Pages

Monday, February 20, 2012

ಓಸಿಮಾಂಡಿಯಾಸಿಸ್


ದೂರದೂರಿನ ಯಾತ್ರಿಕನೊಬ್ಬ
ಪುರಾತನ ನಾಡಿಂದ ಹಿಂದಿರುಗುವಾಗ
ಕಂಡನಂತೆ ಮರಳುಗಾಡಿನ ಮಧ್ಯೆ
ಮುಂಡವಿಲ್ಲದ ಕಾಲುಗಳೆರಡು,
ಕೆಳಗೆ ಮರಳಲ್ಲಿ ಬಿದ್ದ ಮಸುಕು ಶಿರ,
ಮುಖದಲ್ಲಿ ಮುಗುಳ್ನಗೆ,
ಬಿರಿದ ತುಟಿ,
ತೋರುತಿದೆ ಗತ್ತು,
ಶಿಲ್ಪಿ ಕೈಚಳಕದ ಕಸರತ್ತು,
ಶಿಥಿಲ ಶಿಲ್ಪದ ಮೇಲೂ ಭಾವಗಳ ಬೆಳಕು,
ವಿಧಿಗೆದುರಾಗಿ ನಿಂತಿದೆಯೇನೋ ಈ ಬದುಕು:
ಕೆಳಗೊಂದು ಬಿನ್ನವತ್ತಳೆ, ಹೀಗೆ
"ಓ ಬಲಶಾಲಿಗಳೇ,
ನಾನು ಓಸಿಮಾಂಡಿಯಾಸಿಸ್, ರಾಜಾಧಿರಾಜ.
ನನ್ನ ಸಾಧನೆಗಳೆಡೆ ನೋಡಿ, ನೀವು ಹೆದರುವುದೇ ನಿಜ"
ಶಿಥಿಲ ಶಿಲ್ಪದ ಹೊರತು ಬೇರೇನೂ ಇಲ್ಲ ಅಲ್ಲಿ,
ಮಿತಿಯನರಿಯದೆ ಸುತ್ತಿ ನಿಂತ ಮರಳುಗಾಡಿನಲ್ಲಿ.

ಪಿ. ಬಿ. ಶೆಲ್ಲಿ ಕವಿಯ "Ozymandias" ಕವಿತೆಯ ಭಾವಾನುವಾದ.

2 comments: