Pages

Tuesday, April 25, 2006

ರಾಜಕುಮಾರನಿಗೆ ಶ್ರಧ್ಧಾಂಜಲಿ ಹೇಗಿರಬೇಕು

ModMani's: "ರಾಜಣ್ಣನವರು ಅಭಿನಯದಲ್ಲಿ ವಿಶ್ವವಿದ್ಯಾನಿಲಯವೆಂಬುದು ಎಲ್ಲರಿಗೂ ತಿಳಿದ ವಿಷಯ. ಇಂತಹ `ಜ್ನಾನಮೇರುವಿನ ವ್ಯಕ್ತ್ತಿತ್ವದ ಸರಳತೆ, ನಮ್ರತೆ ಕಳಶಪ್ರಾಯವಾದದ್ದು. ರಾಜಣ್ಣನವರು ಕಲಾವಿದನಾಗಿ ಈ ನಾಡಿನ ಜನರಲ್ಲಿ ಮೂಡಿಸಿದ್ದು ಆತ್ಮವಿಶ್ವಾಸ. ಮೂರು ತಲೆಮಾರುಗಳ ಆದರ್ಶಗಳನ್ನು ರೂಪಿಸಿಕೊಟ್ಟ ಮಹಾಚೇತನ ಅವರು.

ಅವರಿಗೆ ಕರ್ನಾಟಕ ಅರ್ಪಿಸುವ ಶ್ರದ್ದಾಂಜಲಿ ಅವರ ತೂಕಕ್ಕೆ ಸಮನಾಗಬೇಕು. ಅಷ್ಟೇ ಅಲ್ಲ, ಅವರ ಕೆಲಸಗಳೆಲ್ಲಾ ಸದಾಕಾಲಕ್ಕೂ ಉಳಿಯುವಂತಾಗಬೇಕು. ಹೀಗೆ ಮಾಡಲು ರಾಜಕುಮಾರ್ ಹೆಸರಿನಲ್ಲಿ ಟ್ರಸ್ಟ್‍ವೊಂದನ್ನು ರಚಿಸಬೇಕು. ಈ ಟ್ರಸ್ಟ್ ನಲ್ಲಿ ರಾಜಕುಮಾರ್ ಅಭಿಮಾನಿಗಳು, ಹಿರಿಯ ಸಾಹಿತಿಗಳು, ಚಿಂತಕರು ಮತ್ತು ಸಮಾಜ ಸೇವಕರು ಇರಬೇಕು. ರಾಜ್ ಸಂಭಂದಿತ ಕಾರ್ಯಕ್ರಮಗಳೆಲ್ಲಾ ಈ ಟ್ರಸ್ಟ್ ನ ವತಿಯಿಂದ ನಡೆಸಬೇಕು. ಅಲ್ಲದೆ ಈ ಟ್ರಸ್ಟ್ ಕನ್ನಡದ ಕಾವಲು ಕಹಳೆಯಾಗಬೇಕು.

ರಾಜ್ ಸಮಾಧಿಸ್ಠಳದ ಬಳಿ ರಾಜ್ ಅಭಿನಯದ ಚಿತ್ರಗಳ ಲೈಬ್ರರಿಯೊಂದನ್ನು ಸ್ಟಾಪಿಸಬೇಕು. ಅಲ್ಲಿ ರಾಜ್‍ರ ಎಲ್ಲಾ ಚಿತ್ರಗಳೂ ದೊರೆಯಬೇಕು. ಇದಕ್ಕೆ ಬೇಕಾದ ಹಕ್ಕುಗಳ ಸಂಬಂಧಿತ ವಿಷಯಗಳನ್ನು ಸರ್ಕಾರ ಬಗೆಹರಿಸಬಹುದು. ರಾಜಣ್ಣ ಈಗ ಸಮಾಜಕ್ಕೆ ಸೇರಿಹೋದ ಆಸ್ತಿ. ಅಲ್ಲಿ ಈ ಚಿತ್ರಗಳ ಬಗೆಗೆ ಬಿಡುಗಡೆಯಾದಾಗ ಪ್ರಕಟಿತ ವಿಮರ್ಶೆಗಳೂ ಲಭ್ಯವಿರಬೇಕು. ಒಟ್ಟಿನಲ್ಲಿ ರಾಜ್ ಬಗೆಗಿನ ಸಕಲವಸ್ತುಗಳ ವಸ್ತು-ಮಾಹಿತಿಸಂಗ್ರಹಾಲಯವಾಗಿ ಆ ಕಟ್ಟಡ ರೂಪುಗೊಳ್ಳಬೇಕು.

