Pages

Tuesday, August 11, 2009

ಹೆಚ್೧ಎನ್೧ swineflu

ಹೆಚ್೧ಎನ್೧ (ಹಂದಿಜ್ವರ ಎಂದೂ ಕರೆಯುತ್ತಾರೆ) swineflu
ಗುರುತುಗಳು
ಮಾಮೂಲಿ ಫ್ಲೂ ರೀತಿಯಲ್ಲಿ ಇರುತ್ತದೆ. ೧೦೦.೪ ಡಿಗ್ರೀ ಫ್ಯಾರನ್ ಹೀಟ್ ಗಿಂತಲೂ ಮೀರಿದ ಜ್ವರ
ಹಸಿವಿಲ್ಲದಿರುವಿಕೆ, ಶೀತ ಇದರ ಗುರುತುಗಳು. ಕೆಲವರಲ್ಲಿ ನೆಗಡಿ, ವಾಂತಿ ಮತ್ತು ಭೇದಿಯ ಲಕ್ಷಣಗಳೂ ಕಾಣಿಸಿಕೊಂಡಿವೆ. ಇದರಲ್ಲಿ ಯಾವುದಾದರೂ ಎರಡು ಲಕ್ಷಣಗಳಂತೂ ಇದ್ದೇ ಇರುತ್ತದೆ.

ಹಾಗಿದ್ದರೆ ನಿಮಗಿರುವುದು ಫ್ಲೂ ಅಥವಾ ಶೀತ ಹೇಗೆ ಪರೀಕ್ಷಿಸುವುದು?
ಒಂದು ಉಪಾಯ : ಫ್ಲೂ ಗುರುತುಗಳು ಶೀತದ ಗುರುತಿಗಿಂತ ಮುಂಚೆಯೇ ಕಾಣಿಸಿಕೊಳ್ಳುತ್ತವೆ. ಜೊತೆಗೆ ಮಾಂಸಖಂಡಗಳ ನೋವು ಮತ್ತು ಚಳಿ ಬೆವರುಗಳು ಜ್ವರ ಬಂದು ಹೋದಂತೆ ಕಾಡುತ್ತವೆ. ತಲೆನೋವು, ನೆಗಡಿ ಮತ್ತು ಗಂಟಲು ಕಟ್ಟುವಿಕೆ ಫ್ಲೂ ನಲ್ಲಿ ಇರುತ್ತದೆ.

ಎರಡನ್ನೂ ಹೋಲಿಸುವುದು ಹೇಗೆ?

ಆದರೆ ಈ ಗುರುತುಗಳಿಂದ ಇದನ್ನು ಪತ್ತೆ ಹಚ್ಚುವುದರ ಜೊತೆಗೆ ಪ್ರಯೋಗಾಲಯದ ಪರೀಕ್ಷೆ ಯೊಂದರಿಂದ ಮಾತ್ರ ಹಂದಿ ಜ್ವರ ಇದೆಯೋ ಇಲ್ಲವೋ ಪತ್ತೆಯಾಗುತ್ತದೆ.

ತಿಳಿದ ತಕ್ಷಣ ಏನು ಮಾಡಬೇಕು?
ಸಾಂಕ್ರಾಮಿಕ ರೋಗವಿರುವ ಪ್ರದೇಶಗಳಿಂದ ಕಳೆದ ಹತ್ತು ದಿನಗಳಲ್ಲಿ ಬಂದವರು ಈ ಲಕ್ಷಣಗಳನ್ನು ಅನುಭವಿಸಿದರೆ ಥಕ್ಷಣಾ ಸಹಾಯವಾಣಿಗೆ ಕರೆ ಮಾಡಿ ಅಥವಾ ಹತ್ತಿರದ ಆಸ್ಪತ್ರೆಗೆ ಹೋಗಿ.
ಬೆಂಗಳೂರಿನಲ್ಲಿ : ರಾಜೀವಗಾಂಧಿ ಆಸ್ಪತ್ರೆ : ಸಹಾಯವಾಣಿ ಸಂಖ್ಯೆ : ೨೬೬೩೧೯೨೩

