Pages

Tuesday, April 19, 2011

ನಾನು ಕೋಳೀಕೆ ರಂಗ

ರಚನೆ ಟಿ.ಪಿ. ಕೈಲಾಸಂ

ನಾನು ಕೋಳೀಕೆ ರಂಗ
ಕೋನು ಳೀನು ಕೆನು ರನು ಸೊನ್ನೆ ಗ
ಕ ಕೊತ್ವ ಳಿ ಕ್ ಕೆತ್ವ ರ ಸೊನ್ನೆಯೂನು ಗ
ಇದನ್ನ ಹಾಡಕ್ ಬರ್ದೆ ಬಾಯ್ ಬಿಡೋನು ಬೆಪ್ಪು ನನ್ನ ಮಗ

ನಾನು ಕೋಳೀಕೆ ರಂಗ
ಕೋನು ಳೀನು ಕೆನು ರನು ಸೊನ್ನೆ ಗ
ಕ ಕೊತ್ವ ಳಿ ಕ್ ಕೆತ್ವ ರ ಸೊನ್ನೆಯೂನು ಗ
ನಮ್ಮ್ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡಮಗ


ನಾ ಹುಟ್ಟಿದ್ ವೊಡ್ರಳ್ಳಿ ಬೆಳೆದದ್ದ್ ಬ್ಯಾಡ್ರಳ್ಳಿ
ಮದುವೆ ಮಾರ್ನಳ್ಳಿ ಹೊಲಗೊಳ್ ಹಾರ್ನಳ್ಳಿ ||೨||
ನಮ್ಮ ಶಾನುಭೋಗಯ್ಯ ಅಲ್ದೆ ಶೇಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನ.

ಹೆಂಡ್ರನ್ನು ಮಕ್ಕಳನ್ನು ಬುಟ್ಟು,
ಅಟ್ಟಿ ಅವ್ವೇನು ಬುಟ್ಟು
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಮ್ಮಳ್ಳಿ ಕಿಲಾಡಿ ಉಂಜಾ.. ||ನಾನು||


ಎತ್ತಿಲ್ದ್ ಬಂಡಿಗ್ಳೂ ವೆ ಎಣ್ಣಿಲ್ಲದ್ ದೀಪಗ್ಳೂವೆ
ತುಂಬಿದ್ ಮೈಸೂರಿಗ್ ಬಂದೆ
ದೊಡ್ ಚೌಕದ್ ಮುಂದೆ ದೊಡ್ ಗಡಿಯಾರದ್ ಹಿಂದೆ
ಕಟ್ಟ್ ತಂದಿದ್ ಬುತ್ತೀನ್ ತಿಂತಿದ್ದೆ.

ಅಲ್ ಕುದುರೆ ಮೇಲ್ ಕುಂತಿದ್ದ್ ಒಬ್ಬ್ ಸವಾರಯ್ಯಾ
ಕೆದರಿದ್ ತನ್ ಮೀಸೆ ಮೇಲ್ ಆಕ್ತಾನ್ ತನ್ ಕಯ್ಯಾ
ಕೇಳ್ತಾನ್ ನನ್ನ
ಗದರಿಸ್ತಾನ್ ರೀ
ಬೆದರಿಸ್ತಾನ್ ರೀ
ಲೇ ನೀ ಯಾರೋ , ಯಾಕೋ ಎಲ್ಲಿ ಅಂತ
ಹ ಹ ನಾನ್ ಕೋಳೀಕೆ .........

1 comment: