Pages

Friday, January 15, 2010

ಸ್ಪಿರಿಚುಯಾಲಿಟಿ ಮತ್ತು ವಿಜ್ಞಾನ

ಸ್ಪಿರಿಚುಯಾಲಿಟಿ ಎಂದು ನೀವು ಹೇಳುತ್ತಿರುವ ಜ್ಞಾನದ ಪ್ರಾಕಾರಕ್ಕೆ ಎಲ್ಲ ಜ್ಞಾನಗಳೂ ಅಂಗವೇ.. ಅದನ್ನು ವಿಜ್ಞಾನದ ತಟ್ಟೆಯಲ್ಲಿಡಬೇಕಿಲ್ಲ. ಸ್ಪಿರಿಚುಯಾಲಿಟಿ ಇಲ್ಲದ ವಿಜ್ಞಾನ ವಿಜ್ಞಾನವೂ ಅಲ್ಲ. ನನ್ನ ಲೆಕ್ಕದಲ್ಲಿ ಸ್ಪಿರಿಚುಯಾಲಿಟಿ ಎಂದರೆ ನೀವು ಹೇಳುವ ನಂಬಿಕೆಗಳಲ್ಲ. ನಂಬಿಕೆ ಎನ್ನುವುದು ಬಹು ದೊಡ್ಡ ಮಾತು. ಬಹಳಷ್ಟು ಬಾರಿ ನಮ್ಮ ನಂಬಿಕೆಗಳನ್ನು ನಾವು ಮೀರಲಾಗುವುದಿಲ್ಲ. ಇದನ್ನು ಶಿವರಾಮಕಾರಂತರು "ನಮ್ಮ ಕಲ್ಪನೆಯನ್ನು ಮೀರದ ದೇವರು" ಎಂಬ ಲೇಖನದಲ್ಲಿ ವಿಧಿತಗೊಳಿಸಿದ್ದಾರೆ. ಚಿದಂಬರ ರಹಸ್ಯದ ನಾಯಕ ಕಡೆಗೆ ರೊಚ್ಚಿಗೆದ್ದು, 'ಅದೂ ಕರೆಕ್ಟೇ ಹೋಗೋ' ಎನ್ನುವುದೂ ಸತ್ಯದ ಹಲವು ಮುಖಗಳನ್ನು ತೋರಿಸುವ ಒಂದು ಪ್ರತಿಮಾ ರೂಪಕವಷ್ಟೇ. ನಮ್ಮ ನಂಬಿಕೆಗಳು ಸರಿ ಎಂದು ನಮಗೆ ಕಂಡಂತೆ ಬೇರೆಯವರಿಗೆ ಹಾಗೆ ಕಾಣಬೇಕಾಗೂ ಇಲ್ಲ. ಬಿಗ್ ಬ್ಯಾಂಗ್ ಥಿಯರಿಯ ಪಿತಾಮಹ ಸ್ಟೀಫನ್ ಹಾಕಿಂಗ್ ತಮ್ಮ ಥಿಯರಿ ತಪ್ಪು ಎಂದು ತಾವೇ ಹೇಳಿದ್ದು ಅಂತಹ ಒಂದು ಉದಾಹರಣೆ. ಅವರನ್ನು ನಮ್ಮ ಕನ್ನಡದ ವೈಜ್ಞಾನಿಕ ಬರಹಗಾರರಲ್ಲೇ ಪ್ರಮುಖರಾದ ನಮ್ಮ ನೆಚ್ಚಿನ ಮ್ಯಾಥ್ಸ್ ಮೇಷ್ಟ್ರು ಜಿ.ಟಿ. ನಾರಾಯಣರಾಯರು ಭೇಟಿಯಾದಾಗ ಅವರು ನಮ್ಮ ಭೇಟಿಯ ಕಾರಣವೇನಿರಬಹುದು ಎಂದರಂತೆ. ಅದಕ್ಕೆ ಸ್ಟೀಫನ್ ಹಾಕಿಂಗ್ ಕೊಟ್ಟ ಉತ್ತರ "ಕಾಸ್ಮಿಕ್ ಅರ್ರೇಂಜ್ ಮೆಂಟ್" ಎಂದು. ನಮ್ಮವರು ಸುಲಭವಾಗಿ ಅದನ್ನು ಹಣೆಬರಹ ಎನ್ನುತ್ತಾರೆ.

ಆದರೆ ಸ್ಪಿರಿಚುಯಾಲಿಟಿ ಅಷ್ಟು ಸುಲಭದ್ದಲ್ಲ. ನೀವು ಅನುಸರಿಸುವ ನಂಬಿಕೆಗಳ ಪರಿಣಾಮಗಳೇನು ಎಂದು ಯೋಚಿಸಿ ನೋಡಿ. ಮನುಷ್ಯನ ಮನಸ್ಸಿನ ಶಕ್ತಿ ಇನ್ನೂ ಅಳತೆಯ ಪರಿಮಾಣಗಳಿಗೆ ಸಿಕ್ಕಿಲ್ಲ್. ಅದಕ್ಕಾಗಿ ವಿಜ್ಞಾನವನ್ನು ದೂರುವುದು ತಪ್ಪು. ಯಾವುದೋ ಶಕ್ತಿ ನಮ್ಮನ್ನು ನಡೆಸುತ್ತಿದೆ ಎಂಬುದು ನಿಮ್ಮ ನಂಬಿಕೆಯಾದರೆ ಅದು ತಪ್ಪಲ್ಲ. ಅದನ್ನೊಪ್ಪದ ಜನ ವರ್ಗದ ತಿಳಿವಳಿಕೆಯೂ ತಪ್ಪಲ್ಲ. ಆದರೆ ಅದನ್ನು ಮುಂದೆ ಮಾಡಿ ನೈಜ ವಿಷಯವನ್ನು ಮರೆತು ಜಗಳ ಮಾಡುವುದು ತಪ್ಪು. ಆದರೆ ನಮ್ಮ ನಂಬಿಕೆಗಳು ಇತರರಿಗೆ ತೊಂದರೆ ಮಾಡದಂತಿರಬೇಕೆಂಬ ಅರಿವಿದ್ದರೆ ಸಾಕು.

