ಕೃಷ್ಣದೇವರಾಯ : ಕನ್ನಡನಾಡಿನ ಚರಿತೆಯಲ್ಲಿ ಹೊನ್ನಕ್ಕರಗಳಿಂದ ಬರೆದಿಡಬೇಕಾದ ಧೀರ ನಾಯಕನ ಜೀವನ ಚರಿತೆಯನ್ನು ಆಕರವಾಗಿಸಿಕೊಂಡು ಬಂದ ರಂಜನೀಯ ಚಿತ್ರ. ಇಂತಹ ಆಗಾಧ ವಸ್ತುವನ್ನು ಮೂರುಗಂಟೆಗಳಲ್ಲಿ ತೆರೆಯ ಮೇಲೆ ಹಿಡಿದಿಟ್ಟವರು ಬಿ.ಆರ್. ಪಂತುಲು ಮತ್ತು ಕೃಷ್ಣದೇವರಾಯನನ್ನು ಕಣ್ಣ ಮುಂದೆ ತಂದಿರಿಸುವಂತೆ ಅಭಿನಯಿಸಿದವರು ರಾಜಕುಮಾರ್.
ಮಯೂರ : ಕನ್ನಡಿಗರ ಆತ್ಮಶಕ್ತಿಯನ್ನು ಬಡಿದೆಚ್ಚರಿಸಿ, ಸ್ವಾಭಿಮಾನವನ್ನು ಒಗ್ಗೂಡಿಸಿದ ದೇವುಡು ಅವರ ಕಾದಂಬರಿ ಆಧಾರಿತ ಚಿತ್ರ. ರಾಜಕುಮಾರ್ ಅವರಿಗೆ ಸರಿಸಾಟಿಯಾಗಿ ನಿಂತು ಚಿತ್ರಕ್ಕೆ ರೋಚಕತೆ ಕೊಟ್ಟವರು ವಜ್ರಮುನಿ. ಎಂ.ಪಿ.ಶಂಕರ್ ಅಭಿನಯ ಮರೆಯುವಂತಹುದಲ್ಲ.
ಮೈಸೂರು ಮಲ್ಲಿಗೆ : ಕವಿಯೊಬ್ಬನ ಕವನಗಳನ್ನು ಎಲೆಗಳನ್ನಾಗಿಸಿ, ,
ಸುಧಾರಾಣಿಯಂತಹ ಸ್ನಿಗ್ಧ ಸುಂದರಿಯನ್ನು ನಾಯಕಿಯನ್ನಾಗಿಸಿ, ಸುಂದರ ಕತೆಯ ತೋರಣ ನೇಯ್ದ
ನಾಗಾಭರಣ ಮನ ಮುಟ್ಟುವಂತೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕನ್ನಡಿಗರೆಲ್ಲರೂ
ನೋಡಬೇಕಾದದ್ದು ಈ ಚಿತ್ರ.
ಬಿಡುಗಡೆ : ಮರಣದಂಡನೆಯ ಔಚಿತ್ಯವನ್ನು ಪ್ರಶ್ನಿಸಿ ನಿರ್ಮಿಸಿದ ಈ ಚಿತ್ರ ಮತ್ತು ಚಿತ್ರದ ವಸ್ತು ಕ್ರಾಂತಿಕಾರಕವಾದದ್ದು. ವೈ. ಆರ್. ಸ್ವಾಮಿ ನಿರ್ದೇಶನದ ರಾಜಕುಮಾರ್ ರಾಜೇಶ್ ಅಭಿನಯದ ರೋಮಾಂಚಕ ಚಿತ್ರ.
ಸಿಪಾಯಿರಾಮು : ಸೈನ್ಯದಿಂದ ಮರಳಿದ ಸಿಪಾಯಿ, ಊರ ಸಾಹುಕಾರನ ದುರಾಕ್ರಮಣಕ್ಕೆ ಸಿಕ್ಕು, ಚಂಬಲ್ ಕಣಿವೆಗೆ ಸೇರಿ ಡಕಾಯಿತನಾಗಿ ಊರಿಗೆ ಮರಳಿ, ತನ್ನ ಸಂಸಾರಕ್ಕಾಗಿ ಮತ್ತೆ ಬಂಧಿಯಾಗುವ ಕತೆಯುಳ್ಳ, "ಯಮುನೆ ನಾನಿನ್ನು ಬರಲೆ" ಕಾದಂಬರಿ ಆಧಾರಿತ ಚಿತ್ರ.
ನೋಡಿ ಸ್ವಾಮಿ ನಾವಿರೋದೆ ಹೀಗೆ : ಶಂಕರ್ನಾಗ್ ನಿರ್ದೇಶನದ ಜೀವನದ ಕಹಿಗಳನ್ನು ನಗುವಿನಲ್ಲೇ ತೋರಿಸಿ, ಬದುಕಿನ ಮೌಲ್ಯವನ್ನು ಕಲಿಸುವ ಚಿತ್ರ.
ಒಂದಾನೊಂದು ಕಾಲದಲ್ಲಿ : ಗಿರೀಶ್ ಕಾರ್ನಾರ್ಡ್ ನಿರ್ದೇಶನದ ಶಂಕರ್ನಾಗ್ ರ ರಂಗಪ್ರವೇಶದ ಚಿತ್ರ. ಅಕಿರಾ ಕುರಸಾವೋ ನ ಸಂಜುರೋ ಚಿತ್ರದ ಅವತರಣಿಕೆಯಾದರೂ, ಕನ್ನಡದ್ದೇ ಸೊಗಡನ್ನು ಕಸುವನ್ನು ಮೈತುಂಬಿಕೊಂಡಂತೆ ಮಾಡಿದ್ದು, ಗಿರೀಶರ ಹೆಚ್ಚುಗಾರಿಕೆ. ಯೋಧನೊಬ್ಬನ, ಸ್ವತಂತ್ರ ನಿಲುವನ್ನೂ, ಮನಸ್ಸಿನ ಬೇಗುದಿಗಳನ್ನು ಬಿಡಿಸಿಡಿವ ಈ ಚಿತ್ರದಲ್ಲಿನ, ಸುಂದರಕೃಷ್ಣ ಅರಸು ಮತ್ತು ಸುಂದರರಾಜ್ ಅಭಿನಯವೂ ಅಮೋಘ.
ಬಂಧನ : ಕನ್ನಡದಲ್ಲಿ ಪ್ರೇಮಕತೆಗಳಿಗೆ ಬರವಿಲ್ಲ. ಆದರೆ ತುಂಬು ಹೃದಯಯ ಪಕ್ವ ಪ್ರೇಮದ ಕತೆಯನ್ನು ತೆರೆಯಮೇಲೆ ರಾಜೇಂದ್ರ ಸಿಂಗ್ ಬಾಬು ತಂದ ರೀತಿ ಅನನ್ಯ, ವಿಷ್ಣುವರ್ಧನ್ ಮತ್ತು ಸುಹಾಸಿನಿಯರ ಅಭಿನಯ ಅತಿ ರೋಚಕ.
