Pages

Monday, July 30, 2012

ನಲವತ್ತು - ಚಾಲೀಸ್

ನಲವತ್ತು ವಯಸ್ಸಿಗೆ ಕಣ್ಣಿಗೆ ಕನ್ನಡಕ ಬರುತ್ತಂತೆ. ಅದಕ್ಕೇ ಕನ್ನಡಕಕ್ಕೇ ಚಾಲೀಸು ಅಂತ್ಲೂ ಹೇಳ್ತಾರೆ. ನನಗೆ ಈ ತಿಂಗಳಲ್ಲಿ ನಲವತ್ತು ಅಫ಼ಿಷಿಯಲ್ ಆಗಿ ತುಂಬುತ್ತೆ.  ಅನ್-ಅಫ಼ಿಷಿಯಲ್ ಆಗಿ ತುಂಬಕ್ಕೆ ಇನ್ನಾರು ತಿಂಗಳಿದೆ.

ಕಾಗದ-ಪತ್ರ ದಾಖಲಾತಿಗಳಿಲ್ಲದೇ ಹೋದರೆ ಅದಕ್ಕೇನು ಬೆಲೆ ಇಲ್ಲ ತಾನೇ..? ಅದಕ್ಕೆ ನಾನೂ ಇವತ್ತಿಗೇ ನಲವತ್ತು ತುಂಬಿತು ಅಂದುಕೊಂಡುಬಿಡ್ತೀನಿ ಅಷ್ಟೆ.

ನನಗದರಿಂದೇನು ಬೇಜಾರಿಲ್ಲ.  ಲೈಫ಼್ ಬಿಗಿನ್ಸ್ ಅಟ್ ಫ಼ಾರ್ಟಿ ಅಂಥ ಇಂಗ್ಲಿಷ್ ಮಾತಿದೆಯಲ್ಲ.  ಹಾಗೇ ಇದು ನನಗೆ ಹೊಸ ಜೀವನ ಪ್ರಾರಂಭಿಸುವ ಸಂಭ್ರಮ.

ವಿಷ್ಣು-ರಜನಿ ಹೇಳಿದ ಹಾಗೇ ಐದು ಎಂಟುಗಳು ಕಳೆದಾಯಿತು, ಆಟ, ಪಾಠ, ಮದುವೆ, ಮಕ್ಕಳು, ಧನ ಅಂತೆ ನಲವತ್ತರವರೆಗೆ.   ಮುಂದೆ, ಲೋಕ ಸುತ್ತಿ, ಶಾಂತಿ ಗಳಿಸಿ ಎನ್ನುತ್ತಾರೆ.

ಇಷ್ಟು ದಿನಗಳಲ್ಲಿ ನಾನು ಮಾಡಿದ್ದು ಏನೆಂದು ಹಿಂತಿರುಗಿ ನೋಡಿದರೆ, ಕಣ್ಣಿಗೆ ಕಾಣುವಂತಹುದು ಏನೂ ಇಲ್ಲ. ಮಣ್ಣಿಗೆ ಸೇರುವಂತಹುದು ಸಾವಿರ. ಮುಂದಾದರೂ ಏನಾದರೂ ಮಾಡಬೇಕೆನ್ನುವ ತುಡಿತ ಕಜ್ಜಿಯ ಕಡಿತದಂತೆ ಹಾಗೇ ಇದೆ. ಈ ನಾಲ್ಕು ಸಾಲು ಬರೆಯಲು ಹತ್ತು ದಿನಗಳೇ ಆಗಿ ಹೋಗಿರುವಾಗ, ಇನ್ನು...  ಇರಲಿ ನಾನು ಸದಾ ಆಶಾವಾದಿ..

No comments:

Post a Comment