನ ಮನ ವನವಾಸಿ ದೇಶವನು..

ಕೆಂದ ಲಂಪಂ ಗೆಡೆಗೊಂಡೊಡಂ  -- ಇದರ ಅರ್ಥ ಯಾರಾದರೂ ತಿಳಿಸುವಿರಾ..?