ಮುತ್ತಿನಹಾರ : ಅದೇ ರಾಜೇಂದ್ರ ಸಿಂಗ್, ವಿಷ್ಣುವರ್ಧನ್, ಸುಹಾಸಿನಿ ತ್ರೀಡಿಯ (ಇಬ್ಬರಿಗೆ ಜೋಡಿ ಎಂದರೆ ಮೂವರಿಗೆ ತ್ರೀಡಿ ಎನ್ನಬಹುದೇ..?) ಈ ಚಿತ್ರದಲ್ಲಿ, ಮಗು ಕಳೆದುಕೊಂಡ ತಾಯಿಯ ವಾತ್ಸಲ್ಯ, ಯುದ್ದಕ್ಕೆ ನಡೆದುಹೋದ ವೀರಯೋಧನ ಧೈರ್ಯ ಮತ್ತವನ ಕುಟುಂಬದ ಸ್ಥೈರ್ಯ ಎಲ್ಲವೂ ಮಿಳಿತವಾಗಿ ರೋಮಾಂಚಕ ಅನುಭವ ನೀಡುವಲ್ಲಿ ಸಫಲವಾದ ಚಿತ್ರ.
ಹಂಸಗೀತೆ : ತರಾಸು ಕಾದಂಬರಿ ಆಧರಿಸಿ ರಚಿಸಿದ ಈ ಚಿತ್ರ, ಸಂಗೀತಗಾರನೊಬ್ಬ ಪಕ್ವಗೊಳ್ಳುವುದನ್ನು ತೋರಿಸುತ್ತಲೇ ಆತ್ಮಾಭಿಮಾನವನ್ನು ಉಳಿಸಿಕೊಳ್ಳುವ ಛಲವನ್ನೂ ತೋರಿಸಿ, ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಜಿ.ವಿ.ಅಯ್ಯರ್ ನಿರ್ದೇಶನದ, ಟಿ.ಜಿ. ಲಿಂಗಪ್ಪ ಮತ್ತು ಬಿ.ವಿ. ಕಾರಂತರ ಸಂಗೀತ ಇರುವ ಅನಂತನಾಗ್ ಅಭಿನಯದ ಚಿತ್ರ.
ಜೀವನ ಚೈತ್ರ : ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಬಣ್ಣಹಚ್ಚಿದ ಕನ್ನಡದ ಹಿರಿಯಣ್ಣನ ಚಿತ್ರ. ಕುಡಿತ ಮತ್ತು ಜಾಗತೀಕರಣವನ್ನೂ ಸಹ ಮೂರ್ತರೂಪವಾಗಿ ತೋರುವ ಈ ಚಿತ್ರ ನನ್ನ ಮೇಲೆ ಬೀರಿದ ಪ್ರಭಾವ ಅಪಾರವಾದದ್ದು.
ಸಮಯದ ಗೊಂಬೆ : ಸಮಯದ ಕೈಯಲ್ಲಿ ನಾವೆಲ್ಲರೂ ಬೊಂಬೆಗಳೆಂದು ಸಾರುವ ಈ ಚಿತ್ರ, ನೊಂದ ಮನಸ್ಸುಗಳಿಗೆ ಸಾಂತ್ವನ ನೀಡಬಲ್ಲ ಶಕ್ತಿಯಿದೆ. ಅದರಲ್ಲೂ ಶಕ್ತಿಪ್ರಸಾದರ ಅಭಿನಯ ಅತ್ಯಮೋಘವಾಗಿದೆ.
ಸಾವಿರ ಸುಳ್ಳು : ಮದುವೆ ಮಾಡಿಸುವ ನಂತರ ಆ ಸಂಸಾರದ ವಿರಸವನ್ನೂ ತೊಡೆಯುವ ಕೆಲಸ ಮಾಡುವ ಲೊಕೇಶ್, ಕಡೆಯಲ್ಲಿ ಎಲ್ಲರಿಂದ ನಿಂದಿತನಾಗಬೇಕಾಗುತ್ತದೆ. ನಗಿಸುತ್ತಲೇ ಸಂಸಾರದ ಒಳಗುಟ್ಟುಗಳ ಪಟ್ಟು ತಿಳಿಸುವ ಈ ಚಿತ್ರದ ರವಿಚಂದ್ರನ್ ಆಪ್ತರಾಗುತ್ತಾರೆ.
ನಾಗಮಂಡಲ: ಟಿ.ಎಸ್. ನಾಗಾಭರಣ ನಿರ್ದೇಶನದ ಈ ಚಿತ್ರ, ಎ.ಕೆ. ರಾಮಾನುಜಂ ಅವರ ನಾಟಕ ಆಧರಿಸಿದ್ದು. ಕತೆ ಜಾನಪದದ್ದು. ಹಾದರದ ಬಗ್ಗೆ ಜಾನಪದರ ಕಲ್ಪನೆಯೇ ಬೇರೆ ಎನ್ನುವುದನ್ನು ನಾಗದಿವ್ಯದ ಮೂಲಕ ತೋರಿಸುವ ಈ ಚಿತ್ರ, ಕಾವ್ಯಾತ್ಮಕ ಗುಣಗಳಿಂದ ಕೂಡಿ, ನೆಳಲು ಬೆಳಕುಗಳ ವಿನ್ಯಾಸದಿಂದ ಮನ ಸೆಳೆಯುತ್ತದೆ.
ಅರಸು : ಲಕ್ಷ್ಮೀ ಪುತ್ರನೊಬ್ಬ ಕಾಸಿನ ಬೆಲೆ ಅರಿಯಲು ಮಾರುವೇಷದಲ್ಲಿ ದುಡಿಯುವ ಮಾಮೂಲಿ ಕತೆಯಾದರೂ, ಅದು ಮನಸ್ಸಿಗೆ ತಟ್ಟುವ ರೀತಿ ಹಿತಕರ. ಪುನೀತ್ ಅತ್ಯಂತ ಆಪ್ತವಾಗಿ ನಟಿಸಿರುವ ಈ ಚಿತ್ರದಲ್ಲಿ, ಪ್ರೇಮಕತೆ ಹಳ್ಳ ಹಿಡಿಯುತ್ತದೆ.
ಉಪೇಂದ್ರ: ವಿಭಿನ್ನ ಆಯಾಮಗಳನ್ನೊಳಗೊಂಡ ಈ ಚಿತ್ರ ಒಂದು ಮಾಸ್ಟರ್ ಪೀಸ್. ಆದರೆ ಆಯಾಮಗಳ ಅಂತಸತ್ವವನ್ನು ಎತ್ತರಿಸುವಲ್ಲಿ ವಿಫಲರಾಗಿದ್ದು, ಉಪೇಂದ್ರರ ಎಡವಟ್ಟು.
