Pages

Tuesday, December 22, 2009

ನನ್ನೊಲವಿನ ಮತ್ತೊಂದು ಚಿತ್ರ ಗೀತೆ...

ಸೇವಂತಿಯೆ ಸೇವಂತಿಯೆ
ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ
ಸೇವಂತಿಯೆ ಸೇವಂತಿಯೆ
ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕಿಂತ ಸೌಗಂಧ ನೀನು
ಜನ್ಮಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಜನ್ಮಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು
ಸೇವಂತಿಯೆ ಸೇವಂತಿಯೆ
ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ
ಮಲ್ಲಿಗೆ ಮಂಟಪವ ನನ್ನ ಮನಸಲ್ಲಿ ಕಟ್ಟಿಸುವೆ
ಅಂದದ ಸಿರಿದೇವಿಯ ಅಲ್ಲಿ ಬಚ್ಚಿಟ್ಟು ಪೂಜಿಸುವೆ
ಭುವಿಯ ಹಸಿರಿನಂತೆ ಈ ಪಾದದಡಿಗೆ ಇರುವೆ
ಮಳೆಯ ಮೋಡದಂತೆ ಆ ಸುಡುವ ಬಿಸಿಲ ತಡೆವೆ.
ಬಾಳ ತುಂಬಾ ನಾ ಬರುವೆ ಹಸ್ತಕ್ಕೆ ರೇಖೆಯ ಹಾಗಿರುವೆ
ಚಂದ ಚಂದದ ಸೇವಂತಿಯ ಅಂದಕ್ಕೆ ಕಾವಲು ನಾನಿರುವೆ


ಕಾಲ್ಗೆಜ್ಜೆ ನಾದದಲಿ ನನ್ನ ಗುಂಡಿಗೆ ಗೂಡು ಇದೆ
ಕೈಬಳೆ ಸದ್ದಿನಲಿ ನನ್ನ ಆಸೆಯ ಬುಟ್ಟಿಯಿದೆ
ಸಿಂಧೂರ ಬಿಂದಿಗೆಯಲ್ಲಿ ನಾ ಜೀವವ ತುಂಬಿದೆಯಲ್ಲಿ
ನೀನಿಟ್ಟ ಕಾಡಿಗೆಯಲ್ಲಿ ನಾನೆಟ್ಟೆ ಪ್ರೀತಿಯ ಬಳ್ಳಿ
ನನ್ನ ಬಣ್ಣದ ಮನಸಿನಲಿ ನಿನ್ನ ಚಿತ್ರವ
ಯಾರೂ ಇಲ್ಲದ ಆ ಊರಲಿ ನಾನೇ ನಿನ್ನವನಾಗಿರುವೆ

ಸೇವಂತಿಯೆ ಸೇವಂತಿಯೆ
ನನ್ನಾಸೆ ಅಲೆಯಲ್ಲಿ ಘಮ್ಮಂತೀಯೆ
ಮಲ್ಲಿಗೆಗಿಂತ ಬಲು ಅಂದ ನೀನು
ಶ್ರೀಗಂಧಕಿಂತ ಸೌಗಂಧ ನೀನು
ಜನ್ಮಜನ್ಮದ ಪ್ರೀತಿಗೆ ನನ್ನ ಮೆಚ್ಚಿನ ಹಾಡಿದು

No comments:

Post a Comment