ಚಿಕಿತ್ಸೆ :
ಲಕ್ಷಣಗಳು ಕಂಡುಬಂದ ತಕ್ಷಣವೇ ಆಂಟಿವೈರಲ್ ಔಷಧಿಗಳನ್ನು ತೆಗೆದುಕೊಳ್ಳಬೇಕು. ಟಾಮಿ ಫ್ಲು ,ರೆಲೆಂಜಾ , ಮಾತ್ರೆಗಳು ಆಂಟಿವೈರಲ್ ಔಷಧಗಳು. ಇವನ್ನು ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು. ಈ ಮಾತ್ರೆಗಳಿಂದ ಸುಸ್ತು, ವಾಂತಿ, ತಲೆಸುತ್ತು ಇತ್ಯಾದಿ ಲಕ್ಷಣಗಳು ಕಂಡುಬರಬಹುದು.
ಸ್ವ-ಚಿಕಿತ್ಸೆ : ಆಂಟಿಬಯಾಟಿಕ್ಸ್ ಕಂಡಿತ ಬೇಡ. ಏಕೆಂದರೆ ಈ ಕಾಯಿಲೆ ವೈರಸ್ಸುಗಳಿಂದ ಬರುತ್ತದೆ ಬ್ಯಾಕ್ಟೀರಿಯಾಗಳಿಂದಲ್ಲ.
ಲಸಿಕೆ : ಇದುವರೆಗೂ ಲಭ್ಯವಿಲ್ಲ .

ಯಾರಿಗೆ ಹೆಚ್ಚಿನ ತೊಂದರೆಯಾಗಬಹುದು ?
ಶ್ವಾಸಕೋಶದ ತೊಂದರೆಯಿರುವವರಿಗೆ, ಅಸ್ತಮಾ ದಿಂದ ಬಳಲುತ್ತಿರುವವರಿಗೆ.
ಹೃದಯದ ತೊಂದರೆಯಿರುವವರಿಗೆ
ಮೂತ್ರಪಿಂಡದ ತೊಂದರೆಯಿರುವವರಿಗೆ
ಪಿತ್ತಕೋಶದ ತೊಂದರೆಯಿರುವವರಿಗೆ
ನರಗಳ ತೊಂದರೆಯಿರುವವರಿಗೆ
ಗರ್ಭಿಣಿಯರಿಗೆ
ರೋಗನಿರೋಧಕ ಶಕ್ತಿ ಕಡಿಮೆಯಿರುವವರಿಗೆ
ಐದು ವರುಶಗಳಿಗಿಂತ ಕಿರಿಯರಿಗೆ ಮತ್ತು ೬೫ ವರುಶಗಳಿಗಿಂತ ಹಿರಿಯರಿಗೆ.

ಹರಡುವುದು ಹೇಗೆ?
ಇದು ಶೀಘ್ರ ಸಾಂಕ್ರಾಮಿಕ. ಕಾಯಿಲೆಯಿರುವ ಮನುಷ್ಯನ ಸೀನು ಅಥವಾ ಕೆಮ್ಮಿನಿಂದ ವೈರಾಣುಗಳು ಗಾಳಿಯಲ್ಲಿ ೧ ಮೀಟರ್ ದೂರದವರೆಗೂ ಹರಡುತ್ತವೆ. ಅದನ್ನು ಇತರರು ಉಸಿರಾಡುವುದರಿಂದ ಅಥವಾ ಬೇರಾವುದೇ ರೀತಿಯ ಸಂಪರ್ಕದಿಂದ ಈ ಕಾಯಿಲೆ ಹರಡುತ್ತದೆ. ಕೈ ಅಡ್ಡ ಇಟ್ಟು ಸೀನಿದರೆ/ಕೆಮ್ಮಿದರೆ ವೈರಾಣುಗಳು ಕೈ ಮೇಲೆ ಕುಳಿತಿದ್ದು ನಂತರ ಆವ್ಯಕ್ತಿ ಮುಟ್ಟುವ ವಸ್ತುಗಳಿಗೆ ತಗಲುತ್ತದೆ. ಅದನ್ನು ಇತರರು ಮುಟ್ಟಿದಾಗ ಅವರಿಗೆ ಕಾಯಿಲೆ ಹರಡುತ್ತದೆ.

