ಒಬ್ಬ ವ್ಯಕ್ತಿಗೆ ಅಮೃತಬಳ್ಳಿ (ಎಂಟು ಇಂಚು), ಎರಡು ತುಳಸಿ ಕುಡಿ, ೯ ಇಂಚು ಎತ್ತರದ ಬೇರು ಸಹಿತ ನೆಲನೆಲ್ಲಿ ಗಿಡ, ಒಂದು ಚಮಚ ಕಿರಾತಕಡ್ಡಿ, ಒಂದು ಇಂಚು ಗಾತ್ರದ ಶುಂಠಿಯನ್ನು ಕಶಾಯ ಮಾಡಬೇಕು. ಇವುಗಳನ್ನು ಎರಡು ಗಂಟೆ ನೀರಿನಲ್ಲಿ ನೆನೆಸಿ ಬಳಿಕ ಅದೇ ನೀರಿನಲ್ಲಿ ಕುದಿಸಿ ಕಷಾಯ ಮಾಡಬೇಕು. ಆಯುರ್ವೇದ ಶಾಸ್ತ್ರದಂತೆ ಅಹೋರಾತ್ರಿ ಮಣ್ಣಿನ ಮಡಕೆಯಲ್ಲಿ ನೆನೆಸಿ ಮಣ್ಣಿನ ಮಡಕೆಯಲ್ಲಿಯೇ ಕುದಿಸಿ ಕಷಾಯ ಮಾಡಿದರೆ ಅತ್ಯುತ್ತಮ. ಈ ಕಷಾಯವನ್ನು ಬೆಳಗ್ಗೆ ಖಾಲಿ ಹೊಟ್ಟೆಗೆ, ರಾತ್ರಿ ಊಟಕ್ಕೆ ಮೊದಲು ೫೦ ಮಿ.ಲೀ. ಸೇವಿಸಬೇಕು ಎಂದು ಆಯುರ್ವೇದ ತಜ್ಞ ಡಾ|ವೈ.ಎನ್. ಶೆಟ್ಟಿ ಸಲಹೆ ನೀಡಿದ್ದಾರೆ.
http://www.gulfkannadiga.com/news-10180.html ಪತ್ರಿಕೆಯಿಂದ
No comments:
Post a Comment