ವಿಜ್ಞಾನಿಗಳಿಗೆ ಸ್ಪಿರಿಚುಯಾಲಿಟಿಯನ್ನು ಸುಳ್ಳೆಂದು ಸಾಧಿಸುವ ತವಕವಿದ್ದರೆ ಅದು ವಿಜ್ಞಾನವಲ್ಲ. ಅವನು ವಿಜ್ಞಾನಿಯಲ್ಲ್. ವಿಜ್ಞಾನಿ ಜ್ಞಾನಾರ್ಜನೆಗಾಗಿ ಪ್ರಶ್ನೆ ಕೇಳುತ್ತಾನೆ. ಅದನ್ನುತ್ತರಿಸಿದೆ ವಿಜ್ಞಾನಿಯನ್ನು ಅವಹೇಳನ ಮಾಡಿದರೆ ಅದು ಸಾಧುವಲ್ಲ್. ವಿಜ್ಞಾನಿಗಿರುವುದು ಇರಬೇಕಾದ್ದು ಸತ್ಯ ಶೋಧನೆಯ ತವಕ. ಅದನ್ನು ಆಧ್ಯಾತ್ಮಿಕ ವಿಜ್ಞಾನಿ ತನ್ನ ಮನಸ್ಸಿನ ತಕ್ಕಡಿಯಲ್ಲಿ ತೂಗಿ ನೋಡಿ ನಿರ್ಧರಿಸಿದರೆ, ಭೌತವಿಜ್ಞಾನಿ ಅದಕ್ಕೆ ಗಣಿತದ ಪ್ರಮಾಣ ಕೇಳುತ್ತಾನೆ. ಗ್ರಹಣದಂತಹ ವಿಚಾರದಲ್ಲಿ ನಾಗೇಶ್ ಹೆಗಡೆ , ಸಂಪದದಲ್ಲೇ ಡಾ.ಎ.ಪಿ.ರಾಧಾಕೃಷ್ಣ, ಪುತ್ತೂರು (ಇಲ್ಲಿದೆ)

ಅವರ ತಿಳುವಳಿಕೆಗಳಲ್ಲಿ ತಪ್ಪೇನಿಲ್ಲ್. ಆಸು ಹೆಗಡೆಯವರದೂ ಅಂತಹುದೇ ವಿಚಾರಧಾರೆಯ ತೆಳುಹಾಸ್ಯದ ಮಾತು. ಅದಕ್ಕೇ ಮನ ನೊಂದಿತೆಂದರೆ, ಭೂಮಿ ಗುಂಡಾಗಿ ಸೂರ್ಯನ ಸುತ್ತಾ ಸುತ್ತುತ್ತಿದೆ ಎಂದ ಗೆಲಿಲಿಯೋ ಗೆ ಬೆಂಕಿ ಹಚ್ಚಲು ಹೋಗಿದ್ದಕ್ಕೆ ಏನಾಗಬೇಕು?

ಕಡೆಯ ಮಾತು. ೯೨ ರಲ್ಲೋ ೯೩ ರಲ್ಲೋ ಸರಿಯಾಗಿ ನೆನಪಿಲ್ಲ್, ಗ್ರಹಣವಾದಾಗ ನಮ್ಮ ಬೀದಿಯ ವಯಸ್ಸಾದವರಿಗೆ "ಮುಂದಿನ ಗ್ರಹಣ ನೋಡಲು ಇರುತ್ತೀರೋ ಇಲ್ಲವೋ ಬಂದು ನೋಡಿ" ಎಂದು ತೋರಿಸಿದ್ದೆ. ಅದಕ್ಕವರು ಬೈದುಕೊಂಡೇ ಬಂದು ನೋಡಿದ್ದರು. ಈಗಲೂ ಅವರಲ್ಲಿಬ್ಬರು ಇದ್ದಾರೆ. ವಯಸ್ಸು ೮೫ ರ ಆಸುಪಾಸು. ನೋಡದೆ ಒಳಗೇ ಉಳಿದ ನನ್ನ ಜೊತೆಗಾರರೇ ಕೆಲವರಿಲ್ಲ!

1 comment:

  1. ಚೆನ್ನಾಗಿ ಬರೆದಿದ್ದೀರಿ. ನಾನು ಜಿ.ಟೀ .ನಾರಾಯಣ್ ರಾವ್ ಅವರ ಅಭಿಮಾನಿ.ಅವರೊಂದಿಗೆ ಕೆಲ ಕಾಲ ಪತ್ರ ಬಾಂಧವ್ಯ ಇತ್ತು.ತುಂಬಾ ಸಹೃದಯರು ಅವರು..ಈಗ ನಮ್ಮೊಂದಿಗಿಲ್ಲ ಆ ಚೇತನ .ನಿಮ್ಮ ಬರಹ ಓದಿ ಒಮ್ಮೆ ಅವರ ನೆನಪಾಯಿತು

    ReplyDelete