Pages

Wednesday, June 03, 2009

ಮೋಹದ ಬಲೆ

ಚಿಮ್ಮಿತು ಚಿಮ್ಮಿತು
ಪ್ರೀತಿಯ ಒರತೆ
ಹೊಮ್ಮಿತು ಹೊಮ್ಮಿತು
ಚಿಗುರಿ ಪ್ರೇಮಲತೆ

ಸೇರಿತು ಹಾಡಿತು
ಭಾವಗಳ ಸಂತೆ
ಬೆರೆಯಿತು ಮರೆಯಿತು
ಜೀವ ಎಲ್ಲ ಚಿಂತೆ.

ಮಿಡುಕಿತು ನುಡಿಯಿತು
ಮೋಹನ ವೀಣೆ
ಆದಿಯೋ ಅಂತ್ಯವೋ
ಅರಿಯೆನು ಜಾಣೆ.

ಸರಿಯಿತು ತೆರೆಯಿತು
ಮೋಹದ ಬಲೆ
ಮೈಮರೆಸಿ ಮನತೆರೆಸಿತು
ನಿಸರ್ಗದ ಕಲೆ.

1 comment:

  1. ಬರೆಯಿತು ಕೊರೆಯಿತು
    ಮೊದ್ಮಣಿಯ ಲೇಖನಿ
    ಖುಷಿಯಲಿ ಮುದದಿಲಿ
    ಬಡಬಡಿಸಿತು ನನ್ನೀ ಮನಿ

    sooper ಆಗಿದೆ, keep them coming :-D

    ReplyDelete