ಬೂತಯ್ಯನ ಮಗ ಅಯ್ಯು : ಜಿಪುಣ, ಕ್ರೂರಿ ಜಮೀನ್ದಾರನ ಮಗ ಮತ್ತು ಊರ ಹೈದರ ಜಗಳದಲ್ಲಿ ತನಗರಿವಿಲ್ಲದೆಯೇ ಪರಿವರ್ತಿತನಾಗುವ ಜಮೀನ್ದಾರನ ಮಗನ ಕತೆ ಇದು. ಬೂತಯ್ಯ ಸರ್ಕಲ್ ಎನ್ನುವ ಹೆಸರು ಎಂ.ಪಿ. ಶಂಕರ್ ಮನೆಯ ಬಳಿ ಇರುವ ವೃತ್ತಕ್ಕೆ ಜನಪ್ರಿಯ ಹೆಸರಾಯಿತೆಂದರೆ, ಆ ಬೂತಯ್ಯನ ಪ್ರಭಾವ ಎಂತಹುದಿರಬೇಕಿನ್ನು..? ಅಯ್ಯುವಾಗಿ ಲೋಕೇಶ್, ಗುಳ್ಳನಾಗಿ ವಿಷ್ಣುವರ್ಧನ್ ಅಭಿನಯ ಮರೆಯಲಾಗದಂತಹುದು. ಸಿದ್ದಲಿಂಗಯ್ಯ ನಿರ್ದೇಶನದ ಈ ಚಿತ್ರದ ಕತೆ ಗೊರೂರು ರಾಮಸ್ವಾಮಿ ಅಯ್ಯಂಗಾರರ ಅದೇ ಹೆಸರಿನ ಕಾದಂಬರಿಯದು.
ಬಂಗಾರದ ಮನುಷ್ಯ : ಇದೇ ಸಿದ್ದಲಿಂಗಯ್ಯನವರ ಮರೆಯಲಾಗದ ಮಾಸ್ಟರ್ ಪೀಸ್ ಬಂಗಾರದ ಮನುಷ್ಯ. ವಿದ್ಯಾವಂತ ಯುವಕ, ಪರಿಸ್ಥಿತಿಯ ಒತ್ತಡವೇ ಇದ್ದರೂ ಸ್ವಪ್ರೇರಣೆಯಿಂದ ಮಣ್ಣಿನ ಮಗನಾಗಿ, ತನ್ನ ಗುಣಗಳಿಂದಾಗಿ ಬಂಗಾರದ ಮನುಷ್ಯನಾಗುವ ಈ ಚಿತ್ರ ಜನಸಮೂಹಕ್ಕೆ ಬೀರಿದ ಪ್ರಭಾವ ಅಷ್ಟಿಷ್ಟಲ್ಲ. ಇದೂ ಟಿ.ಕೆ. ರಾಮರಾಯರ ಕಾದಂಬರಿ ಆಧಾರಿತ ಕೃತಿ. ಸಾಧನೆಯ ಜೊತೆಜೊತೆಗೇ ಮನುಷ್ಯ ಪ್ರವೃತ್ತಿಗಳ ಚಿತ್ರಣವೂ ಇಲ್ಲಿ ಸೊಗಸಾಗಿ ಮೂಡಿ ಬಂದಿದೆ.
ಬೆಟ್ಟದ ಹೂವು : ಚಿಕ್ಕವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿಯನ್ನು ಪುನೀತ್ ಗೆ ತಂದುಕೊಟ್ಟ ಚಿತ್ರವಿದು. ಪುಸ್ತಕ ಓದಬೇಕೆನ್ನುವ ಹುಡುಗನ ಅದಮ್ಯ ಆಸೆ ಮತ್ತು ಜೀವನದ ಬಂಡಿ ಸಾಗಲು ಬೇಕಾಗುವ ಚೈತನ್ಯದ ಸಂಘರ್ಷವನ್ನು ಸೆರೆಹಿಡಿಯುವಲ್ಲಿ ನಿರ್ದೇಶಕ ಎನ್. ಲಕ್ಷ್ಮೀನಾರಯಣರು ಯಶಸ್ವಿಯಾಗಿದ್ದಾರೆ.
ಇಲ್ಲಿರುವುದು ನಾನು ನೋಡಿರುವ ಚಿತ್ರಗಳಲ್ಲಿ ನಾನು ಮೆಚ್ಚಿದ ಚಿತ್ರಗಳ ಪಟ್ಟಿಯಷ್ಟೇ, ಈ ಪಟ್ಟಿಯೂ ನನ್ನ ನೆನಪಿನ ಶಕ್ತಿಯ ಗುಣದೋಷಗಳಿಂದ ಮುಕ್ತವಾಗಿಲ್ಲ. ಅಲ್ಲದೇ ನನಗರಿವಿಲ್ಲದ ಉತ್ತಮಚಿತ್ರಗಳು ಇಲ್ಲಿ ಚರ್ಚೆಗೆ ಬಂದೇ ಇಲ್ಲ. ಹಾಗಾಗಿ ಇದು ನನ್ನ ಈ ಕ್ಷಣದ ಅಭಿಪ್ರಾಯವೆಂದಷ್ಟೇ ಭಾವಿಸಬೇಕೆನ್ನುವುದು ನನ್ನ ಮನವಿ.
Wednesday, December 12, 2012
Tuesday, December 11, 2012
Batch Script for editing something in a file in DOS
The below Batch script will find something inside a file and replace it with something of your wish
@echo off
setlocal enabledelayedexpansion
if not exist "%1" (echo this file does not exist...)&goto :eof
set /p findthis=Enter here what you want to find:
set /p replacewith=Enter here what you want to replace:
for /f "delims= tokens=* eol=^ " %%a in (%1) do (
set write=%%a
if %%a==!findthis! set write=!replacewith!
echo !write!
echo !write!>>%~n1.replaced%~x1
)
donot add a space after the varialbe in the last line.. this will add a space after the line in your output. I took three hours to find and fix this bug.

Friday, December 07, 2012
Six skills for CIOs
CIOs are cerebellum of corporate world. Techtarget survey reveals that the following are the most required skills for CEO in the below order.
The numbers in the bracket depicts the percentage of the people who voted for the skill.
No. 1: IT security and compliance expertise take top billing for CIOs(47.4%)
No. 2: IT project management expertise deemed a necessity for CIOs (31%)
No. 3: Partner management and IT vendor management crucial to success( (27%)
No. 4: Enterprise data management skills increasingly vital for CIOs (23.1%)
No. 5: Corporate financial skills a must for CIOs(19.1%)
No. 6: Legal expertise a sought-after skill in CIOs(11.9%)
Any comments ..?

