Pages

Tuesday, June 09, 2009

ರಾಟೆ

ವರಗಳ ಪೆಟ್ಟಿಗೆಯ ಬಳಿ ಕುಳಿತು ನುಡಿದ ದೇವ
ಮೊದಲು ಮಾನವನ ಮಾಡಿದಾಗ
ಜಗದ ಸೊಬಗೆಲ್ಲ ಇವನ ಬಳಿ ಬಿದ್ದಿರಲಿ
ಕೊಡುವೆ ಎಲ್ಲ ವರಗಳನಿವಗೆ ನನಗಿರುವ ಶಕ್ತಿಯಲಿ

ಶಕ್ತಿಯಿತ್ತನು ಮೊದಲು, ಸೌಂದರ್ಯ ಹಿಂದೆ, ಬುದ್ದಿ ಮತ್ತೆ ಗೌರವ
ಜತೆಗಷ್ಟು ಸಂತಸ. ಹೀಗೆ ಕೊಟ್ಟನು ದೇವ ಎಲ್ಲವನ್ನೂ,
ಕೊನೆಯದೊಂದನು ಕೊಡುವ ಮುನ್ನ ಸ್ವಲ್ಪ ನಿಂತನು.
ಅವನೆಲ್ಲ ವರಗಳಲಿ ನೆಮ್ಮದಿಯದೊಂದೇ ಉಳಿದಿರುವುದ ಕಂಡನು.

ಈ ರತ್ನವನೂ ನಾನು ನನ್ನೀ ಕೂಸಿಗೆ ಕೊಟ್ಟರೆ, ನುಡಿದನವ
ಮೆಚ್ಚುವನು ನನ್ನ ವರಗಳನು, ಮರೆತು ನನ್ನ.
ಲೌಕಿಕದೆ ಮುಳುಗುವನು, ಮರೆತುಬಿಡುವನು ತನ್ನ ಗಮ್ಯ.
ಕೊಟ್ಟೆನಾದರೆ ಈ ವರವ , ಕಳೆದುಹೋದೀತು ಜೀವನ ರಮ್ಯ.

ಇರಲಿ ಮಿಕ್ಕೆಲ್ಲ ಅವನ ಬಳಿಯೇ
ನೆಮ್ಮದಿಯು ಅವನಿಗಿನ್ನು ಮರೀಚಿಕೆಯೇ
ಹಣವಿರಲಿ, ಕೀರ್ತಿ ಗೌರವಗಳಿರಲಿ, ಇರಲಿ ಸಾವಿರ ಸೌಖ್ಯ.
ನನ್ನೆಡೆಗೆ ಪ್ರೀತಿ ಗೌರವದಲಿ, ಬದುಕಿದರೆನ್ನೆದೆಯಲೇ ಅವನಿಗೆ ಮೋಕ್ಷ.

ಜಾರ್ಜ್ ಹರ್ಬಟ್ ಕವಿಯ "The Pulley" ಕವಿತೆಯ ಭಾವಾನುವಾದ.

1 comment: