Pages

Tuesday, March 06, 2012

ಸುಳಿಯದ ಹಾದಿ


ಹಳದಿ ಕಾಡಿನಲೊಂದು ಕವಲೊಡೆದ ಹಾದಿ,
ಹೋಗಲಾಗದು ಎರಡರಲೂ ಒಂದೇ ಬಾರಿ
ಏನು ಮಾಡಲಿ ಒಂಟಿ ಪಯಣಿಗ
ನಿಂತು ನೋಡಿದೆ ಕಣ್ಣು ಹೋಗುವರೆಗೆ
ದಾರಿಯೊಂದು ಸುತ್ತಿಸುಳಿದು ಮರೆಯಾಗುವರೆಗೆ

ಮತ್ತೊಂದರೆಡೆ ಕಣ್ಣು ಹಾಯಿಸಿದರೆ ಅದೂ ಹಾಗೆ
ಹುಲ್ಲು ಬೆಳೆದ ಹಾದಿ; ಹೊಸತಂತೆ ಕಾಣುತಿದೆ.
ಮತ್ತೊಂದರದಕಿಂತ ಸ್ವಲ್ಪ ಒಳಿತಿರಬಹುದು
ಬಳಸಿದಾ ಜನಸಂಖ್ಯೆ ಕಡಿಮೆಯಿರಬಹುದು
ಕಣ್ಣೋಟಕೆರಡೂ ಕಾಣುವುದೂ ಒಂದೇ ಬಗೆ

ಆ ಬೆಳಗಿನಲ್ಲಿಂದು ಕವಲುಹಾದಿಗಳೆರಡು
ಒಂದರಂತೇ ಇನ್ನೊಂದು ಗುರಿ ಕಾಣದಿಹುದು.
ಮೊದಲಿನದು ಮತ್ತೊಂದು ದಿನಕಿರಲಿ ಎಂದೇ ಬಗೆದೆ
ಮತ್ತೊಂದು ದಾರಿಯಲಿ ನಡೆದೆ ಮುಂದೆ.
ಮತ್ತಲ್ಲಿಗೆ ಬಂದು ತಲುಪುವೆನೇ...? ಮುಂದೆ...?

ಕಾಲನುರುಳಿನಲಿ ಪಯಣ, ಮುಂದೇನೋ ಎಂತೋ..?
ನಿಟ್ಟುಸಿರನೊರೆದು ಮುಂದೊಮ್ಮೆ ನುಡಿವೆನೇ ಇಂತು..?
ಹಳದಿ ಕಾಡಿನ ಕವಲು ಹಾದಿಯಲಿ ನಾ ಹಿಡಿದ ಹಾದಿ
ಜೊತೆಗಾರರಿಲ್ಲದೆಯೇ ನಾ ತುಳಿದ ಹಾದಿ.
ಜನ ಬಳಸಿರದ ಹಾದಿ, ಎಲ್ಲ ಬದಲಾವಣೆಯ ಆದಿ.

ರಾಬರ್ಟ್ ಫ್ರಾಸ್ಟ್ ಕವಿಯ "The road not taken" ಕವಿತೆಯ ಭಾವಾನುವಾದ.

2 comments:

  1. Badalavane agathya ,
    Badalagada Janarige ,

    ReplyDelete
  2. Badalavane agathya ,
    Badalagada Janarige ,

    ReplyDelete