Friday, November 23, 2012
೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ
೨೦೧೨ನೇ ಸಾಲಿನ ಇಗ್ನೊಬಲ್ ಪ್ರಶಸ್ತಿಗಳ ವಿವರ. (ತಡವಾಗಿದ್ದಕ್ಕೆ ಕ್ಷಮೆ ಇರಲಿ)
ಮನೋವೈದ್ಯಕೀಯ ಶಾಸ್ತ್ರ : ಎಡಬಾಗಕ್ಕೆ ವಾಲುವುದರಿಂದ ಐಫಿಲ್ ಗೋಪುರ ಚಿಕ್ಕದಾಗಿ ಕಾಣುತ್ತದೆ ಎನ್ನುವ ಸಂಶೋಧನೆಗೆ
ಅನಿತಾ ಎರ್ಲಾಂಡ್, ಮತ್ತು ರಾಲ್ಫ್ ಸ್ವಾನ್ (ನೆದರ್ಲ್ಯಾಂಡ್) ಮತ್ತು ಟುಲಿಯೋ ಗೌಡಲೂಪೆ (ಪೆರು)
ಶಾಂತಿ ಪ್ರಶಸ್ತಿ. ಎಸ್.ಕೆ.ಎನ್. ಕಂಪನಿ.(ರಶಿಯಾ) ಹಳೆಯ ರಷಿಯದ ಸಿಡಿಮದ್ದುಗಳನ್ನು ಹೊಸ ವಜ್ರಗಳನ್ನಾಗಿ ಮಾರ್ಪಡಿಸಿದ್ದಕ್ಕೆ.
ಶಬ್ದಶಾಸ್ತ್ರ ಪ್ರಶಸ್ತಿ : ವ್ಯಕ್ತಿಯ ಮಾತುಗಳನ್ನು, ಕೆಲವೇ ಸೂಕ್ಷ್ಮ ಸೆಕೆಂಡುಗಳ ತಡೆಯ ನಂತರ ಪ್ರತಿಧ್ವನಿಸುವಂತೆ ಮಾಡಿ, ವ್ಯಕ್ತಿ ಮಾತಾಡದಂತೆ ತಡೆಯೊಡ್ಡುವ ಸಂಶೋಧನೆ ಮಾಡಿದ್ದಕ್ಕೆ. ಕಜುತುಕಾ ಕುರಿಹಾರ ಮತ್ತು ಕೋಜಿ ಸುಕಾಡ (ಜಪಾನ್) ಅವರಿಗೆ.
ನರಶಾಸ್ತ್ರ ಪ್ರಶಸ್ತಿ. ಸತ್ತ ಸಾಲ್ಮನ್ ಮೀನೂ ಸೇರಿದಂತೆ ಎಲ್ಲಾದರೂ, ಮಿದುಳಿನ ಚಟುವಟಿಕೆ ಗಮನಿಸುವದುಕ್ಕಾಗಿ, ಸಂಕೀರ್ಣ ಉಪಕರಣಗಳನ್ನು ಮತ್ತು ಸರಳ ಲೆಕ್ಕಗಳನ್ನು ರೂಪಿಸಿದ್ದಕ್ಕೆ, ಕ್ರೇಗ್ ಬೆನೆಟ್ ಅಬಿಗೇಲ್ ಬೇರ್ಡ್, ಮೈಕೇಲ್ ಮಿಲ್ಲರ್ ಮತ್ತು ಜಾರ್ಜ್ ವೋಲ್ಫೋರ್ಡ್ (ಅಮೆರಿಕಾ ಸಂಯುಕ್ತ ಸಂಸ್ಥಾನ).
ರಸಾಯನ ಶಾಸ್ತ್ರ : ಸ್ವೀಡನ್ನಿನ ಆಂಡರ್ಸ್ಲಾವ್ ನಗರದ ಕೆಲವು ಮನೆಗಳ ಜನರ ಕೂದಲು ಹಸಿರಾಗುವ ಕಾರಣ ಕಂಡುಹಿಡಿದ್ದಕ್ಕೆ, ಜೊಹಾನ್ ಪೀಟರ್ಸನ್ (ಸ್ವೀಡನ್) ಅವರಿಗೆ.
ಸಾಹಿತ್ಯ ಪ್ರಶಸ್ತಿ : ವರದಿಗಳ ಬಗ್ಗೆ ವರದಿಯ ವರದಿಗಳನ್ನು ತಯಾರು ಮಾಡುವ ಬಗ್ಗೆ ಸಲಹೆ ನೀಡುವ ವರದಿಗಳ ಬಗೆಗಿನ ವರದಿಗಳ ವರದಿಯನ್ನು ನೀಡಿದ್ದಕ್ಕೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಕೌಂಟಬಿಲಿಟಿ ಕಚೇರಿಗೆ.
ಭೌತಶಾಸ್ತ್ರ ಪ್ರಶಸ್ತಿ : ವ್ಯಕ್ತಿಯೊಬ್ಬ/ಳು ಕಟ್ಟಿಕೊಳ್ಳುವ ಕುದುರೆಬಾಲದ ಜಡೆಯ ಆಕಾರ ಮತ್ತು ಚಲನೆಯನ್ನು ನಿರ್ಧರಿಸುವ ಬಲಗಳ ತುಲನೆಯನ್ನು ಲೆಕ್ಕಿಸಿದ್ದಕ್ಕಾಗಿ, ಜೋಸೆಫ್ ಕೆಲ್ಲರ್ (ಅಮೆರಿಕಾ) ರೇಮಂಡ್ ಗೋಲ್ಡ್ಸ್ಟೀನ್ (ಅಮೆರಿಕಾ ಮತ್ತು ಇಂಗ್ಲೆಂಡ್), ಪ್ಯಾಟ್ರಿಕ್ ವಾರೆನ್ ಮತ್ತು ರಾಬಿನ್ ಬಾಲ್ (ಇಂಗ್ಲೆಂಡ್) ಇವರಿಗೆ.
ದ್ರವಚಲನ ಶಾಸ್ತ್ರ ಪ್ರಶಸ್ತಿ: ವ್ಯಕ್ತಿಯೊಬ್ಬ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ನಡೆದಾಗ ಏನಾಗುತ್ತದೆ ಎಂದು ತಿಳಿಯಲು ದ್ರವದ ಎರಚುವಿಕೆಯ ಚಲನೆಯನ್ನು ಅಭ್ಯಾಸ ಮಾಡಿದ ಸಂಶೋಧನೆಗೆ, ರೌಸ್ಲನ್ ಕ್ರೆಚೆಟ್ನಿಕೋವ್(ಅಮೆರಿಕಾ, ರಷಿಯಾ ಮತ್ತು ಕೆನಡಾ) ಮತ್ತು ಹಾನ್ಸ್ ಮೇಯರ್ (ಅಮೆರಿಕಾ) ಅವರಿಗೆ
ದೇಹ ರಚನಾಶಾಸ್ತ್ರ ಪ್ರಶಸ್ತಿ: ಚಿಂಪಾಂಜಿಗಳು ಬೇರೆ ಚಿಂಪಾಂಜಿಗಳ ಹಿಂಭಾಗದ ಚಿತ್ರ ನೋಡುವುದರಿಂದಲೇ ಅವನ್ನು ಗುರುತು ಹಿಡಿಯಬಲ್ಲುವು ಎನ್ನುವ ಸಂಶೋಧನೆಗೆ ಫ಼್ರಾನ್ಸ್ ಡಿ ವಾಲ್ (ನೆದರ್ಲ್ಯಾಂಡ್ ಮತ್ತು ಅಮೆರಿಕಾ) ಜೆನ್ನಿಫರ್ ಪೊಕೊರ್ನಿ (ಅಮೆರಿಕಾ) ಇವರಿಗೆ.
ಔಷಧಿ ಶಾಸ್ತ್ರ ಪ್ರಶಸ್ತಿ: ಕೊಲೋನೊಸ್ಕೋಪಿ ಶಸ್ತ್ರಚಿಕಿತ್ಸೆ ಮಾಡುವಾಗ ರೋಗಿಗಳ ಹೊಟ್ಟೆ ಒಡೆದುಹೋಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದಾದ ಸಲಹೆಗಳನ್ನು ವೈದ್ಯರಿಗೆ ನೀಡಿದ್ದಕ್ಕೆ, ಇಮಾನ್ಯುಯೆಲ್ ಬೆನ್-ಸೌಸನ್ ಮತ್ತು ಮೈಕೇಲ್ ಅಂಟಾನಿಯೆಟ್ಟಿ (ಫ಼್ರಾನ್ಸ್) ಅವರಿಗೆ.
ವಿಶೇಷ ಪ್ರಶಸ್ತಿ : ೧೯೯೧ರ ತಪ್ಪೊಂದನ್ನು ತಿದ್ದಿಕೊಳ್ಳುವ ಸಲುವಾಗಿ, ಈಗ ಜೋಸೆಫ್ ಕೆಲ್ಲರ್ ಅವರಿಗೆ ಮತ್ತೆ ಪ್ರಶಸ್ತಿ ನೀಡಲಾಗುತ್ತಿದೆ. ಟೀ ಹರಿಯದಂತಿರುವ ಟೀ ಪಾಟ್ ಕೊಳವೆಯನ್ನು ಮಾಡಿದ್ದಕ್ಕಾಗಿ.. ಈ ಮೂಲಕ ಅವರು ೧೯೯೯ ಮತ್ತು ೨೦೧೨ ಎರಡು ಬಾರಿ ಇಗ್ನೊಬಲ್ ಪ್ರಶಸ್ತಿ ಗಳಿಸುತ್ತಿದ್ದಾರೆ.

Thursday, November 22, 2012
ತುಂಬುಗನ್ನಡದ ಶತಾವಧಾನ
ಪ್ರಪಂಚದಲ್ಲಿ ಜೀವಂತವಿರುವ ಭಾಷೆಗಳಲ್ಲಿ ಅತ್ಯಂತ ಹಳೆಯ ಭಾಷೆಗಳಲ್ಲೊಂದಾಗಿರುವ ಕನ್ನಡದಲ್ಲಿ ಅವಧಾನ ಕಲೆಯೂ ಅರಳಿದೆ.
ಅವಧಾನದಲ್ಲಿ ಅಷ್ಟಾವಧಾನ, ಶತಾವಧಾನ ಮತ್ತು ಸಹಸ್ರಾವಧಾನವೆಂಬ ಮೂರು ಬಗೆಗಳುಂಟು.
೮೦೦ ವರುಷಗಳ ಹಿಂದೆಯೇ ಉದಯಿಸಿದ ಈ ಕಲೆಯೂ ಆಧುನಿಕ ಯುಗದಲ್ಲಿ ಕಣ್ಮರೆಯಾಗುವಂತಾಗಿತ್ತಾದರೂ, ಬೆಳ್ಳಾವೆ ನರಹರಿ ಶಾಸ್ತ್ರಿಗಳು, ರಾ.ಗಣೇಶ್ ರಂತಹ ವ್ಯಕ್ತಿಗಳಿಂದ ಮರುಹುಟ್ಟು ಪಡೆದಿದೆ.
ಈ ಹಿಂದೆಯೇ ಸಂಪದದಲ್ಲಿ ನಾನು ನೋಡಿದ ಅಷ್ಟಾವಧಾನದ ಬಗ್ಗೆ ಒಂದು ಲೇಖನ ಬರೆದಿದ್ದೆ. ಈಗ ಕನ್ನಡದ ಮನಸುಗಳಿಗೆ ಶತಾವಧಾನವನ್ನು ನೋಡುವ ಸುಂದರ ಗಳಿಗೆ ಕೂಡಿ ಬಂದಿದೆ,
ನವೆಂಬರ್ ೩೦, ಡಿಸೆಂಬರ್೧ ಹಾಗೂ ೨ರಂದು, ತುಂಬುಗನ್ನಡದ ಮೊದಲ ಶತಾವಧಾನ ಕಾರ್ಯಕ್ರಮ ಬೆಂಗಳೂರಿನ ಜಯನಗರ ಮೂರನೇ ಬ್ಲಾಕಿನ ಎನ್.ಎಮ್.ಕೆ.ಆರ್.ವಿ. ಕಾಲೇಜಿನ ಮಂಗಳ ಮಂಟಪದಲ್ಲಿ ನಡೆಯಲಿದೆ.
ಆಸಕ್ತ ಮನಸ್ಸುಗಳಿಗೆ ಆತ್ಮೀಯ ಸ್ವಾಗತ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ.
ಹಾಗೂ ಕಾರ್ಯಕ್ರಮದಲ್ಲಿ ಕೈಜೋಡಿಸುವ ಮನಸ್ಸಿರುವವರು ಅದೇ ಕೊಂಡಿಯ ಈ ಪುಟವನ್ನು ನೋಡಿ ಎಂದು ಕೋರಿಕೊಳ್ಳುತ್ತೇನೆ.

Sunday, November 04, 2012
ನಾ ನಿನ್ನವಳಲ್ಲ
ನಾ ನಿನ್ನವಳಲ್ಲ... ನಿನ್ನ
ನೆನಪಲೆ ಕಳೆದುಹೋದವಳಲ್ಲ.
ಹಂಬಲಿಸಿ ಕಾದಿರುವೆ ಕಳೆದುಹೋಗಲು
ನಡುಮಧ್ಯಾಹ್ನದಲಿ ಬೆಳಗಿರುವ ಹಣತೆಯಂತೆ
ಇಡಿಸಾಗರದ ಮಧ್ಯೆ ಹಿಮಚಕ್ಕೆಯಂತೆ.
ನೀ ನನ್ನ ಪ್ರೀತಿಸುವುದ ನಾ ಬಲ್ಲೆ.
ಪ್ರಖರ ಅಂತಃಶಕ್ತಿಯ ಬೆಳಕಿನಲ್ಲೆ
ಆದರೂ ಕಳೆದುಹೋಗಲು ನನ್ನ ಹಂಬಲಿಕೆ
ಇರುಳಲ್ಲಿ ಇಣುಕಿಯೂ ನೋಡದ ಬೆಳಕಿನಂತೆ
ಪ್ರೀತಿ ಸಾಗರದಲಿ ನನ್ನ ಮುಳುಗಿಸು
ಮತಿಯ ಮತ್ತಿನಲೆ ಮಲಗಿಸು
ಮೂಕವಾದರು, ಕೇಳದಾದರು
ಹಂಬಲಿಸಿ ಕಾದಿರುವೆ ಕಳೆದುಹೋಗಲು
ನಿನ್ನ ಪ್ರೀತಿಯ ಬಿರುಗಾಳಿಯಲೆ ತರಗೆಲೆಯಾಗಲು.
ಸಾರಾ ಟೀಸ್ ಡೇಲ್ ಅವರ " I am not yours " ಪದ್ಯದ ಭಾವಾನುವಾದ .. ಮೂಲ ಕೆಳಗಿನಂತಿದೆ.
I am not yours, not lost in you,
Not lost, altho' I long to be
Lost as a candle lit at noon,
Lost as a snow-flake in the sea.
You love me, and I find you still
A spirit beautiful and bright,
Yet I am I, who long to be
Lost as a light is lost in light.
Oh plunge me deep in love—put out
My senses, leave me deaf and blind,
Swept by the tempest of your love,
A taper in a rushing wind.
"I Am Not Yours "
by Sara Teasedale

Saturday, November 03, 2012
ಯುದ್ದಕಲೆ ೧. ರಣನೀತಿ ರೂಪಣೆ
೧. ಸುನ್ ತ್ಸು ಹೇಳಿದ್ದು. : ಯುದ್ದಕಲೆ ರಾಷ್ತ್ರವೊಂದಕ್ಕೆ ಅತ್ಯಂತ ಮಹತ್ವದ್ದು.
೨. ಅದು ಜೀವನ್ಮರಣಗಳ ಪ್ರಶ್ನೆಯೂ, ಸುಸ್ಥಿತಿ ಅಥವಾ ಅಧೋಗತಿಗಳಿಗೆ ಹೆದ್ದಾರಿಯೂ ಆಗಿದೆ. ಆದ್ದರಿಂದ ಈ ವಿಷಯವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲಾಗದು.
೩. ಯುದ್ದಕಲೆಯನ್ನು ನಿರ್ಣಾಯಿಕಗೊಳಿಸುವ ಐದು ಪ್ರಮುಖ ಅಂಶಗಳೆಂದರೆ
(೧)
ನೈತಿಕತೆ
(೨)
ಅಲೌಕಿಕತೆ
(೩)ಲೌಕಿಕತೆ
(೪)ದಳ
ಪತಿ
(೫)
ನಿಯಮ ಮತ್ತು
ಶಿಸ್ತು.
೪. ಇವುಗಳನ್ನು ಚೆನ್ನಾಗಿ ಮತ್ತು ಸಮಗ್ರವಾಗಿ ಪರಿಶೀಲಿಸಿಯೇ ರಣರಂಗದಲ್ಲಿನ ಸ್ಥಿತಿಗತಿಗಳನ್ನು ವಿಮರ್ಶಿಸಬೇಕು.
೫., ೬., ನೈತಿಕತೆಯು ಪ್ರಜಾಸಮೂಹವು ತನ್ನ ನಾಯಕನಿಗೆ ಜೊತೆಯಾಗಿರುವಂತೆ ಮಾಡುತ್ತದೆ.. ತನ್ನ ಪ್ರಾಣವನ್ನೂ ಲೆಕ್ಕಿಸದೆ, ಅಪಾಯಗಳನ್ನು ಎದುರಿಸುವಂತಹ ಹಿಂಬಾಲಕರಿರಬೇಕೆಂದರೆ, ಇದು ಅತಿ ಮುಖ್ಯ.

೭.
ಅಲೌಕಿಕವೆಂದರೆ
ಹಗಲು ರಾತ್ರಿಗಳು, ಕಾಲ
ದೇಶಗಳು , ತಂಪು
ಉಷ್ಣ ಮೊದಲಾದ ಹವಾಮಾನ ವೈಪರೀತ್ಯಗಳು.
೮. ಲೌಕಿಕವೆಂದರೆ ದೂರ ಹತ್ತಿರಗಳು, ಸುರಕ್ಶೆ ಅಪಾಯಗಳು, ಬಯಲು ಕಣಿವೆಗಳು, ಸಾವು ಬದುಕಿನ ಸಾಧ್ಯತೆಗಳು.
೯. ದಳಪತಿಯು ತನ್ನ ಬುದ್ದಿಮತ್ತೆ, ಪ್ರಾಮಾಣಿಕತೆ, ಕರುಣೆ, ಸಾಹಸ, ಶಿಸ್ತು ಮತ್ತು ಕಾರ್ಯಕ್ಷಮತೆಯ ಕಾರಣದಿಂದಿರುತ್ತಾನೆ.
೧೦. ನಿಯಮ ಮತ್ತು ಶಿಸ್ತು, ಸೈನ್ಯದ ವರ್ಗೀಕರಣ , ಅಧಿಕಾರಿಗಳ ಪದೋನ್ನತಿ, ಸೈನ್ಯದ ಪೂರೈಕೆಯ ಹಾದಿಯ ಸುಗಮಗೊಳಿಸುವಿಕೆ ಮತ್ತು ಮೇಲ್ವಿಚಾರಣೆ ಹಾಗೂ ಸೈನ್ಯದ ಖರ್ಚಿನ ಮೇಲೆ ನಿಗಾ ವಹಿಸುವಿಕೆಗೆ ಸಂಬಂಧಪಟ್ಟಿದೆ.

೧೧.
ಈ ಐದು ಅಂಶಗಳೂ
ಪ್ರತಿ ಸೇನಾಧಿಪತಿಗೆ ಅರಿವಿರಬೇಕು,
ಇದನ್ನು
ಅರಿತವನೇ ಜಯಶೀಲನಾಗುತ್ತಾನೆ,
ಸೋಲು ಅವನ
ಬಳಿ ಸುಳಿಯದು.
೧೨. ಆದ್ದರಿಂದ ಸೇನಾ ಸ್ಥಿತಿಗತಿಗಳನ್ನು ನಿರ್ಧರಿಸುವ ಮುಂಚೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು
೧೨. ಆದ್ದರಿಂದ ಸೇನಾ ಸ್ಥಿತಿಗತಿಗಳನ್ನು ನಿರ್ಧರಿಸುವ ಮುಂಚೆ ಕೇಳಿಕೊಳ್ಳಬೇಕಾದ ಪ್ರಶ್ನೆಗಳು
೧೩.
೧.
ನೈತಿಕತೆಗೆ
ಯಾವ ರಾಷ್ಟ್ರ ಹೆಚ್ಚಿನ ಒತ್ತು
ಕೊಡುತ್ತದೆ. ?
೨. ಇಬ್ಬರೂ ಸೇನಾಧಿಪತಿಗಳಲ್ಲಿ ಯಾರು ಹೆಚ್ಚು ಕಾರ್ಯಸಾಧನ ಶೂರರು?
೩. ಲೌಕಿಕ ಮತ್ತು ಅಲೌಕಿಕಗಳ ಸಹಾಯಕ ಅಂಶಗಳು ಯಾರ ಕಡೆಗಿವೆ ?
೪. ಶಿಸ್ತು ಯಾವ ಕಡೆ ಕಟ್ಟುನಿಟ್ಟಾಗಿ ಪಾಲಿಸಲ್ಪಟ್ಟಿದೆ?
೫. ಯಾವ ಸೈನ್ಯ ಬಲಶಾಲಿಯಾಗಿದೆ?
೬. ಯಾವ ಕಡೆಯ ಸೈನಿಕರು ಮತ್ತು ಅಧಿಕಾರಿಗಳು ಚೆನ್ನಾಗಿ ತರಬೇತಾಗಿದ್ದಾರೆ?
೭. ಯಾವ ಸೈನ್ಯದಲ್ಲಿ (ಸಾಧನೆಗೆ) ಬಹುಮಾನವೂ (ತಪ್ಪಿಗೆ) ಶಿಕ್ಷೆಯೂ ನಿಯಮಿತವಾಗಿ ಜಾರಿಗೆ ಬಂದಿದೆ?

೧೪. ಈ ಏಳು ಪ್ರಶೆಗಳನ್ನು ಕೂಲಂಕಷವಾಗಿ ಪರಿಶೀಲಿಸುವುದರಿಂದ ಜಯವೇ ಅಥವಾ ಅಪಜಯವೇ ಎಂದು ಹೇಳಬಹುದು.
೧೫. ನನ್ನೀ ಸಲಹೆಗಳನ್ನು ಪಾಲಿಸುವ ಸೇನಾಧಿಪತಿಗೆ ಗೆಲವು ಶತಸಿದ್ಧ. ಅವನ ಪದವಿ ಮುಂದುವರೆಯಲಿ. ನನ್ನ ಮಾತನ್ನು ಕೇಳದ ಸೇನಾಧಿಪತಿಗೆ ಸೋಲಿಲ್ಲದೆ ಬೇರೆ ದಾರಿಯಿಲ್ಲ. ಅಂತಹವರು ಇರುವುದಕ್ಕಿಂತಲೂ ಹೋಗುವುದು ಮೇಲು.
೧೬. ಈ ಸಲಹೆಗಳ ಲಾಭವಲ್ಲದೆ, ಸಾಮಾನ್ಯ ನಿಯಮಗಳಿಗೆ ಹೊರತುಪಡಿಸಿದ ಅನುಕೂಲಕರ ಸನ್ನಿವೇಶಗಳುಂಟಾದರೆ ಎಚ್ಚರಿಕೆಯಿಂದ ಗಮನಿಸುತ್ತಿರಬೇಕು.
೧೭. ನನ್ನೀ ಸಲಹೆಗಳಲ್ಲದೆ, ಸನ್ನಿವೇಶಗಳು ಅನುಕೂಲಕರವಾಗಿದ್ದರೆ ರಣನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.
೧೮. ಎಲ್ಲಾ ಯುದ್ದಗಳೂ ತಂತ್ರಗಾರಿಕೆಯನ್ನೇ ಅವಲಂಬಿಸಿವೆ.
೧೯. ಆದ್ದರಿಂದ ದಾಳಿ ನಡೆಸುವ ಶಕ್ತಿಯಿದ್ದರೂ ಇಲ್ಲದವರಂತೆ, ನಮ್ಮ ಬಲ ಪ್ರಯೋಗಿಸುತ್ತಿದ್ದಾಗಲೂ ಏನೂ ಮಾಡದವರಂತೆ, ಹತ್ತಿರವಿದ್ದಾಗಲೂ ಶತ್ರು ನಾವು ದೂರವಿರುವಂತೆ ನಂಬುವಂತೆ ಮಾಡಬೇಕು. ನಾವು ದೂರವಿದ್ದಾಗ ಹತ್ತಿರದಲ್ಲೇ ಇರುವಂತೆ ಶತ್ರುವಿಗೆ ಕಾಣಿಸಿಕೊಳ್ಳಬೇಕು.
೨೦. ಶತ್ರುವನ್ನು ಅಜಾಗರೂಕತೆಯ ಬಲೆಯಲ್ಲಿ ಬೀಳುವಂತೆ ಗಾಳ ಹಾಕಬೇಕು. ಅರಾಜಕತೆ ಸೃಷ್ಟಿಯಾದೊಡನೆ ಮೇಲೆಬಿದ್ದು ಅವನನ್ನು ಮಣಿಸಬೇಕು.
೨೧.
ಶತ್ರುವು
ಎಲ್ಲಾರೀತಿಯಲ್ಲೂ ಸುರಕ್ಷಿತನಾಗಿದ್ದರೆ,
ಅವನ ದಾಳಿಗೆ
ಸಿದ್ದರಾಗಿ ಕಾಯಬೇಕು.
ನಮಗಿಂತಲೂ
ಬಲಶಾಲಿಯಾಗಿದ್ದರೆ ಅವನಿಂದ
ತಪ್ಪಿಸಿಕೊಳ್ಳಬೇಕು.
೨೨. ಶತ್ರುವಿನ ಕೋಪ ಮೂಗಿನ ತುದಿಯಲ್ಲಿದ್ದರೆ ಅವನನ್ನು ರೊಚ್ಚಿಗೇಳಿಸಬೇಕು, ನೀವು ಬಲಹೀನರಂತೆ ತೋರಿಸಿಕೊಂಡು ಅವನು ದಾಳಿ ಮಾಡುವಂತೆ ಪ್ರಚೋದಿಸಬೇಕು.
೨೩. ಶತ್ರು ವಿಶ್ರಾಂತಿ ಪಡೆಯುತ್ತಿದ್ದರೆ ಅದಕ್ಕೆ ಅವಕಾಶವನ್ನೇ ಕೊಡಬಾರದು.
೨೪. ಶತ್ರು ಸಿದ್ಧನಾಗಿಲ್ಲದಿರುವಾಗ ದಾಳಿ ಮಾಡಬೇಕು. ನಮ್ಮನ್ನು ನಿರೀಕ್ಷಿಸಿಯೇ ಇರದ ಜಾಗದಲ್ಲಿ ಕಾಣಿಸಿಕೊಳ್ಳಬೇಕು.
೨೫. ಜಯದೆಡೆಗೆ ನಮ್ಮನ್ನು ಕೊಂಡೊಯ್ಯಬಲ್ಲ ಅಸ್ತ್ರಗಳ ಸುಳಿವೂ ನಮ್ಮ ಶತ್ರುವಿಗೆ ಸಿಗದಂತಿರಬೇಕು.