ರಾಜ್ ಹೆಸರಿನಲ್ಲಿ ಅಭಿನಯಶಾಲೆಯೊಂದನ್ನು ತೆರೆಯಬೇಕು. ಅದು ಸಿನೆಮಾ/ನಾಟಕ ಅಭಿನಯ ಹಾಗೂ ಸಿನೆಮಾ/ನಾಟಕ ಕ್ಷೇತ್ರಗಳ ಇತರ ವಿಭಾಗಗಳಾದ ನಿರ್ದೇಶನ, ಬೆಳಕು, ರಂಗಸಜ್ಜಿಕೆ, ಛಾಯಾಗ್ರಹಣ, ಚಿತ್ರಕತೆ ರಚನೆ, ಸಾಹಸ ಮುಂತಾದ ಎಲ್ಲಾ ಕ್ಷೆತ್ರಗಳಲ್ಲಿ ತರಬೇತಿ ನೀಡುವ ಸ್ವಾಯತ್ತ ಸಂಸ್ಥೆಯಾಗಿರಬೇಕು. ಹಾಗೂ ವಿದ್ಯಾರ್ಥಿಗಳ ಅಧ್ಯಯನಕ್ಕೆ, ರಾಜ್ ಚಿತ್ರಗಳು ಪಠ್ಯವಾಗಿರಬೇಕು.

ರಾಜ್ ಬಗ್ಗೆ ಈವರೆಗೆ ಪ್ರಕಟವಾಗಿರುವ ಎಲ್ಲಾ ಸಾಹಿತ್ಯವನ್ನೂ ಪ್ರಕಟಿಸಬೇಕು, ಅವೆಲ್ಲಾ ಒಂದೆಡೆಯೇ ಲಭ್ಯವಾಗುವಂತೆ ಮಾಡಬೇಕು. ಈ ಶಾಲೆಯಲ್ಲಿ ಹೊಸ ತಂತ್ರಜ್ಞಾನಗಳ ಸಂಶೋಧನೆ/ಅಳವಡಿಕೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಈ ಶಾಲೆ ತಾಂತ್ರಿಕ/ಸೈದ್ಧಾಂತಿಕವಾಗಿ ಅಂತರರಾಷ್ಟ್ರೀಯ ಮಾದರಿಯಾಗಬೇಕು. ಜಗತ್ತಿನ ಎಲ್ಲಾಭಾಷೆಗಳ ಸಿನಿಮಾ/ನಾಟಕ/ಕಲಾವಿದರ ಬಗ್ಗೆ ಅಧ್ಯಯನ/ಚರ್ಚೆ ಇಲ್ಲಿ ನಡೆಯಬೇಕು.

ಇಂತಹದೊಂದು ಮಹಾನ್ ಕಾರ್ಯಕ್ಕೆ, ಬೇಕಾದ ಹಣವನ್ನು ಅಭಿಮಾನಿಗಳಿಂದಲೇ ದೇಣಿಗೆಯಾಗಿ ಸಂಗ್ರಹಿಸಬೇಕು. ಈ ಕಾರ್ಯ ಪೂರ್ಣ ಪಾರದರ್ಶಕವಾಗಿರಬೇಕು. ಅಲ್ಲದೇ ಸಂಸ್ಥೆಯ ಎಲ್ಲಾ ವ್ಯವಹಾರಗಳೂ ಪಾರದರ್ಶಕವಾಗಿರಬೇಕು. ಟ್ರಸ್ಟ್ ನ ಕೆಲಸ ಕಾರ್ಯಗಳಿಗೆ ಆಡಳಿತ ಯಂತ್ರದ ಸಹಕಾರ ಇರಬೇಕು.

ಹೀಗೆ ಮಾಡುವುದರಿಂದ ರಾಜಣ್ಣನವರಿಗೆ ನಾವು ಸಾರ್ಥಕ ಶ್ರದ್ದಾಂಜಲಿ ಸಲ್ಲಿಸದಂತಾಗುತ್ತದೆ, ಮತ್ತು ಅವರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಅಭಿಮಾನಿಗಳೂ, ರಾಜ್ ಕುಟುಂಬ ವರ್ಗದವರೂ, ಸರ್ಕಾರವೂ ಒಂದಾದರೆ ಚೆನ್ನ.

No comments:

Post a Comment