ತಡೆಗಟ್ಟುವಿಕೆ ಹೇಗೆ?
ರೋಗ ಹರಡುವಿಕೆ ಯನ್ನು ತಡೆಗಟ್ಟಲು
೧. ನಿಮ್ಮ ಬಾಯಿ ಮತ್ತು ಮೂಗನ್ನು ಟಿಶ್ಶ್ಯೂನಿಂದ ಮುಚ್ಚಿಕೊಳ್ಳಿ. ಮತ್ತು ಕೂಡಲೇ ಅದನ್ನು ಹುಷಾರಾಗಿ ವಿಲೇವಾರಿ ಮಾಡಿ.
೨. ನಿಮ್ಮ ಕೈಗಳನ್ನು ಆಗಾಗ ಸೋಪು ಮತ್ತು ನೀರಿನಿಂದ ತೊಳೆದುಕೊಳ್ಳಿ
೩. ಬಾಗಿಲ ಹಿಡಿಕೆ, ರಿಮೋಟ್ ಕಂಟ್ರೋಲ್ ಇತ್ಯಾದಿಗಳನ್ನು ಅಗಾಗ ಸ್ವಚ್ಚ ಮಾಡುತ್ತಿರಿ.
೪. ಬೇರೆಯವರಿಂದ ಸಾಧ್ಯವಾದಷ್ಟು ದೂರವಿರಿ, ಶಾಲೆ ಅಥವಾ ಕೆಲಸ ನೀವು ಅನಾರೋಗ್ಯದಿಂದಿದ್ದಾಗ ಬೇಡ.
೫. ಜ್ವರ ಕಡಿಮೆಯಾದ ನಂತರ ೨೪ ಘಂಟೆ ಮನೆಯಲ್ಲೇ ಇರಿ. (ಜ್ವರ ತಾನಾಗಿಯೇ ಕಡಿಮೆಯಾದರೆ)
೬. ದ್ರವರೂಪದ ಆಹಾರ ಸೇವಿಸಿರಿ ( ನೀರು, ಗಂಜಿ,ಶಕ್ತಿದಾಯಕ ಪೇಯಗಳು)
೭. ಮುಖಕ್ಕೆ ಮಾಸ್ಕ್ ಬಳಸಿ

ಮನೆಯಲ್ಲಿ
ಸೋಪು ಮತ್ತು ನೀರು ಶೇಖಡಾ ೩೦ರಷ್ಟು ರೋಗ ಹರಡುವಿಕೆಯನ್ನು ನಿಯಂತ್ರಿಸುತ್ತವೆ. ಆಗಾಗ ಕೈಗಳನ್ನು ಇದರಿಂದ ತೊಳೆಯುತ್ತಿರಿ. ಕಣ್ಣು, ಮೂಗು ಮತ್ತು ಬಾಯಿಗಳನ್ನು ಮುಟ್ಟುವುದನ್ನು ಸಾಕಷ್ಹ್ಟು ಕಡಿಮೆ ಮಾಡಿ.

ಆರೋಗ್ಯಕರ ಆಹಾರ ಸೇವಿಸಿ, ಮತ್ತು ನಿಯಮಿತ ವ್ಯಾಯಾಮ ಮಾಡಿ.. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಒಟ್ಟಿನಲ್ಲಿ,
ಕಾಯಿಲೆ ಮನುಷ್ಯರಿಂದ ದೂರವಿರಿ .
ಪ್ರಯಾಣವನ್ನು ಮುಂದೂಡಿ
ಅಗಾಗ ಕೈ ತೊಳೆದುಕೊಳ್ಳಿ
ಆಧಾರ : http://www.in.com/swineflu/inside.php?id=#q5

1 comment:

  1. ಮಾಹಿತಿಯು ಬಹಳ ಉಪಯುಕ್ತವಾಗಿದೆ ಹಾಗೂ ಸಂದರ್ಭೋಚಿತವಾಗಿದೆ. ಇಂತಹ ಇನ್ನೂ ಹೆಚ್ಚಿನ ವಿಷಯಗಳನ್ನು ನಿಮ್ಮ ಬ್ಲಾಗಿನಲ್ಲಿ ಬರುತ್ತಿರಲಿ.

    ReplyDelete