೨೬. ಗೆಲ್ಲುವ ಸೇನಾಧಿಪತಿ ಯುದ್ಧಕ್ಕೆ ಮೊದಲೇ ಹಲವಾರು ಬಾರಿ ಲೆಕ್ಕಾಚಾರ ಹಾಕಬೇಕು.
ಕೆಲವೇ ಲೆಕ್ಕಾಚಾರಗಳ ಸೇನಾಧಿಪತಿ ಸೋಲುತ್ತಾನೆ. ಹಾಗಾಗಿ ಎಷ್ಟು ಸಾಧ್ಯವೋ ಅಷ್ಟೂ ಕರಾರುವಕ್ಕಾಗಿ ಮತ್ತು ಹೆಚ್ಚಾಗಿ ಲೆಕ್ಕಾಚಾರ ಮಾಡಬೇಕು. ಈ ಲೆಕ್ಕಾಚಾರಗಳ ಆಧಾರದ ಮೇಲೆಯೇ ಸೋಲು ಗೆಲವುಗಳನ್ನು ನಾವು ಮುಂಗಾಣಬಹುದು.

Thursday, November 01, 2012
ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ
ತೆಂಕಣಗಾಳಿ ಸೋಂಕಿದೊಡಂ ಒಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆ ನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೪-೩೦||
ತೆಂಕಣದ ಗಾಳಿ ಸೋಕಿದೊಡೆ
ಒಳ್ನುಡಿಗಳನು ಕೇಳಿದೊಡೆ
ಇಂಪಾದ ಸಂಗೀತ ಕಿವಿಯೊಕ್ಕೊಡೆ
ಬಿರಿದ ಮಲ್ಲಿಗೆ ಕಂಡರೆ
ಮಧುಮಹೋತ್ಸವವಾದರೆ
ಆರಂಕುಶವಿಟ್ಟರೂ
ನೆನೆವುದೆನ್ನ ಮನ ವನವಾಸಿ ದೇಶವನು..
ಕೆಂದ ಲಂಪಂ ಗೆಡೆಗೊಂಡೊಡಂ -- ಇದರ ಅರ್ಥ ಯಾರಾದರೂ ತಿಳಿಸುವಿರಾ..?

Friday, October 26, 2012
ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ
ಜಯಂತ್ ಕಾಯ್ಕಿಣಿ ಬರೆದ ಮೊದಲ ಗೀತೆ ಇದು. ರಾಗ ಸಂಯೋಜನೆ ಸಿ. ಅಶ್ವಥ್, ಗಾಯನ ರಾಜಕುಮಾರ್. "ಅನುರಾಗ" ಸಂಪುಟ. ಮನವನ್ನು ಆರ್ದ್ರಗೊಳಿಸುವ ಗೀತೆ.
ಕಣ್ಣಿಗೆ ಬಂದವಳು ಕನಸಿಗೆ ಬಾರದಿರುವೆಯಾ
ಮಾತಿಗೆ ಬಂದವಳು ಮನಸಿಗೆ ಬಾರದಿರುವೆಯಾ
ಗಾಯವೆಲ್ಲ ಮಾಯುವಂಥ ರಾತ್ರಿಯೊಂದು ಕನಸೇ
ದಳದಳಗಳ ನೋವಿನಲ್ಲಿ ಅರಳಿನಿಂತ ಮನಸೇ
ತಂಗಾಳಿಯ ಕರೆಯೇ, ಹೊಸಲೋಕವ ತೆರೆಯೇ
ಕೊನೆಗೂ ಬಂದವಳು ಬೆಳಗು ತಾರದಿರುವೆಯಾ
ಬಾಯಾರಿದ ಬಿಸಿಲಿನಲ್ಲಿ ಹೊಸ ಹಗಲ ತೇರು
ಎಳೆಯದೇ ದಾರಿಯಲ್ಲಿ ಬಿಟ್ಟು ಹೋದವರಾರು?
ಹುಚ್ಚು ನೂರು ಸಂತೆ ನೆಚ್ಚಿ ಕಾದು ನಿಂತೆ
ಸಖ ಎಂದವಳು ಮುಖ ತೋರದಿರುವೆಯಾ?
Wednesday, October 24, 2012
ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ
ನನ್ನೆದೆಯಲ್ಲಿ
ಮೊಗ್ಗೊಂದು ಅರಳಿದಾಗಲೇ
ಹಿಚುಕಿ ಹಾಕಿ
ಬಿಡಬೇಕೆಂದುಕೊಂಡೆ,
ನೀರಿಲ್ಲದೆ ಅದೇ
ಒಣಗಿಹೋಗುವುದೆಂದೇ
ಸುಮ್ಮನಾದೆ
ಮೊಗ್ಗರಳಿ ಹೂವಾಗಿ
ನಗುತಿರಲು ಹಿತವಾಗಿ
ಮನ ಸೋತಿತು ..
ಅಂದದಲಿ ಚಂದದಲಿ
ಸೌಗಂಧ ಚೆಲ್ಲಿರಲು
ನನದೆಂದೇ ಬಗೆದೆ ನಾನು
ಆದರೆ
ಒಂದೇ ರಾತ್ರಿಯಲಿ
ಇದ್ದಕ್ಕಿದ್ದಂತೆ ಸುರಿದ
ಮಳೆಗಾಳಿಯಾರ್ಭಟದಿ
ಮುರುಟಿ ನೆಲಕಚ್ಚಿತ್ತು.
ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ
ಹೂವು ಅರಳಿಲ್ಲ.
ಮೊಗ್ಗೊಂದು ಅರಳಿದಾಗಲೇ
ಹಿಚುಕಿ ಹಾಕಿ
ಬಿಡಬೇಕೆಂದುಕೊಂಡೆ,
ನೀರಿಲ್ಲದೆ ಅದೇ
ಒಣಗಿಹೋಗುವುದೆಂದೇ
ಸುಮ್ಮನಾದೆ
ಮೊಗ್ಗರಳಿ ಹೂವಾಗಿ
ನಗುತಿರಲು ಹಿತವಾಗಿ
ಮನ ಸೋತಿತು ..
ಅಂದದಲಿ ಚಂದದಲಿ
ಸೌಗಂಧ ಚೆಲ್ಲಿರಲು
ನನದೆಂದೇ ಬಗೆದೆ ನಾನು
ಆದರೆ
ಒಂದೇ ರಾತ್ರಿಯಲಿ
ಇದ್ದಕ್ಕಿದ್ದಂತೆ ಸುರಿದ
ಮಳೆಗಾಳಿಯಾರ್ಭಟದಿ
ಮುರುಟಿ ನೆಲಕಚ್ಚಿತ್ತು.
ನನ್ನೆದೆಯಲ್ಲೀಗ ಮೊಗ್ಗು ಚಿಗುರಿಲ್ಲ
ಹೂವು ಅರಳಿಲ್ಲ.
Subscribe to:
Posts (Atom)